ಅಪ್ರಾಪ್ರ ಬಾಲಕನ ಮೇಲೆ ಯುವಕನಿಂದ ಲೈಂಗಿಕ ದೌರ್ಜನ್ಯ: ಪೋಕ್ಸೋ ಕಾಯ್ದೆಯಡಿ ಯುವಕ ಬಂಧನ

Source: sonews | By Manju Naik | Published on 5th August 2018, 12:41 PM | Coastal News |

ಭಟ್ಕಳ: ಇಲ್ಲಿನ ಕಾರಗದ್ದೆಯ ಗುಡ್‍ಲಕ್ ರಸ್ತೆಯ 2ನೇ ಕ್ರಾಸ್‍ನ ಮಸೀದಿಯಿಂದ ನಮಾಜು ಮುಗಿಸಿ ರಾತ್ರಿ 8 ಗಂಟೆಯ ಸುಮಾರಿಗೆ ಮನೆಗೆ ಹೋಗುವಾಗ ತನ್ನ ಕೈಯಲ್ಲಿದ್ದ ಹಣವನ್ನು ಕಳೆದುಕೊಂಡು ಹುಡುಕುತ್ತಿರುವ 12 ವರ್ಷದ ಬಾಲಕನೋರ್ವನನ್ನು ಬಲಾತ್ಕಾರದಿಂದ ಕರೆದುಕೊಂಡು ಹೋಗಿ ಅನೈಸರ್ಗಿಕ ಲೈಂಗಿಕ ಕ್ರಿಯೆಗೆ ಬಳಸಿಕೊಂಡಿರುವ ಕುರಿತು ತಡವಾಗಿ ಬೆಳಕಿಗೆ ಬಂದಿದೆ. 
ಪಟ್ಟಣದ ವ್ಯಾಪ್ತಿಯ ಗುಡ್‍ಲಕ್ ರಸ್ತೆಯ ನಿವಾಸಿ ಅಬ್ದುಲ್ ದಯೀಮ್ ಫಕ್ಕರ್ಡೆ ಎನ್ನುವವನೇ ಬಾಲಕನನ್ನು ಬಲಾತ್ಕಾರವಾಗಿ ಎಳೆದುಕೊಂಡು ಹೋಗಿ ಹತ್ತಿರದಲ್ಲಿಯೇ ನಿರ್ಮಾಣ ಹಂತದಲ್ಲಿರುವ ಮನೆಯೊಂದಕ್ಕೆ ಕರೆದುಕೊಂಡು ಹೋಗಿ ಆತನನ್ನು ಸಲಿಂಗ ಕಾಮಕ್ಕೆ ಬಳಸಿಕೊಂಡಿದ್ದಲ್ಲದೇ ಜೀವ ಬೆದರಿಕೆಯನ್ನು ಹಾಕಿದ್ದು ಈ ಕುರಿತು ಆತನ ಅಜ್ಜಿ ಇಲ್ಲಿನ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನನ್ವಯ ಆರೋಪಿಯ ಮೇಲೆ ಪೋಸ್ಕೋ ಕಾಯಿದೆಯಡಿಯಲ್ಲಿ ದೂರು ದಾಖಲಿಸಿಕೊಂಡು ಬಂಧಿಸಿ ಕಾರವಾರದ ಜೈಲಿಗೆ ಕಳುಹಿಸಲಾಗಿದೆ. 
ಮನೆಯಿಂದ ಹೊರಟ ಬಾಲಕನ ಕೈಯಲ್ಲಿ ಆತನ ಅಜ್ಜಿ 40 ರೂಪಾಯಿಗಳನ್ನು ಕೊಟ್ಟಿದ್ದು ನಮಾಜಿಗೆ ಹೋಗಿ ಬರುವಾಗ ಹಣವನ್ನು ಎಲ್ಲಿಯೋ ಕಳೆದುಕೊಂಡಿದ್ದ ಬಾಲಕ ಕತ್ತಲೆಯಲ್ಲಿ ಹುಡುಕುತ್ತಿರುವುದನ್ನು ಕಂಡ ಆರೋಪಿ ತಕ್ಷಣ ಆತನ ಬಾಯಿಗೆ ಕೈಯಿಂದ ಮುಚ್ಚಿ ಎಳೆದುಕೊಂಡು ಹೋದನೆನ್ನಲಾಗಿದೆ.  ಹತ್ತಿರದಲ್ಲಿಯೇ ನಿರ್ಮಾಣ ಹಂತದಲ್ಲಿರುವ ಮನೆಯ ಆವರಣಕ್ಕೆ ಕರೆದುಕೊಂಡು ಹೋಗಿ ಖುಲ್ಲಾ ಜಾಗಾದಲ್ಲಿ ಈತನನ್ನು ಬಳಸಿಕೊಂಡು ಅನೈಸರ್ಗಿಕ ಲೈಂಗಿಕ ಕ್ರಿಯೆ ನಡೆಸಿದ್ದಲ್ಲದೇ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆಯನ್ನು ಹಾಕಿದ್ದಾನೆನ್ನಲಾಗಿದೆ. ಭಯದಿಂದ ಮನೆಯಲ್ಲಿ ಯಾರಿಗೂ ಹೇಳದೇ ಯಾತನೆ ಪಡುತ್ತಿರುವ ಹುಡುಗನನ್ನು ನೋಡಿ ಮನೆಯವರು ಸಂಶಯಗೊಂಡು ಮತ್ತೆ ಮತ್ತೆ ಕೇಳಿದಾಗ ನಡೆದ ಸಂಗತಿಯನ್ನು ವಿವರಿಸಿದ ಬಾಲಕ ಆರೋಪಿಯ ಪತ್ತೆಯನ್ನು ಸಹ ಹೇಳಿದನೆನ್ನಲಾಗಿದೆ. 
ತಕ್ಷಣ ರಾತ್ರಿಯೇ ಗ್ರಾಮೀಣ ಠಾಣೆಗೆ ಬಂದು ಬಾಲಕನ ಅಜ್ಜಿ ದೂರು ನೀಡಿದ್ದಾರೆ. ದೂರನ್ನು ಸ್ವೀಕರಿಸಿದ ಪೊಲೀಸರು ತಕ್ಷಣ ಕಾರ್ಯಾಚರಣೆಯನ್ನು ನಡೆಸಿ ಆರೋಪಿಯನ್ನು ಬಂಧಿಸಲು ಯಶಸ್ವಿಯಾಗಿದ್ದು ಪೊಲೀಸರ ಸಕಾಲಿಕ ಕ್ರಮ ಪ್ರಶಂಸಗೆ ಕಾರಣವಾಗಿದೆ. 
 
 

Read These Next

ದ.ಕ.ಜಿಲ್ಲೆಯಲ್ಲಿ 441 ಡೆಂಗ್ ಪ್ರಕರಣಗಳು ಪತ್ತೆ; ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್‌

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗವಾದ ಡೆಂಗ್ ಹಾಗೂ ಮಲೇರಿಯಾ ಹಾವಳಿ ತೀವ್ರಗೊಂಡಿದ್ದು, ನಿನ್ನೆ ಸಂಜೆ (ಗುರುವಾರ) ಶಾಲಾ ...