ಬೆಳಗಾವಿ: ನಡು ರಸ್ತೆಯಲ್ಲಿಯೇ ಯುವತಿಗೆ ಮಹಿಳೆಯರಿಂದ ಥಳಿತ

Source: so news | By MV Bhatkal | Published on 17th June 2018, 6:59 PM | State News |

ಬೆಳಗಾವಿ: ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಇಬ್ಬರು ಮಹಿಳೆಯರು ಸೇರಿ ಯುವತಿಗೆ ಥಳಿಸುತ್ತಿರುವ ಘಟನೆಯ ವಿಡಿಯೋ ವೈರಲ್ ಆಗಿದೆ.
ನಡು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯನ್ನು ಬೆನ್ನತ್ತಿ ಬಂದ ಮಹಿಳೆಯರು ಸಾರ್ವಜನಿಕರೇ ಎದುರೇ ರಸ್ತೆಯಲ್ಲಿ ಹೊಡೆಯುತ್ತಾ ಎಳೆದುಕೊಂಡು ಹೋಗಿ ಹಲ್ಲೆ ನಡೆಸಿದ ವಿಡಿಯೋ ವಾಟ್ಸಪ್ ನಲ್ಲಿ ವೈರಲ್ ಆಗಿದೆ.
ಫಿಶ್ ಮಾರ್ಕೆಟ್ ನಲ್ಲಿ ಚಿಕ್ಕೋಡಿ ಚಿಕ್ಕಮ್ಮಂದಿರ ಬಿಗ್ ಫೈಟ್!
ಮಹಿಳೆಯರು ವೈಯಕ್ತಿಕ ಕಾರಣಕ್ಕಾಗಿ ಯುವತಿಯನ್ನು ಥಳಿಸಿದ್ದು, ಅವಾಚ್ಯ ಪದಬಳಕೆ ಮಾಡುತ್ತ ಚಪ್ಪಲಿಯಿಂದ ಹೊಡೆದಿದ್ದಾರೆ ಎನ್ನಲಾಗಿದೆ. ಆದರೆ ಈ ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.
ಸಾಮಾನ್ಯವಾಗಿ ಮಹಿಳೆ, ಯುವತಿಯರ ಮೇಲೆ ಹೆಣ್ಣು ಮಕ್ಕಳೇ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸುವ ಘಟನೆ ನಮ್ಮ ರಾಜ್ಯಗಳಲ್ಲಿ ನಡೆಯುವುದು ವಿರಳ. ಹೊರ ರಾಜ್ಯಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚು. ಆದರೆ ಇದೀಗ ನಮ್ಮ ರಾಜ್ಯದಲ್ಲಿಯೇ, ಅಥಣಿಯಂತಹ ಪಟ್ಟಣದಲ್ಲಿಯೇ ಇಂತಹದೊಂದು ಪ್ರಕರಣ ಬೆಳಕಿಗೆ ಬಂದಿದೆ.
ಮುಂದೆ ಈ ಘಟನೆ ಯಾವ ರೂಪಕ್ಕೆ ತಿರುಗುವುದೋ ಕಾದು ನೋಡಬೇಕು. ಆದರೆ ಯುವತಿ ಮೇಲೆ ಮಹಿಳೆಯರು ಹಲ್ಲೆ ನಡೆಸುತ್ತಿರುವ ಪ್ರಕರಣ ಇದೀಗ ವಾಟ್ಸ್ ಅಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಹಿಳೆಯರ ನಡೆ ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದೆ. ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ

Read These Next

32ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ನಿಮಿತ್ತ ರಸ್ತೆ ಸುರಕ್ಷತಾ ನಿಯಮಗಳ ಸಂದೇಶ ಸಾರಿದ ವಾಕ್‍ಥಾನ್

ಬಳ್ಳಾರಿ : 32ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ನಿಮಿತ್ತ ಜಿಲ್ಲಾ ಪೊಲೀಸ್ ವತಿಯಿಂದ ಗುರುವಾರ ವಾಕ್‍ಥಾನ್ ನಡೆಯಿತು.