ಭಟ್ಕಳದ ಅಹ್ಮದ್‍ನಿಗೆ ಎನ್‍ಐಎ ನೇಣು: ನಾವು ಉನ್ನತ ಕೋರ್ಟಿಗೆ ಮೊರೆ ಹೋಗುತ್ತೇವೆ

Source: S O News service | By Staff Correspondent | Published on 19th December 2016, 8:04 PM | Coastal News | State News | National News | Don't Miss |

ಆಹ್ಮದ್ ಸಿದ್ದಿಬಾಪ ಉರ್ಫ ಯಾಸೀನ್ ಭಟ್ಕಳ ಮರದಂಡನೆ ಶಿಕ್ಷೆಗೆ ತಾಯಿ ಬೀಬಿ ರೈಹಾನ ಪ್ರತಿಕ್ರಿಯೆ

ಭಟ್ಕಳ: ದೇಶದ ಹಲವೆಡೆ ನಡೆದ ಬಾಂಬ್ ಸ್ಪೋಟ ಪ್ರಕರಣಗಳಿಗೆ ಸಂಬಂಧಿಸಿದಂತೆ ೨೦೧೩ರಲ್ಲಿ ಎನ್.ಐ.ಎ ಅಧಿಕಾರಿಗಳಿಂದ ಬಂಧಿಸಲ್ಪಟ್ಟ ಭಟ್ಕಳದ ಆಹ್ಮದ್ ಸಿದ್ದಿಬಾಪ ಯಾನೆ ಯಾಸೀನ್ ಭಟ್ಕಳ್ ನಿಗೆ ಇಂದು ಎನ್.ಐ.ಎ ವಿಶೇಷ ನ್ಯಾಯಾಲಯ ಮರದಂಡನೆ ಗುರಿಮಾಡಿದೆ.

ಈ ಕುರಿತಂತೆ ಭಟ್ಕಳದ ಮಗ್ದೂಮ್ ಕಾಲೋನಿಯಲ್ಲಿರುವ ಆಹ್ಮದ್ ಸಿದ್ದಿಬಾಪ ಕುಟುಂಬ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು ಮೊದಲೆ ನಿರ್ಣಯಿಸಿದಂತೆ ಎನ್.ಐ.ಎ ನ್ಯಾಯಾಲಯ ನನ್ನ ಮಗನಿಗೆ ಮರಣದಂಡನೆ ವಿಧಿಸಿದೆ. ವಿಚಾರಣೆ ವೇಳೆ ಹಲವಾರು ಬಾರಿ ಮಾನಸಿಕ ಹಿಂಸೆ ನೀಡಿದ ನ್ಯಾಯಾಧೀಶನ ವಿರುದ್ಧ ಹೈದರಾಬಾದ್ ಹೈಕೋರ್ಟಿನಲ್ಲಿ ನಾವು ಪಿಟಿಷನ್ ದಾವೆ ಹೂಡಿದ್ದು ಈತ ವಿಚಾರಣೆಯ ನೆಪದಲ್ಲಿ ನನ್ನ ಮಗನಿಗೆ ‘ನಿನಗೆ ಗಲ್ಲು ಶಿಕ್ಷೆ ನೀಡುವೆ ಎಂದು ಹೆದರಿಸುತ್ತಿದ್ದರು. ಇದೆಲ್ಲವೂ ಮೊದಲೆ ನಿರ್ಣಯವಾಗಿತ್ತು. ಇದಕ್ಕಾಗಿ ನಾವು ಯಾರೂ ಕೂಡ ವ್ಯೆಥೆ ಪಡುವುದಿಲ್ಲ, ಬದಲಾಗಿ ನಾವು ಹೈಕೋರ್ಟಿನಲ್ಲಿ ಎನ್.ಐ.ಎ ನ್ಯಾಯಾಲಯದ ನಿರ್ಣಯವನ್ನು ಪ್ರಶ್ನಿಸುತ್ತೇವೆ ಎಂದು ಆಹ್ಮದ್ ಸಿದ್ದಿಬಾಪನ ತಾಯಿ ಬೀಬಿ ರೈಹಾನಾ ಹಾಗೂ ಸಹೋದರಿ ಬೀಬಿ ಮಾರಿಯಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಸಹೋದರ ಅಬ್ದುಸ್ಸಮದ್ ಸಿದ್ದಿಬಾಪ ಮಾತನಾಡಿ, ನನ್ನ ಸಹೋದರನ ಮೇಲೆ ಹಾಕಲಾದ ಚಾರ್ಜಶೀಟ್ ನೀವು ಓದಬೇಕು. ಅದನ್ನು ಕಂಡು ಯಾರೂ ಕೂಡ ಇದು ಮರದಂಡನೆ ನೀಡುವಂತಹ ಪ್ರಕರಣವಲ್ಲ ಎಂದು ಹೇಳಬಲ್ಲರು. ಆದರೆ ಎನ್.ಐ.ಎ.ನ್ಯಾಯಾಲಯ ಯಾವ ಆಧಾರದ ಮೇಲೆ ಐದು ಜನರನ್ನು ಮರಣದಂಡನೆ ಶಿಕ್ಷೆ ವಿಧಿಸಿದ್ದಾರೆ ಎನ್ನುವುದು ತಿಳಿಯದಾಗಿದೆ. ನಮಗೆ ಭಗವಂತನ ಮೇಲೆ ಸಂಪೂರ್ಣ ವಿಶ್ವಾಸವಿದೆ. ಮತ್ತು ಹೈಕೋರ್ಟ ಮೇಲಿನ ಬಲವಾದ ವಿಶ್ವಾಸವಿದ್ದು ಅಲ್ಲಿ ನ್ಯಾಯಾ ನಮ್ಮ ಪರವಾಗಿ ಬರಲಿದೆ. ಕಳೆದ ಮೂರು ವರ್ಷಗಳಿಂದ ನಾವು ಪ್ರತಿ ತಿಂಗಳು ಕುಟುಂಬ ಸಮೇತರಾಗಿ ನನ್ನ ಸಹೋದರನನ್ನು ಭೇಟಿಯಾಗುತ್ತಲಿದ್ದೇವೆ. ಆತ ಪ್ರತಿ ಬಾರಿಯೂ ತಾನು ಯಾವುದೇ ತಪ್ಪು ಮಾಡಿಲ್ಲ. ನನ್ನನ್ನು ವಿನಾಕಾರಣ ಸಿಲುಕಿಸಲಾಗಿದೆ. ಮತ್ತು ಈಗಿರುವ ನ್ಯಾಯಾಧೀಶರು ನನಗೆ ಗಲ್ಲು ಶಿಕ್ಷೆ ವಿಧಿಸುವ ಬೆದರಿಕೆ ಹಾಕಿ ನನಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು  ಪದೆ ಪದೆ ಹೇಳುತ್ತಿದ್ದನು ಆತನ ಹೇಳಿಕೆಯಂತೆ ಇಂದು ಮರದಂಡನೆ ಶಿಕ್ಷೆ ವಿಧಿಸಿ ನ್ಯಾಯಾಲಯ ನಿರ್ಣಯವನ್ನು ನೀಡಿದೆ. ಇದಕ್ಕೆ ನಮಗೆ ಬಹಳ ಬೇಸರವಾಗಿದ್ದು ನ್ಯಾಯಾ ನೀಡುವವರೇ ಅನ್ಯಾಯವೆಸಗುತ್ತಿರುವಾಗ ಯಾರನ್ನು ದೂಷಿಸಿ ಲಾಭವಿಲ್ಲ. ನಾವು ಹೈಕೋರ್ಟ್, ಸುಪ್ರಿಮ್ ಕೋರ್ಟ್ ವರೆಗೆ ಹೋಗುತ್ತೇವೆ. ಅಲ್ಲಾಹನ ಇಚ್ಚೆ ಅಲ್ಲಿ ಏನಾಗುತ್ತೋ ನೋಡೋಣ ಎಂದರು. 

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಗುಂಪಿನಿಂದ ಹತ್ಯೆ, ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿ; ರಾಜ್ಯಗಳಿಗೆ ಸುಪ್ರೀಂ ಸೂಚನೆ

ಗುಂಪಿನಿಂದ ಥಳಿಸಿ ಹತ್ಯೆ ಮತ್ತು ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರದ ಘಟನೆಗಳನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಆರು ...