ಒರ್ಲಾಂಡೊ ದುರಂತ: ದಾಳಿಕೋರನ ಪತ್ನಿಗೆ ದಾಳಿ ಬಗ್ಗೆ ಗೊತ್ತಿತ್ತು!

Source: S O News service | By I.G. Bhatkali | Published on 16th June 2016, 3:09 PM | Global News |

ಒರ್ಲಾಂಡೊ: ಅಮೆರಿಕದ ಒರ್ಲಾಂಡೊದಲ್ಲಿರುವ ಸಲಿಂಗಿಗಳ ನೈಟ್‌ ಕ್ಲಬ್‌ನಲ್ಲಿ ಗುಂಡಿನ ದಾಳಿ ನಡೆಸಿದ್ದ ದಾಳಿಕೋರನ ಪತ್ನಿಗೆ ತನ್ನ ಗಂಡನ ಯೋಜನೆಯ ಬಗ್ಗೆ ತಿಳಿದಿತ್ತು ಎಂದು ಅಮೆರಿಕದ ಕಾನೂನು ಜಾರಿ ಸಂಸ್ಥೆಯ ಮೂಲಗಳು ಹೇಳಿವೆ.

ಈ ಮಾಹಿತಿಯನ್ನಾಧಾರಿಸಿ ದಾಳಿಕೋರ ಒಮರ್ ಮತೀನ್ ಅವರ ಪತ್ನಿ ನೂರ್ ಸಲ್ಮಾನ್ ಅವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಬಲ್ಲಮೂಲಗಳು ಹೇಳಿರುವುದಾಗಿ ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈ ದಾಳಿಯಲ್ಲಿ 49 ಮಂದಿ ಸಾವಿಗೀಡಾಗಿದ್ದರು. ಪ್ರಸ್ತುತ ಘಟನೆಯ ಬಗ್ಗೆ ಮಾತನಾಡಿದ ಅಮೆರಿಕದ ಸೆನೆಟರ್  ಆಂಗಸ್ ಕಿಂಗ್ ಅವರು, ಮತೀನ್ ಅವರ ಪತ್ನಿಗೆ ಎಲ್ಲವೂ ತಿಳಿದಿತ್ತು. ಆಕೆಗೆ ಗೊತ್ತಿರುವ ವಿಷಯಗಳನ್ನು ನಮ್ಮ ಜತೆ ಹಂಚಿಕೊಳ್ಳಲು ಆಕೆ ಸಿದ್ಧರಾಗಿದ್ದಾರೆ ಎಂದು ಹೇಳಿದ್ದಾರೆ.
ಭಾನುವಾರ ನೈಟ್‍ಕ್ಲಬ್ ಮೇಲೆ ದಾಳಿ ನಡೆಸಿದ್ದ ಮತೀನ್ ದಾಳಿಯ ವೇಳೆ ಪೊಲೀಸರ ಗುಂಡಿಗೆ ಬಲಿಯಾಗಿದ್ದರು.

Read These Next

ಮೋದಿ ಸರಕಾರದ ವಿರುದ್ಧ ದಿಗ್ಬಂಧನ ವಿಧಿಸಿ ಅಮೆರಿಕ ಸಂಸತ್ತಿಗೆ ವಿದ್ಯಾರ್ಥಿ ಸಂಘಟನೆಯ ಪತ್ರ

ವಾಷಿಂಗ್ಟನ್: ನರೇಂದ್ರ ಮೋದಿ ನೇತೃತ್ವದ ಭಾರತ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆ ಅಕ್ರಮ ಮತ್ತು ...

ಬ್ರಿಟನ್ : ಕನ್ಸರ್ವೇಟಿವ್ ಪಾರ್ಟಿಯ  ಹೊಸ ನಾಯಕರಾಗಿ ಬೋರಿಸ್ ಜಾನ್ಸನ್ ಪ್ರಧಾನಿಯಾಗಿ ಬುಧವಾರ ಅಧಿಕಾರ ಸ್ವೀಕರ

ಲಂಡನ್ : ಬ್ರಿಟನ್ ದೇಶದ ಕನ್ಸರ್ವೇಟಿವ್ ಪಾರ್ಟಿಯ  ಹೊಸ ನಾಯಕರಾಗಿ ಬೋರಿಸ್ ಜಾನ್ಸನ್ ಅವರು ಆಯ್ಕೆಯಾಗಿದ್ದು, ಮುಂದಿನ ಪ್ರಧಾನಿಯಾಗಿ ...