ಹೆಬ್ಬಾವು ಮೆಟ್ಟಿ ನಿಂತ ಬಾಲಕ. ಮತ್ತೊಂದೆಡೆ ಹೆಬ್ಬಾವು ರಕ್ಷಿಸಿದ ವಿದ್ಯಾರ್ಥಿಗಳು.

Source: SO News | By Laxmi Tanaya | Published on 11th October 2020, 7:04 AM | Coastal News | Don't Miss |

ಮಂಗಳೂರು : ಮಂಗಳೂರಿನ ಮಣ್ಣಗುಡ್ಡೆ ಸಮೀಪ 10 ವರ್ಷದ ಬಾಲಕನೋರ್ವ ಹೆಬ್ಬಾವನ್ನ ತುಳಿದು ಕಚ್ಚಿಸಿಕೊಂಡ ಘಟನೆ ನಡೆದಿದೆ.

ಸಂಕಲ್ಪ ಜಿ. ಪೈ  ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ ಹೆಬ್ಬಾವನ್ನು ಗೊತ್ತಿಲ್ಲದೆ ತುಳಿದಿದ್ದಾನೆ. ಇದರಿಂದ ಗಾಬರಿಗೊಂಡ ಹೆಬ್ಬಾವು ಬಾಲಕನ ಕಾಲಿಗೆ ಕಚ್ಚಿದೆ.‌ ಹಾವು ಕಚ್ಚಿದ್ದರೂ ಧೃತಿಗೆಡದ ಬಾಲಕ ಹಾವಿನ ತಲೆಯನ್ನು ತುಳಿದು ನಿಂತಾಗ ಹಾವು ಸಮೀಪದಲ್ಲಿದ್ದ ಪೈಪ್ ಒಳಗೆ ಹೋಗಲು ಯತ್ನಿಸಿದೆ. ತಕ್ಷಣ ಸ್ಥಳೀಯರಿಗೆ ವಿಷಯ ತಿಳಿದು ಹೆಬ್ಬಾವನ್ನು ಸೆರೆ ಹಿಡಿಯಲಾಗಿದೆ.

ಈ  ಘಟನೆಯಲ್ಲಿ ಹೆಬ್ಬಾವಿನಿಂದ ಕಚ್ಚಿಸಿಕೊಂಡು ವಿದ್ಯಾರ್ಥಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

 ಮತ್ತೊಂದೆಡೆ ‌ಪ್ರಾಣಾಪಾಯದಲ್ಲಿದ್ದ ಹೆಬ್ಬಾವನ್ನು ವಿದ್ಯಾರ್ಥಿಗಳು ರಕ್ಷಿಸಿದ ಘಟನೆ ನಡೆದಿದೆ.

 ಅಕ್ಬೋಬರ್‌ 6 ರಂದು ಫಲ್ಗುಣಿ ನದಿಗೆ ಗೋಣಿಚೀಲದಲ್ಲಿ ಕಟ್ಟಿ ಎಸೆದು ಹೋದ ಹೆಬ್ಬಾವನ್ನು ರಕ್ಷಿಸಿದ್ದಾರೆ. ಮಂಗಳೂರಿನ ಅಲೋಶಿಯಸ್ ಕಾಲೇಜಿನಲ್ಲಿ ದ್ವಿತೀಯ ಬಿಎಸ್​ಸಿ ವಿದ್ಯಾರ್ಥಿ, ರಾಷ್ಟ್ರೀಯ ಪರಿಸರಾಸಕ್ತ ಒಕ್ಕೂಟದ ಸದಸ್ಯ ಭುವನ್  ಇವರು  ಗೋಣಿಚೀಲದಲ್ಲಿ ಕಟ್ಟಿದ ಸ್ಥಿತಿಯಲ್ಲಿದ್ದ ಹೆಬ್ಬಾವನ್ನ  ನದಿಗೆ ಎಸೆದಿರುವ ಮಾಹಿತಿ ತಿಳಿದಿದ್ದರು.  ಭುವನ್ ಗೆಳೆಯರ ಜೊತೆಗೆ ಆ ಪ್ರದೇಶಕ್ಕೆ ಹೋದರೂ ಯಾರೂ ಹೆಬ್ಬಾವನ್ನು ರಕ್ಷಿಸಲು ಧೈರ್ಯ ಮಾಡಿರಲಿಲ್ಲ. ಆದರೆ ಭುವನ್ ನದಿಗೆ ಇಳಿದು ಗೋಣಿಚೀಲ ಬದಿಗೆ ತಂದು ಹೆಬ್ಬಾವನ್ನು ರಕ್ಷಿಸಿದ್ದಾರೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...