12ಲಕ್ಷ ರೂ. ಮೌಲ್ಯದ ಗಾಂಜಾ ಸಾಗಾಟ, ಆರೋಪಿಗಳ ಬಂಧನ

Source: so news | Published on 12th July 2020, 1:06 AM | State News | Don't Miss |

 

ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಗೋಣಿಬೀಡು ಮೇಲುಪೇಟೆ ಮಸೀದಿ ಬಳಿ ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಮೊಹಿದ್ ಖಾನ್, ಮೂಡಿಗೆರೆಯ ಅಕ್ಬರ್ ಪಾಷಾ, ಶಾಹಿದ್ ಖಾನ್ ಹಾಗೂ ಪ್ರಭ ಎಂಬವರನ್ನು ಬಂಧಿಸಿ ಐವತ್ತು ಕೆಜಿ ಗಾಂಜಾ, ಕಾರು, ಬೈಕ್ ವಶಪಡಿಸಿಕೊಳ್ಳಲಾಗಿದೆ. ಗಾಂಜಾದ ಮೌಲ್ಯ 12ಲಕ್ಷ ರೂ.ಗೂ ಅಧಿಕವಾಗಿದೆ.
ವಿಶಾಖಪಟ್ಟಣದ ಪಾಲೇರು ಎಂಬಲ್ಲಿ ಶೇಖರ್ ಎಂಬವನಿಂದ 80ಕೆ.ಜಿ ಗಾಂಜಾ ಸೊಪ್ಪನ್ನು ಆರೋಪಿಗಳು ತಂದಿದ್ದು, 30ಕೆ.ಜಿ ಸೊಪ್ಪನ್ನು ಸಕಲೇಶಪುರದಲ್ಲಿ ಮಾರಿದ್ದರು. 50ಕೆ.ಜಿ ಗಾಂಜಾವನ್ನು ಮಂಗಳೂರಿನಲ್ಲಿ ಇನ್ನೂ ಹೆಚ್ಚಿನ ದರಕ್ಕೆ ಮಾರಲು ಒಯ್ಯುತ್ತಿರುವಾಗ ಪೊಲೀಸ್ ಬಲೆಗೆ ಬಿದ್ದಿದ್ದಾರೆ.
ಇನ್ಸ್ಪೆಕ್ಟರ್ ರಕ್ಷಿತ್ ಮತ್ತು ಪಿಎಸ್ಸೈ ರಮ್ಯಾ ಹಾಗೂ ಪೊಲೀಸ್ ತಂಡದ ಕಾರ್ಯಾಚರಣೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ಲಾಘಿಸಿದ್ದಾರೆ

Read These Next

ನಾಗರಿಕ ಸೇವೆಗಳ ತರಬೇತಿಗಾಗಿ ಮತೀಯ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ                                                 

ಕಾರವಾರ : PUE/ICSE/CBSE   ಮಂಡಳಿಗಳು ಶೈಕ್ಷಣಿಕ ವರ್ಷ 2019-20ರ ಅವಧಿಯಲ್ಲಿ ನಡೆಸಿರುವ 2ನೇ ಪಿ.ಯು.ಸಿ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿರುವ ಕಲಾ, ...

ಸಾಮಾಜಿಕ ಅಂತರದೊಂದಿಗೆ 74ನೇ ಸ್ವಾತಂತ್ರ್ಯೋತ್ಸವ: ಡಿಸಿ                                                 

ಕಾರವಾರ : ಬರುವ ಅಗಸ್ಟ್ 15ರಂದು ನಡೆಯುವ 74ನೇ ಸ್ವಾತಂತ್ರ್ಯೋತ್ಸವವನ್ನು ಸಾಮಾಜಿಕ ಅಂತರ ಸ್ವಾನಿಟೈಸರ್, ಮಾಸ್ಕ್‍ಗಳ ಬಳಕೆಯಂತಹ ...