ಟಿಬೇಟ್ ಕ್ಯಾಂಪ್‍ಗೆ ಎಎಸ್‍ಪಿ ನಾಗೇಶ ಭೇಟಿ

Source: sonews | By sub editor | Published on 12th October 2018, 5:18 PM | Coastal News |

ಮುಂಡಗೋಡ : ತಾಲೂಕಿನ ಟಿಬೆಟಿಯನ್ ಕಾಲೋನಿ ನಂ3 ರಲ್ಲಿ ಗುರುವಾರ ಎಎಸ್‍ಪಿ ಡಿ.ಎಲ್.ನಾಗೇಶ ಟಿಬೆಟಿಯನ್ ಮುಖಂಡರ ಜೊತೆ ಆಂತರಿಕ ಭದ್ರತೆ ಸಭೆ ನಡೆಸಿ ಸಲಹೆ ಸೂಚನೆ ನೀಡಿದರು.

ಶಿರಸಿ ಎಎಸ್‍ಪಿ ಡಿ.ಎಲ್.ನಾಗೇಶ ಮಾತನಾಡಿ ಅಪರಿಚಿತರು ಟಿಬೇಟ್ ಕ್ಯಾಂಪ್ ಬಗ್ಗೆ ಮಾಹಿತಿ ಕೇಳಿದರೆ ಮಾಹಿತಿ ನೀಡಬಾರದು ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿಬೇಕು. ಹೊರ ದೇಶದಿಂದ ಬರುವ ಪ್ರವಾಸಿ ವಿದೇಶಿಗರ ಪಿ.ಎ.ಪಿ. ಸರಿಯಾಗಿ ತಪಾಸಣೆಯಾಗಬೇಕು ಮತ್ತು ಪಿ.ಎ.ಪಿ ಇಲ್ಲದ ವಿದೇಶಿ ಪ್ರವಾಸಿಗರಿಗೆ ಮೊನಸ್ಟ್ರಿಗಳಲ್ಲಿ ಉಳಿದುಕೊಳ್ಳಲು ಅನಕೂಲ ಮಾಡಿಕೊಡಬಾರದೆಂದು ಸೂಚಿಸಿದರು.

ದಲೈಲಾಮ ವಿರೋದಿ ಬಣವಾದ ಶುಗ್ಡೇನ್ ಮೊನಸ್ಟ್ರಿಯ ಯಾವುದಾದರೂ ಲಾಮಗಳು ದಲೈಲಾಮ ಬಣದ ಲಾಮಾಗಳೊಂದಿಗೆ ಸ್ನೇಹ  ಮಾಡಿ ಮಾಹಿತಿ ಕದಿಯದಂತೆ ನೋಡಿಕೊಳ್ಳಬೇಕು. ರಾತ್ರಿ ವೇಳೆ ಕೆಲವು ಲಾಮಾಗಳು ಮದ್ಯ ಸೇವಿಸಲು ಹೋಗುತ್ತಿದ್ದು ಅವರು ಮಾದಕ ವಸ್ತುಗಳನ್ನು ತರುವ ಬಗ್ಗೆ  ಮಾಹಿತಿ ಇದೆ. ಈ ವೇಳೆ ನಾವುಗಳು ತಪಾಸಣೆ ನಡೆಸುವ ವೇಳೆ ಸಿಕ್ಕಿಬಿದ್ದರೆ ಕಾನೂನಪ್ರಕಾರ ಕ್ರಮಕೈಗೊಳ್ಳಲಾಗುವುದು ಎಂದರು.

ಎಎಸ್‍ಪಿ ಡಿ.ಎಲ್.ನಾಗೇಶ ಹಾಗೂ ಪಿಎಸ್‍ಆಯ್ ಚಂದ್ರಶೇಖರ ಹರಿಹರ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ 10 ಸಿವಿಲ್ ಕ್ಯಾಂಪ್ ಗಳ ಲೀಡರ್ಸ  ಹಾಗೂ ಲಾಮಾಕ್ಯಾಂಪ್ ಧುರಿಣರು ಉಪಸ್ಥಿತರಿದ್ದರು

Read These Next

ಉ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಅರಣ್ಯ ಪರಿಸ್ಥಿತಿ ಕುರಿತ ರಾಜ್ಯ ಮಟ್ಟದ ವಿಚಾರ ಸಂಕೀರಣ

ಭಟ್ಕಳ: ಪರಿಸರ ಪರಿಸ್ಥಿತಿ, ಸಂರಕ್ಷಣೆ, ಸವಾಲು ಹಾಗೂ ಪರಿಹಾರದ ಬಗ್ಗೆ ಹಮ್ಮಿಕೊಂಡಿದ್ದ ಕಾರ್ಯಾಗಾರದಿಂದ ಜನರು ತಮ್ಮಲ್ಲಿನ ಪರಿಸರದ ...

ಹೆದ್ದಾರಿ ಅಗಲಿಕರಣ; 45ಮೀ ವಿಸ್ತರಣೆಗೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ

ಭಟ್ಕಳ: ತಾಲೂಕಿನ ಶಿರಾಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66 ಅಗಲೀಕರಣವನ್ನು 30 ಮೀಟರ್‍ಗೆ ಸೀಮಿತಗೊಳಿಸುವ ...

ಸದಸ್ಯರ ಪ್ರಶ್ನೆಗೆ ಉತ್ತರಿಸಲಾಗದೆ ಸಭೆಯಿಂದ ಹೊರನಡೆದ ಪಂಚಾಯತ್ ಅಭಿವೃದ್ಧಿ ಅಧಿಕಾರಿ

ಭಟ್ಕಳ: ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಸದಸ್ಯರ ಪ್ರಶ್ನೆಯೊಂದಕ್ಕೆ ಉತ್ತರಿಸಲಾಗದೇ ಗ್ರಾಮ ಪಂಚಾಯತ್  ಪಂಚಾಯತ್ ಅಭಿವೃದ್ದಿ ...