ಹು-ಧಾ ಮ.ನ.ಪಾ ಚುನಾವಣೆ ಸೆ.2 ರಂದು ಮಸ್ಟರಿಂಗ್ ಕೇಂದ್ರಗಳಿಗೆ ತಾಲೂಕು ಸ್ಥಳದಿಂದ ಬರಲು ಮತಗಟ್ಟೆ ಸಿಬ್ಬಂದಿಗೆ ಬಸ್ ವ್ಯವಸ್ಥೆ: ಡಿಸಿ ನಿತೇಶ ಪಾಟೀಲ

Source: SO News | By Laxmi Tanaya | Published on 31st August 2021, 10:18 PM | State News | Don't Miss |

ಧಾರವಾಡ : ‌ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಯ  ಚುನಾವಣಾ ಕರ್ತವ್ಯಕ್ಕೆ ನೇಮಿಸಿರುವ  ಮತಗಟ್ಟೆ ಸಿಬ್ಬಂದಿಗಳು ಸೆ. 2 ರಂದು ಬೆಳಿಗ್ಗೆ ಸರಿಯಾದ ಸಮಯಕ್ಕೆ ಬರಲು ಉಚಿತವಾಗಿ ಬಸ್ ವ್ಯವಸ್ಥೆ ಮಾಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಸೆಪ್ಟೆಂಬರ್ 3 ರಂದು ನಡೆಯಲಿರುವ ಮಹಾನಗರ ಪಾಲಿಕೆ ಚುನಾವಣಾ ಕರ್ತವ್ಯಕ್ಕಾಗಿ  ಜಿಲ್ಲೆಯ  ವಿವಿಧ ತಾಲೂಕುಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಮತಗಟ್ಟೆಗಳಿಗೆ ನೇಮಿಸಲಾಗಿದೆ.
ಪಾಲಿಕೆ ಚುನಾವಣೆಗಾಗಿ ಮತಯಂತ್ರಗಳ ಮಸ್ಟರಿಂಗ್ ಮಾಡುವ ಕಾರ್ಯವು ಹುಬ್ಬಳ್ಳಿಯ ಲ್ಯಾಮಿಂಗಟನ್ ಶಾಲೆ ಮತ್ತು ಪಾಲಿಟೆಕ್ನಿಕ್ ಕಾಲೇಜ್  ಹಾಗೂ 
ಧಾರವಾಡದ ಬಾಸಲ್ ಮಿಷನ್ ಶಾಲೆಗಳಲ್ಲಿ ನಡೆಯಲಿದೆ.

ಮತಗಟ್ಟೆಗಳಿಗೆ ನೇಮಕವಾಗಿರುವ ಮತಗಟ್ಟೆ ಅಧಿಕಾರಿ, ಸಿಬ್ಬಂದಿಗಳು ಸೆಪ್ಟೆಂಬರ್ 2 ರಂದು ಮಸ್ಟರಿಂಗ್ ಕೇಂದ್ರಗಳಿಗೆ ಬರಬೇಕು. 
ಸಿಬ್ಬಂದಿಗಳು ಸರಿಯಾದ ಸಮಯಕ್ಕೆ ಮಸ್ಟರಿಂಗ್ ಕೇಂದ್ರ ತಲುಪಿ, ತಮ್ಮ ಮತಯಂತ್ರಗಳೊಂದಿಗೆ ನಿಗದಿತ ಅವಧಿಯಲ್ಲಿ ಮತಗಟ್ಟೆ ತಲುಪುವುದು ಕಡ್ಡಾಯವಾಗಿದೆ.
ಆದ್ದರಿಂದ ಹುಬ್ಬಳ್ಳಿ ಹಾಗೂ  ಧಾರವಾಡ ಬಸ್ ನಿಲ್ದಾಣಗಳಿಂದ ಪ್ರತ್ಯೇಕವಾಗಿ ಎರಡು ಬಸ್ ಗಳು  ಕಲಘಟಗಿ, ಅಳ್ನಾವರ, ಕುಂದಗೋಳ, ಅಣ್ಣಿಗೇರಿ ಮತ್ತು ನವಲಗುಂದ  ತಾಲೂಕು ಬಸ್ ನಿಲ್ದಾಣಗಳಿಂದ  ಸೆಪ್ಟೆಂಬರ್ 2 ರಂದು ಬೆಳಿಗ್ಗೆ  6 - 30 ಗಂಟೆಗೆ  ಹೊರಟು ಸಿಬ್ಬಂದಿಗಳನ್ನು ಅವರಿಗೆ ಸಂಬಂದಿಸಿದ   ಮಸ್ಟರಿಂಗ್ ಕೇಂದ್ರಗಳಿಗೆ ತಲುಪಿಸಲಿವೆ.
ಚುನಾವಣಾ ಕಾರ್ಯಕ್ಕೆ ನೇಮಕಗೊಂಡಿರುವ ಎಲ್ಲ ಮತಗಟ್ಟೆ ಅಧಿಕಾರಿ, ಸಿಬ್ಬಂದಿಗಳು ಈ ಬಸ್ ಸೌಲಭ್ಯ ಉಪಯೊಗಿಸಿಕೊಳ್ಳಬೇಕೆಂದು    ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.

Read These Next

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ಕುಂದಾಪುರ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ – ಓರ್ವ ಮಹಿಳೆ ಮೃತ್ಯು, ಇಬ್ಬರ ಸ್ಥಿತಿ ಗಂಭೀರ!

ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಇಂದು ಮಧ್ಯಾಹ್ನ ನಡೆದ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಓರ್ವ ಮಹಿಳೆ ಮೃತಪಟ್ಟು, ಇಬ್ಬರು ಗಂಭೀರ ...