National News http://www.sahilonline.net/ka/national-news SahilOnline, Leading news portal from Coastal Karnataka, bringing you latest updates from the Coast, State, Nation and the World, in Kannada, Urdu and English. National News ಗೋವಾದ ಮುಖ್ಯಮಂತ್ರಿ ಮನೋಹರ ಪಾರಿಕ್ಕರ್ ನಿಧನ http://www.sahilonline.net/ka/goa-cm-manohar-parikkar-is-no-more ಪಣಜಿ: ಕಳೆದ ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ಮೇದೋಜ್ಜೀರಕ ಗ್ರಂಥಿಯ ಸಮಸ್ಯೆಯಿಂದ ನರಳುತ್ತಿದ್ದ ಗೋವಾದ ಮುಖ್ಯಮಂತ್ರಿ ಹಾಗೂ ಮಾಜಿ ರಕ್ಷಣಾ ಸಚಿವ ಮನೋಹರ ಪಾರಿಕ್ಕರ್(63) ಅವರು ರವಿವಾರ ಇಲ್ಲಿಯ ತನ್ನ ಪುತ್ರನ ನಿವಾಸದಲ್ಲಿ ಕೊನೆಯುಸಿರೆಳೆದರು. ‘ನೀರ’ವ್ ಮೋದಿಗೆ ‘ತ್ಯಾಂಕ್ಯೂ’ ಹೇಳಿದ ಪ್ರಧಾನಿ ಮೋದಿ! http://www.sahilonline.net/ka/nirav-modi-thank-u-said-prime-minister ಹೊಸದಿಲ್ಲಿ: ಲೋಕಸಭಾ ಚುನಾವಣೆಗೆ ಇನ್ನೇನು ಕೆಲವು ದಿನಗಳಿರುವಂತೆಯೇ ಪ್ರಧಾನಿ ನರೇಂದ್ರ ಮೋದಿ #MainBhiChowkidar ಎಂಬ ಆನ್ ಲೈನ್ ಆಂದೋಲನವೊಂದಕ್ಕೆ ಚಾಲನೆ ನೀಡಿದ್ದಾರೆ. #MainBhiChowkidar ಎಂಬ ಹ್ಯಾಶ್ ಟ್ಯಾಗ್ ಮೂಲಕ ಟ್ವೀಟ್ ಮಾಡಿ ಭ್ರಷ್ಟಾಚಾರದ ಬಗ್ಗೆ ದೇಶದ ಜನರು ತಮ್ಮ ವಿರೋಧ ವ್ಯಕ್ತಪಡಿಸಬೇಕು ಎನ್ನುವುದು ಪ್ರಧಾನಿಯವರ ಉದ್ದೇಶವಾಗಿದೆ. ಆದರೆ ಇದೀಗ ಇದೇ ಹ್ಯಾಶ್ ಟ್ಯಾಗ್ ನಿಂದಾಗಿ ಬಿಜೆಪಿ ಹಾಗು ಪ್ರಧಾನಿ ಮೋದಿ ನಗೆಪಾಟಲಿಗೀಡಾಗಿದ್ದಾರೆ. ಲೋಕಸಭಾ ಚುನಾವಣೆ; ಕಾಂಗ್ರೇಸ್ ನಿಂದ ಎರಡನೇ ಪಟ್ಟಿ ಬಿಡುಗಡೆ http://www.sahilonline.net/ka/lok-sabha-election-2nd-list-of-candidates-from-congress ಹೊಸದಿಲ್ಲಿ, ಮಾ. 14: ಮುಂಬೈಯ ಉತ್ತರ ಕೇಂದ್ರ ಲೋಕಸಭಾ ಕ್ಷೇತ್ರದಿಂದ ಪ್ರಿಯಾ ದತ್ ಹಾಗೂ ಮೊರದಾಬಾದ್‌ನಿಂದ ಪಕ್ಷದ ಉತ್ತರಪ್ರದೇಶ ಘಟಕದ ವರಿಷ್ಠ ರಾಜ್ ಬಬ್ಬರ್ ಅವರನ್ನು ಒಳಗೊಂಡಂತೆ 20 ಮಂದಿ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಕಾಂಗ್ರೆಸ್ ಬುಧವಾರ ಬಿಡುಗಡೆ ಮಾಡಿದೆ. ಸಿಎಸ್ಟಿ ಟರ್ಮಿನಸ್‌ನಲ್ಲಿ ಪಾದಾಚಾರಿ ಮೇಲ್ಸೇತುವೆ ಕುಸಿತ; ಐವರ ಸಾವು ೩೦ಕ್ಕೂ ಅಧಿಕ ಮಂದಿ ಗಾಯ http://www.sahilonline.net/ka/five-killed-and-29-injured-in-mumbai-cst-overturns ಮುಂಬೈ: ಇಲ್ಲಿನ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್‌ನಲ್ಲಿ ಗುರುವಾರ ಪಾದಾಚಾರಿ ಮೇಲ್ಸೇತುವೆ ಕುಸಿದ ಪರಿಣಾಮ ಐವರು ಮೃತಪಟ್ಟಿದ್ದಾರೆ ಹಾಗೂ ಕನಿಷ್ಠ 29 ಮಂದಿ ಗಾಯಗೊಂಡಿದ್ದಾರೆ. ಪಾದಚಾರಿ ಮೇಲ್ಸೇತುವೆಯಲ್ಲಿ ಪ್ರತಿದಿನ ಸಾವಿರಾರು ಪ್ರಯಾಣಿಕರು ಸಂಚರಿಸುತ್ತಾರೆ. ಅದು ಗುರುವಾರ ಸಂಜೆ ಕುಸಿಯಿತು. ಪೊಲೀಸ್ ಅಧಿಕಾರಿಗಳು ಹಾಗೂ ರಕ್ಷಣಾ ಕಾರ್ಯಕರ್ತರು ತತ್‌ಕ್ಷಣ ಸ್ಥಳಕ್ಕೆ ಧಾವಿಸಿದರು. ಮಹಾರಾಷ್ಟ್ರ ಕಾಂಗ್ರೇಸ್ ಮುಖಂಡನ ಪುತ್ರ ಬಿಜೆಪಿಗೆ http://www.sahilonline.net/ka/the-son-of-the-maharashtra-congress-leader-is-the-bjp-a-huge-backlash-for-the-party ಮುಂಬೈ: ಮಹಾರಾಷ್ಟ್ರದ ವಿಪಕ್ಷ ನಾಯಕನ ಪುತ್ರ ಇಂದು ಬಿಜೆಪಿಗೆ ಸೇರ್ಪಡೆಯಾಗಿದ್ದು, ಈ ಮೂಲಕ ಲೋಕಸಭಾ ಚುನಾವಣೆಗೆ ಮೊದಲ ಕಾಂಗ್ರೆಸ್‌ಗೆ ತೀವ್ರ ಹಿನ್ನಡೆಯಾಗಿದೆ. ಸಾವು ಮತ್ತು ವಿಷವನ್ನು ಭಟ್ಟಿ ಇಳಿಸುತ್ತಿರುವ ಸರ್ಕಾರ http://www.sahilonline.net/ka/government-of-death-and-poisoning ಉತ್ತರಪ್ರದೇಶ ಮತ್ತು ಉತ್ತರಖಂಡ್‌ಗಳಲ್ಲಿ ನಕಲಿ ಸಾರಾಯಿ ಕುಡಿದು ೧೧೬ ಜನ ಸಾವಿಗೀಡಾದ ಪ್ರಕರಣವು ಸಂಪೂರ್ಣ ಪಾನ ನಿಷೇಧ ಮತ್ತು ಸುರಕ್ಷಿತ ಮದ್ಯದ ಎಚ್ಚರಿಕೆಯ ಸೇವನೆಯ ನಡುವಿನ ವಾಗ್ವಾದವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ಅಧಿಕ ಆದಾಯ ಇರುವ ದೇಶಗಳಿಗೆ ಹೋಲಿಸಿದರೆ ಮದ್ಯಸೇವನೆಯ ಅಭ್ಯಾಸಗಳು ಹೆಚ್ಚು ಖಾಯಿಗಳನ್ನು ಮತ್ತು ಅಪಾಯಗಳನ್ನು ಉಂಟುಮಾಡುತ್ತಿರುವುದು ಬಡ ಮತ್ತು ಮಧ್ಯಮ ಆದಾಯದ ದೇಶಗಳಲ್ಲೇ ಎಂಬುದನ್ನು ಹಲವಾರು ಅಧ್ಯಯನಗಳು ಧೃಢಪಡಿಸಿವೆ ಸಾಮಾಜಿಕ ಮಾಧ್ಯಮಗಳನ್ನು ಪ್ರಜಾತಾಂತ್ರೀಕರಿಸುವುದು ಸಾಧ್ಯವೇ? http://www.sahilonline.net/ka/can-social-media-be-democratized ಸಂಸದ ಅನುರಾಗ್ ಠಾಕೂರ್ ಅವರ ಅಧ್ಯಕ್ಷತೆಯ ೩೧ ಸದಸ್ಯರ ಸಂಸದೀಯ ಸಮಿತಿಯು ಸಾಮಾಜಿಕ ಮಾಧ್ಯಮಗಳಲ್ಲಿ ನಾಗರಿಕರ ಹಕ್ಕುಗಳನ್ನು ಪರಿರಕ್ಷಿಸುವ ಕುರಿತು ಚರ್ಚಿಸಲು ಟ್ವಿಟರ್ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯಾದ ಜಾಕ್ ಡೊರ್ಸಿಯವರನ್ನು ತಮ್ಮ ಮುಂದೆ ಹಾಜರಾಗಲು ಸೂಚಿಸಿದೆ. ಇದು ಸಂಶಯಾಸ್ಪದವಾದ ಹಲವಾರು ಟ್ವಿಟರ್ ಖಾತೆಗಳನ್ನು ಇತ್ತೀಚೆಗೆ ಟ್ವಿಟರ್ ತಾಣದಿಂದ  ತೆಗೆದುಹಾಕಿರುವುದರ ಹಿನ್ನೆಲೆಯಲ್ಲಿ ಸೂಚಿಸಿರುವ ಕ್ರಮವಾಗಿರಬಹುದೆಂಬ ಬಗ್ಗೆ ದಟ್ಟವಾದ ಅನುಮಾನವಿದೆ. ಬೆರಕೆ ಸರ್ಕಾರದ ಸಮರ್ಥನೆಯಲ್ಲಿ... http://www.sahilonline.net/ka/in-the-justification-of-the-government ವಿರೋಧ ಪಕ್ಷಗಳು ಒಟ್ಟುಗೂಡಿ ರಚಿಸಬಹುದಾದ ಮೈತ್ರಿಕೂಟದ ಸರ್ಕಾರದಲ್ಲಿ ದಿನಕ್ಕೊಬ್ಬರು ಪ್ರಧಾನಮಂತ್ರಿಗಳಾಗುತ್ತಾರೆ ಎಂದು ಬಿಜೆಪಿಯ ಅಧ್ಯಕ್ಷ ಅಮಿತ್ ಶಾ ಸಹ ಲೇವಡಿ ಮಾಡಿದ್ದಾರೆ. ಸೋಶಿಯಲ್​ ಮೀಡಿಯಾಗಳಲ್ಲಿ ಸುಳ್ಳು ಪ್ರಚಾರಕ್ಕೆ ಚುನಾವಣೆ ಆಯೋಗ ಕೊಕ್ಕೆ http://www.sahilonline.net/ka/commission-promises-false-propaganda-on-social-media ಸೋಶಿಯಲ್​ ಮೀಡಿಯಾಗಳಲ್ಲಿ ಸುಳ್ಳು ಪ್ರಚಾರಕ್ಕೆ ಚುನಾವಣೆ ಆಯೋಗ ಕೊಕ್ಕೆ ಲೋಕಸಭಾ ಮಹಾಸಮರಕ್ಕೆ ದಿನಾಂಕ ಪ್ರಕಟ : ಕರ್ನಾಟಕದಲ್ಲಿ 2 ಹಂತದ ಚುನಾವಣೆ http://www.sahilonline.net/ka/lok-sabha-polls-to-be-held-in-7-phases-from-april-11-counting-on-may-23 ಲೋಕಸಭಾ ಮಹಾಸಮರಕ್ಕೆ ದಿನಾಂಕ ಪ್ರಕಟ : ಕರ್ನಾಟಕದಲ್ಲಿ 2 ಹಂತದ ಚುನಾವಣೆ ಮೋದಿಗೆ ಮುಂಬೈ ಐಐಟಿ ಬೆಂಬಲ’: ನಕಲಿ ಟಾಕ್ ಶೋ ನಡೆಸಿದ ಎಬಿಪಿ ನ್ಯೂಸ್‍! http://www.sahilonline.net/ka/mumbai-iit-support-for-modi-abp-news-conducted-by-fake-talk-show ದೇಶದ ಅಗ್ರಗಣ್ಯ ಹಿಂದಿ ಸುದ್ದಿವಾಹಿನಿಗಳಲ್ಲೊಂದಾದ ಎಬಿಪಿ ನ್ಯೂಸ್, ಕಾಲೇಜೊಂದರಿಂದ ಲೈವ್ ಟಾಕ್‍ ಶೋ ಮೂಲಕ ಮೋದಿ ಪರ ಪ್ರಸಾರ ಮಾಡಲು ಸಾಧ್ಯವಾಗದಿದ್ದಾಗ ಏನು ಮಾಡುತ್ತದೆ?..  ಉತ್ತರ ಸರಳ. ನಕಲಿ ಶೋ ನಡೆಸಿಕೊಡುತ್ತದೆ. ಇಲ್ಲಿ ವಿದ್ಯಾರ್ಥಿಗಳೂ ನಕಲಿ. ಮೋದಿ-ಪಾಕ್ ಮ್ಯಾಚ್ ಫಿಕ್ಸಿಂಗ್? ಬಿ.ಕೆ.ಹರಿಪ್ರಸಾದ್ ಆರೋಪ http://www.sahilonline.net/ka/pulwama-attack-was-match-fixing-between-pakistan-and-modi ಹೊಸದಿಲ್ಲಿ: ಪಾಕಿಸ್ತಾನ ಮತ್ತು ನರೇಂದ್ರ ಮೋದಿಯ ನಡುವೆ ಏನಾದರೂ ಮ್ಯಾಚ್-ಫಿಕ್ಸಿಂಗ್ ನಡೆದಿತ್ತೇ ಎಂಬ ಬಗ್ಗೆ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಸ್ಪಷ್ಟೀಕರಣ ನೀಡಬೇಕು. ಅವರಿಗೆ ತಿಳಿಯದೆ ಪುಲ್ವಾಮ ಘಟನೆ ನಡೆಯಬಾರದಾಗಿತ್ತು ಎಂದು ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ. ಬಿಸಿಲಿನ ಝಳಕ್ಕೆ ಸತ್ತವರನ್ನು ಬಾಲಕೋಟ್ ವಾಯುದಾಳಿಯಲ್ಲಿ ಸತ್ತ ಉಗ್ರರೆಂದರು! http://www.sahilonline.net/ka/balakot-air-stric_terrarist_death ಹೊಸದಿಲ್ಲಿ: ಸಾಮೂಹಿಕ ಸಮಾಧಿಗಳು ಹಾಗೂ ಬಿಳಿ ಬಟ್ಟೆಗಳಿಂದ ಮುಚ್ಚಲಾಗಿರುವ ಮೃತದೇಹಗಳ ಛಾಯಾಚಿತ್ರಗಳು  ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಭಾರತೀಯ ವಾಯುಪಡೆ ಪಾಕಿಸ್ತಾನದಲ್ಲಿ ನಡೆಸಿದ ವಾಯು ದಾಳಿಯ ಪರಿಣಾಮ ಇದೆಂದು ಬಿಂಬಿಸಲಾಗಿದೆ. “ಬಾಲಕೋಟ್ ವಾಯುದಾಳಿಗೆ ಪುರಾವೆ ಕೇಳುತ್ತಿರುವ ಹರಾಮಿ ನೇತಾಗಳಿಗೆ ಇದು ಪುರಾವೆಯಾಗಿದ್ದು ನೀವು ದೇಶಭ್ರಷ್ಟರು ನಿಮ್ಮ ಮುಖಕ್ಕೇ ಚಪ್ಪಲಿಯಲ್ಲಿ ಬಡಿದುಕೊಂಡು ನಿಮ್ಮ ಬಾಯ್ಮುಚ್ಚಿಕೊಂಡು ದೇಶದ ಸೇನಾ ಪಡೆಗಳನ್ನು ಅಪಹಾಸ್ಯ ಮಾಡದೇ ಇರಬೇಕು'' ಎಂದು ಒಂದು ಕಡೆಯಲ್ಲಿ ಬರೆಯಲಾಗಿದ್ದರೆ “ಇದು ಪುರಾವೆ, ನಿಮ್ಮ ಕನ್ನಡಕಗಳನ್ನು ಹಾಕಿ ಸರಿಯಾಗಿ ನೋಡಿ'' ಎಂದು ಇನ್ನೊಂದು ಕಡೆ ಬರೆಯಲಾಗಿದೆ. ಆದಿವಾಸಿಗಳ ಭೂಮಿಯನ್ನು ಒತ್ತುವರಿ ಮಾಡುತ್ತಿರುವವರು ಯಾರು? http://www.sahilonline.net/ka/who-are-the-occupants-of-the-tribal-land ಯುಪಿಎ ಸರ್ಕಾರವು ೨೦೦೬ರಲ್ಲಿ ಜಾರಿಗೆ ತಂದ ಪರಿಶಿಷ್ಟ ಪಂಗಡ ಮತ್ತು ಇತರ ಪಾರಂಪರಿಕ ಅರಣ್ಯವಾಸಿಗಳು (ಅರಣ್ಯಹಕ್ಕುಗಳ ಮಾನ್ಯೀಕರಣ) ಕಾಯಿದೆ ಅಥವಾ ಸಂಕ್ಷಿಪ್ತವಾಗಿ ಹೇಳುವುದಾದರೆ ಅರಣ್ಯ ಹಕ್ಕುಗಳ ಕಾಯಿದೆ (ಶೆಡ್ಯೂಲ್ದ್ ಟ್ರಬ್ಸ್ ಅಂಡ್ ಅದರ್ ಟ್ರಡಿಷನಲ್ ಫಾರೆಸ್ಟ್ ಡ್ವೆಲ್ಲರ್ಸ್(ರೆಕಾಗ್ನಿಷನ್ ಆಫ್ ಫಾರೆಸ್ಟ್ ರೈಟ್ಸ್ ಆಕ್ತ್)-೨೦೦೬)ಯ ಉದ್ದೇಶವೇ ಆ ಬುಡಕಟ್ಟು ಗುಂಪುಗಳು ಶತಮಾನಗಳಿಂದ ಅನುಭವಿಸಿಕೊಂಡು ಬಂದಿದ್ದ ಚಾರಿತ್ರಿಕ ಅನ್ಯಾಯಗಳನ್ನು ಸರಿಪಡಿಸುವುದಾಗಿತ್ತು. ಭಾರತ-ಪಾಕ್ ಸಂಬಂಧ ಸುಧಾರಣೆ- ರಾಜತಾಂತ್ರಿಕ ಮಾರ್ಗವೇ ದಾರಿ http://www.sahilonline.net/ka/indo-pak-relationship-reform-the-way-of-a-diplomatic-way ಕಳೆದ ಸೋಮವಾರದ ಮಧ್ಯರಾತ್ರಿ ಭಾರತದ ಫೈಟರ್ ಜೆಟ್ ವಿಮಾನಗಳು ಗಡಿಯಾಚೆಗಿನ ಬಾಲಾಕೋಟಿನಲ್ಲಿರುವ ಜೈಷ-ಎ-ಮುಹಮದ್ ನಡೆಸುತ್ತಿದ್ದ ಉಗ್ರಗಾಮಿಗಳ ತರಬೇತಿ ಶಿಬಿರದ ಮೇಲೆ ಮುಂದಾಳಿ ನಡೆಸಲು ವಾಯುಗಡಿಯನ್ನು ದಾಟಿದವು. ಎರಡು ವಾರಗಳ ಕೆಳಗೆ ಫುಲ್ವಾಮದಲ್ಲಿ ೪೦ ಸಿಆರ್‌ಪಿಎಫ್ ಯೋಧರನ್ನು ಬಲಿತೆಗೆದುಕೊಂಡ ಭಯೋತ್ಪಾದಕ ದಾಳಿಯಿಂದ ತೀವ್ರವಾಗಿ  ಘಾಸಿಗೊಂಡಿದ್ದ ಭಾರತೀಯ ಮಾನಸಿಕತೆ ಒಂದಷ್ಟು ಭಾರತೀಯ ವಾಯುಪಡೆಯು ನಡೆಸಿದ ಈ ಯಶಸ್ವೀ ನಿಖರ ದಾಳಿಯು ಮುಲಾಮನ್ನು ಸವರಿತು. ಇದು ಒಂದು ನ್ಯೂಕ್ಲಿಯಾರ್ ಶಕ್ತಿಯೂ ಆಗಿರುವ ಪಾಕಿಸ್ತಾನದ ಜೊತೆ ದಿಟ್ಟವಾಗಿ ವ್ಯವಹರಿಸಬಲ್ಲ ಒಂದು ಸರಿಯಾದ ಮಾರ್ಗವೆಂದು ದೇಶದ ರಾಜಕೀಯ ನಾಯಕತ್ವವನ್ನು ಹೆಚ್ಚೂಕಡಿಮೆ ಇಡೀ ದೇಶವೇ ಅಭಿನಂದಿಸಿತು. ಸಂಭಾವ್ಯ ನ್ಯೂಕ್ಲಿಯಾರ್ ಯುದ್ಧವು ಪಾಕಿಸ್ತಾನದ ಎದೆಗುಂದಿಸುತ್ತಿಲ್ಲವಾದ್ದರಿಂದ ಈ ಬಗೆಯ ವಾಯು ದಾಳಿಗಳು ಒಂದು ಅರೆ ಸಾಂಪ್ರದಾಯಿಕ ಅರೆ ಯುದ್ಧದಲ್ಲಿ ಶತ್ರುವಲ್ಲಿ ಹಿಂಜರಿಕೆಯನ್ನು ಉಂಟುಮಾಡಬಲ್ಲ ಒಂದು ಪರಿಣಾಮಕಾರಿ ಸಾಧನ ವೆಂದು ವ್ಯೂಹತಾಂತ್ರಿಕ ನಿಪುಣರು ಬಣ್ಣಿಸಲು ಪ್ರಾರಂಭಿಸಿದರು. ಅಂತರರಾಷ್ಟ್ರೀಯವಾಗಿ ಪ್ರತ್ಯೇಕಗೊಳಿಸಲ್ಪಟ್ಟ ಮತ್ತು ಸಾಲದಿಂದ ಜರ್ಝರಿತವಾಗಿರುವ ಪಾಕಿಸ್ತಾನವು ತನ್ನ ವಾಯುಗಡಿಗಳ ಉಲ್ಲಂಘನೆಯ ವಿರುದ್ಧ ಪ್ರತಿಕ್ರಮಗಳನ್ನು ತೆಗೆದುಕೊಂಡು ಸಂದರ್ಭವನ್ನು ಇನ್ನಷ್ಟು ಉದ್ವಿಘ್ನಗೊಳಿಸಲಾರದು ಎಂದು ನಿರೀಕ್ಷಿಸಲಾಗಿತ್ತು.  ವಿಜಯೋನ್ಮಾದದ ಮಿತಿಗಳು http://www.sahilonline.net/ka/conclusion-of-limits_epw_editorial ಕಾಶ್ಮೀರದ ಫುಲ್ವಾಮದಲ್ಲಿ ಜೈಷ್-ಎ-ಮುಹಮ್ ಸಂಘಟನೆಯು ನಡೆಸಿದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತೀಯ ವಾಯು ಪಡೆಯು ಕೈಗೊಂಡ ಮಿಲಿಟರಿ ಕ್ರಮಗಳು ಎರಡು ಬಗೆಯ ನಿರೀಕ್ಷಿತ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಮೊದಲನೆಯದಾಗಿ ದೇಶದ ಪ್ರಮುಖ ವಿರೋಧ ಪಕ್ಷಗಳ ನಾಯಕರನ್ನೂ ಒಳಗೊಂಡಂತೆ ಬಹಳಷ್ಟು ಜನ ಭಾರತೀಯ ಸೇನಾಪಡೆಗಳನ್ನು ಅಭಿನಂದಿಸಿದ್ದಾರೆ. ಭಾರತೀಯ ವಾಯುಪಡೆಯಿಂದ ಭರ್ಜರಿ ಬೇಟೆ; ಪಿಒಕೆ ನುಗ್ಗಿ ೨೦೦ಕ್ಕೂ ಅಧಿಕ ಉಗ್ರರ ಸಂಹಾರ http://www.sahilonline.net/ka/about-200-militants-killed-in-indian-air-force-attack-in-pakistan ಹೊಸದಿಲ್ಲಿ: ಭಾರತೀಯ ವಾಯುಪಡೆಯ(ಐಎಎಫ್) 12 ಮಿರಾಜ್-2000 ಯುದ್ಧ ವಿಮಾನಗಳು ಮಂಗಳವಾರ ಬೆಳಗ್ಗಿನ ಜಾವ ಪಾಕಿಸ್ತಾನದ ಬಾಲಾಕೋಟ್ ಮೇಲೆ 1,000 ಕೆಜಿ ಬಾಂಬ್‌ಗಳನ್ನು ಸುರಿದ ಪರಿಣಾಮ ಸುಮಾರು 200 ಉಗ್ರರು ಹತರಾಗಿದ್ದಾರೆ ಎಂದು ಸರಕಾರಿ ಮೂಲಗಳು ತಿಳಿಸಿದ್ದಾಗಿ 'ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ. ಕಾರ್ಖಾನೆಯೊಂದರಲ್ಲಿ ಸ್ಫೋಟ 10 ಮಂದಿ ಮೃತ http://www.sahilonline.net/ka/explosion-in-factory-10-dead ಉತ್ತರ ಪ್ರದೇಶ: ಕಾರ್ಪೆಟ್ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಸ್ಫೋಟದಿಂದ 10 ಮಂದಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಭದೋಹಿ ಜಿಲ್ಲೆಯಲ್ಲಿ ಇಂದು ನಡೆದಿದೆ. ಕಟ್ಟಡದಲ್ಲಿ ಇಡಲಾಗಿದ್ದ ಪಟಾಕಿಗಳಿಂದ ಈ ಅನಾಹುತ ಸಂಭವಿಸಿದೆ ಎಂದು ವರದಿಯಾಗಿದೆ. ಉಗ್ರದಾಳಿಯಲ್ಲಿ ಬದುಕುಳಿದ ಮೈಸೂರಿನ ಯೋಧ ಹೇಳಿದ್ದೇನು ಗೊತ್ತೇ? http://www.sahilonline.net/ka/do-not-know-which-god-has-saved-us-warrior-gopal-of-mysore ಶ್ರೀನಗರ: ಸಾವು ಯಾರಿಗೂ ಸಹ ಈ  ರೀತಿ ಬರಬಾರದು. ಯಾವ ದೇವರು ನಮ್ಮನ್ನು ಕಾಪಾಡಿದನೋ ಗೊತ್ತಿಲ್ಲ ಎಂದು ಪುಲ್ವಾಮದಲ್ಲಿ ಉಗ್ರ ದಾಳಿಯ ವೇಳೆ ಸ್ಥಳದಲ್ಲಿದ್ದ ಯೋಧ ಮೈಸೂರಿನ ಸಾಲಿಗ್ರಾಮದ ನಿವಾಸಿ ಗೋಪಾಲ್  ತಿಳಿಸಿದ್ದಾರೆ ಉಗ್ರನೊಂದಿಗೆ ರಾಹುಲ್ ಫೋಟೊ; ವಿಕೃತ ಮನಸ್ಸಿನ ಕಿಡಿಗೇಡಿಗಳ ಕೃತ್ಯ;ಯೋಧರ ಬಲಿದಾನದಲ್ಲೋ ರಾಜಕೀಯ http://www.sahilonline.net/ka/rahul-with-photo-shoot-in-pulwama ಹೊಸದಿಲ್ಲಿ: ನಿನ್ನೆ ಪುಲ್ವಾಮಾದಲ್ಲಿ ಭಯೋತ್ಪಾದಕ ದಾಳಿ ನಡೆದು 40 ಸೈನಿಕರು ಹುತಾತ್ಮರಾಗಿರುವ ಘಟನೆ ದೇಶವನ್ನೇ ಬೆಚ್ಚಿ ಬೀಳಿಸಿರುವ ನಡುವೆಯೇ ಕೆಲವು ಕಿಡಿಗೇಡಿಗಳು ಈ ಘಟನೆಯನ್ನು ರಾಜಕೀಯಕ್ಕಾಗಿ ಬಳಸುತ್ತಿದ್ದಾರೆ. ಪುಲ್ವಾಮ ದಾಳಿಗೆ 2 ದಿನಗಳ ಮೊದಲು ಉಗ್ರರಿಂದ ಬೆದರಿಕೆಯ ವಿಡಿಯೋ ಹರಿಯಬಿಡಲಾಗಿತ್ತು.. http://www.sahilonline.net/ka/the-video-of-the-threat-that-had-flared-2-days-before-the-pulwama-attack ಜಮ್ಮು: ಜಮ್ಮು ಮತ್ತು ಕಾಶ್ಮೀರ ಪೊಲೀಸರ ಮೂಲಕ ಕಳೆದ ಎರಡು ದಿನಗಳಿಂದ ಹರಿದಾಡುತ್ತಿದ್ದ ವಿಡಿಯೊ ಬಗ್ಗೆ ಗುಪ್ತಚರ ವಿಭಾಗ ಗಮನ ಹರಿಸಿದ್ದರೆ, ಸಿಆರ್‍ಪಿಎಫ್ ಸಿಬ್ಬಂದಿ ಮೇಲೆ ಪುಲ್ವಾನಾದಲ್ಲಿ ನಡೆದ ಉಗ್ರರ ದಾಳಿಯನ್ನು ತಪ್ಪಿಸಬಹುದಿತ್ತು ಎಂದು ಮಾಧ್ಯಮಗಳು ವರದಿ ಮಾಡಿವೆ. ಜಮ್ಮು ಕಾಶ್ಮೀರದಲ್ಲಿ ಉಗ್ರರ ದಾಳಿಗೆ 40 ಯೋಧರು ಹುತಾತ್ಮ; 20 ವರ್ಷದಲ್ಲೇ ಅತಿ ದೊಡ್ಡ ಭೀಕರ ದಾಳಿ http://www.sahilonline.net/ka/jammu-and-kashmir-40-crpf-jawans-killed-in-jaish-attack-worst-terror-strike-since-uri ಜಮ್ಮು ಕಾಶ್ಮೀರದಲ್ಲಿ ಉಗ್ರರ ದಾಳಿಗೆ 40 ಯೋಧರು ಹುತಾತ್ಮ; 20 ವರ್ಷದಲ್ಲೇ ಅತಿ ದೊಡ್ಡ ಭೀಕರ ದಾಳಿ ಹವಾಮಾನ ಬದಲಾವಣೆ ಮತ್ತು ಬಡವರು http://www.sahilonline.net/ka/climate-change-and-the-poor ಹವಾಮಾನ ಬದಲಾವಣೆಯು ಒಂದು ತುರ್ತುಸ್ಥಿತಿಯನ್ನೇ ಸೃಷ್ಟಿಸಿದ್ದು ಈ ಭೂಮಿಗೆ ಮತ್ತು ಇದರ ಮೇಲೆ ವಾಸಿಸುತ್ತಿರುವ ಮಾನವ, ಸಸ್ಯ ಮತ್ತು ಪ್ರಾಣಿಗಳನ್ನೂ ಒಳಗೊಂಡಂತೆ ಎಲ್ಲಾ ಜೀವಸಂಕುಲಗಳಿಗೆ ಒಂದಲ್ಲ ಒಂದು ಮಟ್ಟದ ಪ್ರಭಾವವನ್ನು ಬೀರುತ್ತಿದೆ. ಆದರೂ, ಅದು ಬಡವರ ಮೇಲೆ ಅದರಲ್ಲೂ ಹೆಚ್ಚಾಗಿ ಅಭಿವೃದ್ಧಿಶೀಲ ದೇಶಗಳ ಬಡವರ ಮೇಲೆ ಎಲ್ಲರಿಗಿಂತ ಹೆಚ್ಚಿನ ದುಷ್ಪರಿಣಾಮವನ್ನು ಬೀರುತ್ತಿದೆ. ವಂಶಪಾರಂಪರ್ಯದ ರಾಜಕಾರಣ ಮತ್ತು ಪ್ರಜಾತಂತ್ರ http://www.sahilonline.net/ka/dynastic-politics-and-democracy ಈ ವಿಷಯದ ಬಗ್ಗೆ ಬಿಜೆಪಿ ಪಕ್ಷದ ಪ್ರತಿಕ್ರಿಯೆ ಕೇವಲ ಆಷಾಢಭೂತಿತನದಿಂದ ಮಾತ್ರ ಕೂಡಿಲ್ಲ. ಬದಲಿಗೆ ಅವಿವೇಕತನದಿಂದಲೂ ಕೂಡಿದೆ. ವಂಶಪಾರಂಪರ್ಯ ರಾಜಕಾರಣವನ್ನು ಈ ಬಗೆಯಲ್ಲಿ ರಜಕೀಯಕರಣಗೊಳಿಸುವುದು ಪ್ರಜಾತಂತ್ರದ ಮೂಲಭೂತ ತತ್ವಗಳಾದ ಸಮಾನತೆ ಮತ್ತು ನ್ಯಾಯದ ಮೇಲೆ ನಕಾರಾತ್ಮಕ ಪರಿಣಾಮಗಳನ್ನುಂಟು ಮಡಬಹುದು ಎಂಬುದನ್ನು ಅವರು ಲೆಕ್ಕಕ್ಕೇ ತೆಗೆದುಕೊಳ್ಳುವುದಿಲ್ಲ. ಗೋಗಲ್ ಸರ್ಚ್‍ನ ಭಟ್ಕಳಕ್ಕೂ ವಾಸ್ತವ ಭಟ್ಕಳಕ್ಕೂ ಅಜಗಜಾಂತರ ವ್ಯತ್ಯಾಸವಿದೆ-ಬ್ರಿಟೀಷ್ ರಾಯಭಾರಿ ಡೊಮ್ಯಾನಿಕ್ ಮ್ಯಾಕ್ ಅಲಿಷ್ಟರ್ http://www.sahilonline.net/ka/british-deputy-high-commissioner-dominic-mcallister-from-bangalore-visits-bhatkal-educational-institutions ಭಟ್ಕಳ: ಭಟ್ಕಳವನ್ನು ಗೋಗಲ್ ಸರ್ಚ್‍ನಲ್ಲಿ ನೋಡಿದರೆ ಅದರ ಚಿತ್ರಣವೇ ಬೇರೆಯಾಗಿದ್ದು ವಾಸ್ತವ ಭಟ್ಕಳಕ್ಕೂ ಗೋಗಲ್ ಸರ್ಚ್‍ನ ಮಾಧ್ಯಮಗಳ ಭಟ್ಕಳಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಎಂದು ಬ್ರಿಟೀಷ್ ದೇಶದ ರಾಯಭಾರಿ (British deputy high commissioner) ಡೊಮ್ಯಾನಿಕ್ ಮ್ಯಾಕ್ ಅಲಿಷ್ಟರ್ ಹೇಳಿದರು. ಕುಸಿಯುತ್ತಿರುವ ನ್ಯಾಯಾಂಗದ ವಿಶ್ವಾಸಾರ್ಹತೆ http://www.sahilonline.net/ka/reliability-of-the-declining-judiciary ನ್ಯಾಯಾಂಗವು ತಾನೇ ಹಾಕಿಕೊಂಡ ಕಟ್ಟುಕಟ್ಟಳೆಗಳನ್ನು ಅನುಸರಿಸದ ಮತ್ತು ಉತ್ತರದಾಯಿತ್ವವನ್ನು ಪಾಲಿಸದ ಸಾಂಸ್ಥಿಕ  ಸಮಸ್ಯೆಗಳಿಂದ ಹೊರಬರಲು ಅಸಮರ್ಥವಾಗಿದೆ. ದ್ವೇಷದ ರಾಜಕಾರಣ? http://www.sahilonline.net/ka/hate-politics_epw_editorial ಒಬ್ಬ ಮಹಿಳೆಯ ಘನತೆಯನ್ನು ಹಾಳು ಮಾಡಲು ಆಕ್ರಮಣಕಾರಿ ನಿಂದನೆಯನ್ನು ಬಳಸುವುದನ್ನು ಪಿತೃಸ್ವಾಮ್ಯ ವ್ಯವಸ್ಥೆ ಒದಗಿಸಿರುವ ಸಹಜ ಹಕ್ಕು ಮತ್ತು ಸೌಕರ್ಯ ಎಂದಾಗಿಬಿಟ್ಟಿದೆ. ಆದರೆ ಒಬ್ಬ ಮಹಿಳೆಯೇ ಮತ್ತೊಬ್ಬ ಮಹಿಳೆಯ ಬಗ್ಗೆ ಅಂಥಾ ಭಾಷೆಯನ್ನು ಬಳಸುವಾಗ ಅಲ್ಲಿನ  ದ್ವೇಷ ಭಾಷೆಯ ಮೂಲವುಕೇವಲ ಪಿತೃಸ್ವಾಮ್ಯ ವ್ಯವಸ್ಥೆಂi ಪ್ರಭಾವ ಮಾತ್ರವಾಗಿರುವುದಿಲ್ಲ. 2014ರ ಲೋಕಸಭಾ ಚುನಾವಣೆಯಲ್ಲಿ ಇವಿಎಂ ದುರ್ಬಳಕೆಯಾಗಿತ್ತು: ಅಮೆರಿಕದ ಸೈಬರ್ ತಜ್ಞ http://www.sahilonline.net/ka/evm-exploited-in-2014-lok-sabha-election-american-cyber-expert ಲಂಡನ್: ಇಲೆಕ್ಟ್ರಾನಿಕ್ ಮತಯಂತ್ರ (ಇವಿಎಂ) ಹ್ಯಾಕ್ ಮಾಡಲು ಸಾಧ್ಯ ಎಂದು ಅಮೆರಿಕ ಮೂಲದ ಸೈಬರ್ ತಜ್ಞ ಸಯೀದ್ ಶುಜಾ ವಾದಿಸಿದ್ದಾರೆ. ಭಾರತದಲ್ಲಿ ಬಳಸುತ್ತಿರುವ ಇವಿಎಂ ಡಿಸೈನ್ ಮಾಡಿರುವ ಈ ತಜ್ಞ ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಗುಜರಾತ್ ಚುನಾವಣೆಯಲ್ಲಿ 'ಇವಿಎಂ ದುರ್ಬಳಕೆ' ನಡೆದಿದೆ ಎಂದಿದ್ದಾರೆ. ರಾಜಕೀಯ ಗುರಾಣಿಗಳು ಮತ್ತು ಸಾಹಿತ್ಯ ಸಮ್ಮೇಳನ http://www.sahilonline.net/ka/political-shields-and-literary-conference ಮಹಾರಾಷ್ಟ್ರದ ಯಾವತ್‌ಮಲ್‌ನಲ್ಲಿ ಜನವರಿ ೧೧ ಕ್ಕೆ ನಡೆದ ೯೨ನೇ ಅಖಿಲ ಭಾರತೀಯ ಮರಾಠಿ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ಮಾಡಲು ನಯನತಾರಾ ಸೆಹಗಲ್ ಅವರಿಗೆ ಕೊಟ್ಟಿದ್ದ ಆಹ್ವಾನವನ್ನು ಆಯೋಜಕರು ಹಿಂತೆದುಕೊಂಡಿದ್ದು ಸಾಹಿತ್ಯ ಗಣ್ಯರನ್ನೂ ಒಳಗೊಂಡಂತೆ ಹಲವರ ಖಂಡನೆಗೆ ಮತ್ತು ವಿಸ್ತೃತವಾದ ಟೀಕಾಪ್ರಹಾರಗಳಿಗೆ ಗುರಿಯಾಗಿದೆ. ಆಯೋಜಕರ ಈ ಕ್ರಮವು ಕೇವಲ ನಯನಾತಾರ ಸೆಹಗಲ್ ಅವರಿಗೆ ಮಾತ್ರವಲ್ಲದೆ ಅಭಿವ್ಯಕ್ತಿ ಸ್ವಾತಂತ್ರ್ಯದಂಥ ಪ್ರಜಾತಾಂತ್ರಿಕ ಮೌಲ್ಯಗಳ ಹಿತಾಸಕ್ತಿಯನ್ನು ಹೊಂದಿರುವ ಪ್ರತಿಯೊಬ್ಬರನ್ನೂ ಆಳವಾಗಿ ವಿಚಲಿತಗೊಳಿಸಿದೆಯಲ್ಲದೆ ಮೂರು ಮುಖ್ಯ ಪ್ರಶ್ನೆಗಳನ್ನೂ ಹುಟ್ಟುಹಾಕಿದೆ. ಮೊದಲನೆಯದಾಗಿ ಕೊಟ್ಟ ಆಹ್ವಾನವನ್ನು ಹಿಂತೆದುಕೊಂಡಿದ್ದರಿಂದ ಸಂಸ್ಥೆಯ ಆತ್ಮ ಘನತೆಗೆ ಪೆಟ್ಟು ತಗುಲಿದೆ. ಆದರೆ ಇದರಿಂದ ನಷ್ಟವಾಗಿರುವುದು ಯಾರಿಗೆ? ಆಹ್ವಾನಿತರಿಗೋ? ಅತಿಥೇಯರಿಗೋ? ಎರಡನೆಯದಾಗಿ ಈ ರೀತಿಯ ತದ್ವಿರುದ್ಧವಾದ ನಿಲುವುಗಳಿಗೆ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಕಾರಣರಾದವರ ನೈತಿಕ ಸ್ಥಾಯಿಯ ಮೇಲೆ ಇಂಥಾ ತೀರ್ಮಾನಗಳು ಯಾವ ಪ್ರಭಾವವನ್ನು ಬೀರುತ್ತವೆ? ಅಂತಿಮವಾಗಿ ಇಂಥಾ ತೀರ್ಮಾನಗಳು ಅಭಿವ್ಯಕ್ತಿ ಸ್ವಾತಂತ್ರ್ಯದಂಥ ಪ್ರಜಾತಾಂತ್ರಿಕ ಮೌಲ್ಯಗಳ ರಕ್ಷಣೆಗೆ ಹೋರಾಡುತ್ತಿರುವವರ ಆತ್ಮ ಗೌರವದ ಸಾರವನ್ನು ಕಡಿಮೆ ಮಾಡಬಲ್ಲದೇ? ಶೇ.೧೦ರಷ್ಟು ಮೀಸಲಾತಿ ಪಡೆದುಕೊಳ್ಳುವವರಿಗೆ ಕೆಲಸ ಸಿಗಲಿದೆಯೇ? http://www.sahilonline.net/ka/will-10-of-the-resident-receiver-get-jobs-epw_editorial ಕೇಂದ್ರ ಸರ್ಕಾರವು ಇತ್ತೀಚೆಗೆ ಘೋಷಿಸಿರುವ ಶೇ.೧೦ ಮೀಸಲಾತಿಯೂ ಒಳಗೊಂಡಂತೆ ಕೈಗೊಂಡಿರುವ ಇತರ ಉದ್ಯೋಗ ರಕ್ಷಣಾ ಕ್ರಮಗಳು ೧೯ನೇ ಶತಮಾನದ ಬಂಗಾಳಿ ದ್ವಿಪದಿಯೊಂದರಲ್ಲಿರುವ ಕಾಲ್ನಡಿಗೆ ಸಾಧನವೊಂದನ್ನು ನೆನಪಿಸುತ್ತದೆ. ಅ ಸಾಧನವು ತನ್ನನ್ನು ತೊಟ್ಟಿರುವ ಹೆಗಲಿಗೆ ಬೆಸೆದುಕೊಂಡು ಮುಂದೆ ಒಂದು ಕ್ಯಾರಟ್ಟನ್ನು ಇಳಿಬಿಟ್ಟಿರುತ್ತದೆ. ಇದರಿಂದಾಗಿ ಅದನ್ನು ಹೊತ್ತುಕೊಂಡಿರುವವರು ಕ್ಯಾರೆಟ್ಟನ್ನು ಪಡೆದುಕೊಳ್ಳುವ ಸಲುವಾಗಿ ಮೈಲುಗಟ್ಟಲೇ ದೂರವನ್ನು ನಿಮಿಷಗಳಲ್ಲಿ ಕ್ರಮಿಸುವಂತೆ ಮಾಡುತ್ತದೆ. ಆದರೆ ಎಷ್ಟೇ ವೇಗವಾಗಿ ನಡೆದರೂ ಆ ಕ್ಯಾರೆಟ್ಟು ಮಾತ್ರ ಆ ಸಾಧನವನ್ನು ಹೊತ್ತುಕೊಂಡವನಿಂದ ಸಮಾನ ದೂರದಲ್ಲೆ ಇರುತ್ತದೆಯೇ ವಿನಃ ಬಾಯಿಗೆಟುಕುವುದೇ ಇಲ್ಲ. ಉದಾಹರಣೆಗೆ ಉದ್ಯೋಗಗಳಲ್ಲಿ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಆರ್ಥಿಕವಾಗಿ ದುರ್ಬಲವಾಗಿರುವ ಮೇಲ್ಜಾತಿಗಳಿಗೆ ನೀಡಲಾದ ಶೇ.೧೦ ಮೀಸಲಾತಿ ನೀತಿಯನ್ನೇ ಗಮನಿಸಿ. ಅದು ಹುಟ್ಟುಹಾಕಿರುವ ರಾಜಕೀಯ ಕೋಲಾಹಲವನ್ನು ಗಮನಿಸಿದಲ್ಲಿ ಒಂದು ರಾಜಕೀಯ ತಂತ್ರೋಪಾಯವಾಗಿ ಅದರ ಪರಿಣಾಮಕತೆಯನ್ನು ಯಾರೂ ನಿರಾಕರಿಸಲು ಸಾಧ್ಯವಿಲ್ಲ. ಅದೇ ಸಮಯದಲ್ಲಿ ಉದ್ಯೋಗಾವಕಾಶಗಳನ್ನು ಒದಗಿಸಲಾಗದ ಅದರ ಪೊಳ್ಳುತನವನ್ನೂ ಸಹ ಯಾರೂ ಅಲ್ಲಗೆಳೆಯಲು ಸಾಧ್ಯವಿಲ್ಲ. ಯಾವ ರೀತಿಯಲ್ಲಿ ಬಂಗಾಳಿ ದ್ವಿಪದಿಯಲ್ಲಿನ ಬಡಪಾಯಿಯು ಎದುರಿಗಿರುವ ಕ್ಯಾರೆಟ್ಟನ್ನು ಪಡೆದು ತನ್ನ ಹಸಿವನ್ನು ನೀಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲವೋ ಅದೇ ರೀತಿಯಲ್ಲಿ ಇತ್ತೀಚಿನ ಈ ಶೇ.೧೦ ಕೋಟಾ ಸಹ ಉದ್ಯೋಗವನ್ನು ಒದಗಿಸಲಾರದು. ಸುರಕ್ಷಿತವಾಗಿ ದುಬೈ ತಲುಪಿದ ಉತ್ತರಕನ್ನಡ ಜಿಲ್ಲೆಯ ೧೮ಮೀನುಗಾರರು http://www.sahilonline.net/ka/18-uttara-kannada-fishermen-released-from-iran-reaches-dubai-safely ಅಕ್ರಮ ಗಡಿ ಪ್ರವೇಶದ ಆರೋಪದಡಿ  ಕಳೆದ 6 ತಿಂಗಳ ಹಿಂದೆ ಇರಾನ್ ಸರ್ಕಾರದಿಂದ ಬಂಧಿಸಲ್ಪಟ್ಟು ಅಲ್ಲಿ ಗೃಹಬಂಧನ ಎದುರಿಸುತ್ತಿದ್ದ ಉತ್ತರಕನ್ನಡ ಜಿಲ್ಲೆಯ ೧೮ ಮೀನುಗಾರರು ಸುರಕ್ಷಿತವಾಗಿ ಬುಧವಾರ ದುಬೈ ತಲುಪಿದ್ದಾಗಿ ಮೀನುಗಾರರ ಕುಟುಂಬದವರು ದೃಢಪಡಿಸಿದ್ದು ದುಬೈಯಿಂದ ಫೋಟೊ ಮತ್ತು ವಿಡಿಯೋ ಬಿಡುಗಡೆಗೊಳಿಸಿದ್ದಾರೆ. ರಾಮ ಮಂದಿರ ವಿಚಾರದಲ್ಲಿ ಸುಗ್ರೀವಾಜ್ಞೆಯಿಲ್ಲ: ಮೋದಿ http://www.sahilonline.net/ka/there-is-no-ordinance-in-the-ram-temple-modi ಹೊಸದಿಲ್ಲಿ: ನ್ಯಾಯಾಂಗ ಪ್ರಕ್ರಿಯೆ ಮುಗಿದ ಬಳಿಕವೇ ರಾಮ ಮಂದಿರ ನಿರ್ಮಾಣ ವಿಚಾರದಲ್ಲಿ ಸುಗ್ರೀವಾಜ್ಞೆ ಹೊರಡಿಸುವ ಬಗ್ಗೆ ಯಾವುದೇ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಗೋರಕ್ಷಣೆಯಲ್ಲಿ ನಡೆಯುವ ಗುಂಪು ಹತ್ಯೆಗಳು ಸಂಪೂರ್ಣ ಖಂಡನಾರ್ಹ-ಪ್ರಧಾನಿ ಮೋದಿ http://www.sahilonline.net/ka/the-groups-killings-in-the-name-of-go-raksha-are-absolutely-condemnable-prime-minister-modi ಹೊಸದಿಲ್ಲಿ: ಗೋರಕ್ಷಣೆಯಲ್ಲಿ ನಡೆಯುವ ಗುಂಪು ಹತ್ಯೆಗಳು ಸಂಪೂರ್ಣ ಖಂಡನಾರ್ಹ. ಇಂತಹ ಘಟನೆಗಳು ನಾಗರಿಕ ಸಮಾಜವನ್ನು ಪ್ರತಿಬಿಂಬಿಸುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ವಿಚಾರವಾದಿಗಳ ಹತ್ಯೆ ಪ್ರಕರಣ; ಸನಾತನ ಸಂಸ್ಥೆಯೊಂದಿಗೆ ಸಂಪರ್ಕ ಹೊಂದಿದ ಕ್ರಿಮಿನಲ್ಸ್ ಗಳ ಕೃತ್ಯ; ಸಿಟ್ ತನಿಖೆಯಿಂದ ಬಹಿರಂಗ http://www.sahilonline.net/ka/the-assassination-of-rationalists-by-criminal-organizations-linked-to-the-sanatan-organization ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್‌ರನ್ನು 2017ರ ಸೆಪ್ಟೆಂಬರ್ 5ರಂದು ದುಷ್ಕರ್ಮಿಗಳು ಬೆಂಗಳೂರಿನಲ್ಲಿ ಹತ್ಯೆ ಮಾಡಿದ್ದರು. ಆದರೆ ಹತ್ಯೆ ನಡೆದು ಮೂರು ತಿಂಗಳವರೆಗೆ ಈ ಪ್ರಕರಣದ ತನಿಖೆಯಲ್ಲಿ ಯಾವುದೇ ಪ್ರಗತಿ ಸಾಧ್ಯವಾಗಿರಲಿಲ್ಲ. 2013ರಲ್ಲಿ ನಡೆದಿದ್ದ ವಿಚಾರವಾದಿ ಡಾ ನರೇಂದ್ರ ದಾಬೋಲ್ಕರ್ ಹತ್ಯೆ, 2015ರಲ್ಲಿ ನಡೆದಿದ್ದ ಗೋವಿಂದ ಪನ್ಸಾರೆ ಮತ್ತು ಎಂಎಂ ಕಲ್ಬುರ್ಗಿ ಹತ್ಯೆ ಪ್ರಕರಣದಂತೆಯೇ ಈ ಪ್ರಕರಣದ ತನಿಖೆಯೂ ತೆರೆಮರೆಗೆ ಸರಿಯುವ ಸಾಧ್ಯತೆಗಳಿದ್ದವು. ಬಿಜೆಪಿಯ ಆತ್ಮವಿಶ್ವಾಸದಲ್ಲಿ ಕುಸಿತ http://www.sahilonline.net/ka/the-bjps-confidence-has-fallen ನಕಾರಾತ್ಮಕ ಫಲಿತಾಂಶಗಳಿಗೆ ಆಯಾ ರಾಜ್ಯಗಳ ಅಂತರಿಕ ಅಂಶಗಳೇ ಕಾರಣವೆಂದು ಬಿಜೆಪಿಯ ತಂತ್ರನಿಪುಣರು ಮತ್ತು ಮಾತಿನಮಲ್ಲರು  ಎಷ್ಟೇ ವಾದಿಸುತ್ತಿದ್ದರೂ ರಾಷ್ಟ್ರ ರಾಜಕಾರಣದ ಮೇಲೆ ಈ ಫಲಿತಾಂಶ ಬೀರುವ ಪರಿಣಾಮಗಳು ಸ್ವಯಂ ವೇದ್ಯವಾಗಿದೆ. ಏಕೆಂದರೆ ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರಿದ ಅಂಶಗಳಾದ ಕೃಷಿ ಬಿಕ್ಕಟ್ಟು, ನಿರುದ್ಯೋಗ ಮತ್ತು ಜೀವನೋಪಾಯಗಳ ನಷ್ಟಗಳಂಥ ಸಮಸ್ಯೆಗಳ ಬೇರುಗಳು ನೋಟು ನಿಷೇಧ, ಜಿಎಸ್‌ಟಿ ಮತ್ತು ಕೃಷಿ ಕ್ಷೇತ್ರವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದಂಥ ಕೇಂದ್ರದ ಆರ್ಥಿಕ ನೀತಿಗಳಲ್ಲಿದೆ. ಪ್ರತಿಮಾ ರಾಜಕಾರಣದ ಹಿಂದಿರುವುದೇನು? http://www.sahilonline.net/ka/whats-behind-the-iconic-politics ಒಬ್ಬ ವ್ಯಕ್ತಿಯ ಹೀರೋ, ಮತ್ತೊಬ್ಬ ವ್ಯಕ್ತಿಯ ವಿಲನ್ ಎಂಬುದು ರಾಜಕೀಯ ನಾಯಕರ ಪ್ರತಿಮೆಗಳ ಸ್ಥಾಪನೆಯ ವಿದ್ಯಮಾನಗಳಿಗೆ  ತಕ್ಕ ಶೀರ್ಷಿಕೆಯಾದೀತು. ರಾಷ್ಟ್ರೀಯ ಸ್ವನಿರ್ಣಯಾಧಿಕಾರದ ಹೆಸರಲ್ಲಿ ಇತ್ತೀಚೆಗೆ ಹಲವಾರು ರಾಜಕೀಯ ನಾಯಕರ ಪ್ರತಿಮೆಗಳು  ಪುಂಡಾಟಿಕೆಗೆ ಗುರಿಯಾಗಿವೆ ಅಥವಾ ಕಿತ್ತೊಗೆಯಲ್ಪಟ್ಟಿವೆ. ಈ ಹಿನ್ನೆಲೆಯಲ್ಲೂ ಆ ಶೀರ್ಷಿಕೆ ಅತ್ಯಂತ ಸೂಕ್ತವೆನಿಸುತ್ತದೆ.  ರಾಫೇಲ್ ತೀರ್ಪಿನ ವಿಚಾರಣೆಯಾಗಬೇಕಿದೆ! http://www.sahilonline.net/ka/rafaels-trial-needs-to-be-inquiry ರಾಫೇಲ್ ಒಪ್ಪಂದದ ಕುರಿತು ತನಿಖೆ ನಡೆಸಲು ಒಂದು ವಿಶೇಷ ತನಿಖಾ ತಂಡವನ್ನು ರಚಿಸಲು ಆದೇಶಿಸಬೇಕೆಂದು ದಾಖಲಾಗಿದ್ದ ಅಹವಾಲಿನ ಬಗ್ಗೆ ಸುಪ್ರೀಂ ಕೋರ್ಟು ನೀಡಿರುವ ತೀರ್ಪಿನಲ್ಲಿ ಒಂದು ಬಗೆಯ ಅವಸರ ಮತ್ತು ಅಪೂರ್ಣತೆ ಇಣುಕುಹಾಕುತ್ತಿದೆ. ಈ ಆದೇಶದಲ್ಲಿರುವ ಹಲವಾರು ತಪ್ಪು ಮಾಹಿತಿಗಳನ್ನು ಈಗಾಗಲೇ ಹಲವಾರು ವಿಶ್ಲೇಷಕರು ಬಯಲಿಗೆಳೆದಿದ್ದಾರೆ. ಈ ಒಪ್ಪಂದದ ಬಗ್ಗೆ ಭಾರತದ ಮಹಾಲೇಖಪಾಲರು (ಕಂಟ್ರೋಲರ್ ಅಂಡ್ ಆಡಿಟರ್ ಜನರಲ್ ಆಫ್ ಇಂಡಿಯಾ- ಸಿಎಜಿ) ಈಗಾಗಲೇ ತಮ್ಮ ವರದಿಯನ್ನು ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಬ್ಲಿಕ್ ಅಕೌಂಟ್ಸ್ ಕಮಿಟಿ-ಪಿಎಸಿ)ಗೆ ಸಲ್ಲಿಸಿದ್ದಾರೆಂಬುದು ಅದರಲ್ಲಿ ಅತ್ಯಂತ ಮುಖ್ಯವಾದದ್ದು. ಸಾರ್ವಜನಿಕ ವಲಯದ ಗಮನವನ್ನು ಸೆಳೆದಿರುವ ಈ ಕಣ್ಣಿಗೆ ರಾಚುವಂಥ ತಪ್ಪುಗಳ ಜೊತೆಜೊತೆಗೆ ಈ ತೀರ್ಪು ವಸ್ತುಸ್ಥಿತಿಯ ಬಗ್ಗೆ ಇನ್ನೂ ಹಲವಾರು ಪ್ರಶ್ನಾರ್ಹ ಗ್ರಹಿಕೆಗಳನ್ನೂ ಮತ್ತು ಕಾನೂನಾತ್ಮಕ ವಿಶ್ಲೇಷಣೆಗಳನ್ನೂ ಒಳಗೊಂಡಿದೆ. ಮರಾಠ ಮೀಸಲಾತಿ ಮತ್ತು ಸರ್ಕಾರದ ಆತ್ಮದ್ರೋಹ http://www.sahilonline.net/ka/maratha-reservation-and-government-self-suffrage ಮೀಸಲಾತಿಯನ್ನು ಕೂಡಲೇ ಅನುಷ್ಠಾನಕ್ಕೆ ತರಬೇಕೆಂದು ಮರಾಠರು ತೋರುತ್ತಿರುವ ಆಗ್ರಹವನ್ನು ಈ  ವಿಷಯದ ಬಗ್ಗೆ ಹಿಂದಿನ ಸರ್ಕಾರಗಳು ನಡೆದುಕೊಂಡ ಸಂದರ್ಭದಲ್ಲಿಟ್ಟು ಅರ್ಥಮಾಡಿಕೊಳ್ಳಬೇಕು. ಇದರಲ್ಲಿ ಮರಾಠ ಮೀಸಲಾತಿ ವಿಷಯವನ್ನು ಗೊಂದಲಮಯವಾಗಿ ಮತ್ತು ಅನಿಶ್ಚಿತವಾಗಿ ನಿರ್ವಹಿಸಿದ ಈ ಹಿಂದಿನ ಬಿಜೆಪಿ-ಶಿವಸೇನಾ ಸರ್ಕಾರವು ಒಳಗೊಂಡಿದೆ. 2001ರ ಕಾನ್ಪುರ ಗಲಭೆ ಪ್ರಕರಣ; ಎಲ್ಲ ಮುಸ್ಲಿಮರ ಖುಲಾಸೆ http://www.sahilonline.net/ka/kanpur-riots-supreme-court-acquits-all-muslims-after-17-years ಹೊಸದಿಲ್ಲಿ: 2001ರ ಕಾನ್ಪುರ ಗಲಭೆ ಪ್ರಕರಣದ ಪ್ರಧಾನ ಆರೋಪಿಗಳಾದ ನಾಲ್ವರು ಮುಸ್ಲಿಮರ ವಿರುದ್ಧದ ಗಲಭೆ, ಹತ್ಯೆ ಹಾಗೂ ಭಯೋತ್ಪಾದನೆಯ ಎಲ್ಲ ಆರೋಪವನ್ನು ಸುಪ್ರೀಂ ಕೋರ್ಟ್ ತಳ್ಳಿ ಹಾಕಿದೆ. ಬಿಜೆಪಿ ಸೋಲಿನ ಬಗ್ಗೆ ಯೋಗಿ ಹೇಳಿದ್ದೇನು ಗೊತ್ತೇ?? http://www.sahilonline.net/ka/adityanath-finally-responded-to-the-bjp-defeat-in-the-five-constituencies ಪಾಟ್ನಾ: “ಕಾಂಗ್ರೆಸ್ ವಂಚನೆಯ ಮೂಲಕ ವಿಧಾನಸಭಾ ಚುನಾವಣೆಗಳಲ್ಲಿ ಜಯ ಸಾಧಿಸಿದೆ'' ಎಂದು ಮಧ್ಯ ಪ್ರದೇಶ, ಛತ್ತೀಸ್ ಗಢ ಹಾಗೂ ರಾಜಸ್ಥಾನಗಳಲ್ಲಿ ತಮ್ಮ ಪಕ್ಷದ ಸರಕಾರಗಳು ಸೋಲುಂಡ ಮರುದಿನ ಬಿಜೆಪಿಯ ತಾರಾ ಪ್ರಚಾರಕ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಪ್ರತಿಕ್ರಿಯಿಸಿದ್ದಾರೆ. ರಾಜಸ್ಥಾನಕ್ಕೆ ಗೆಹಲೋಟ್, ಮಧ್ಯಪ್ರದೇಶಕ್ಕೆ ಕಮಲನಾಥ್ ಸಿಎಂ http://www.sahilonline.net/ka/ashok-gehlot-as-rajasthan-cm-kamal-naths-choice-for-madhya-pradesh-is-almost-sure ಹೊಸದಿಲ್ಲಿ: ವಿಧಾನಸಭಾ ಚುನಾವಣೆಯ ವಿಜಯದ ನಂತರ ರಾಜಸ್ಥಾನದ ಮುಖ್ಯಮಂತ್ರಿಯಾಗಿ 3ನೆ ಬಾರಿಗೆ ಅಶೋಕ್ ಗೆಹ್ಲೋಟ್ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಈ ಬಗ್ಗೆ ಅಧಿಕೃತ ಘೋಷಣೆ ಮಾತ್ರ ಬಾಕಿಯಿದೆ. ಇಂದು ದಿಲ್ಲಿಯಲ್ಲಿ ಅಶೋಕ್ ಗೆಹ್ಲೋಟ್ ಹಾಗು ಸಚಿನ್ ಪೈಲಟ್ ರನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿಯಾಗಿದ್ದರು. ಆರ್.ಬಿ.ಐ ಗರ್ವನರ್ ಊರ್ಜಿತ್ ಪಟೇಲ್ ರಾಜಿನಾಮೆ http://www.sahilonline.net/ka/rbi-governor_urjeet-patel-resign ಹೊಸದಿಲ್ಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI)  ಮುಖ್ಯಸ್ಥ ಊರ್ಜೀತ್ ಪಟೇಲ್ ತಮ್ಮ ಗರ್ವನರ್ ಹುದ್ದೆಗೆ ರಾಜಿನಾಮೆ ಸಲ್ಲಿಸಿದ್ದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಮುಂಬೈನಲ್ಲಿ ನಡೆಯುತ್ತಿರುವ ಬಲವಂತದ ಪುನರ್ವಸತಿ http://www.sahilonline.net/ka/forced-rehabilitation-in-mumbai ಒಂದು ಅಂದಾಜಿನ ಪ್ರಕಾರ ಮಹಾರಾಷ್ಟ್ರದಲ್ಲಿ ವಿವಿಧ ಯೋಜನೆಗಳಿಂದ ಸಂತ್ರಸ್ತರಾಗಿ ಈವರೆಗೆ ಪುನರ್‌ವಸತಿ  ಸಿಗದ ೩೦ ಲಕ್ಷ ಜನರಿದ್ದಾರೆ. ಮಾಹುಲ್ ಪ್ರಕರಣದಲ್ಲಿ ತಾನ್ಸ ಲೇಕ್ ಪೈಪ್‌ಲೈನ್‌ನ ೧೦ ಮೀಟರಿನಷ್ಟು ಆಸುಪಾಸಿನಲ್ಲಿದ್ದ ಕೊಳೆಗೇರಿ ಮತ್ತು ಗುಡಿಸಲುಗಳನ್ನು ಭದ್ರತಾ ಕಾರಣಗಳಿಗಾಗಿ ತೆರವುಗೊಳಿಸಬೇಕೆಂದು ೨೦೦೯ರಲ್ಲಿ ಬಾಂಬೆ ಹೈಕೋರ್ಟು ನಿರ್ದೇಶನ ನೀಡಿತ್ತು. ಸುಳ್ಳುಸಂಗತಿಗಳ ನಿರ್ಮೂಲನೆಯು ಸತ್ಯದ ಶಕ್ತಿಯನ್ನು ಕುಂದಿಸುವುದೇ? http://www.sahilonline.net/ka/the-abolition-of-false-errors-to-reduce-the-power-of-truth ಅಧಿಕಾರ ರೂಢ ಭಾರತೀಯ ಜನತಾ ಪಕ್ಷದೊಡನೆ (ಬಿಜೆಪಿ) ಕಳೆದ ಕೆಲವು ವರ್ಷಗಳ ನಮ್ಮ ಅನುಭವವನ್ನು ಆಧರಿಸಿ  ಹೇಳುವುದಾದರೆ, ತಮ್ಮ ಸರ್ಕಾರದ ಹಲವಾರು ಆರ್ಥಿಕ ಮತ್ತು ಸಾಮಾಜಿಕ ನೀತಿಗಳ ಬಗ್ಗೆ ಬಿಜೆಪಿ ಸರ್ಕಾರವು ಕಿಂಚಿತ್ತೂ ಆತ್ಮಸಾಕ್ಷಿಯಿಲ್ಲದೆ ಒಂದು ಹವ್ಯಾಸದ ರೀತಿ ಹೇಳಿಕೊಂಡು ಬರುತ್ತಿರುವ ಸುಳ್ಳುಗಳಿಗೆ, ೨೦೧೪ರ ಚುನಾವಣೆಯ ಸಂದರ್ಭದಲ್ಲಿ ಮತದಾರರಿಗೆ ಭರವಸೆಗಳ ಮಹಾಪೂರವನ್ನೇ ಹರಿಸಿ ಅಧಿಕಾರಕ್ಕೆ ಬಂದ ನಂತರ ಅದನ್ನು ಈಡೇರಿಸುವಲ್ಲಿ ನರೇಂದ್ರ ಮೋದಿಯವರು ವಿಫವಾಗಿರುವುದು ಅಥವಾ ಈಡೇರಿಸುವ ಕಾಳಜಿಯನ್ನೇ ತೋರದಿದ್ದುದೇ ಕಾರಣವೆಂದರೆ ಅದರಲ್ಲಿ ಅತಿಶಯೋಕ್ತಿಯೇನಲ್ಲ. ಬಿಜೆಪಿ ತೊರೆದ ಉ.ಪ್ರ.ಸಂಸದೆ ಸಾವಿತ್ರಿಬಾಯಿ http://www.sahilonline.net/ka/uttar-pradesh-bjp-mp-who-left-the-savitri-bai-phule ಹೊಸದಿಲ್ಲಿ : ತಮ್ಮ ವಿವಾದಾಸ್ಪದ ಹೇಳಿಕೆಗಳಿಂದ ಸದಾ ಸುದ್ದಿಯಲ್ಲಿರುವ ಬಿಜೆಪಿ ಸಂಸದೆ ಸಾವಿತ್ರಿ ಬಾಯಿ ಫುಳೆ ಇಂದು ಪಕ್ಷವನ್ನು ತೊರೆದಿದ್ದಾರೆ. "ಭಾರತದ ಹಣವನ್ನು ದೇಶದ ಅಭಿವೃದ್ಧಿಗಾಗಿ ಉಪಯೋಗಿಸುವ ಬದಲು ಮೂರ್ತಿಗಳನ್ನು ನಿರ್ಮಿಸಲು ಬಳಸಲಾಗುತ್ತಿದೆ'' ಎಂದು ಅವರು ಆರೋಪಿಸಿದ್ದಾರೆ. ಬಿಜೆಪಿ ಸಮಾಜವನ್ನು ವಿಭಜಿಸಲು ಯತ್ನಿಸುತ್ತಿದೆ ಎಂದೂ ಅವರು ದೂರಿದ್ದಾರೆ.  ದಲಿತರು ಹಾಗು ಮುಸ್ಲಿಮರ ಮೇಲೆ ಹೇಗೆ ಸುಳ್ಳು ಕೇಸು ಜಡಿಯುತ್ತೇನೆ ಎಂದು ಮಹಿಳಾ ಪೊಲೀಸ್ ಅಧಿಕಾರಿ ಹೇಳುತ್ತಿರುವ ವಿಡೀಯೋ ವೈರಲ್ http://www.sahilonline.net/ka/storm-over-video-purporting-to-show-police-officer-saying-she-files-false-cases-against-dalits-and-muslims-in-beed-maharashtra ಮಹಾರಾಷ್ಟ್ರ: ದಲಿತರು ಮತ್ತು ಮುಸ್ಲಿಮರ ವಿರುದ್ಧ ತಾನು ಹೇಗೆ ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತೇನೆ ಎಂದು ಮಹಾರಾಷ್ಟ್ರದ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಹೇಳುತ್ತಿರುವ ವಿಡಿಯೋವೊಂದು ವಿವಾದ ಸೃಷ್ಟಿಸಿದೆ. ಈ ಬಗ್ಗೆ scroll.in ವರದಿ ಮಾಡಿದೆ. ದುಬಾಯಿ ಅಲ್ ನಾಸರ್‍ನಲ್ಲಿ ಅನಾವರಣಗೊಂಡ `ವಿಶ್ವ ತುಳು ಸಮ್ಮೇಳನ ದುಬಾಯಿ' http://www.sahilonline.net/ka/world-tulu-sammelan-dubai-unveiled-at-dubai-al-nasser ದುಬಾಯಿ (ಅಲ್ ನಾಸರ್):ದೈವದೇವರುಗಳೆಲ್ಲವೂ ನಮ್ಮ ತುಳುನಾಡಿನಲ್ಲೇ ನೆಲೆಯಾಗಿವೆ. ಆದುದರಿಂದ ತುಳುವರು ಸಂಪ್ರದಾಯಸ್ಥರಾಗಿ ಬದುಕು ಕಂಡುಕೊಂಡವರಾಗಿದ್ದಾರೆ. ತುಳುನಾಡ ಹಿರಿಮೆ, ಗರಿಮೆ ಏನೆಂದು ತಿಳಿಯ ಬೇಕಾದರೆ ಹೊರನಾಡಿನಲ್ಲಿ ತಿಳಿಯಬೇಕು. ದುಬಾಯಿ ಅಂದರೆ ಬಂಗಾರದ ನಾಡು. ರಾಜ ಕುಟುಂಬಸ್ಥರು ಆಳಿದ ಈ ನಾಡಿಗೆ ತುಳುವರು ಬಂದು ಸಾಧಕರೆಣಿಸುತ್ತಿರುವುದು ತುಳುಮಾತೆಯ ಅನುಗ್ರಹವೇ ಸರಿ. ಇದು ಸ್ವರ್ಣಮಯ ದೇಶ ಎಂದೇ ಪ್ರಸಿದ್ಧಿ ಪಡೆದಿದ್ದು ಇಲ್ಲಿ ತುಳುನಾಡ ಸಂಸ್ಕೃತಿ, ಭಾಷೆ ಮೇಳೈಸುತ್ತಿರುವುದು ತುಳುನಾಡ ವೈಷ್ಟ ್ಯವಾಗಿದೆ ಎಂದು ಭಾರತದ ಸಾಂಸ್ಕೃತಿಕ ರಾಯಭಾರಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ಪದ್ಮಭೂಷಣ ರಾಜರ್ಷಿ ಡಾ| ಡಿ.ವೀರೇಂದ್ರ ಹೆಗ್ಗಡೆ ನುಡಿದರು. ಚಿರನಿದ್ರೆಗೆ ಜಾರಿದ ಮಂಡ್ಯದ ಗಂಡು ರೆಬಲ್ ಸ್ಟಾರ್ ಅಂಬರೀಶ್ http://www.sahilonline.net/ka/bangalore_filmstar_politician_ambrish-nomore ಬೆಂಗಳೂರು : ಮಂಡ್ಯದ ಗಂಡು ಎಂಬ ಖ್ಯಾತಿಯ ನಟ- ರಾಜಕಾರಣಿ, ಮಾಜಿ ಕೇಂದ್ರ ಸಚಿವ ಅಂಬರೀಶ್ ಶನಿವಾರ ರಾತ್ರಿ ಹೃದಯಘಾತದಿಂದ ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಕೊನೆಯುಸಿಳೆದಿದ್ದಾರೆ. ಮಂಡ್ಯ: ನಾಲೆಗೆ ಧುಮುಕಿದ ಖಾಸಗಿ ಬಸ್; ೨೦ಕ್ಕೂ ಅಧಿಕ ಸಾವು http://www.sahilonline.net/ka/25-killed-as-bus-falls-into-canal-in-karnatakas-mandya ಮಂಡ್ಯ:  ಖಾಸಗಿ ಬಸ್ಸೊಂದು ನಾಲೆಗೆ ಧುಮುಕಿದ ಪರಿಣಾಮ ೨೦ಕ್ಕೂ ಅಧಿಕ ಪ್ರಯಾಣಿಕರು ಮೃತಪಟ್ಟಿರುವ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಕನಗನಮರಡಿ ಗ್ರಾಮದಲ್ಲಿ ಶನಿವಾರ ನಡೆದಿದ್ದು ಸಾವುನೋವುಗಳ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ನಮ್ಮನ್ನು ಬಿಡಿಸಿಕೊಳ್ಳಿ ಸುಷ್ಮಾರವರೇ,,,,, ಗೃಹಬಂಧನದಲ್ಲಿರುವ ಮೀನುಗಾರರಿಂದ ಮನವಿ http://www.sahilonline.net/ka/stranded-uttar-kannada-fishermen-in-iran-kish-send-new-video-clip-seeking-help-from-mea-sushma-swaraj ಭಟ್ಕಳ: ಅನ್ನ ಅರಸಿ ದೂರದ ದುಬೈಗೆ ಪ್ರಯಾಣ ಬೆಳಿಸಿದ್ದ ಉತ್ತರಕನ್ನಡ ಜಿಲ್ಲೆಯ ಭಟ್ಕಳ, ಕುಮಟಾ ಹೊನ್ನಾವರ ತಾಲೂಕಿನ ಸುಮಾರು 18 ಮಂದಿ ಮೀನುಗಾರರು ಅಕ್ರಮ ಗಡಿ ಪ್ರವೇಶದ ಆರೋಪದಡಿ ಕಳೆದ ನಾಲ್ಕು ತಿಂಗಳಿಂದ ಇರಾನ್ ಗಡಿಯ ಸಮುದ್ರದ ಬೋಟೊಂದರಲ್ಲಿ ಗೃಹಬಂಧನಕ್ಕೊಳಕಾಗಿ ಮಾನಸಿಕ ಚಿತ್ರಹಿಂಸೆ ಅನುಭವಿಸುತ್ತಿದ್ದು ತಮ್ಮ ಬಿಡುಗಡೆಗಾಗಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ರ  ಮೊರೆ ಹೋಗಿದ್ದು ವಿಡೀಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ.  ಸರ್ಕಾರ ಮತ್ತು ಆರ್‌ಬಿಐ ನಡುವಿನ ಸಂಘರ್ಷ http://www.sahilonline.net/ka/conflict-between-government-and-rbi ಆರ್‌ಬಿಐ ಕಾಯಿದೆಯ ೭ನೇ ಕಲಮನ್ನು ಬಳಸುವ ಸರ್ಕಾರದ ನಿರ್ಧಾರವು ನವ-ಉದಾರವಾದಿ ಶಿಬಿರದಲ್ಲುಂಟಾಗಿರುವ ಬಿರುಕನ್ನು ಸೂಚಿಸುತ್ತದೆ. ಶಬರಿಮಲ ಆದೇಶವೂ ಮತ್ತು ಅದರ ವಿರೋಧಿಗಳೂ.. http://www.sahilonline.net/ka/the-order-of-sabarimala-and-its-opponents ಯಾವ ಸಮಾಜವು ಲಿಂಗನ್ಯಾಯದ ಮೌಲ್ಯಗಳನ್ನು ಅಂತರ್ಗತಗೊಳಿಸಿಕೊಂಡಿಲ್ಲವೋ ಆ ಸಮಾಜಕ್ಕೆ ಆತ್ಮಗೌರವದ ಕೊರತೆಯಿದೆಯೆಂದರ್ಥ. ರೈಲ್ವೆಹಳಿಗಳು ಸಾರ್ವಜನಿಕರಿಗೆ ಒಳಿತನ್ನು ಮಾಡುತ್ತಿವೆಯೇ? http://www.sahilonline.net/ka/are-railway-tracks-doing-good-to-the-public ರೈಲ್ವೆ ದುರಂತಗಳ ಬಗ್ಗೆ ನಡೆಯುವ ಚರ್ಚೆಗಳು ಬಹಳಷ್ಟು ಸಾರಿ ಪರಸ್ಪರರನ್ನು ಹೀಗೆಳೆಯುತ್ತಾ ಅವಾಸ್ತವಿಕ ನೆಲೆಯನ್ನು  ಪ್ರವೇಶಿಸಿಬಿಡುತ್ತವೆ. ಅಕ್ಟೋಬರ್ ೧೯ರಂದು ಅಮೃತ್‌ಸರ್ ಬಳಿ ೬೦ ಜನರನ್ನು ಬಲಿ ತೆಗೆದುಕೊಂಡ ರೈಲ್ವೆ ದುರಂತದ ಬಗ್ಗೆಯೂ ಆಸಕ್ತ ಗುಂಪುಗಳು ಅದೇ ಬಗೆಯ ಪರಸ್ಪರ ಬಯ್ಯಾಟಗಳಲ್ಲಿ ತೊಡಗಿಕೊಂಡಿವೆ. ಈ ದುರಂತವನ್ನು ತಡೆಯಲು ಏನೆಲ್ಲಾ ಮಾಡಬಹುದಾಗಿತ್ತೆಂಬ ಬಗ್ಗೆ ಹಲವಾರು ಪ್ರತಿಪಾದನೆಗಳು ಮತ್ತು ಹೇಳಿಕೆಗಳೂ ಸಹ ಹೊರಬಿದ್ದಿವೆ. ಕಪಟತನದಲ್ಲಿ ಏಕಧರ್ಮ ಪ್ರಭುತ್ವದ ಪ್ರಚಾರ http://www.sahilonline.net/ka/promotion-of-monotheism-and-monarchy ಈ ಕರೆಯ ಹಿಂದಿನ ಬೆದರಿಕೆಯ ಧ್ವನಿ ಎಷ್ಟೇ ಸ್ಪಷ್ಟವಾಗಿದ್ದರೂ ಇದು ವಾಸ್ತವದಲ್ಲಿ ಎನ್‌ಡಿಎ ಸರ್ಕಾರದ ಬಗ್ಗೆ ಜನರಲ್ಲಿ ಮಡುಗಟ್ಟುತ್ತಿರುವ ಅಸಮಧಾನದ ಹಿನ್ನೆಲೆಯಲ್ಲಿ ಮಾಡಿರುವ ಒಂದು ರಕ್ಷಣಾತ್ಮಕ ನಡೆಯೇ ಆಗಿದೆ. ಅಚ್ಚೇ ದಿನ್  ಭರವಸೆಗಳು ಕೇವಲ ನೀರ್ಗುಳ್ಳೆಗಳೆಂದು ಸಾಬೀತಾಗತೊಡಗುತ್ತಿದ್ದಂತೆ ಸಂಘಪರಿವಾರ ಮತ್ತು ಬಿಜೆಪಿ ಕೋಮುವಾದಿ ಧ್ರುವೀಕರಣ ಮತ್ತು ಸಧೃಢೀಕರಣದೆಡೆಗೆ ಹೆಚ್ಚು ಒತ್ತುಕೊಡುತ್ತಿರುವುದು ಸ್ಪಷ್ಟವಾಗಿದೆ. ಅವರು ಕೋಮುವಾದೀ ಕಾರ್ಯಸೂಚಿಗೆ ಮರಳುತ್ತಿದ್ದಾರೆ ಎಂದು ಹೇಳುವುದು ತಪ್ಪಾಗುತ್ತದೆ. ಖಾಲಿ ತಟ್ಟೆಗಳು ಕಾಣುತ್ತಿವೆಯೇ? http://www.sahilonline.net/ka/looking-for-empty-plates_epw_editorial ಮರುಕಳಿಸುತ್ತಲೇ ಇರುವ ಹಸಿವು ಜಗತ್ತಿನ ಅತಿ ದೊಡ್ಡ ಸಮಸ್ಯೆಯಾಗಿದ್ದರೂ ನವಉದಾರವಾದಿ ಪ್ರಭುತ್ವಗಳು ಅದನ್ನು ನಿರಕರಿಸುತ್ತವೆ. ದೆಹಲಿ: ಹತ್ಯೆಗೊಳಗಾದ ಅಝೀಮ್ ನ ಸಹೋದರರ ಶಿಕ್ಷಣದ ಜವಾಬ್ದಾರಿ ವಹಿಸಿದ ಎಸ್.ಐ.ಓ http://www.sahilonline.net/ka/delhi-soo-responsible-for-the-assassination-of-azims-brothers ಹೊಸದಿಲ್ಲಿ: ಮೈದಾನದಲ್ಲಿ ಆಟವಾಡುತ್ತಿದ್ದ ವೇಳೆ ಸ್ಥಳೀಯ ಯುವಕರ ಗುಂಪೊಂದರಿಂದ ಕಳೆದ ಗುರುವಾರ ಹತ್ಯೆಗೊಳಗಾದ ದಾರುಲ್ ಉಲೂಮ್ ಫರೀದಿಯಾ ಮದ್ರಸಾದ ವಿದ್ಯಾರ್ಥಿ ಅಝೀಮ್ ನ ಮನೆಗೆ ಇಂದು ಭೇಟಿ ನೀಡಿದ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷರಾದ ನಹಾಸ್ ಮಾಲಾ, ಅಝೀಮ್ ನ ಇಬ್ಬರು ಸಹೋದರರ ಮುಂದಿನ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ಎಸ್.ಐ.ಓ ವಹಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.  8 ವರ್ಷದ ಮದ್ರಸಾ ವಿದ್ಯಾರ್ಥಿಯ ಬರ್ಬರ ಹತ್ಯೆ! http://www.sahilonline.net/ka/delhi-8-year-old-madarsa-student-murder ಹೊಸದಿಲ್ಲಿ: 8 ವರ್ಷದ ಮದ್ರಸ ವಿದ್ಯಾರ್ಥಿಯೊಬ್ಬನನ್ನು ತಂಡವೊಂದು ಥಳಿಸಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ದಿಲ್ಲಿಯ ಮಾಲ್ವಿಯಾ ನಗರದ ಬೇಗಂಪುರ್ ಎಂಬಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಭೂಮಿ ಸಮಸ್ಯೆಯ ಒಗಟುಗಳು http://www.sahilonline.net/ka/puzzles-of-the-land-problem_epw_editorial ದೇಶದ ಕೃಷಿಯಲ್ಲಿನ ಮೂಲಭೂತ ತೊಡಕುಗಳು ಕೃಷಿ ಬಿಕ್ಕಟ್ಟನ್ನು ಉಲ್ಬಣಗೊಳಿಸುತ್ತಿವೆ ಎಂಬುದನ್ನು ೨೦೧೫-೧೬ನೇ ಸಾಲಿನ ಕೃಷಿ ಸೆನ್ಸಸ್ ಸಾಬೀತುಗೊಳಿಸಿದೆ. ಎಲ್ಲಾ ಅನಿಷ್ಟಕ್ಕೂ ವಲಸೆ ಕಾರ್ಮಿಕರೇ ಕಾರಣರೆಂಬಂತೆ.. http://www.sahilonline.net/ka/all-migrants-are-responsible-for-migration-workers ಭಾರತದ ಬಹುಪಾಲು ನಗರಗಳು ಬಹಳ ಕಾಲದಿಂದ  ಹೊರಗಿನವರನ್ನು ಆಧರಿಸಿ ಬದುಕುತ್ತಿರುವ ಇಬ್ಬಂದಿತನವನ್ನು ಎದುರಿಸುತ್ತಲೇ ಬದುಕುತ್ತಿವೆ. ಈ ಹೊರಗಿಂದ ಬಂದ ಬಹಳಷ್ಟು ಜನ ಅರೆಬರೆ ಕಸಬುದಾರಿಕೆ ಬಲ್ಲ ಅಥವಾ ಯಾವ ಬಗೆಯ ಕೌಶಲ್ಯವೂ ಗೊತ್ತಿಲ್ಲದ ಅಕುಶಲಿ ಬಡ ವಲಸೆ ಕಾರ್ಮಿಕರೇ ಆಗಿದ್ದು ನಗರದ ಹಲವು ಬಗೆಯ ಅಗತ್ಯಗಳನ್ನು ಪೂರೈಸುತ್ತಿದ್ದಾರೆ. ಆಯಾ ಪ್ರದೇಶಗಳ ರಾಜಕಾರಣಿಗಳು ತಮ್ಮ ಪ್ರದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗಕ್ಕೆ ಮತ್ತು ಹೆಚ್ಚುತ್ತಿರುವ ಅಪರಾಧಗಳಿಗೆ ಅವರನ್ನು ದೂರುತ್ತಾರೆ. ಸ್ಥಳೀಯರು ತಮ್ಮ ಪ್ರದೇಶದಲ್ಲಿ ಕುಸಿಯುತ್ತಿರುವ ನಾಗರಿಕ ಸೌಲಭ್ಯಗಳಿಗೆ ಅವರೇ ಕಾರಣರೆಂದು ಕಿರಿಕಿರಿ ವ್ಯಕ್ತಪಡಿಸುತ್ತಾರೆ. ಪ್ರಾದೇಶಿಕ ದುರಭಿಮಾನಿಗಳು ಈ ವಲಸೆಕೋರರು ಸ್ಥಳೀಯರೊಡನೆ ಸಾಂಸ್ಕೃತಿಕವಾಗಿ ಬೆರೆಯುತ್ತಿಲ್ಲವೆಂದು ಕೂಗಾಡುತ್ತಾರೆ. ಮತ್ತು ವ್ಯವಹಾರೋದ್ಯಮ ವರ್ಗವು ಅವರನ್ನು ಅಗ್ಗದ ಕೂಲಿ ಮತ್ತು ಸೇವೆಗಳಿಗೆ ಬಳಸಿಕೊಳ್ಳುತ್ತಾರೆ. ನಗರದ ಮಧ್ಯಮವರ್ಗಗಳ ಮನೆಗೆಲಸಗಳನ್ನು ಮಾಡುವವರೂ ಇವರೇ ಆಗಿರುತ್ತಾರೆ. ಕಳೆದ ಕೆಲವು ವಾರಗಳಿಂದ ಗುಜರಾತಿಗೆ ವಲಸೆ ಹೋಗಿದ್ದ  ಉತ್ತರ ಪ್ರದೇಶ, ಬಿಹಾರ ಮತ್ತು ಮಧ್ಯಪ್ರದೇಶಗಳ ಮೂಲದ ಕಾರ್ಮಿಕರು ಗುಂಪು ದಾಳಿಗೆ ತುತ್ತಾಗುತ್ತಿದ್ದಾರೆ. ಮತ್ತು ಭಯಭೀತರಾಗಿರುವ ಅವರು ಗುಜರಾತಿನಿಂದ ಓಡಿಹೋಗುತ್ತಿದ್ದಾರೆ. ದಾಳಿಗೆ ಗುರಿಯಾದ ನಂತರದಲ್ಲಷ್ಟೇ ಅವರಿಗೆ ಸುರಕ್ಷತೆಯ ಭರವಸೆಯನ್ನು ನೀಡಲಾಯಿತು ಮತ್ತು ರಾಜ್ಯಬಿಟ್ಟು ಹೋಗಬಾರದೆಂದು ಮತ್ತು ಹೋದವರು ವಾಪಸ್ ಬರಬೇಕೆಂದೂ ಮನವಿ ಮಾಡಲಾಯಿತು. ವಲಸೆ ಕಾರ್ಮಿಕರ ಮೇಲೆ ಮಾಡಲಾಗುತ್ತಿರುವ ದಾಳಿಗಳಲ್ಲಿ ಇದು ಇತ್ತೀಚಿನ ಸೇರ್ಪಡೆಯಷ್ಟೆ ಆಗಿದ್ದು ಈ ಘಟನಾವಳಿಗಳು ದೇಶದ ಎಲ್ಲಾ ಪ್ರಮುಖ ನಗರ ಹಾಗೂ ಪಟ್ಟಣಗಳಲ್ಲಿ ಬಡ ವಲಸೆ ಕಾರ್ಮಿಕರು ಆನುಭವಿಸುತ್ತಿರುವ ಬವಣೆಯನ್ನು ಕಟ್ಟಿಕೊಡುತ್ತವೆ. ನಾವೇಕೆ ಕಥುವಾವನ್ನು ಮರೆಯುತ್ತೇವೆ, ಮತ್ತು ಏಕೆ ನಾವು ಮರೆಯಕೂಡದು http://www.sahilonline.net/ka/why-do-we-forget-kathua-and-why-we-should-not-forget_epw_editorial ಒಂದು ಅತ್ಯಾಚಾgವು ಸಾರ್ವಜನಿಕ ನೆನಪಿನಲ್ಲಿ ಎಷ್ಟು ಕಾಲ ಇರಬಲ್ಲದು? ಕಥುವಾದಲ್ಲಿ ಒಬ್ಬ ಪೊಲೀಸನನ್ನು ಒಳಗೊಡಂತೆ ಗಂಡಸರ ಒಂದು ಗುಂಪು ಎಂಟು ವರ್ಷದ ಒಬ್ಬ ಹೆಣ್ಣುಮಗುವನ್ನು ಅಪಹರಿಸಿ, ಅತ್ಯಾಚಾರ ಮಾಡಿ, ಕ್ರೂರವಾಗಿ ಚಿತ್ರಹಿಂಸೆ ಮಾಡಿ ಕೊಂದು ಹಾಕಿದರು. ಹೀಗಾಗಿ ನಮ್ಮ ಸಮಾಜದ ಸಮಗ್ರ ವೈಫಲ್ಯದ ಕಥನವಾಗಿ ಕಥುವಾದ ನೆನಪು ಉರಿಯುತ್ತಲೇ ಇರುತ್ತದೆ ಎಂದು ಯಾರಾದರೂ ಭಾವಿಸಬಹುದು. ಈ ಅತ್ಯಾಚಾರ ಎಸಗಿದ ಬೇಟೆಗಾರರಿಗೆ ಆ ಪುಟ್ಟ ಕೂಸಿನ ದೇಹ ತಾವು ಬಯಸದ ಹೊರಗಿನವರಾದ ಬುಡಕಟ್ಟು ಜನಾಂಗದ್ದಾಗಿ ಮತ್ತು ಮುಸ್ಲಿಮರದ್ದಾಗಿ ಮಾತ್ರ ಕಂಡಿತು. ಮತ್ತು ಈ ಅಪರಾಧ ಘೋರತೆಯೇ ಸಾಲದೆಂಬಂತೆ ಅತ್ಯಾಚಾರಿಗಳ ಪರವಾಗಿ ಹಿಂದೂ ಏಕತಾ ಮಂಚ್ ಒಂದು ಬಹಿರಂಗ ಪ್ರದರ್ಶನವನ್ನು ನಡೆಸಿತು. ಭಯೋತ್ಪಾದಕರು ಮತ್ತು ನಕ್ಸಲೀಯರಿಗೆ ಪ್ರಧಾನಿ ಮೋದಿ ಖಡಕ್ ವಾರ್ನಿಂಗ್ http://www.sahilonline.net/ka/modi-hails-men-in-khaki-on-police-commemoration-day ನವದೆಹಲಿ: ದೇಶದಲ್ಲಿ ಅಭದ್ರತೆ, ಅಶಾಂತಿ ಮತ್ತು ಆತಂಕ ಸೃಷ್ಟಿಸುವ ಶಕ್ತಿಗಳಿಗೆ ಅಂಕುಶ ಹಾಕುವುದಾಗಿ ಪ್ರಧಾನಿ ನರೇಂದ್ರ ಮೋದಿ ಇಂದಿಲ್ಲಿ ಘೋಷಿಸುವ ಮೂಲಕ ಭಯೋತ್ಪಾದಕರು ಮತ್ತು ನಕ್ಸಲೀಯರಿಗೆ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ. ರಾಷ್ಟ್ರದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಶಾಂತಿ ನೆಲೆಸಬೇಕಾದರೆ ಪೊಲೀಸ್ ಸೇವೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಅಭದ್ರತೆ ಮತ್ತು ಆತಂಕ ಸೃಷ್ಟಿಸುವಂತಹ ಪ್ರಯತ್ನಗಳಿಗೆ ಕಡಿವಾಣ ಹಾಕುವಲ್ಲಿ ಪೊಲೀಸರ ಕಾರ್ಯ ಶ್ಲಾಘನೀಯ ಎಂದು ಪ್ರಧಾನಿ ಪ್ರಶಂಸಿಸಿದರು. ಗಡಿ ಕಾಯೋ ಯೋಧರೊಂದಿಗೆ ದಸರಾ ಆಚರಿಸಿದ ಗೃಹ ಸಚಿವ ರಾಜನಾಥ್ ಸಿಂಗ್ http://www.sahilonline.net/ka/home-minister-rajnath-singh-celebrated-dasara-with-border-guards ಬಿಕಾನೆರ್; ದೇಶದ ಗಡಿ ಕಾಯುವ ಯೋಧರೊಂದಿಗೆ ದಸರಾ ಹಬ್ಬವನ್ನು ಆಚರಣೆ ಮಾಡುವ ಮೂಲಕ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.  ಅಯ್ಯಪ್ಪಸ್ವಾಮಿ ದೇಗುಲದ ಬಾಗಿಲು ಮುಚ್ಚಿ ಬಿಡುತ್ತೇವೆ'; ಅರ್ಚಕರ ಪ್ರತಿಭಟನೆಗೆ ಮಣಿದ ಪತ್ರಕರ್ತೆಯರು ಕೊನೆಗೂ ವಾಪಸ್! http://www.sahilonline.net/ka/two-women-journalists-finally-agree-to-return-amid-priests-threats-to-shut-sabarimala-temple ತಿರುವನಂತಪುರಂ: ಸುಪ್ರೀಂ ಕೋರ್ಟ್ ಆದೇಶ, ಕೇರಳ ಪೊಲೀಸರ ಭಾರಿ ಭದ್ರತೆಯ ನಡುವೆಯೂ ಮಹಿಳೆಯರಿಗೆ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶ ಅಸಾಧ್ಯವಾಗಿದ್ದು, ಶಬರಿಮಲೆಯಿಂದ ಮಹಿಳಾ ಪತ್ರಕರ್ತೆಯರು ವಾಪಸ್ ಆಗಿದ್ದಾರೆ. ತಿತ್ಲಿ ಚಂಡಮಾರುತಕ್ಕೆ ಸಿಲುಕಿ 57 ಮಂದಿ ಸಾವು, 10ಕ್ಕೂ ಹೆಚ್ಚು ಜನ ನಾಪತ್ತೆ http://www.sahilonline.net/ka/at-least-57-people-were-killed-and-more-than-10-people-were-missing-from-the-tithli-storm ಭುವನೇಶ್ವರ: ತಿತ್ಲಿ ಚಂಡಮಾರುತದಿಂದ ತತ್ತರಿಸಿರುವ ಒಡಿಶಾದಲ್ಲಿ ಚಂಡಮಾರುತದಿಂದಾಗಿ ಸತ್ತವರ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, ಇದುವರೆಗೂ 57 ಮಂದಿ ಮೃತಪಟ್ಟಿದ್ದರೆ, ಭಾರೀ ಮಳೆಯಿಂದಾಗಿ ಪ್ರವಾಹ, ಹಲವೆಡೆ ಭೂಕುಸಿತ, ಗೋಡೆಗಳ ಕುಸಿತದಿಂದಾಗಿ ಹಲವಾರು ಜನ ನಾಪತ್ತೆಯಾಗಿದ್ದಾರೆ. ಶಬರಿಮಲೆಯಲ್ಲಿ ಮಹಿಳೆಯರಿಬ್ಬರಿಂದ ಐತಿಹಾಸಿಕ ಹೆಜ್ಜೆ!   http://www.sahilonline.net/ka/sabarimala-woman-devotee-of-kochi-on-way-to-shrine ತಿರುವನಂತಪುರಂ: ಪುರಾತನ ಧಾರ್ಮಿಕ ಕ್ಷೇತ್ರ ಶಬರಿಮಲೆ ದೇಗುಲ ಪ್ರವೇಶಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದ ಬೆನ್ನಲ್ಲೇ ಇಬ್ಬರು ಮಹಿಳೆಯರು ಇಂದು ದೇಗುಲ ಪ್ರವೇಶಕ್ಕೆ ಯತ್ನಿಸಿದ್ದಾರೆ. ಇರಾನ ದೇಶದಿಂದ ಗೃಹಬಂಧನಕ್ಕೊಳಗಾದ ಉ.ಕ.ಜಿಲ್ಲೆಯ 18 ಮೀನುಗಾರರ ಬದುಕು ಅತಂತ್ರ http://www.sahilonline.net/ka/the-life-of-18-fishermen-in-the-uk-is-home-to-house-arrest-from-the-country-of-iran ಭಟ್ಕಳ: ಕಳೆದ ಎರಡುವರೆ ತಿಂಗಳಿಂದ ಅಕ್ರಮ ಗಡಿ ಪ್ರವೇಶದ ಆರೋಪದಡಿ ಇರಾನ್ ದೇಶದ ನೌಕಪಡೆಯಿಂದ ಗ್ರಹಬಂಧನಕ್ಕೊಳಗಾಗಿದ್ದ ಉತ್ತರಕನ್ನಡ ಜಿಲ್ಲೆಯ ಭಟ್ಕಳ, ಮುರುಡೇಶ್ವರ, ಕುಮಟಾದ ಸುಮಾರು 18 ಮೀನುಗಾರರನ್ನು ಬಿಡುಗಡೆಗೊಳಿಸಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಗುರುವಾರ ಗೃಹಬಂಧನಕ್ಕೊಳಪಟ್ಟಿರುವ 18ಮಂದಿ ಮೀನುಗಾರರ ಕುಟುಂಬಸ್ಥರು ಇಲ್ಲಿನ ಸಹಾಯಕ ಆಯುಕ್ತರ ಮೂಲಕ ವಿದೇಶಾಂಗ ಸಚಿವೆ ಸುಶ್ಮಾಸ್ವರಾಜ್ ರಿಗೆ ಮನವಿ ಅರ್ಪಿಸಿದರು.  ಕರ್ನಾಟಕ ಲೋಕಸಭೆ, ವಿಧಾನಸಭೆಗೆ ನ.೩ರಂದು ಉಪಚುನಾವಣೆ ೬ಕ್ಕೆ ಫಲಿತಾಂಶ http://www.sahilonline.net/ka/karnataka-lok-sabha-vidhana-sabha-by-election-on-3rd-of-november ನವದೆಹಲಿ: ರಾಜ್ಯದಲ್ಲಿ  ವಿವಿಧ ಕಾರಣಗಳಿಗಾಗಿ  ತೆರವುಗೊಂಡಿದ್ದ  ರಾಮನಗರ ಮತ್ತು ಜಮಖಂಡಿ ವಿಧಾನಸಭಾ ಕ್ಷೇತ್ರ ಹಾಗೂ ಶಿವಮೊಗ್ಗ, ಬಳ್ಳಾರಿ ಮತ್ತು ಮಂಡ್ಯ ಲೋಸಕಭಾ ಕ್ಷೇತ್ರಗಳಿಗೆ ನ.೩ರಂದು ಚುನಾವಣೆ ನಡೆಸುವುದಾಗಿ ಮುಖ್ಯ ಚುನಾವಣಾ ಆಯುಕ್ತ ಓ.ಪಿ. ರಾವತ್ ಶನಿವಾರ ನವದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಉ.ಪ್ರದೇಶ:  ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮುಸ್ಲಿಂ ಕುಟುಂಬ http://www.sahilonline.net/ka/muslim-family-converted-to-hinduism ಲಕ್ನೋ: ತನ್ನ ಪುತ್ರನ ಅಸಹಜ ಸಾವನ್ನು ಕೊಲೆಯೆಂದು ಪರಿಗಣಿಸದೆ ಆತ್ಮಹತ್ಯೆಯೆಂದು ಪರಿಗಣಿಸಿದ ಪೊಲೀಸರ ಕ್ರಮದಿಂದ ನೊಂದು ಉತ್ತರ ಪ್ರದೇಶದ ಬಾಘಪತ್ ಜಿಲ್ಲೆಯ ಬಡರ್ಖ ಗ್ರಾಮದ ನಿವಾಸಿ ಅಖ್ತರ್ ಎಂಬವರು ಇಸ್ಲಾಂ ಧರ್ಮ ತೊರೆದು ತಮ್ಮ ಕುಟುಂಬ ಸಮೇತ ಹಿಂದು ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಈಗಲಾದರೂ ತನ್ನ ಮಗನ `ಕೊಲೆ' ಪ್ರಕರಣವನ್ನು ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸುತ್ತಾರೆ ಎಂಬ ಆಶಾವಾದವಿದೆ ಎಂದು ಹೇಳಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳ ಹಿಂದಿನ ತಾತ್ವಿಕತೆಯೇನು? http://www.sahilonline.net/ka/what-is-the-philosophy-behind-competing-tests ಸ್ಪರ್ಧಾತ್ಮಕವಾದ ಯಾವುದೇ ಪರೀಕ್ಷೆಗಳು ಯಶಸ್ಸು ಮತ್ತು ವೈಫಲ್ಯವೆಂಬ ಎರಡು ಪರಸ್ಪರ ವಿರುದ್ಧವಾದ ವಾಸ್ತವತೆಗಳನ್ನು ಹೊಂದಿರುತ್ತದೆ. ಹಾಗೆಂದು ಎಲ್ಲಾ ಪರೀಕ್ಷೆಗಳಲ್ಲೂ ಒಂದೇ ಬಗೆಯ ತೀವ್ರತೆಯೇನೂ ಇರುವುದಿಲ್ಲ. ಪರೀಕ್ಷೆಗಳನ್ನು ಸ್ಪರ್ಧಾತ್ಮಕಗೊಳಿಸಿದಾಗ ಮಾತ್ರ ಅವು ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತವೆ. ಹಾಗೆ ನೋಡಿದರೆ ಸಾರ್ವಜನಿಕರು ಕನಸಿನ ಗುರಿಯೆಂದು ಭಾವಿಸುವ ಆಡಳಿತಾತ್ಮಕ ಸೇವೆಗಳು, ವೈದ್ಯಕೀಯ, ಮೇನೇಜ್‌ಮೆಂಟ್, ಮತ್ತು ಸಾಫ್ಟ್‌ವೇರ್ ಇಂಜನಿಯರಿಂಗ್ ಕ್ಷೇತ್ರಗಲ್ಲಿ ಪ್ರವೇಶ ಪಡೆದುಕೊಳ್ಳಲು ಎದುರಿಸುವ ಪರೀಕ್ಷೆಗಳಲ್ಲಿ ತೀವ್ರತೆಗಳು ನಿಜಕ್ಕೂ ಹೆಚ್ಚಿರುತ್ತದೆ. ಆ ಗುರಿಯನ್ನು ತಲುಪುವ ಬಯಕೆಗಳನ್ನು ಇಟ್ಟುಕೊಂಡಿರುವವರಂತೂ ಬಾಲ್ಯದಿಂದಲೇ ಇಂಥಾ ಸ್ಪರ್ಧಾ ಸನ್ನಿಗೆ ಗುರಿಯಾಗಿರುತ್ತಾರೆ. ಆಧಾರ್ ಆದೇಶ-ಬಹುಮತ ತಂದ ನಿರಾಸೆ, ಭಿನ್ನಮತದ ಭರವಸೆ http://www.sahilonline.net/ka/aadhaar-is-a-command-majority-brought-down-the-hope-of-dissent ಆಧಾರ್ ಕಾರ್ಡ್ ವ್ಯವಸ್ಥೆಯ ಸಾಂವಿಧಾನಿಕತೆ ಮತ್ತು ಕಾನೂನುಬದ್ಧತೆಯ ಬಗ್ಗೆ ಕಳೆದ ಆರು ವರ್ಷಗಳಿಂದ ದೇಶದ ಉನ್ನತ ಕೋರ್ಟಿನಲ್ಲಿ ವಾದ-ವಿವಾದಗಳು ನಡೆಯುತ್ತಿದ್ದವು. ಅಂತಿಮ ವಾದ-ಪ್ರತಿವಾದ ಮಂಡನೆಗಳು ಭರ್ತಿ ೩೮ ದಿನಗಳ ಕಾಲ ನಡೆದಿದ್ದವು. ಇದರ ಜೊತೆ ಈ ವಿವಾದದ ಕೆಲವು ಸಂಗತಿಗಳನ್ನು ಎರಡು ಸಾಂವಿಧಾನಿಕ ಪೀಠಕ್ಕೂ ವರ್ಗಾಯಿಸಲಾಗಿತ್ತು. ಇಷ್ಟೆಲ್ಲಾ ಆಗಿ ಆಧಾರ್ ಬಗ್ಗೆ  ಅಂತಿಮವಾಗಿ ೩.೫ ಲಕ್ಷ ಪದಗಳುಳ್ಳ ಮೂರು ಆದೇಶಗಳು ಹೊರಬಿದ್ದಿದ್ದರೂ ಅದು ಹಲವು ಪ್ರಮುಖ ಸಂಗತಿಗಳನ್ನು ಬಗೆಹರಿಸಿಲ್ಲ ಎಂಬುದೇ ವಾಸ್ತವವಾಗಿದೆ. ಮನುಷ್ಯ ಹಾಗೂ ವನ್ಯಜೀವಿಗಳ ನಡುವಿನ ಸಂಘರ್ಷ http://www.sahilonline.net/ka/the-conflict-between-man-and-wildlife ಕಳೆದ ಕೆಲವು ವಾರಗಳಿಂದ ಮಾಹಾರಾಷ್ಟ್ರದಲ್ಲಿ ವನ್ಯಜೀವಿ ಕಾರ್ಯಕರ್ತರು, ರಾಜ್ಯ ಸರ್ಕಾರ ಮತ್ತು ರಾಲೆಗಾಂವ್ ಗ್ರಾಮಸ್ಥರ ನಡುವೆ ಒಂದು ಸಂಘರ್ಷ ನಡೆಯುತ್ತಿದೆ. ಅದಕ್ಕೆ ಕಾರಣ ರಾಲೆಗಾಂವ ಗ್ರಾಮದ ಮೇಲೆ ಮಾನವ ಭಕ್ಷಕ ಹೆಣ್ಣುಹುಲಿಯೊಂದು ದಾಳಿ ನಡೆಸಿರುವುದು. ಆ ಹುಲಿಯು ಎರಡು ಮರಿಗಳ ತಾಯಿಯೂ ಆಗಿದ್ದು, ಜನರನ್ನು ರಕ್ಷಿಸುವ ಸಲುವಾಗಿ ಅರಣ್ಯ ಇಲಾಖೆಯು ಆ ಹುಲಿಯನ್ನು ಗುಂಡುಹೊಡೆದು ಕೊಲ್ಲುವ ತೀರ್ಮಾನ ಮಾಡಿತ್ತು. ಹೀಗಾಗಿ ವನ್ಯಜೀವಿ ಕಾರ್ಯಕರ್ತರು ಆ ತೀರ್ಮಾನದ ವಿರುದ್ಧ ಸುಪ್ರೀಂ ಕೋರ್ಟಿನ ಮೆಟ್ಟಿಲೇರಿದರು. ಆದರೆ ಸುಪ್ರೀಂ ಕೋರ್ಟು ಹುಲಿಯನ್ನು ಕೊಲ್ಲುವ ತೀರ್ಮಾನಕ್ಕೆ ತಡೆಯಾಜ್ನೆ ನೀಡಲು ನಿರಾಕರಿಸಿತು. ಒಳಚರಂಡಿಗಳನ್ನು ಸ್ವಚ್ಚ ಮಾಡುವಾಗ ಸಂಭವಿಸುತ್ತಿರುವ ಸಾವುಗಳು ಸಹಜ ಸಾವುಗಳೇ? http://www.sahilonline.net/ka/natural-deaths-are-the-deaths-when-preparing-sewers ಒಳಚರಂಡಿಗಳ ಸ್ವಚ್ಚತೆಯನ್ನು ಹೆಚ್ಚೆಚ್ಚು ಯಾಂತ್ರೀಕರಣಗೊಳಿಸುವ ಮೂಲಕ ಅಂಥಾ ಸಾವಿನ ಕೂಪದೊಳಗೆ ಮನುಷ್ಯರು ಇಳಿದು ಸ್ವಚ್ಚ ಮಾಡುವುದನ್ನು ತಪ್ಪಿಸಬಹುದು. ಎಲ್ಲರನ್ನೂ ಒಳಗೊಳ್ಳುವ ಹಿಂದೂತ್ವ- ಯಾರ ಒಳಿತಿಗಾಗಿ? http://www.sahilonline.net/ka/for-the-good-of-everyone-else-involved-in-the-hindutva ತಮ್ಮದು ಎಲ್ಲರನ್ನೂ ಒಳಗೊಳ್ಳುವ ಹಿಂದೂತ್ವವೆಂಬ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಘೋಷಣೆಯು ತೋರಿಕೆಯದ್ದೇ ವಿನಃ ನೈಜವಾದದ್ದಲ್ಲ. ಇಂಧನದ ಬೆಲೆಗಳು ಹತ್ತಿ ಉರಿಯುತ್ತಿರುವಾಗ http://www.sahilonline.net/ka/when-fuel-prices-are-burning_epw_editorial ಜಾಗತಿಕ ಕಚ್ಚಾತೈಲದ ಬೆಲೆಗಳಲ್ಲಿನ ಏರುಪೇರುಗಳಿಗಿಂತ ಸರ್ಕಾರದ ವಿಕೃತ ನೀತಿಗಳಿಂದಾಗಿಯೇ ಗ್ರಾಹಕರು ದುಬಾರಿ ಬೆಲೆಯನ್ನು ತೆರುವಂತಾಗಿದೆ. ಪಂಜಾಬಿನ ಪಾವಿತ್ರ್ಯಭಂಗ ಮಸೂದೆ- ಒಂದು ದೊಂಬಿಕೋರ ಶಾಸನ http://www.sahilonline.net/ka/the-sanctuary-bill-of-punjab-a-mob-legislation ಪಂಜಾಬಿನ ಕಾಂಗ್ರೆಸ್ ನೇತೃತ್ವದ ಸರ್ಕಾರವು ಪ್ರಸ್ತಾಪಿಸಿದ ಬಾರತೀಯ ದಂಡ ಸಂಹಿತೆ (ಪಂಜಾಬ್ ತಿದ್ದುಪಡಿ)-೨೦೧೮ ಮಸೂದೆಯನ್ನು ಪಂಜಾಬಿನ ಶಾಸನಸಭೆಯು ಅನುಮೋದಿಸಿದೆ. ಈ ಕಾಯಿದೆಯು ಗುರು ಗ್ರಂಥ ಸಾಹಿಬ್, ಕುರಾನ್, ಬೈಬಲ್ ಮತ್ತು ಭಗವದ್ಗೀತೆಗಳನ್ನು ಅಪವಿತ್ರಗೊಳಿಸುವ ಅಪರಾಧಕ್ಕೆ ಜೀವಾವಧಿ ಶಿಕ್ಷೆಯನ್ನು ವಿಧಿಸಲು ಅನುವಗುವಂತೆ ಭಾರತೀಯ ದಂಡ ಸಂಹಿತೆಯೆ ೨೯೫-ಎ ಕಲಮಿಗೆ ತಿದ್ದುಪಡಿ ತಂದಿದೆ. ಈ ಮಸೂದೆಯ ಪ್ರಸ್ತಾಪಕ್ಕಿದ್ದ ತತ್‌ಕ್ಷಣದ ರಾಜಕೀಯ ಸಂದರ್ಭವೆಂದರೆ ಕಾಂಗ್ರೆಸ್ ಮತ್ತು ಶಿರೋಮಣಿ ಅಕಾಲಿ ದಳದ ನಡುವೆ ನಡೆಯುತ್ತಿದ್ದ ಸಂಘರ್ಷಗಳು. ಕುತೂಹಲಕಾರಿ ಸಂಗತಿಯೆಂದರೆ ಈ ಹಿಂದೆ ಅಕಾಲಿ ದಳದ ಸರ್ಕಾರವಿದ್ದಾಗ ರಾಜ್ಯ ಸರ್ಕಾರವು ಗುರು ಗ್ರಂಥ ಸಾಹಿಬ್ ಅನ್ನು ಅಪವಿತ್ರಗೊಳಿಸುವುದನ್ನು ಶಿಕ್ಷಾರ್ಹ ಅಪರಾಧ ಮಾಡುವ ಶಾಸನವನ್ನು ಜಾರಿಗೆ ತಂದಿತ್ತು. ಆದರೆ ಆ ಶಾಸನದ ಹಲವು ಅಂಶಗಳು ಭಾರತದ ಸಂವಿಧಾನದಲ್ಲಿರುವ ಜಾತ್ಯತೀತ ತತ್ವಗಳನ್ನು ಉಲ್ಲಂಘಿಸುತ್ತದೆಂದು ೨೦೧೭ರಲ್ಲಿ ಕೇಂದ್ರ ಸರ್ಕಾರವು ಆ ಶಾಸನವನ್ನು ಹಿಂದಕ್ಕೆ ಕಳಿಸಿತ್ತು. ಪ್ರಸ್ತುತ ಸರ್ಕಾರವು ತಮ್ಮ ಮಸೂದೆಯು ಎಲ್ಲಾ ಧರ್ಮಗಳ ಧರ್ಮಗ್ರಂಥಗಳನ್ನು ಒಳಗೊಂಡಿರುವುದರಿಂದ ಹೆಚ್ಚು ಸಮರ್ಥನೀಯವೆಂದು ಪ್ರತಿಪಾದಿಸುತ್ತಿದೆ. ಸರ್ವ ಧರ್ಮ ಸಮ ಭಾವ ಎಂಬ ತತ್ವವನ್ನು ಹೇಗೆ ಈ ಸರ್ಕಾರಗಳು ಧರ್ಮ ನಿರಪೇಕ್ಷ ತತ್ವಕ್ಕೆ ತದ್ವಿರುದ್ಧವಾಗಿ ಬಳಸಿಕೊಳ್ಳುತ್ತವೆ ಎಂಬುದಕ್ಕೆ ಇದೊಂದು ಸ್ಪಷ್ಟ ಉದಾಹರಣೆಯಾಗಿದೆ. ವಾಸ್ತವವಾಗಿ ಧರ್ಮ ನಿರಪೇಕ್ಷ ತತ್ವದ ನೈಜ ಅನುಷ್ಠಾನವು  ದೇವಪವಿತ್ರವೆಂದು ಮಾನ್ಯವಾದದ್ದು ಹೆಚ್ಚೆಚ್ಚು ಸಾರ್ವಜನಿಕತೆಯ ಅಧೀನಕ್ಕೊಳಪಡುತ್ತಾ ಹೋಗುವುದನ್ನು ಮತ್ತು ಪ್ರಶ್ನಾತೀತ ಪವಿತ್ರವೆಂದು ಭಾವಿಸಿಕೊಂಡಿರುವ ಸಂಗತಿಗಳು ದಿನಗಳೆದಂತೆ ಹೆಚ್ಚೆಚ್ಚು ತರ್ಕದ ಮತ್ತು ವೈಚಾರಿಕತೆಯ ನಿಕಷಕ್ಕೆ ಒಳಪಡುತ್ತಾ ಹೋಗುವುದನ್ನು ಒಳಗೊಂಡಿರುತ್ತದೆ. ’ದಲಿತ’ ಪದವನ್ನು ’ಪರಿಶಿಷ್ಟ ಜಾತಿ’ ಎಂಬ ಅರ್ಥಕ್ಕೆ ಸೀಮಿತಗೊಳಿಸಬಾರದು http://www.sahilonline.net/ka/the-word-dalit-should-not-be-limited-to-the-meaning-of-scheduled-caste ಕೇಂದ್ರದ ಮಾಹಿತಿ ಮತ್ತು ಪ್ರಸಾರ ಇಲಾಖೆಯು ಇನ್ನು ಮುಂದೆ ಮಾಧ್ಯಮಗಳು ದಲಿತ ಎಂಬ ಪದವನ್ನು ಬಳಸಬಾರದೆಂದು ಇತ್ತೀಚೆಗೆ ಸಲಹಾತ್ಮಕ ಸೂಚನೆಯೊಂದನ್ನು ಹೊರಡಿಸಿದೆ. ಇದರ ಪರಿಣಾಮವಾಗಿ ಪದಗಳ ಬಳಕೆಯಲ್ಲಿ ಒಂದು ನೈತಿಕ ಶ್ರೇಣೀಕರಣವೇ ಏರ್ಪಟ್ಟಿದೆ. ನಾಗಪುರದ ಕೆಲವು ಬೌದ್ಧರು ಮಾಡಿದ ಮನವಿಯನ್ನು ಪುರಸ್ಕರಿಸುತ್ತಾ ’ದಲಿತ’ ಎಂಬ ಪದವು ನೈತಿಕವಾಗಿ ಆಕ್ರಮಣಕಾರಿಯೂ ಮತ್ತು ಅಪಮಾನಕಾರಿಯೂ ಆಗಿರುವುದರಿಂದ ಅದನ್ನು ಕೈಬಿಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿರುವ ಕೇಂದ್ರ ಸರ್ಕಾರ ಅದರ ಬದಲಿಗೆ ಸಾಂವಿಧಾನಿಕವಾಗಿ ನೀಡಲ್ಪಟ್ಟಿರುವ ಪರಿಶಿಷ್ಟ ಜಾತಿ ಎಂಬ ಪದವು ಹೆಚ್ಚು ಸರಿಯಾದದ್ದು ಎಂದು ಹೇಳಿದೆ. ಪುರುಷ ಪ್ರಧಾನ ಸಮಾಜ ಹಾಗೂ ಲೈಂಗಿಕತೆಗಳ ಕಾನೂನು ಮಾನ್ಯತೆ http://www.sahilonline.net/ka/approval-of-male-principal-society-and-sexuality-law ಸುಪ್ರೀಂ ಕೋರ್ಟಿನ ಇತ್ತೀಚಿನ ಆದೇಶವನ್ನು ಎಲ್‌ಜಿಬಿಟಿ ಸಮುದಾಯವು ಅತ್ಯಂತ ಸಂತಸದಿಂದ ಸ್ವಾಗತಿಸಿದೆ. ಹಾಗೂ ಯಾರು ಯಾವ ಬಗೆಯ ಅನನ್ಯತೆಯ ಗುರುತನ್ನು ಹೊಂದಬೇಕೆಂದು ಬಯಸುತ್ತಾರೆಯೋ ಅದನ್ನು ಅವರು ಘನತೆಯಿಂದ ಹೊಂದುವ ಹಕ್ಕನ್ನು ಗುರುತಿಸಿರುವ ನ್ಯಾಯಾಲಯದ ತೀರ್ಪನ್ನು ಅಪಾರವಾಗಿ ಮೆಚ್ಚಿಕೊಂಡಿದ್ದಾರೆ. ಕೇಂದ್ರ ಸಚಿವ ಅನಂತ ಕುಮಾರ್ ತೀವ್ರ ಅಸ್ವಸ್ಥ ;ದಿ.ವೈರ್ ವರದಿ http://www.sahilonline.net/ka/union-minister-ananth-kumar-is-severely-ill-treatment-in-london ಹೊಸದಿಲ್ಲಿ: ಗೋವಾ ಮುಖ್ಯಮಂತ್ರಿ ಹಾಗು ಪಕ್ಷದ ಹಿರಿಯ ಮುಖಂಡ ಮನೋಹರ್ ಪರಿಕ್ಕರ್ ತೀವ್ರ ಅಸ್ವಸ್ಥರಾಗಿರುವ ಬೆನ್ನಿಗೇ ಬಿಜೆಪಿ ಹಾಗೂ ಕೇಂದ್ರ ಸರಕಾರಕ್ಕೆ ಮತ್ತೊಂದು ಆಘಾತ ಬಂದೆರಗಿದೆ. ಪಕ್ಷದ ಹಿರಿಯ ಮುಖಂಡ, ಕೇಂದ್ರ ಸಚಿವ ಕರ್ನಾಟಕದ ಅನಂತ್ ಕುಮಾರ್ ಅವರು ಈಗ ತೀವ್ರ ಅನಾರೋಗ್ಯಕ್ಕೊಳಗಾಗಿ ಲಂಡನ್ ನಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ ಎಂದು thewire.in ವರದಿ ಮಾಡಿದೆ.  ಗೋವಾ ಸಿಯಂ ಅಸೌಖ್ಯ; ಸರ್ಕಾರ ರಚನೆಗೆ ಕಾಂಗ್ರೇಸ್ ಹಕ್ಕುಮಂಡನೆ http://www.sahilonline.net/ka/manohar-parikkar-is-unwarranted-congress-claims-to-form-government ಪಣಜಿ : ಅಸೌಖ್ಯದಿಂದಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಅವರು ಮತ್ತೆ ಆಸ್ಪತ್ರೆಗೆ ದಾಖಲಾಗಿರುವುದರಿಂದ ಗೋವಾದ ಪ್ರಮುಖ ವಿಪಕ್ಷವಾಗಿರುವ ಕಾಂಗ್ರೆಸ್ ಇಂದು ರಾಜ್ಯಪಾಲೆ ಮೃದುಲಾ ಸಿನ್ಹಾಅವರಿಗೆ ಮನವಿ ಸಲ್ಲಿಸಿ ಪರ್ಯಾಯ ಸರಕಾರ ರಚಿಸಲು ತನ್ನ ಹಕ್ಕು ಮಂಡಿಸಿದೆ. ಬಿಜೆಪಿ ಬಗ್ಗೆ ನಾನೇಕೆ ಪ್ರಚಾರ ಮಾಡಬೇಕು?; ಬಾಬಾ ರಾಮದೇವ ಪ್ರಶ್ನೆ http://www.sahilonline.net/ka/why-should-i-campaign-for-bjp-in-the-lok-sabha-elections ಹೊಸದಿಲ್ಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನಾನೇಕೆ ಬಿಜೆಪಿ ಪರ ಪ್ರಚಾರ ಮಾಡಬೇಕು ಎಂದು ಯೋಗ ಗುರು ಬಾಬಾ ರಾಮದೇವ್ ಪತ್ರಕರ್ತರನ್ನೇ ಪ್ರಶ್ನಿಸಿ ಹುಬ್ಬೇರುವಂತೆ ಮಾಡಿದ್ದಾರೆ.  ಬೆಲೆಏರಿಕೆಯನ್ನು ನಿಯಂತ್ರಿಸದಿದ್ದರೆ ಅದು ಈ ಸರಕಾರಕ್ಕೆ ದುಬಾರಿಯಾಗಿ ಪರಿಣಮಿಸಲಿದೆ ಎಂದು ಹೇಳುವ ಮೂಲಕ ಯೋಗಗುರು ರಾಮದೇವ್ ಅವರು ರವಿವಾರ ನರೇಂದ್ರ ಮೋದಿ ಸರಕಾರಕ್ಕೆ ಎಚ್ಚರಿಕೆಯ ಸಂದೇಶವೊಂದನ್ನು ರವಾನಿಸಿದ್ದಾರೆ. ತೆಲಂಗಾಣ: ಉರುಳಿ ಬಿದ್ದ ಬಸ್: 40ಕ್ಕೂ ಅಧಿಕ ಯಾತ್ರಿಕರ ಸಾವು http://www.sahilonline.net/ka/telangana-a-passenger-bus-collapsed-over-40-passengers ಹೈದರಾಬಾದ್: ರಾಜ್ಯ ಸರಕಾರಿ ಸ್ವಾಮ್ಯದ ಬಸ್ ಘಾಟಿ ರಸ್ತೆಯಲ್ಲಿ ಸಂಚರಿಸುತ್ತಿದ್ದಾಗ ನಿಯಂತ್ರಣ ತಪ್ಪಿ ಕಮರಿಗೆ ಉರುಳಿ ಬಿದ್ದ ಘಟನೆಯಲ್ಲಿ ಎಂಟು ಮಕ್ಕಳು ಸಹಿತ 40ಕ್ಕೂ ಅಧಿಕ ಮಂದಿ ಯಾತ್ರಿಕರು ಮೃತಪಟ್ಟಿದ್ದರೆ, ಹಲವು ಮಂದಿ ಗಂಭೀರ ಗಾಯಗೊಂಡಿದ್ದಾರೆ. ’ನಕ್ಸಲ್’ ಹಣೆಪಟ್ಟಿ ಕಟ್ಟುವುದರ ಹಿಂದಿನ ರಾಜಕೀಯ http://www.sahilonline.net/ka/the-previous-politics-of-labeling-naxal ಸರ್ಕಾರವು ಇತ್ತೀಚೆಗೆ ಬುದ್ಧಿಜೀವಿಗಳನ್ನು ಮತ್ತು ಕಾರ್ಯಕರ್ತರನ್ನು ಬಂಧಿಸಿರುವುದು ಕ್ರಮ ಬಾಹಿರವಾಗಿದೆ  ಮತ್ತು ನೈತಿಕವಾಗಿ ಅಪಮಾನಕಾರಿಯಾಗಿದೆ. ನಗರದ ನಕ್ಸಲರೆಂದರೆ ಯಾರು? http://www.sahilonline.net/ka/who-is-naxalite-in-the-city ತನ್ನ ಮಾಜಿ ಸಹೋದ್ಯೋಗಿಯಾಗಿದ್ದ ನಗರದ ನಕ್ಸಲ ಗೌತಮ್ ನವಲಾಕ ಅವರ ಬಗ್ಗೆ ಬರ್ನಾಡ್ ಡಿಮೆಲ್ಲೋ ಬರೆಯುತ್ತಾರೆ. ಆತಂಕವಾದಿ ಸಂಘಟನೆಗಳಿಗೆ ಕೇಂದ್ರ ಸರಕಾರ ಬೆಂಬಲ; ವಿದ್ಯಾರ್ಥಿ ನಾಯಕ ಆರೋಪ http://www.sahilonline.net/ka/central-government-support-for-terrorist-organizations-umar-khalid ಬೆಂಗಳೂರು: ದೇಶದಲ್ಲಿ ವಿವಿಧ ಹೆಸರುಗಳ ಮೂಲಕ ಆತಂಕವಾದಿ ಸಂಘಟನೆಗಳು ಕೆಲಸ ಮಾಡುತ್ತಿದ್ದು, ಅದಕ್ಕೆ ಕೇಂದ್ರ ಸರಕಾರ ನೇರವಾಗಿ ಬೆಂಬಲ ನೀಡುತ್ತಿದೆ ಎಂದು ಜೆಎನ್‌ಯು ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಹೇಳಿದ್ದಾರೆ. ಅಪಘಾತದಲ್ಲಿ ಮೃತಪಟ್ಟ ತೆಲುಗು ಚಿತ್ರನಟ ನಂದಮೂರಿ ಹರಿಕೃಷ್ಣ http://www.sahilonline.net/ka/ntrs-son-nandamuri-harikrishna-die-in-accident ಹೈದರಾಬಾದ್: ತೆಲುಗು ಚಿತ್ರರಂಗದ ಖ್ಯಾತ ನಟ ಎನ್‌.ಟಿ ರಾಮರಾವ್ ಅವರ ಮಗ, ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಬಾಮೈದ ನಂದಮೂರಿ ಹರಿಕೃಷ್ಣ (61) ಬುಧವಾರ ನಸುಕಿನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇಂಧನ ಬೆಲೆ ಏರಿಕೆಯಿಂದ ಮೋದಿಯವರ ಅಚ್ಛದಿನ್ ಅಣಕು; ಶಿವಸೇನ ಆರೋಪ http://www.sahilonline.net/ka/oil-price-hike-shiv-sena-mocks-achheedins-statement ಮುಂಬೈ: ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಗಗನಕ್ಕೇರುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವನ್ನು ತೀವ್ರವಾಗಿ ಟೀಕಿಸಿರುವ ಎನ್‌ಡಿಎ ಮೈತ್ರಿಕೂಟದ ಹಿರಿಯ ಸಹಪಕ್ಷ ಶಿವಸೇನೆ, ಅಚ್ಛೇದಿನ್ ಹಾಗಿರಲಿ, ಮೊದಲು ಜನರಿಗೆ ಸ್ಥಿರವಾದ ಜೀವನ ಖಾತರಿಗೊಳಿಸಿ ಎಂದು ಸಲಹೆ ನೀಡಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಗೆ ಸುಪ್ರೀಮ್ ನಿಂದ ಸಮನ್ಸ್ http://www.sahilonline.net/ka/defamation-case-amit-shahs-court-summons ಕೋಲ್ಕತಾ: ತೃಣಮೂಲ ಯುವ ಕಾಂಗ್ರೆಸ್ ಅಧ್ಯಕ್ಷ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರು ದಾಖಲಿಸಿರುವ ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆ.28ರಂದು ತನ್ನೆದುರು ಹಾಜರಾಗುವಂತೆ ಆದೇಶಿಸಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ಸ್ಥಳೀಯ ನ್ಯಾಯಾಲಯವು ಬುಧವಾರ ಸಮನ್ಸ್ ಹೊರಡಿಸಿದೆ. ವ್ಯಭಿಚಾರವು ಸಮಷ್ಟಿ ಹಿತಕ್ಕೆ ವಿರುದ್ಧವಾದದ್ದೇ? http://www.sahilonline.net/ka/epw_editoral_augus_18th_shiv-sundar  ಒಂದು ವ್ಯಭಿಚಾರ ವಿರೋಧೀ ಕಾನೂನಿನ ರಚನೆಗೆ ಅವಕಾಶ ಒದಗಿಸುವ ಭಾರತೀಯ ದಂಡ ಸಂಹಿತೆಯ ೪೯೭ನೇ ಕಲಮಿನ ಸಾಂವಿಧಾನಿಕ ಮಾನ್ಯತೆಯ ಬಗ್ಗೆ ಸುಪ್ರೀಂಕೋರ್ಟಿನಲ್ಲಿ ಇತ್ತೀಚೆಗೆ ವಿಚಾರಣೆಯು ನಡೆಯುತ್ತಿದ್ದ ಸಂದರ್ಭದಲ್ಲಿ ವೈವಾಹಿಕ ಚೌಕಟ್ಟಿನಲ್ಲಿ ಮಹಿಳೆಗಿರುವ ಹಕ್ಕಿನ ಪ್ರಶ್ನೆಗಳು ಚರ್ಚೆಗೊಳಗಾಗಿವೆ. ಈ ಬಗ್ಗೆ  ಸುಪ್ರೀಂಕೋರ್ಟು ಕೇಂದ್ರ ಸರ್ಕಾರಕ್ಕೆ ಒಂದು ಸಹಜ-ಸಾಧಾರಣ ಪ್ರಶ್ನೆಯನ್ನು ಕೇಳಿತು: ವ್ಯಭಿಚಾರವನ್ನು ಒಂದು ಶಿಕ್ಷಾರ್ಹ ಅಪರಾಧವನ್ನಾಗಿ ಮಾಡುವುದರಲ್ಲಿ ಇರುವ ಸಮಷ್ಟಿ ಹಿತವೇನು?. ಅದಕ್ಕೆ ಕೇಂದ್ರ ಸರ್ಕಾರವು ಅತ್ಯಂತ ಪ್ರತಿಗಾಮಿ ಉತ್ತರವನ್ನು ನೀಡಿದೆ. ೪೯೭ನೇ ಕಲಮು ವಿವಾಹವೆಂಬ ಸಂಸ್ಥೆಯನ್ನು ಬೆಂಬಲಿಸಿ, ಪರಿರಕ್ಷಿಸಿ, ಕಾಯುತ್ತದೆಂಬ ಕಾರಣವನ್ನೊಡ್ಡಿ ಅದನ್ನು ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿದೆ. ೪೯೭ನೇ ಕಲಮನ್ನು ರದ್ದುಮಾಡುವುದರಿಂದ ವಿವಾಹವೆಂಬ ಸಂಸ್ಥೆಯನ್ನು ಮತ್ತದರ ಪಾವಿತ್ರ್ಯವನ್ನು ಎತ್ತಿಹಿಡಿಯುವ ಭಾರತೀಯರ ಅಂತರ್ಗತ ಸಾಂಸ್ಕೃತಿಕ ಮೌಲ್ಯಗಳಿಗೆ ಹಾನಿಯುಂಟಾಗುತ್ತದೆಂದು ಅದು ಪ್ರತಿಪಾದಿಸಿದೆ.  ಸಮಗ್ರ ದೃಷ್ಟಿಯಿಲ್ಲದ ಹಣದುಬ್ಬರ ನಿಗ್ರಹ ಕ್ರಮಗಳು http://www.sahilonline.net/ka/non-visual-inflationary-suppression-measures ಭಾರತೀಯ ರಿಸರ್ವ್ ಬ್ಯಾಂಕು (ಆರ್‌ಬಿಐ) ಸಂಭವನೀಯ ಹಣದುಬ್ಬರ ದರಗಳನ್ನು ನಿಯಂತ್ರಿಸಲು ಹಿಂದಿನಿಂದಲೂ ಪಾಲಿಸಿಕೊಂಡು ಬಂದಿರುವ  ಬಂದಿರುವ ಕೆಲವು ಶಾಸ್ತ್ರಿಯ ಕ್ರಮಗಳನ್ನು ಕೈಗೊಂಡಿದೆ. ಅದು ಆರ್ಥಿಕತೆಯಲ್ಲಿ ಹಣದ ಹರಿದಾಟವನ್ನು ಬಿಗಿಗೊಳಿಸುವ ಉದ್ದೇಶದಿಂದ ತನ್ನ ಪಾಲಿಸಿ ದರಗಳನ್ನು ಶೇ.೬ ರಿಂದ ಶೇ.೬.೫ಕ್ಕೆ ಏರಿಸಿದೆ. ಅದರ ಜೊತೆಜೊತೆಗೆ ರಿವರ್ಸ್ ರಿಪೊ ದರ (ವಾಣಿಜ್ಯ ಬ್ಯಾಂಕುಗಳಿಂದ ಪಡೆದುಕೊಳ್ಳುವ ಹಣಕ್ಕೆ ರಿಸರ್ವ್ ಬ್ಯಾಂಕ್ ತೆರುವ ಬಡ್ಡಿದರ-ಸಂ), ಮಾರ್ಜಿನಲ್ ಸ್ಟಾಂಡಿಂಗ್ ಫೆಸಿಲಿಟಿ ರೇಟ್ (ಸರ್ಕಾರದ ಬಾಂಡುಗಳನ್ನು ಸಲ್ಲಿಸಿ ಬ್ಯಾಂಕುಗಳು  ಆರ್‌ಬಿಐ ಇಂದ ಪಡೆದುಕೊಳ್ಳುವ ದಿಡೀರ್ ಮತ್ತು ಅಲ್ಪಕಾಲೀನ ಹಣಕಾಸಿಗೆ ಆರ್‌ಬಿಐ ವಿಧಿಸುವ ದರ- ಸಂ), ಮತ್ತು ಬ್ಯಾಂಕು ದರ (ಬ್ಯಾಂಕುಗಳು ಆರ್‌ಬಿಐ ನಿಂದ ಪಡೆದುಕೊಳ್ಳುವ ಹಣಕಾಸಿಗೆ ಆರ್‌ಬಿಐ ವಿಧಿಸುವ ದರ-ಸಂ)ಗಳನ್ನು ಶೇ.೦.೨೫ರಷ್ಟು ಏರಿಸಿದೆ. ಆರ್‌ಬಿಐ ಒದಗಿಸುವ ನಗದು ಹಣವನ್ನು ಪಡೆದುಕೊಳ್ಳಲು ತಗಲುವ ವೆಚ್ಚವನ್ನು ಹೆಚ್ಚುಮಾಡುವುದು, ಮತ್ತು ಆ ಮೂಲಕ ಬ್ಯಾಂಕುಗಳಿಂದ ಸಾಲ ಪಡೆಯುವುದನ್ನು ತುಟ್ಟಿಗೊಳಿಸಿ ಹಣಕಾಸಿನ ಹರಿದಾಟವನ್ನು ನಿಯಂತ್ರಣಕ್ಕೆ ತರುವುದರ ಮೂಲಕ ಹಣದುಬ್ಬರವನ್ನು ನಿಗದಿತವಾದ ವಲಯದಲ್ಲೇ ಇರುವಂತೆ ಸ್ಥಿರಗೊಳಿಸುವುದು ಇದರ ಹಿಂದಿನ ಉದ್ದೇಶವಾಗಿದೆ. ಕಾಯುವವರೇ ಕೊಲ್ಲುವವರಾದಾಗ.. http://www.sahilonline.net/ka/when-the-waiters-are-killing ಒಂದು ಅಸಮಾನ ಮತ್ತು ಪುರುಷ ಪ್ರಧಾನ ಸಮಾಜದಲ್ಲಿ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಪರಿಸ್ಥಿತಿಗಳು ಮಹಿಳೆ ಮತ್ತು ಮಕ್ಕಳಂತ ಅತಂತ್ರ ಸಮುದಾಯಗಳನ್ನು ಮೃಗೀಯ ಮನಸ್ಸತ್ವವುಳ್ಳವರಿಗೆ ಬಲಿಯಾಗದಂತೆ ರಕ್ಷಿಸುವ ಅಗತ್ಯವನ್ನು ಹುಟ್ಟುಹಾಕುತ್ತದೆ. ಆದರೆ ರಕ್ಷಕರ ಸ್ಥಾನದಲ್ಲಿರುವ ಪ್ರಭುತ್ವ ಮತ್ತು ನಾಗರಿಕ ಸಮಾಜಗಳೇ ತಮ್ಮ ವ್ಯವಸ್ಥೆಯೊಳಗಿರುವ ಇಂಥಾ ಅತಂತ್ರ ಸಮುದಾಯಗಳನ್ನು ರಕ್ಷಿಸಲು ವಿಫಲವಾಗಿವೆ. ಇತ್ತೀಚೆಗೆ ಬಿಹಾರದ ಮತ್ತು ಉತ್ತರ ಪ್ರದೇಶದ ಮಕ್ಕಳ ಆರೈಕಾ ಸಂಸ್ಥೆಗಳಲ್ಲಿ (ಚೈಲ್ಡ್ ಕೇರ್ ಇನ್‌ಸ್ಟಿಟ್ಯೂಷನ್-ಸಿಸಿಐ) ಮತ್ತು ಆಶ್ರಯಧಾಮಗಳಲ್ಲಿ (ಶೆಲ್ಟರ್ ಹೋಮ್ಸ್) ಅಪ್ರಾಪ್ತ ಮಕ್ಕಳ ಮೇಲೆ ಅವ್ಯಾಹತವಾಗಿ ನಡೆಯುತ್ತಿದ್ದ ದೈಹಿಕ ಮತ್ತು ಲೈಂಗಿಕ ದೌರ್ಜನ್ಯಗಳು ಬಯಲಾಗಿದ್ದು ರಕ್ಷಕರಾಗಿ ಪ್ರಭುತ್ವವೂ ಮತ್ತು ಅದರ ಮೇಲೆ ನಿಗಾ ಇಡುವ ಕಾವಲುಗಾರನಾಗಿ ನಾಗರಿಕ ಸಮಾಜವು ಹೇಗೆ ವಿಫಲಗೊಂಡಿದೆಯೆಂಬುದನ್ನು ಬಯಲುಗೊಳಿಸಿದೆ. ಕಾಯುವವರೇ ಪದೇಪದೇ ಕೊಲ್ಲುವವರಾಗುತ್ತಿರುವುದು ನ್ಯಾಯವ್ಯವಸ್ಥೆಯ ದುರಂತ ವಿಡಂಬನೆಯಾಗಿದೆ. ೨೦೧೫ರಲ್ಲಿ ಮಕ್ಕಳ ನ್ಯಾಯ (ಆರೈಕೆ ಮತ್ತು ರಕ್ಷಣೆ) ಕಾಯಿದೆ ಜಾರಿಯಾಗಿ, ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಅಯೋಗ (ನ್ಯಾಷನಲ್ ಕಮಿಷನ್ ಫಾರ್ ಪ್ರೊತೆಕ್ಷನ್ ಆಫ್ ಚೈಲ್ದ್ ರೈಟ್ಸ್- ಎನ್‌ಸಿಪಿಸಿಆರ್) ವೊಂದು ಅಸ್ತಿತ್ವದಲ್ಲಿದ್ದರೂ ಇವೆಲ್ಲಾ ಸಂಭವಿಸುತ್ತಿದೆ. ಮನಮೋಹನ್ ಸಿಂಗ್ ಅವಧಿಯಲ್ಲಿ  ಭಾರತ ಪ್ರಗತಿಯ ಸ್ವರ್ಣಯುಗ-ವರದಿ http://www.sahilonline.net/ka/manmohan-singhs-period-is-the-golden-age-of-indias-progress-1008-percent-progress-report ಹೊಸದಿಲ್ಲಿ: ಭಾರತದ ಆರ್ಥಿಕತೆ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಅವಧಿಯಲ್ಲಿ ಅಂದರೆ 2006-07ರಲ್ಲಿ ಐತಿಹಾಸಿಕ ಗರಿಷ್ಠ ಪ್ರಮಾಣದ ಪ್ರಗತಿ ದಾಖಲಿಸಿದೆ ಎಂದು ಅಧಿಕೃತ ಅಂಕಿ ಅಂಶಗಳು ದೃಢಪಡಿಸಿವೆ. ಈ ಅವಧಿಯಲ್ಲಿ ಭಾರತ ಶೇಕಡ 10.08ರಷ್ಟು ಪ್ರಗತಿ ದಾಖಲಿಸಿದ್ದು, ಆರ್ಥಿಕ ಉದಾರೀಕರಣದ ಬಳಿಕ ಸಾಧಿಸಿದ ಗರಿಷ್ಠ ಪ್ರಗತಿ ಇದಾಗಿದೆ ಎಂದು ಅಂಕಿ ಅಂಶಗಳು ಹೇಳಿವೆ.  ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ (1924-2018) ವ್ಯಕ್ತಿಚಿತ್ರ http://www.sahilonline.net/ka/ajata-shatru_-atal_bihari_vaajpai ಅಜಾತಶತ್ರು ಎಂದೇ ಹೆಸರಾದ ಅಟಲ್ ಬಿಹಾರಿ ವಾಜಪೇಯಿ ಅವರು ನಿಧನ ದೇಶದಲ್ಲಿ ನಿರ್ವಾತ ಸೃಷ್ಟಿಸಿದೆ. 3 ಬಾರಿ ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದ ವಾಜಪೇಯಿ ಅವರು ಕವಿಯಾಗಿ, ಉತ್ತಮ ವಾಗ್ಮಿಯಾಗಿ, ಹಾಸ್ಯಪ್ರಜ್ಞೆಯ ಸರಳ ಮನುಷ್ಯರಾಗಿ, ಮಾನವೀಯ ಅಂತಃಕರಣದ ಜನಾನುರಾಗಿಯಾಗಿ ಕೋಟ್ಯಂತರ ಭಾರತೀಯರ ಹೃದಯದಲ್ಲಿ ನೆಲೆಸಿದವರು.  ಕೇರಳದಲ್ಲಿ ಮುಂದುವರಿದ ಮಳೆಯ ರೌದ್ರನರ್ತನ: ಮೃತರ ಸಂಖ್ಯೆ 97ಕ್ಕೆ ಏರಿಕೆ http://www.sahilonline.net/ka/kerala-floods-death-toll-rises-to-97-kochi-airport-to-remain-closed-till-august-26 ತಿರುವನಂತಪುರ: ರಾಜ್ಯದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬಹುತೇಕ ಎಲ್ಲಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಮಳೆಯಿಂದಾಗಿ ರಾಜ್ಯಾದ್ಯಂತ ಮೃತಪಟ್ಟವರ ಸಂಖ್ಯೆ 97ಕ್ಕೆ ಏರಿಕೆಯಾಗಿದೆ. ಗಣ್ಯಾತಿಗಣ್ಯರಿಂದ ಭಾರತ ರತ್ನ ಪುರಸ್ಕೃತ ಅಟಲ್ ಜಿಗೆ ಅಂತಿಮ ನಮನ http://www.sahilonline.net/ka/prime-minister-nmodi-president-kovind-and-political-leaders-pays-respects-to-atal-bihari-vajpayee ನವದೆಹಲಿ: ಮಾಜಿ ಪ್ರಧಾನಿ, ಅಜಾತಶತ್ರು ಮತ್ತು ಭಾರತ ರತ್ನ ಪುರಸ್ಕೃತ ಅಟಲ್ ಬಿಹಾರಿ ವಾಜಪೇಯಿ ಅವರ ಅಗಲಿಕೆಯಿಂದ ದೇಶದಾದ್ಯಂತ ಶೋಕಾಚರಣೆ ಆಚರಿಸಲಾಗುತ್ತಿದ್ದು, ಗಣ್ಯಾತಿ ಗಣ್ಯರು ಅವರ ಅಂತಿ ದರ್ಶನ ಪಡೆದು ನಮನ ಸಲ್ಲಿಸುತ್ತಿದ್ದಾರೆ. ಇಹಲೋಕ ತ್ಯಜಿಸಿದ ಮಾಜಿ ಪ್ರಧಾನಿ ವಾಜಪೇಯಿ http://www.sahilonline.net/ka/former-prime-minister-atal-bihari-vajpayee-is-no-more ಹೊಸದಿಲ್ಲಿ: ಇಲ್ಲಿನ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಗುರುವಾರ ನಿಧನರಾಗಿದ್ದಾರೆ. ಮೂತ್ರಪಿಂಡದ ಸಮಸ್ಯೆಗೆ ಚಿಕಿತ್ಸೆಗಾಗಿ ವಾಜಪೇಯಿಯವರನ್ನು ಜೂನ್ 11ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆನಂತರ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿತ್ತು. ಕೇರಳ ಜಮಾಅತೆ ಇಸ್ಲಾಮಿ IRF ರಿಲೀಫ್ ವಿಂಗ್ ಘಟಕದಿಂದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯ http://www.sahilonline.net/ka/relief-works-in-flood-affected-areas-from-the-kerala-jamaat-e-islami-irf-relief-wing-unit ಕೇರಳ: ಜಮಾಅತೆ ಇಸ್ಲಾಮಿ ಹಿಂದ್ ಕೇರಳ ಘಟಕದ ಸಂತೃಸ್ಥ ಪರಿಹಾರ ಘಟಕ IRF ರಿಲೀಫ್ ವಿಂಗ್ ಜಿಐಎಚ್ ಕೇರಳದ ಸ್ವಯಂ ಸೇವಕರು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯದಲ್ಲಿ ನಿರತರಾಗಿದ್ದು ಸಂತೃಸ್ತರ ಮನೆಗಳನ್ನು ಪುನರ್ ನಿರ್ಮಾಣ, ರಸ್ತೆ ಸ್ವಚ್ಚಗೊಳಿಸುವುದು, ನಿರ್ಗತಿಕರಿಗೆ ಆಹಾರ ಒದಗಿಸುವುದು, ಆರೋಗ್ಯ ರಕ್ಷಣೆ, ಮತ್ತು ತಾತ್ಕಾಲಿಕ ಆಶ್ರಯ ತಾಣಗಳನ್ನು ನಿರ್ಮಿಸುವಲ್ಲಿ ಸಕ್ರಿಯರಾಗಿದ್ದಾರೆ. ಕೇರಳ ಜಲಪ್ರಳಯ ಪೀಡಿತರ ನೆರವಿಗೆ ಜಮಾಅತೆ ಇಸ್ಲಾಮೀ ಹಿಂದ್ ಮನವಿ http://www.sahilonline.net/ka/jamaat-e-islami-hind-appeals-to-aid-victims-of-kerala-floods ಕೋಝಿಕ್ಕೋಡ್: ತೀವ್ರ ಮಳೆ ಹಾಗೂ ಜಲಪ್ರಲಕ್ಕೆ ಸಿಲುಕಿ ಕೇರಳ ತತ್ತರಿಸಿದೆ. ಜಮಾಅತೆ ಇಸ್ಲಾಮೀ  ಹಿಂದ್ ಪ್ರತ್ಯೇಕವಾಗಿ ಸಂತ್ರಸ್ತರ ನೆರವಿಗೆ ನಿಧಿ ಸಂಗ್ರಹಿಸುತ್ತದೆ. ಈ ಪ್ರಕ್ತತಿವಿಕೋಪದ ಸ್ಥಳಗಳಿಗೆ ಜಮಾಅತೆ ಇಸ್ಲಾಮೀ ಹಿಂದ್ ಕೇರಳ ರಾಜ್ಯದ್ಯಕ್ಷರಾದ ಎಂ.ಐ.ಅಬ್ದುಲ್‌ ಅಝೀಝ್ ನೇತ್ರತ್ವದ ತಂಡ ಬೇಟಿ ನೀಡಿದ ಬಳಿಕ ಸಂತ್ರಸ್ತರಿಗೆ ಸಹಾಯ ನಿಧಿ ಸಂಗ್ರಹಣೆ ಗೆ ಯೋಜನೆ ಹಾಕಲಾಯಿತು ಎಂದು ರಾಜ್ಯ ಕಾರ್ಯದರ್ಶಿ ಎಂ.ಕೆ ಮುಹಮ್ಮದಲಿ ತಿಳಿಸಿದ್ದಾರೆ.  ಜಾತಿಪದ್ದತಿ ವಿರೋಧಿ ರ‍್ಯಾಪರ್ ಸುಮಿತ್ http://www.sahilonline.net/ka/rapper-sumit-against-the-caste-system ಹೊಸದಿಲ್ಲಿ:  ಅಮೆರಿಕಾದಲ್ಲಿ ಒಂದು ಕಾಲದಲ್ಲಿ ಜನಾಂಗೀಯ ತಾರತಮ್ಯವನ್ನು ವಿರೋಧಿಸಿ ಹಿಪ್-ಹಾಪ್ ಸಂಗೀತದ ಸಂಸ್ಕೃತಿ ಹುಟ್ಟಿಕೊಂಡಿತ್ತು. ಈ ಹಿಪ್ ಹಾಪ್ ಸಂಗೀತ ಅಂದಿನಿಂದ ದನಿಯಿಲ್ಲದವರ ದನಿಯಾಗಿ ಬಿಟ್ಟಿದೆ. ಭಾರತದಲ್ಲೂ ಹಲವಾರು ಹಿಪ್ ಹಾಪ್ ಸಂಗೀತಗಾರರಿದ್ದರೂ ಸಾಮಾಜಿಕ ಸಮಸ್ಯೆಗಳತ್ತ ತಮ್ಮ ಸಂಗೀತದ ಮೂಲಕ ಬೆಳಕು ಚೆಲ್ಲುವ ಪ್ರಯತ್ನವನ್ನು ಅವರು ಮಾಡಿಲ್ಲ. ಬರಿದಾಯಿತು ತ.ನಾ ರಾಜಕೀಯ ’ನಿಧಿ’ ;ರಾಷ್ಟ್ರಪತಿ ಸೇರಿದಂತ ಹಲವು ಮುಖಂಡರ ಸಂತಾಪ http://www.sahilonline.net/ka/karunanidhis-death-condemnation-of-the-countrys-political-leaders-including-the-prime-minister-and-the-president ಹೊಸದಿಲ್ಲಿ: ಡಿಎಂಕೆ ನಾಯಕ, ತಮಿಳುನಾಡಿನ ಮಾಜಿ ಸಿಎಂ ಎಂ.ಕರುಣಾನಿಧಿಯವರ ನಿಧನಕ್ಕೆ ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿ ಹಲವು ರಾಜಕೀಯ ಮುಖಂಡರು ಸಂತಾಪ ವ್ಯಕ್ತಪಡಿಸಿದ್ದಾರೆ. ಅಕ್ಬರ್ ಹತ್ಯೆ ಹೇಗಾಯಿತು, ಊರವರು ಏನು ಹೇಳುತ್ತಾರೆ: ದಿ ವಯರ್ ಪ್ರತ್ಯಕ್ಷ ವರದಿ http://www.sahilonline.net/ka/what-happened-to-akbars-assassination-what-does-uri-say-the-wire-direct-report ಕೊಲ್ಗಾಂವ್, ಹರ್ಯಾಣ: ರಾಜಸ್ತಾನದ ಆಲ್ವಾರ್ ನಲ್ಲಿ ಗೋರಕ್ಷಕರಿಂದ ಹಲ್ಲೆಗೊಳಗಾಗಿ ಸಾವನ್ನಪ್ಪಿದವರಲ್ಲಿ ಅಕ್ಬರ್ ಖಾನ್ (28) ಮೂರನೆಯ ವ್ಯಕ್ತಿ. ರೈತ ವೃತ್ತಿಯಲ್ಲಿರುವ ಅಕ್ಬರ್ ಸಾವಿನ ಸುತ್ತ ಹಲವು ಊಹಾಪೋಹಗಳು ಮನೆ ಮಾಡಿದ್ದರೂ ಕೂಡ ಪ್ರಾಥಮಿಕ ತನಿಖೆಗಳು ಈಗಾಗಲೇ ಚುರುಕುಗೊಂಡಿವೆ. ರಾತ್ರಿ ಹೊತ್ತು ತಮ್ಮ ಹೊಲಗಳ ನಡುವೆ ಹಾದಿ ನಿರ್ಮಿಸಿದ್ದ ಹಸುಗಳ ಹಾಗೂ ಮಾನವರ ಹೆಜ್ಜೆ ಗುರುತುಗಳು ಅಲ್ಲಿನ ಗ್ರಾಮಸ್ಥರನ್ನು ನೆನೆಗೂದಿಗೆ ತಳ್ಳಿದ್ದುದ್ದರಿಂದ ಅಕ್ರಮ ಗೋಸಾಗಣೆ ಮಾಡತ್ತಿರುವುದಾಗಿ ಸಂಶಯಗೊಂಡು ಈ ಕುರಿತು ಗೋರಕ್ಷಕರಿಗೆ ಮಾಹಿತಿ ನೀಡಲಾಗಿತ್ತು. ಈ ಮಾಹಿತಿಯು ರೈತ ಹಾಗೂ ಹೈನುಗಾರ ವೃತ್ತಿಯನ್ನು ಮಾಡುತ್ತಿದ್ದ ಅಕ್ಬರ್ ಖಾನ್ ರವರ ಜೀವಕ್ಕೆ ಕುತ್ತು ತರುವುದೆಂದು ಅವರು ಊಹಿಸಿರಲಿಕ್ಕಿಲ್ಲ.