ಕಾಡಾನೆಗಳು ನುಗ್ಗಿ ಬತ್ತದ ಪೈರು ನಾಶ

Source: sonews | By Staff Correspondent | Published on 2nd November 2018, 12:18 AM | Coastal News | Don't Miss |

ಮುಂಡಗೋಡ : ಕಾಡನೆಯ ದಾಳಿಯಿಂದ ಬೆಳೆದು ನಿಂತ ಪೈರು ನಾಶವಾದ ಘಟನೆ ತಾಲೂಕಿನ ಗುಂಜಾವತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗ್ರಾಮಗಳಲ್ಲಿ ಸಂಭವಿಸಿದೆ
 ಕಾಡಾನೆಯ ಹಿಂಡು ನುಗ್ಗಿ ಒಂದು ಎಕರೆ ಭತ್ತದ ಬೆಳೆ ನಾಶ ಮಾಡಿದೆ ಎಂದು ಅರಣ್ಯ ಇಲಾಖೆಯವರಿಂದ ಮಾತು ಕೇಳಿಬಂದಿದೆ. 

ಕಳೆದ ಕೆಲವು ದಿನಗಳಿಂದ  ಎರಡು ಗಂಡಾನೆ, ಎರಡು ಹೆಣ್ಣಾನೆ ಮತ್ತು ಎರಡು ಮರಿಯಾನೆಗಳ ಹಿಂಡು ಗುಂಜಾವತಿ ಉಪವಲಯದ ಕಾಡಿನ ಅಂಚಿನಲ್ಲಿರುವ ಮೈನಳ್ಳಿ, ಗುಂಜಾವತಿ, ಗೊದನಾಳ, ಕಳಕಿಕಾರ, ಬಸನಾಳ ಮತ್ತು ಉಗ್ಗಿನಕೇರಿ ಗ್ರಾಮಗಳ ಹೊಲಗಳಲ್ಲಿ ನುಗ್ಗಿ ಅಡಿಕೆ, ಭತ್ತ ಮತ್ತು ವಿವಿಧ ಬೆಳೆ ಹಾನಿ ಮಾಡಿ ಹಲವು ರೈತರ ಬೆಳೆಯನ್ನು ನಾಶ ಪಡಿಸಿವೆ  ಮತ್ತೆ ಬುಧವಾರ  ಬೆಳಗಿನ ಜಾವ ಗೊದನಾಳ, ಕಳಕಿಕಾರ, ಮತ್ತು ಕುದುರೆನಾಳದ ಭಾಗದ ರೈತರ ಜಮೀನುಗಳಲ್ಲಿ ನುಗ್ಗಿದ್ದ ಕಾಡಾನೆಯ ಹಿಂಡು ಒಂದು ಎಕರೆ ಭತ್ತದ ಬೆಳೆ ನಾಶ ಮಾಡಿವೆ. 

ಕಳಕಿಕಾರ ಗ್ರಾಮದ ಢಾಕ್ಲು ನಾನಾ ಪಾಟೀಲ ಎಂಬ ರೈತನ ಗದ್ದೆಗೆ ನುಗ್ಗಿದ ಕಾಡಾನೆಗಳು ಸುಮಾರು ಒಂದು ಎಕರೆಯಷ್ಟು ಭತ್ತದ ಗದ್ದೆಯನ್ನು ತಿಂದು ತುಳಿದು ನಾಶ ಮಾಡಿವೆ. ಅಲ್ಲದೆ ಮತ್ತೊರ್ವ ರೈತನ ಗದ್ದೆಯಲ್ಲಿದ್ದ ಹುಲ್ಲಿನ ಬಣವೆಯನ್ನು ಧ್ವಂಸ ಮಾಡಿವೆ. ಇದರಿಂದ ರೈತರು ಕಂಗಾಲಾಗಿದ್ದು ಸುತ್ತ ಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿ ಮನೆಮಾಡಿದೆ.

ಪ್ರತಿ ವರ್ಷವೂ  ಫಸಲು ಬೆಳೆದು ನಿಂತು ಇನ್ನೆನು ರೈತರು ಫಸಲನ್ನು ಕಟಾವು ಮಾಡಬೇಕೆನ್ನುವಷ್ಟರಲ್ಲಿ ಕಾಡಾನೆಗಳ ಹಿಂಡು ಲಗ್ಗೆ ಇಟ್ಟು ತಿಂದು ತುಳಿದು ನಾಶಪಡಿಸುತ್ತಾ ಹೋಗುತ್ತಿವೆ. ಸಾಲಸೋಲ ಮಾಡಿ ಬೆಳೆಯನ್ನು ತೆಗೆದು ಮಾರಿ ಸಾಲ ತೀರಿಸಬೇಕು ಎಂದು ಕನಸು ಕಾಣುತ್ತಿರುವ ರೈತನ ಕನಸು ನುಚ್ಚುನೂರು ಮಾಡುತ್ತಿವೆ ಆನೆಗಳು  ಅರಣ್ಯ ಇಲಾಖೆ ಕಾಡಾನೆಗಳಿಂದ ಬೆಳೆ ರಕ್ಷಿಸುವ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಅವಶ್ಯವಾಗಿದೆ.

Read These Next

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...