ಗಿಡಗಳನ್ನು ಬೆಳೆಸುವ ಮೂಲಕ ನೀರಿನ ಸಂರಕ್ಷಣೆ ಸಾಧ್ಯ: ರಾಜು ಕೆ

Source: so news | By Manju Naik | Published on 23rd March 2019, 12:07 AM | Coastal News | Don't Miss |

 

ಉಡುಪಿ: ಈ ವರ್ಷ ಕರ್ನಾಟಕ ರಾಜ್ಯವನ್ನು ಜಲ ವರ್ಷ ಎಂದು ಘೋಷಣೆ ಮಾಡಿದೆ, ಜಲ ಅಮೂಲ್ಯವಾಗಿದ್ದು ಅದರ ಸಂರಕ್ಷಣೆ ಮಾಡಬೇಕು. ಕರಾವಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಿದ್ದು, ನೀರಿನ ಸಂರಕ್ಷಣೆ ಆಗಬೇಕಿದೆ. ಗಿಡಗಳನ್ನು ನೆಡುವುದು ಮಾತ್ರವಲ್ಲದೆ ಈ ಮೂಲಕ ಜಲವನ್ನು ಸಂರಕ್ಷಣೆ ಕೂಡಾ ಆಗಬೇಕು ಎಂದು ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ರಾಜು.ಕೆ ಹೇಳಿದರು. 
ಅವರು ಶುಕ್ರವಾರ ತಾಲೂಕು ಪಂಚಾಯತ್ ವಸತಿ ಗೃಹದ ಮುಂಬಾಗ ನಡೆದ ವಿಶ್ವಜಲ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕರಾವಳಿ ಪ್ರದೇಶವು ಅತೀ ಹೆಚ್ಚು ಮಳೆ ಬೀಳುವ ಪ್ರದೇಶವಾಗಿದ್ದು, ಜಲವನ್ನು ಸಂರಕ್ಷಣೆ ಮಾಡುವ ಮೂಲಕ ಮುಂದಾಗುವ ನೀರಿನ ಸಮಸ್ಯೆಯನ್ನು ತಡೆಯಬಹುದು. ಗಿಡಗಳನ್ನು ಬೆಳೆಸುವ ಮೂಲಕ ಪರಿಸರವನ್ನು ಹಸಿರಾಗಿ ಮಾಡಬೇಕು ಎಂದರು. 
ತಾಲೂಕು ಪಂಚಾಯತ್ ವ್ಯವಸ್ಥಾಪಕ ರಾಮದಾಸ್ ಜಲ ಸಂರಕ್ಷಣೆಯ ಪ್ರತಿಜ್ಞಾ ವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ಉಡುಪಿ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳ ಕೆ., ಬಿ.ಆರ್.ಸಿಯ ಸಮನ್ವಯಾಧಿಕಾರಿ ಉಮಾ ಪಿ, ಬ್ರಹ್ಮಾವರ ಸಿಡಿಪಿಒ ಶೋಭಾ, ಉಡುಪಿ ಸಿಡಿಪಿಒ ವೀಣಾ, ಸಾಮಾಜಿಕ ಕಾರ್ಯಕರ್ತ ಪ್ರಭಾಕರ ಉಪಸ್ಥಿತರಿದ್ದರು.

Read These Next

ಮಾಜಿ ಶಾಸಕ ಮಾಂಕಾಳರ ನೆರವಿನಿಂದ ಭಟ್ಕಳದಿಂದ ಓಡಿಸ್ಸಾ ಕ್ಕೆ ಪ್ರಯಾಣ ಬೆಳೆಸಿದ 70 ಮೀನುಗಾರರು

ಭಟ್ಕಳ: ಸೇವಾ ಸಿಂಧು ಆ್ಯಫ್‍ನಲ್ಲಿ ಹೆಸರು ನೊಂದಾಯಿಸಿ ತಮ್ಮ ರಾಜ್ಯಕ್ಕೆ ಮರಳು  ಕಾಯುತ್ತಿದ್ದ ಒಡಿಸ್ಸಾದ 70 ಮೀನುಗಾರರು ಸೋಮವಾರದಂದು ...