ಖಾದಿ ಗ್ರಾಮೋದ್ಯೋಗದಿಂದ ದಂಡದ ಬಡ್ಡಿ ಮನ್ನಾ

Source: sonews | By Staff Correspondent | Published on 28th September 2018, 3:53 PM | Coastal News |

ಕಾರವಾರ: ರಾಷ್ಟ್ರಪಿತ ಮಹಾತ್ಮಾ ಗಾಂಧಿಜೀಯವರ 150ನೇ ವರ್ಷದ ದಿನಾಚರಣೆಯ ಅಂಗವಾಗಿ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯಿಂದ ಸಮೂಹ ಬ್ಯಾಂಕ್ ಸಾಲ (ಸಿಬಿಸಿ) ಯೋಜನೆಯಡಿ ಧನಸಹಾಯ ಪಡೆದಿರುವ ಖಾದಿ ಮತ್ತು ಗ್ರಾಮೋದ್ಯೋಗ ಘಟಕಗಳ ಫಲಾನುಭವಿಗಳು/ಸಂಘ/ಸಂಸ್ಥೆಗಳು ಸಾಲ ಮತ್ತು ಸಾಮಾನ್ಯ ಬಡ್ಡಿಯನ್ನು ದಿನಾಂಕ: 15-08-2018 ರಿಂದ 06 ತಿಂಗಳ ಅವಧಿಯಲ್ಲಿ (ದಿನಾಂಕ: 15-08-2018 ರಿಂದ 14-02-2019ರವರೆಗೆ) ಮರುಪಾವತಿಸಿದ್ದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗವು ದಂಡದ ಬಡ್ಡಿಯನ್ನು ಮನ್ನಾ ಮಾಡುವುದು.

ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯಿಂದ ಸಮೂಹ ಬ್ಯಾಂಕ್ ಸಾಲ (ಸಿಬಿಸಿ) ಯೋಜನೆಯಡಿ ಧನಸಹಾಯ ಪಡೆದಿರುವ ಸಂಘ/ಸಂಸ್ಥೆ/ವೈಯಕ್ತಿಕ ಫಲಾನುಭವಿಗಳು ಸದರಿ ಯೋಜನೆಯ ಸದುಪಯೋಗ ಪಡಿಸಿಕೊಂಡು ಲಾಭ ಪಡೆದುಕೊಳ್ಳಬೇಕು ಹಾಗೂ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08382-226506 / 9480825632 ಗೆ ಸಂಪರ್ಕಿಸುವಂತೆ ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಅರ್ಜಿ ಆಹ್ವಾನ
ಕಾರವಾರ :ಜಿಲ್ಲಾ ಬಾಲಭವನ ಸೊಸೈಟಿಯಲ್ಲಿ ಸಂಚಿತ ಗೌರವಧನದ ಆಧಾರದ ಮೇಲೆ ತಾತ್ಕಾಲಿಕ ಹುದ್ದೆಗಳಿಗೆ ಅರ್ಜಿಗಳನ್ನು ಅಹ್ವಾನಿಸಲಾಗಿದೆ.

ಕಾರ್ಯಕ್ರಮ ಸಂಯೋಜಕರು ಹುದ್ದೆಗೆ     ಯಾವುದೇ ವಿಷಯದಲ್ಲಿ ಪದವಿ ವಿದ್ಯಾರ್ಹತೆ  ಪಡೆದವರಾಗಿರಬೇಕು. ಕಾರ್ಯಕ್ರಮಗಳ ಸಂಯೋಜನೆ, ನಿರೂಪಣೆಯಲ್ಲಿ ಕನಿಷ್ಠ ಒಂದು ವರ್ಷದ ಅನುಭವ, ಸಂಗೀತ, ಸಾಹಿತ್ಯ, ನಾಟಕ ಕ್ಷೇತ್ರಗಳಲ್ಲಿ  ಅನುಭವ ಹೊಂದಿರಬೇಕು M.S.Office ಬಳಕೆಯಲ್ಲಿ ಪ್ರಾವೀಣ್ಯತೆ ಹೊಂದಿರಬೇಕು. ಮಾಹೆಯಾನ 15 ಸಾವಿರ ಗೌರವಧನ ನೀಡಲಾಗುವುದು.

ಕಚೇರಿ ಸಹಾಯಕರು ಹುದ್ದೆಗೆ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು. ವಾಣಿಜ್ಯ ವಿಭಾಗದಲ್ಲಿ ಪದವಿ ಪಡೆದವರಿಗೆ ಆದ್ಯತೆ ನೀಡಲಾಗುವುದು. ಸರ್ಕಾರಿ/ಸ್ವಯಂ ಸಂಸ್ಥೆಗಳಲ್ಲಿ ಕನಿಷ್ಠ 1 ವರ್ಷ ಸೇವೆ ಸಲ್ಲಿಸಿದ ಅನುಭವ ಹಾಗೂ ಡಾಟಾ ಎಂಟ್ರಿ M.S.Office ಬಳಕೆಯಲ್ಲಿ ಪ್ರಾವೀಣ್ಯತೆ ಹೊಂದಿರಬೇಕು. ಮಾಹೆಯಾನ 10 ಸಾವಿರ ಗೌರವಧನ ನೀಡಲಾಗುವುದು
ಈ ಹಿಂದೆ ಉತ್ತಮವಾಗಿ ಕೆಲಸ ನಿರ್ವಹಿಸಿರುವ ಬಗ್ಗೆ ದಾಖಲೆ ಹೊಂದಿರುವ ಹಾಗೂ ಸಂಬಂಧಪಟ್ಟ ಹುದ್ದೆಯಲ್ಲಿ ಕೆಲಸ ನಿರ್ವಹಿಸಿದ ಅನುಭವವುಳ್ಳ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸುವುದು. ಉತ್ತಮವಾಗಿ ಪತ್ರ ವ್ಯವಹಾರ ನಿರ್ವಹಿಸಬಲ್ಲ ಹಾಗೂ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಓದುವ, ಬರೆಯುವ, ಮಾತನಾಡುವ, ಗಣಕಯಂತ್ರದಲ್ಲಿ ಪರಿಣಿತ ಹೊಂದಿರುವ ಹಾಗೂ ಕಾರ್ಯಕ್ರಮ ಸಂಯೋಜನೆ ಮತ್ತು ನಿರೂಪಣೆಯಲ್ಲಿ ಅನುಭವವುಳ್ಳ, ಅಭ್ಯರ್ಥಿಗಳಿಗೆ ಅವಕಾಶವಿದ್ದು ನೇಮಕಾತಿಯು 11 ತಿಂಗಳ ಅವಧಿಯದಾಗಿರುತ್ತದೆ. 

ಆಸಕ್ತ ಅಭ್ಯರ್ಥಿಗಳು ತಮ್ಮ ರೆಸ್ಯುಮ್ ಮತ್ತು ಎಲ್ಲಾ ದಾಖಲೆಗಳೊಂದಿಗೆ ಅಕ್ಟೋಬರ 10 ರೊಳಗೆ ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಮಲಾಕರ ರೋಡ, ಕಾರವಾರ-581301 ಇವರಿಗೆ ಸಲ್ಲಿಸತಕ್ಕದ್ದು. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...