ವಿಶಾಖಪಟ್ಟಣ ನಿವಾಸಿ ಸಿಂಗಾಪುರದಲ್ಲಿ ನಿಗೂಢ ಸಾವು! 

Source: S O News service | By sub editor | Published on 27th December 2016, 11:21 PM | National News | Global News | Don't Miss |

ವಿಶಾಕಪಟ್ಟಣಂ: ಸಿಂಗಾಪುರ ತೆರಳಿದ್ದ ಭಾರತೀಯನೋರ್ವ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ವಿಶಾಖಪಟ್ಟಣದಲ್ಲಿ ನಡೆದಿದೆ.

ಚಿಂತಕಾಯಲ ಮಹೇಶ್ (19) ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಯುವಕ. ಈತ ವಿಶಾಖಪಟ್ಟಣದ ಮೂಲದವನಾಗಿದ್ದಾನೆ. ಉದ್ಯೋಗ ಸಲಹಾ ಸಂಸ್ಥೆಯಾಗಿರುವ ಜಾಗತಿಕ ತಾಂತ್ರಿಕ ತರಭೇತಿ ಕೇಂದ್ರವನ್ನು ಸಂಪರ್ಕಿಸಿದ್ದ ಈತ ಸಿಂಗಾಪುರದ ಸಂಸ್ಥೆಯಲ್ಲಿ ಮೆಕಾನಿಕ್ ಆಗಿ ಕೆಲಸ ಮಾಡಲು ಕಳೆದ ತಿಂಗಳು ಸಿಂಗಾಪುರಕ್ಕೆ ತೆರಳಿದ್ದ.

ಸಿಂಗಾಪುರದಲ್ಲಿ ಮಹೇಸ್ ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದಾನೆಂದು ಹೇಳಲಾಗುತ್ತಿದೆ. ಆದರೆ, ಆತನನ್ನು ಸಿಂಗಾಪುರಕ್ಕೆ ಕರೆದುಕೊಂಡು ಹೋಗಿದ್ದ ಕಂಪನಿ ನಮ್ಮೊಂದಿಗೆ ಯಾವುದೇ ಮಾತುಕತೆಯನ್ನು ನಡೆಸಿಲ್ಲ ಎಂದು ಮೃತ ಮಹೇಶ್ ಪೋಷಕರು ಈ ಮಧ್ಯೆ ಆರೋಪಿಸಿದ್ದಾರೆ.

ಇನ್ನು ಮಹೇಶ್ ಸಾವಿನ ಸುದ್ದಿ ತಿಳಿದು ಗದ್ಗದಿತರಾದ ಆತನ ಕುಟುಂಬಸ್ಥರು. ಆತನ ಸಾವಿಗೆ ಕಂಪೆನಿ ನೇರ ಹೊಣೆ ಎಂದು ಆರೋಪಿಸಿದೆ. ಮತ್ತು ಸಾವಿನ ಕಾರಣವನ್ನು ಬಹಿರಂಗಪಡಿಸಬೇಕೆಂದು ಆಗ್ರಹಿಸಿ ವಿಶಾಖಪಟ್ಟಣಂ ವಿಮಾನ ನಿಲ್ದಾಣದಲ್ಲಿ ಮಹೇಶ್ ಕುಟುಂಬಸ್ಥರು ಪ್ರತಿಭಟನೆಯನ್ನು ನಡೆಸಿದ್ದಾರೆ.

Read These Next

ಪಿ.ಯು.ಕಾಲೇಜ್ ಸಹಪಠ್ಯ ಚಟುವಟಿಕೆ; ಇಂಗ್ಲಿಷ್ ಚರ್ಚಾ ಸ್ಪರ್ಧೆಯಲ್ಲಿ ಶಿಹಾಬುದ್ದೀನ್ ಪ್ರಥಮ

ಭಟ್ಕಳ: ಪದವಿ ಪೂರ್ವ ಶಿಕ್ಷಣ ಇಲಾಖೆ ಹಮ್ಮಿಕೊಂಡ ತಾಲೂಕಾ ಮಟ್ಟದ ಸಾಂಸ್ಕತಿಕ ಸಹ ಪಠ್ಯೇತರ ಚಟುವಟಿಕೆಗಳ ಸ್ಪರ್ಧೆಗಳಲ್ಲಿ ದಿ.ನ್ಯೂ ...