ಆ.31ರಂದು ಸ್ಥಳೀಯ ಸಂಸ್ಥೆಗಳಿಗೆ ಮತದಾನ: ಡಿಸಿ

Source: sonews | By Staff Correspondent | Published on 18th August 2018, 5:29 PM | Coastal News |

ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಆರಂಭವಾಗಿರುವ ವಿವಿಧ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಪ್ರಕ್ರಿಯೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಜಪೇಯಿರವರ ನಿಧನ ಪ್ರಯುಕ್ತ ನಾಮಪತ್ರ ಸಲ್ಲಿಕೆ ಕೊನೆ ದಿನಾಂಕ 18-08-2018ರಂದು ಒಂದು ದಿನ ವಿಸ್ತರಿಸಿದ್ದು ಮತದಾನ 31-08-2018ರಂದು ನಡೆಯಲಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.
    

ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಶಿರಸಿ, ದಾಂಡೇಲಿ ನಗರಸಭೆ, ಅಂಕೋಲ, ಕುಮಟ, ಹಳಿಯಾಳ ಪುರಸಭೆ ಹಾಗೂ ಯಲ್ಲಾಪುರ, ಮುಂಡಗೋಡ ಪಟ್ಟಣ ಪಂಚಾಯ್ತಿಗಳ ನಗರ ಸ್ಥಳೀಯ ಸಂಸ್ಥೆಗಳಿಗೆ ಜಿಲ್ಲಾಧಿಕಾರಿಗಳು ಪರಿಷ್ಕøತ ವೇಳಾಪಟ್ಟಿಯನ್ನು ಪ್ರಕಟಿಸಿದ್ದು ದಿನಾಂಕ 18-08-2018ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿತ್ತು. ದಿನಾಂಕ 20-08-2018ರಂದು ನಾಮಪತ್ರ ಪರಿಶೀಲನೆ, ದಿನಾಂಕ 23-08-2018 ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. 31-08-2018ರಂದು ಮತದಾನದ ದಿನವಾಗಿದೆ.
    

ದಿನಾಂಕ 02-09-2018ರಂದು ಮರು ಮತದಾನದ ಅವಶ್ಯವಿದ್ದರೆ ಮರು ಮತದಾನದ ದಿನವಾಗಿದ್ದು 03-09-2018ರಂದು ತಾಲೂಕು ಕೇಂದ್ರಸ್ಥಾನಗಳಲ್ಲಿ ಕಮತ ಎಣಿಕೆ ನಡೆಯಲಿದೆ ಹಾಗೂ ಅಂದೇ ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...