ಕುಮಟಾದಲ್ಲಿ ಎ. 17 ರಿಂದ 27 ರವರೆಗೆ 10 ದಿನಗಳ ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮ

Source: S O News | By I.G. Bhatkali | Published on 6th August 2022, 5:48 PM | Coastal News |

ಕಾರವಾರ:  ಕೌಶಲ್ಯಾಭಿವೃದ್ಧಿ, ಉದ್ಯಮಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಸರ್ಕಾರದ ಪ್ರಾಯೋಜಕತ್ವದಲ್ಲಿ, ಧಾರವಾಡ, ಡಾಕ್, ಕಾರವಾರ ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ (ಡಾಕ್), ಕುಮಟಾ ತಾಲೂಕ ಸಂಜೀವಿನಿ ಅಭಿಯಾನ ಘಟಕ, ತಾಲೂಕ ಪಂಚಾಯತ, ಹಾಗೂ ಹುರಸಭೆ, ಕುಮಟಾ (ಡೆ ರಾಷ್ಟ್ರೀಯ ನಗರ ಜೀವನೋಪಾಯ, ಖಾನ್ ಯೋಜನೆ), ಇವರ ಸಂಯುಕ್ತ ಆಶ್ರಯದಲ್ಲಿ  ಆ. 17 ರಿಂದ 27 ರವರೆಗೆ 10 ದಿನಗಳ ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮವನ್ನು,  ಕುಮಟಾತಾಲೂಕ ಪಂಚಾಯತ್ ಆವರಣದ ಸಾಮಥ್ರ್ಯಸೌಧದಲ್ಲಿ ಹಮ್ಮಿಕೊಳ್ಳಲಾಗಿದೆ.

ಆಸಕ್ತ 18 ರಿಂದ 10 ವರ್ಷ ವಯಸ್ಸಿನ ಕನಿಷ್ಠ ಓದುವದಕ್ಕೆ ಹಾಗೂ ಬರೆಯುವದಕ್ಕೆ ಬರುವ ಮಹಿಳಾ ಅಭ್ಯರ್ಥಿಗಳು ಆ 11 ರೊಳಗೆ ಕಾರವಾರ ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರದ ಉಪ ನಿರ್ದೇಶಕರಿಗೆ ಅರ್ಜಿ ಸಲ್ಲಿಸಬೇಕು. ಈ ಕಾರ್ಯಕ್ರಮದಲ್ಲಿ ಸಾಧನಾ, ಪ್ರೇರಣಾ ತರಭೇತಿ, ಉದ್ಯಮಶೀಲರ ಸಾಮಥ್ರ್ಯಗಳನ್ನು ಗುರುತಿಸುವಿಕೆ, ವ್ಯವಸ್ಥಾಪನಾ ಕೌಶಲ್ಯಗಳು, ಹೊಸ ಉದ್ಯಮಗಳ ಸ್ಥಾಪನೆಗೆ ಇರುವ ಅವಕಾಶಗಳು, ಮಾರುಕಟ್ಟೆ ಸಮೀಕ್ಷೆ, ಯೋಜನಾ ವರದಿ ತಯಾರಿಕ, ಲೆಕ್ಕ ಪತ್ರಗಳ ನಿರ್ವಹಣೆ, ಮಾರಾಟದ ತಂತ್ರÀಗಳು, ಉದ್ಯಮಶೀಲರ ಅನುಭವ ಹಂಚಿಕೆ, ಸರ್ಕಾರದ ಯೋಜನೆಗಳು, ಬ್ಯಾಂಕಗಳ ಪಾತ್ರ ಮುಂತಾದ ವಿಷಯಗಳ ಬಗ್ಗೆ ಮಾಹಿತಿ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಕಾರವಾರ, ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ ಉಪ ನಿರ್ದೇಶಕರು ಶಿವಾನಂದ ಪಂ. ಎಲಿಗಾರ,  ದೂರವಾಣಿ ಸಂಖ್ಯೆ. 94488,974,  ಶಿವರಾಜ ಹೆಳಸಿ. ತರಬೇತುದಾರರು 08722708795ಹಾಗೂ ಪ್ರತಿಭಾ ಆಸೊದೆ  8105224080 ಗೆ ಸಂಪರ್ಕಿಸಿ ಎಂದು ಕಾರವಾರ ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ ಉಪನಿರ್ದೇಶಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...