ಹೈಟೆಕ್ ಬಸ್ ಸ್ಟ್ಯಾಂಡ್  ಆಗುವುದು ಯಾವಾಗ?

Source: sonews | By Staff Correspondent | Published on 14th December 2018, 3:58 PM | Coastal News | Don't Miss |

ಮುಂಡಗೋಡ : ಮುಂಡಗೋಡಗೆ ಹೈಟೆಕ್ ಬಸ್ ಸ್ಟ್ಯಾಂಡ್ ಗೆ ದೇವರು ಕೊಟ್ಟರು ಪೂಜಾರಿ ಕೊಡಲಿಲ್ಲ ಎನ್ನುವಂತಾಗಿದೆ.

ಸುಮಾರು 3ಕೋಟಿ 98 ಲಕ್ಷ ರೂ ಗಳಲ್ಲಿ ಹೈಟೇಕ್ ಬಸ್ ನಿಲ್ದಾಣಕ್ಕೆ ಶಂಕು ಸ್ಥಾಪನೆಯಾಗಿ 9 ತಿಂಗಳು ಗತಿಸುತ್ತಾಬಂದರೂ ಬಸ್ ಸ್ಟ್ಯಾಂಡ್ ನ ಕಾಮಗಾರಿ ನಡೆಯದೇ ಇರುವುದು ನೋಡಿದರೆ ಹೈಟೇಕ್  ಬಸ್ ಸ್ಟ್ಯಾಂಡ್ ಮುಂಡಗೋಡ ದಿಂದ ದೂರವಾಗುತ್ತಿದಿಯೇ?

ಬಸ್ ಸ್ಟ್ಯಾಂಡ್ ಗೆ ಶಂಕುಸ್ಥಾಪನೆಯಾದ ಕೆಲವೆ ದಿನಗಳಲ್ಲಿ ಇಲಾಖೆ ಬಸ್‍ಸ್ಟ್ಯಾಂಡಿನ ಪಾಶ್ರ್ವಭಾಗದಲ್ಲಿ ದೊಡ್ಡ ಹೊಂಡದಂತ ತಗ್ಗು ತಗೆದು  ಬಸ್ ಸ್ಟ್ಯಾಂಡ್  ಕಾಮಗಾರಿ ನಡೆದೆ ಬಿಟ್ಟಿತ್ತು ಎನ್ನುವ ಹಾಗೆ ಬಿಂಬಿಸಿತು. ಸಾರ್ವಜನಿಕರ ದೂರಗಳಿಗೆ ತೆಗೆದಿರುವ ಹೊಂಡ ಮುಚ್ಚಲಾಯಿತು.

ಬಸ್ ಸ್ಟ್ಯಾಂಡ್ ನ ನಿರ್ಮಾಣದ ಕುರಿತು ಪತ್ರಿಕೆಗಳು ಬರೆದವು ಜಾಗೃತರಾದ ಶಾಸಕರು ಅಕ್ಟೋಬರ್ 24 ರಂದು ಬಸ್ ಸ್ಟ್ಯಾಂಡ್ ಗೆ ಭೇಟಿ ನೀಡಿ ಇಲಾಖೆಯ ಇಂಜನಿಯರ  ಹಾಗೂ ಗುತ್ತಿಗೆ ಪಡೆದ ಗುತ್ತಿಗೆದಾರ ರಿಗೆ ಬಸ್ ಸ್ಟ್ಯಾಂಡ್ ಶೀಘ್ರ ಕಾಮಗಾರಿ ನಡೆಸಿರಿ ಎಂದು ಅಜ್ಞಾಪಿಸಿದರು.ಇಲಾಖೆ  ಆ ಮಾತಿನಂತೆ ಬಸ್ ಸ್ಟ್ಯಾಂಡ್ ಗೆ ಸಂಬಂದ ಪಟ್ಟ ಸ್ಥಳದಲ್ಲಿ ಇದ್ದಂತಹ ಕೆಲವು ಕಟ್ಟಡಗಳನ್ನು ಧರಾಶಾಹಿ ಮಾಡಿತು  10 ದೊಡ್ಡ ದೊಡ್ಡ ತಗ್ಗು ತಗೆಯಿತು ನಂತರ ಕೈ ಕಟ್ಟಿ ಕುಳಿತು ಬಿಟ್ಟಿತು. ತಗ್ಗು ತಗೆದು  1 1/2 ತಿಂಗಳು ಗತಿಸುತ್ತಾ ಬಂದರೂ ಸಹಿತ ಬಸ್ ಸ್ಟ್ಯಾಂಡ ಕಾಮಗಾರಿಯ ಸೂಚನೆ ದೊರೆಯಲಿಲ್ಲ ಇಲಾಖೆ ತೆಗೆದಿರುವ ತೆಗ್ಗುಗಳಿಂದ ಶೌಚಾಲಯಕ್ಕೆ ಹೋಗುವ ಪ್ರಯಾಣಿಕರು ಜೀವವನ್ನು ಕೈ ಯಲ್ಲಿ ಹಿಡಿದುಕೊಂಡು ಹೋಗುವ ಪರಿಸ್ಥಿತ ನಿರ್ಮಾಣವಾಗಿದೆ. ಶೌಚಕ್ಕೆ ಹೋಗಿ ಬರುವ ಸಂದರ್ಭದಲ್ಲಿ ಬಿದ್ದಿರುವ ಉದಾಹರಣೆಗಳಿವೆ.

ಪ್ರಯಾಣಿಕರಿಗೆ ತೊಂದರೆಕೊಡುತ್ತಿರುವ ಇಲಾಖೆಗೆ ದೂರದೃಷ್ಟಿ ಇಲ್ಲವೆ ಎನ್ನುವ ಪ್ರಶ್ನೆ ಕಾಡುತ್ತಿದೆ. ಆ ತಗ್ಗುಗಳು ಹಾಗೆ ಉಳಿದರೆ ರಾತ್ರಿ ಹೊತ್ತಿನಲ್ಲಿ ಸಾರ್ವಜನಿಕರಿ ಇಲ್ಲವೆ ಪ್ರಾಣಿಗಳಿಗೆ ಲುಕ್ಷಾನ ಆಗುವುದಂತು ಸತ್ಯ ಎಂಬ ಮಾತು ಜನರಿಂದ ಕೇಳಿ ಬರುತ್ತಿದೆ. ಆ ತಗ್ಗುಗಳ ಸುತ್ತಲು ಯಾವುದೆ ಬೇಲಿಯಾಗಲಿ ಇಲ್ಲವೆ  ಸೂಚನಾ ಫಲಕವಾಗಲಿ ಹಾಕದೇ ಇರುವುದು ನೋಡಿದರೆ ಇಲಾಖೆಗೆ ಪ್ರಯಾಣಿಕರ ಕುರಿತು ಎಷ್ಟು ಕಾಳಜಿ ಇದೆ ಎಂದು ತೊರಿಸಿಕೊಡುತ್ತಿದೆ.

ಜನ ಪ್ರತಿನಿಧಿಗಳು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಬಸ್‍ಸ್ಟ್ಯಾಂಡ್ ನಿರ್ಮಾಣಕಾರ್ಯ ಯಾರಿಂದ ವಿಳಂಭವಾಗುತ್ತದೆ ಎನ್ನುವದನ್ನು  ಅರಿತುಕೊಳ್ಳುವುದು ಅವಶ್ಯವಾಗಿದೆ. ವಿಳಂಭಕ್ಕೆ ಕಾರಣರಾದವರ  ಮೇಲೆ ಕ್ರಮ ಜರುಗಿಸಲಿ  ಎನ್ನುವುದು ಸಾರ್ವಜನಿಕರಿಂದ ಮಾತು ಕೇಳಿ ಬರುತ್ತಿದೆ.

ನಾನು  ಬಸ್‍ಬಸ್ಟ್ಯಾಂಡ ನಿರ್ಮಿಸಲು ಉತ್ಸುಕನಾಗಿದ್ದೇನೆ. ಆದರೆ ಬಸ್ ಬಸ್ಟ್ಯಾಂಡ ನಿರ್ಮಿಸಲು ಹಳೆಯ ಕಟ್ಟಡಗಳು ತೆರವು ಮಾಡಿಕೊಡದೆ ಇದ್ದರೆ ಬಸ್‍ಸ್ಟ್ಯಾಂಡ ನಿರ್ಮಿಸುವುದಾದರು ಹೇಗೆ.ಮೋದಲು ಹಳೆಯ ಬಸ್ ಸ್ಟ್ಯಾಂಡ ತೆರವು ಮಾಡಿಕೊಡಲಿ ತೆರವು ಮಾಡಿಕೊಟ್ಟರೆ ನಮ್ಮ ಪರಿಕರಗಳನ್ನು ಇಡಲು ಅನುಕೂಲವಾಗುತ್ತಿದೆ. ಇಲಾಖೆಯು ಗುತ್ತಿಗೆದಾರನಿಗೆ ಸಹಕಾರ ಕೊಡುವುದು ಅಷ್ಟೇ ಮುಖ್ಯ,                     - ಪಾಟೀಲ ಗುತ್ತಿಗೆದಾರ

ಗುತ್ತಿಗೆದಾರರು ಹಳೆಯ ಕಟ್ಟಡಗಳನ್ನು ತೆರವು ಮಾಡಿಕೊಡಿ ಕೆಲಸ ಪ್ರಾರಂಭಿಸುತ್ತೇನೆ ಎಂದು ಹೇಳುತ್ತಿದ್ದಾರೆ. ಹಳೆಯ ಬಸ್‍ಸ್ಟ್ಯಾಂಡ ತೆರವು ಗೊಳಿಸಲು ಟೆಂಡರಕರೆದಿದ್ದೇವೆ ಯಾರು ಬಂದಿಲ್ಲಾ ಇನ್ನೇನು ಕೆಲವು ದಿನಗಳಲ್ಲಿ ಇಲಾಖೆಯಿಂದ ಬಸ್ ಸ್ಟ್ಯಾಂಡ ತೆರವು ಮಾಡಿಕೊಡುತ್ತೇವೆ ಕೆಲವು ದಿನಗಳಲ್ಲಿ ಬಸ್ ಸ್ಟ್ಯಾಂಡ ಕಾಮಗಾರಿ ಪ್ರಾರಂಭವಾಗುತ್ತದೆ.
-ಇಲಾಖೆ ಎಇಇ ಬೋರಯ್ಯ.


 

Read These Next

ಕರ್ನಾಟಕದ ಅನ್ನ ಉಂಡಿದ್ದೇನೆ, ಕರ್ಮಭೂಮಿಯ ಋಣ ತೀರಿಸಬೇಕು: ಡಾ.ಅಂಜಲಿ ನಿಂಬಾಳ್ಕರ್

ಕಾರವಾರ: ಕರ್ನಾಟಕದ ಅನ್ನ ಉಂಡಿದ್ದೇನೆ, ಕರ್ಮಭೂಮಿಯ ಋಣ ತೀರಿಸಬೇಕು. ಹಾಗಾಗಿ ಉತ್ತರ ಕನ್ನಡಕ್ಕಾಗಿ ಕೆಲಸ ಮಾಡುವೆ ಎಂದು ಕಾಂಗ್ರೆಸ್ ...

ಜೆಡಿಎಸ್ ಮತ ಬುಟ್ಟಿಗೆ ’ಕೈ’ ಹಾಕಿದ ಅಂಜಲಿ ತಾಯಿ ; ಪದ್ಮಶ್ರೀ ಪುರಸ್ಕೃತ ಸುಕ್ರಿ ಬೊಮ್ಮ ಗೌಡರ ಮನೆಗೆ ಭೇಟಿ

ಅಂಕೋಲಾ: ಉ.ಕ ಲೋಕಸಭಾ ಕ್ಷೇತ್ರದ ಅಂಕೋಲಾ, ಕುಮಟಾ ಹಾಗೂ ಹೊನ್ನಾವರ ತಾಲೂಕಿನಲ್ಲಿ ಹಾಲಕ್ಕಿ ಒಕ್ಕಲಿಗ ಸಮುದಾಯದ ಮತಗಳು ಹೆಚ್ಚಿನ ...

ಕುಂದಾಪುರ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ – ಓರ್ವ ಮಹಿಳೆ ಮೃತ್ಯು, ಇಬ್ಬರ ಸ್ಥಿತಿ ಗಂಭೀರ!

ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಇಂದು ಮಧ್ಯಾಹ್ನ ನಡೆದ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಓರ್ವ ಮಹಿಳೆ ಮೃತಪಟ್ಟು, ಇಬ್ಬರು ಗಂಭೀರ ...