ರಕ್ತದಾನ ಅರಿವು ಮೂಡಿಸುವ ಜೆಸಿಐ ಬೈಕ್ ರ್ಯಾಲಿ

Source: so news | By Manju Naik | Published on 14th June 2018, 5:15 PM | Coastal News | Don't Miss |

ಭಟ್ಕಳ:ವಿಶ್ವ ರಕ್ತದಾನ ದಿನವಾದ ಇಂದು ಜೆಸಿಐ ಇಂಟರನ್ಯಾಷನಲ್ ವತಿಯಿಂದ ಭಟ್ಕಳದಿಂದ ಮಂಗಳೂರಿನ ತನಕ ಬೈಕ್ ರ್ಯಾಲಿ ಮಾಡುವ ಮುಖಾಂತರ ಜನರಿಗೆ ರಕ್ತದಾನದ ಮಹತ್ವದ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಲಾಯಿತು.
ಈ ಸಂದರ್ಭದಲ್ಲಿ ಜೆಸಿಐ ವಲಯ 15ರ ಅಧ್ಯಕ್ಷರಾದ ರಾಕೇಶ ಕುಂಜೂರು ಮಾತನಾಡಿ ರಕ್ತದಾನದ ಅರಿವಿನ ಕೊರತೆಯಿಂದಾಗಿ ಇಂದು ಸಮಾಜದಲ್ಲಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಲು ಯಾರು ಮುಂದಾಗುತ್ತಿಲ್ಲ. ಬೇಡಿಕೆಗೆ ಅನುಸಾರ ಶೇಕಡಾ 30 ರಷ್ಟು ಮಾತ್ರ ರಕ್ತವು ಲಭ್ಯವಾಗುತ್ತಿದ್ದು, ತುರ್ತು ಸಂದರ್ಭದಲ್ಲಿ ರಕ್ತಕ್ಕಾಗಿ ಪರಿದಾಡಬೇಕಾದ ಪರಿಸ್ಥಿತಿ ನಮ್ಮಲ್ಲಿದೆ ಎಂದು ತಿಳಿಸಿದರು. ಹಾಗಾಗಿ ರಕ್ತದ ಕೊರತೆಯನ್ನು ನಿಗಿಸುವ ನಿಟ್ಟನಲ್ಲಿ ರಕ್ತದಾನ ಮಹತ್ವದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಜೆಸಿಐ ವತಿಯಿಂದ ಹಮ್ಮಿಕೊಂಡಿದ್ದು, ಭಟ್ಕಳದಿಂದ ಪ್ರಾರಂಭವಾಗುವ ಈ ರ್ಯಾಲಿ ಮಂಗಳೂರು ತಲಪುವ ತನಕ ಮಾರ್ಗ ಮಧ್ಯೆ ಅಲ್ಲಿಲ್ಲಿ ನಿಂತು ಜನರಿಗೆ ರಕ್ತದಾನದ ಪ್ರಾಮುಖ್ಯತೆ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಲಿದೆ ಎಂದು ತಿಳಿಸಿದರು.
ಭಟ್ಕಳ ಜೆಸಿಐ ಭಟ್ಕಳ ಘಟಕದ ಅಧ್ಯಕ್ಷ ಕೆ ಜಬ್ಬರ ಸಾಹೇಬ್ ಪ್ರಾಸ್ತಾವಿಕ ಮಾತನಾಡಿದರೆ ಜೆಸಿಐ ಭಟ್ಕಳ ಘಟಕದ ಕಾರ್ಯದರ್ಶಿ ರಮೇಶ ಖಾರ್ವಿ ಸ್ವಾಗತಿಸಿ ವಂದಿಸಿದರು. ಜೆಸಿಐ ವಲಯ ಉಪಾಧ್ಯಕ್ಷ ರಾಘವೇಂದ್ರ, ಸುನೀಲ್ ಬಂಗೇರ, ಶ್ರೀನಿವಾಸ ಐತಾಳ, ರೋಟರಿ ಕ್ಲಬ್ ಸದಸ್ಯರಾದ ಎಸ್ ಎಂ ಖಾನ್, ನಜೀರ್ ಖಾಸೀಂಜೀ, ಜಿಸಿಐ ಭಟ್ಕಳ ಘಟಕ ಸದಸ್ಯರಾದ ಸುರೇಶಪೂಜಾರಿ, ಮಸೂದ್ ಬರ್ಮಾವರ್, ದಿನೇಶ ಶೇಟ್, ಮೋಹನ ನಾಯ್ಕ, ಶಂಕರ ನಾಯ್ಕ, ಪ್ರಸನ್ನ ಅಡಿಗ, ಈಶ್ವರ ನಾಯ್ಕ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Read These Next