ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ

Source: sonews | By sub editor | Published on 27th July 2018, 6:09 PM | Coastal News | Don't Miss |

ಭಟ್ಕಳ: ಕೇವಲ ವಿದ್ಯೆ ಸರ್ವಸ್ವವಲ್ಲ, ಜೀವನದಲ್ಲಿ ಸಾಧನೆ ಮಾಡಲು ಬದ್ಧತೆ, ಕಠಿಣ ಪರಿಶ್ರಮ, ಛಲ ಅತ್ಯವಶ್ಯಕ ಇವುಗಳಿದ್ದರೆ ಜೀವನದಲ್ಲಿ ಯಶಸ್ಸು ಸಾಧ್ಯ ಎಂದು ಶಿರೂರಿನ ಪ್ರಭು ಟ್ರೇಡರ್ಸ್ ಮಾಲೀಕ ರವೀಂದ್ರ ಪ್ರಭು ಹೇಳಿದರು. 

ಅವರು ನಗರದ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡುತ್ತಿದ್ದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಟ್ಕಳ ಎಜ್ಯುಕೇಶನ್ ಟೃಸ್ಟ ಅಧ್ಯಕ್ಷ ಡಾ|| ಸುರೇಶ ವಿ. ನಾಯಕ್ ವಹಿಸಿದ್ದರು. 

ಕಾಲೇಜಿನ ಹಳೆವಿದ್ಯಾರ್ಥಿನಿ ಧನಶ್ರೀ ಪ್ರಭು ಮಾತನಾಡಿ ಚಂಚಲ ಮನಸ್ಸಿನಿಂದ ನಮ್ಮ ಗುರಿಯನ್ನು ಬದಲಾಯಿಸಬಾರದು, ಪೂರ್ವ ನಿರ್ಧಾರಿತ ಗುರಿಯ ಕಡೆಗೆ ಶೃದ್ಧೆಯೊಂದಿಗೆ ನಡೆದು ಯಶಸ್ವಿಗಳಾಗಬೇಕು ಎಂದು ಕರೆ ನೀಡಿದರು. 

ಪ್ರಾಂಶುಪಾಲ ನಾಗೇಶ ಎಮ್. ಭಟ್ ಮಾತನಾಡಿ ಪ್ರಸ್ತುತ ಕಾರ್ಪೋರೇಟ್ ಪ್ರಪಂಚದಲ್ಲಿ ಉದ್ಯೋಗಾಕಾಂಕ್ಷಿಗಳು ತೀವ್ರ ಪೈಪೋಟಿಯನ್ನು ಎದುರಿಸುತ್ತಿದ್ದಾರೆ, ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಇಂತಹ ಪ್ಯಪೋಟಿಯನ್ನು ಎದುರಿಸಲು ವಿದ್ಯಾರ್ಥಿಗಳನ್ನು ಸರ್ವ ಸನ್ನದ್ಧರನ್ನಾಗಿ ಮಾಡುವ ಗುರಿ ಹೊಂದಲಾಗಿದೆ ಎಂದರು. 

ಭಟ್ಕಳ ಎಜ್ಯುಕೇಶನ್ ಟೃಸ್ಟ್‍ನ ಟೃಸ್ಟೀ ಮ್ಯಾನೇಜರ್ ರಾಜೇಶ ನಾಯಕ್, ಶಿಕ್ಷಣ ತಜ್ಞ ಬಿ.ಆರ್.ಕೆ. ಮೂರ್ತಿ, ಗುರು ಸುಧೀಂದ್ರ ಬಿ.ಸಿ.ಏ. ಕಾಲೇಜಿನ ಪ್ರಾಂಶುಪಾಲ  ಶ್ರೀನಾಥ್ ಪೈ ಉಪಸ್ಥಿತರಿದ್ದರು. 

ಈ ಸಂದರ್ಭದಲ್ಲಿ ಈ ಬಾರಿಯ ಸಿ.ಎ. ಪರೀಕ್ಷೆಯಲ್ಲಿ ಉತ್ತೀರ್ಣಳಾಗಿ ಭಟ್ಕಳದ ಪ್ರಥಮ ಮಹಿಳಾ ಚಾರ್ಟರ್ಡ ಅಕೌಂಟೆಂಟ್ ಎನ್ನುವ ಖ್ಯಾತಿಗೆ ಭಾಜನರಾದ ಇದೇ ಕಾಲೇಜಿನ ಹಳೆ ವಿದ್ಯಾರ್ಥಿನಿ ಧನಶ್ರೀ ಪ್ರಭು ಅವರನ್ನು ಸನ್ಮಾನಿಸಲಾಯಿತು. 

ಉಪನ್ಯಾಸಕ ಫಣಿಯಪ್ಪಯ್ಯ ಹೆಬ್ಬಾರ್ ವರ್ಷದ ಶೈಕ್ಷಣಿಕ ಕಾರ್ಯಕ್ರಮಗಳ ಮುನ್ನೋಟ ನೀಡಿದರು. ಉಪನ್ಯಾಸಕ ದೇವೇಂದ್ರ ಕಿಣಿ ಸ್ವಾಗತಿಸಿದರು. ನಾಗೇಶ ಪ್ರಭು ವಂದಿಸಿದರು. 
 

Read These Next

ಬಿಜೆಪಿ ಹಿಂದುಳಿದವರನ್ನು ತುಳಿಯುವ ಸಂಚು ರೂಪಿಸಿದೆ, ಭಟ್ಕಳದಲ್ಲಿ ಬಿಜೆಪಿ ವಿರುದ್ಧ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ

ಬಿಜೆಪಿ ಮೇಲ್ನೋಟಕ್ಕೆ ಅಲ್ಪಸಂಖ್ಯಾತರನ್ನು ವಿರೋಧಿಸುವ ಪಕ್ಷವಾಗಿ ಮೇಲ್ನೋಟಕ್ಕೆ ಕರೆಯಿಸಿಕೊಳ್ಳುತ್ತಿದೆಯಾದರೂ, ವಾಸ್ತವಾಗಿ ...