ಭಟ್ಕಳದಲ್ಲಿ ನಾಗರಿಕ ಸೇವೆಗಳ ಮಾರ್ಗದರ್ಶನ ಕಾರ್ಯಾಗಾರ; ಛಲ ಪ್ರಯತ್ನವಿದ್ದರೆ ಗುರಿ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ: ತೇಜಸ್ವಿ

Source: S.O. News Service | By I.G. Bhatkali | Published on 25th September 2017, 12:38 AM | Coastal News | State News | National News |

ಭಟ್ಕಳ: ಪ್ರತಿಯೊಬ್ಬರೂ ಕೀಳರಿಮೆಯಿಂದ ಹೊರಗೆ ಬರಬೇಕು. ಸದೃಢ ಮನಸ್ಥಿತಿ, ಛಲ, ಪ್ರಯತ್ನ ನಿಮ್ಮದಾಗಿದ್ದರೆ ಗುರಿಯನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಧ್ಯಪ್ರದೇಶ ಬರ್ವಾನಿ ಜಿಲ್ಲೆಯ ಜಿಲ್ಲಾಧಿಕಾರಿ ಡಾ.ತೇಜಸ್ವಿ ನಾಯ್ಕ ಹೇಳಿದರು.

 ಅವರು ರವಿವಾರ ಇಲ್ಲಿನ ಶ್ರೀ ನಾಗಯಕ್ಷೆ ಸಭಾಭವನದಲ್ಲಿ ಜೆ.ಡಿ.ನಾಯ್ಕ ಅಭಿಮಾನಿ ಬಳಗದಿಂದ ಆಯೋಜಿಸಲಾದ `ನಾಗರಿಕ ಸೇವೆಗಳು ಗಗನ ಕುಸುಮವಲ್ಲ' ಬೃಹತ್ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು 7 ರಿಂದ 10 ವರ್ಷಗಳನ್ನು ಭವಿಷ್ಯಕ್ಕಾಗಿ ಮುಡಿಪಾಗಿಡಬೇಕು. 10 ವರ್ಷಗಳ ನಂತರ ನಾವು ಎಲ್ಲಿರಬೇಕು ಎನ್ನುವುದನ್ನು ಮೊದಲೇ ನಿರ್ಧರಿಸಿಕೊಳ್ಳಬೇಕು. ನಮ್ಮಲ್ಲಿರುವ ಧನಾತ್ಮಕ ಅಂಶಗಳನ್ನು ಕ್ರೋಢಿಕರಿಸಿ ಎದುರಾಗುವ ಪ್ರಶ್ನೆಗಳಿಗೆ ಉತ್ತರಕಂಡುಕೊಳ್ಳುತ್ತ ಮುನ್ನಡೆದರೆ ಯಶಸ್ಸು ಖಂಡಿತ ನಮ್ಮದಾಗುತ್ತದೆ ಎಂದರು. ಕರ್ನಾಟಕ ಕರಾವಳಿಯಲ್ಲಿ ಹೆಚ್ಚಿನ ಪ್ರತಿಭಾವಂತರಿದ್ದು, ವೈದ್ಯಕೀಯ ಹಾಗೂ ಸಾಫ್ಟವೇರ್ ಕ್ಷೇತ್ರಗಳಲ್ಲಿ ಆಸಕ್ತಿ ಹೆಚ್ಚಿದೆ. ನಾಗರಿಕ ಸೇವೆಗಳ ಅರ್ಹತೆಯನ್ನು ಗಿಟ್ಟಿಸಿಕೊಳ್ಳುವುದು ಕಷ್ಟ ಎಂದು ತಿಳಿದುಕೊಳ್ಳದೇ ಪ್ರಯತ್ನಿಸಿದರೆ ಇಲ್ಲಿಯೂ ಅವಕಾಶಗಳು ಹೆಚ್ಚಿವೆ. ಈ ಭಾಗದ ವಿದ್ಯಾರ್ಥಿಗಳು ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು. ಮಹಾರಾಷ್ಟ್ರ ಸಚಿವ ಮಹಾದೇವ ಜಾನಕರ್ ಮಾತನಾಡಿ, ಜನರಲ್ಲಿ ಇಚ್ಛಾ ಶಕ್ತಿ ವೃದ್ಧಿಸಬೇಕು. ಮಂತ್ರಿಗಳಿಂದ ಮಾತ್ರ ದೇಶ ಉದ್ಧಾರವಾಗುವುದಿಲ್ಲ. ಸ್ವಾಮಿ ವಿವೇಕಾನಂದ, ನಾರಾಯಣ ಗುರುರಂತವರು ಸಮಾಜದಲ್ಲಿ ಹುಟ್ಟಿ ಬರಬೇಕು. ಐಎಫ್‍ಎಸ್ ಅಧಿಕಾರಿ ದಾಮೋದರ ಎ.ಟಿ.ಯಂತವರು ನಾಗರಿಕ ಸೇವೆಗಳ ಬಗ್ಗೆ ವಿದ್ಯಾರ್ಥಿಗಳನ್ನು ಕೊಂಡೊಯ್ಯಲು ಪ್ರಯತ್ನ ನಡೆಸಿರುವುದು ಸ್ತುತ್ಯಾರ್ಹ ಸಂಗತಿಯಾಗಿದೆ ಎಂದು ತಿಳಿಸಿದರು. ಮಾಜಿ ಶಾಸಕ ಜೆ.ಡಿ.ನಾಯ್ಕ ಮಾತನಾಡಿ, ಶಿಬಿರದಲ್ಲಿ ಪಾಲ್ಗೊಂಡಿರುವ ಹಿರಿಯ ಅಧಿಕಾರಿಗಳ ಅನುಭವವನ್ನು ಬಳಸಿಕೊಂಡು ಗುರಿ ತಲುಪುವಂತೆ ಕರೆ ನೀಡಿದರು. ವೇದಿಕೆಯಲ್ಲಿ ಡೆಪ್ಯೂಟಿ ಪಾಸ್‍ಪೋರ್ಟ ಆಫಿಸರ್ ರಾಜೇಶ ನಾಯ್ಕ, ಗೋವಾ ಡಿಸಿಎಫ್ ದಾಮೋದರ ಎ.ಟಿ., ನ್ಯಾಯಾಧೀಶ ರವಿ ನಾಯ್ಕ, ಭಾರತೀಯ ರೇಲ್ವೇ ಇಲಾಖೆಯ ಅಧಿಕಾರಿ ಡಾ.ಕಾರ್ತಿಕ್ ಹೆಗಡೆ ಕಟ್ಟಿ, ಡಿಎಫ್‍ಓ ಗಣಪತಿ ನಾಯ್ಕ, ಗೋವಾ ಕಸ್ಟಮ್ಸ್ ಇಲಾಖೆಯ ಡೆಪ್ಯೂಟಿ ಕಮಿಷನರ್ ಪರಿಣತಿ ಸುನಕರ್, ಉಡುಪಿ ಸಹಾಯಕ ಆಯುಕ್ತೆ ಶಿಲ್ಪಾ ನಾಗ್, ಗೋವಾ ವಿಮಾನ ನಿಲ್ದಾಣದ ಕಸ್ಟಮ್ಸ್ ಮತ್ತು ಕೇಂದ್ರ ಎಕ್ಸೈಜ್ ಉಪ ಆಯುಕ್ತ ರಾಘವೇಂದ್ರ ರಾಯ್ಕರ್, ವಿನೋದ ಜಿ.ಕೆ., ಕೌರವ ಜೈನ್, ಚೇತನ್, ಮಾದೇಶ ಬೆಂಗಳೂರು, ಡಿ.ಸಿ.ಲಿಂಗಣ್ಣ, ಜೆ.ಡಿ.ನಾಯ್ಕ ಅಭಿಮಾನಿ ಬಳಗದ ಅಧ್ಯಕ್ಷ ನಾಗೇಶ ದೇವಡಿಗ, ಅಣ್ಣಪ್ಪ ಗುಳ್ಳರಿ, ನಿಚ್ಚಮಕ್ಕಿ ಶ್ರೀ ವೆಂಕಟ್ರಮಣ ದೇವಸ್ಥಾನದ ಅಧ್ಯಕ್ಷ ಎಮ್.ಆರ್.ನಾಯ್ಕ ಉಪಸ್ಥಿತರಿದ್ದರು. ಕಸಾಪ ಅಧ್ಯಕ್ಷ ಗಂಗಾಧರ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಧರ ಶೇಟ್ ಸ್ವಾಗತಿಸಿದರು. ಮಂಜುಳಾ ಶಿರೂರು ಕಾರ್ಯಕ್ರಮ ನಿರೂಪಿಸಿದರು. 

Read These Next

ಗೊಂದಲಗಳ ನಡುವೆ ಮುಂದೂಡಲ್ಪಟ್ಟ ಪುರಸಭೆ ವ್ಯಾಪ್ತಿಯ ವಿವಿಧ ಮಾರುಕಟ್ಟೆಗಳ ಹರಾಜು ಪ್ರಕ್ರಿಯೆ

ಭಟ್ಕಳ: ಇಲ್ಲಿನ ಪುರಸಭೆ ಅಧ್ಯಕ್ಷ ಮುಹಮ್ಮದ್ ಸಾದಿಕ್ ಮಟ್ಟಾ ರವರ ಅಧ್ಯಕ್ಷತೆಯಲ್ಲಿ ಪುರಸಭೆ ವ್ಯಾಪ್ತಿಯ ವಿವಿಧ ಮಾರ್ಕೇಟಗಳ ಹರಾಜು ...

ಶುಕ್ರವಾರದ ನಮಾಝ್ ನಲ್ಲಿ ಮುಸ್ಲಿಮ್ ಸಮುದಾಯದಿಂದ ಹುತಾತ್ಮ ಯೋಧರಿಗಾಗಿ ವಿಶೇಷ ಪ್ರಾರ್ಥನೆ ​​​​​​​

ಉಡುಪಿ: ಕಾಶ್ಮೀರದ ಪುಲ್ವಾಮ ಜಿಲ್ಲೆಯ ಅವಂತಿಪೋರದಲ್ಲಿ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಯೋಧರಿಗಾಗಿ ಗಂಗೊಳ್ಳಿ ...

ಉಗ್ರನೊಂದಿಗೆ ರಾಹುಲ್ ಫೋಟೊ; ವಿಕೃತ ಮನಸ್ಸಿನ ಕಿಡಿಗೇಡಿಗಳ ಕೃತ್ಯ;ಯೋಧರ ಬಲಿದಾನದಲ್ಲೋ ರಾಜಕೀಯ

ಹೊಸದಿಲ್ಲಿ: ನಿನ್ನೆ ಪುಲ್ವಾಮಾದಲ್ಲಿ ಭಯೋತ್ಪಾದಕ ದಾಳಿ ನಡೆದು 40 ಸೈನಿಕರು ಹುತಾತ್ಮರಾಗಿರುವ ಘಟನೆ ದೇಶವನ್ನೇ ಬೆಚ್ಚಿ ಬೀಳಿಸಿರುವ ...

ಹವಾಮಾನ ಬದಲಾವಣೆ ಮತ್ತು ಬಡವರು

ಹವಾಮಾನ ಬದಲಾವಣೆಯು ಒಂದು ತುರ್ತುಸ್ಥಿತಿಯನ್ನೇ ಸೃಷ್ಟಿಸಿದ್ದು ಈ ಭೂಮಿಗೆ ಮತ್ತು ಇದರ ಮೇಲೆ ವಾಸಿಸುತ್ತಿರುವ ಮಾನವ, ಸಸ್ಯ ಮತ್ತು ...