ಪರಸ್ಪರ ವಿಶ್ವಾಸದಿಂದ ಪ್ರಗತಿ ಸಾಧ್ಯ-ಬ್ರಹ್ಮಾನಂದ ಶ್ರೀ

Source: S O News service | By Staff Correspondent | Published on 26th October 2016, 10:38 PM | Coastal News |

ಭಟ್ಕಳ: ಪರಸ್ಪರ ವಿಶ್ವಾಸವು ಪ್ರಗತಿಗೆ ದಾರಿ ಮಾಡಿಕೊಡುತ್ತಿದ್ದು ನಾವು ಪರಸ್ಪರ ನಂಬಿಕೆಯಿಂದ ಬದುಕುವುದನ್ನು ಕಲಿಯಬೇಕು ಎಂದು ರಾಮಕ್ಷೇತ್ರದ ಮಠಾಧೀಶ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನುಡಿದರು. 

ಅವರು ಬುಧವಾರ  ಇಲ್ಲಿನ ರಥಬೀದಿಯಲ್ಲಿನ ಪ್ರಭು ಕಾಂಪ್ಲೆಕ್ಸ್ ನಲ್ಲಿ ಸಿದ್ದಾಪುರದ ಶ್ರೀವಿನಾಯಕ ಕ್ರೆಡಿಟ್ ಕೋ-ಆಪರೇಟಿವ್ ಲಿಮಿಟೆಡ್ ನ ಭಟ್ಕಳ ಶಾಖೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. 

ಪ್ರಕೃತಿಯಲ್ಲಿ ಸಹಕಾರ ನಿಯಮ ಅಡಗಿದ್ದು, ಮಾಯೆಯ ಮುಸುಕಿನಿಂದ ಅದು ಕಾಣದಾಗುತ್ತದೆ. ಭಕ್ತಿ, ಶ್ರದ್ಧೆ, ಸಂಸ್ಕಾರದ ಮೂಲಕ ಸೂಕ್ಷ್ಮತೆಯನ್ನು ಪಡೆಯಬೇಕು. ಒಳ್ಳೆಯದರ ಕಡೆ ಮನಸ್ಸನ್ನು ಹರಿಸಬೇಕು. ಅರ್ಧಂಬರ್ಧ ಓದು, ರಾಜಕೀಯ ಚೆಲ್ಲಾಟದಿಂದ ಜಾತಿವಾದಗಳು ಹುಟ್ಟಿಕೊಳ್ಳುತ್ತಿದ್ದು, ಬುದ್ದಿ ಜ್ಞಾನಗಳು ಅವುಗಳನ್ನು ತೊಡೆಯುತ್ತವೆ. ಪರಸ್ಪರ ವಿಶ್ವಾಸ ಪ್ರಗತಿಗೆ ದಾರಿ ಮಾಡಿಕೊಡುತ್ತದೆ ಎಂದು ತಿಳಿಸಿದರು. ಸಹಕಾರಿ ಸಂಘದ ಅಧ್ಯಕ್ಷ ಆನಂದ ಈರಾ ನಾಯ್ಕ, ಅವರ ಧರ್ಮ ಪತ್ನಿ ಸವಿತಾ ನಾಯ್ಕ, ಉಪಾಧ್ಯಕ್ಷ ಸದಾನಂದ ಕಾಮತ್, ವಿನಾಯಕ ನಾಯ್ಕ, ಜಿಲ್ಲಾ ಪಂಚಾಯತ ಸದಸ್ಯೆ ಜಯಶ್ರೀ ಮೊಗೇರ, ಭಟ್ಕಳ ನಿಚ್ಚಲಮಕ್ಕಿ ಶ್ರೀ ವೆಂಕಟ್ರಮಣ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಡಿ.ಬಿ.ನಾಯ್ಕ, ಶ್ರೀ ರಾಮಕ್ಷೇತ್ರದ ಟ್ರಸ್ಟಿ ಜೆ.ಎನ್.ನಾಯ್ಕ, ಉದ್ಯಮಿ ಡಿ.ಜೆ.ಕಾಮತ್ ಮುಂತಾದವರು ಉಪಸ್ಥಿತರಿದ್ದರು. ಸಂಘದ ಪ್ರಧಾನ ವ್ಯವಸ್ಥಾಪಕ ಶ್ರೀಧರ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತ ನಾಗರಾಜ ನಾಯ್ಕ ಮಾಳ್ಕೋಡು ಸ್ವಾಗತಿಸಿದರು. ಶ್ರೀ ವಿನಾಯಕ ಕ್ರೆಡಿಟ್ ಕೋ-ಆಪರೇಟಿವ್ ಭಟ್ಕಳ ಶಾಖೆಯ ವ್ಯವಸ್ಥಾಪಕ ಪ್ರಶಾಂತ ನಾಯ್ಕ ವಂದಿಸಿದರು. ಸಾಮಾಜಿಕ ಕಾರ್ಯಕರ್ತ ಭಾಸ್ಕರ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. 

Read These Next

ಕಾರವಾರ: ಕುಡಿಯುವ ನೀರು ಸಮಸ್ಯೆ : ಟ್ಯಾಂಕರ್ ಮೂಲಕ ತಕ್ಷಣ ನೀರು ಒದಗಿಸಲು ಜಿಲ್ಲಾಧಿಕಾರಿ ಸೂಚನೆ

ಜಿಲ್ಲೆಯಲ್ಲಿ ಕುಡಿಯುವ ನೀರು ಸಮಸ್ಯೆ ಕಂಡು ಬರುತ್ತಿರುವ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ತಕ್ಷಣವೇ ಸಾರ್ವಜನಿಕರಿಗೆ ಕುಡಿಯುವ ನೀರು ...

ಕಾರವಾರ: ಮತದಾನ ಜಾಗೃತಿಯ ಬೆಳಕು ಎಲ್ಲೆಡೆ ಪ್ರಕಾಶಿಸಲಿ : ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಬೆಳಕು ಕತ್ತಲನ್ನು ದೂರ ಮಾಡಿ, ಎಲ್ಲೆಡೆ ಬೆಳಕು ಮೂಡಿಸುತ್ತದೆ. ಅದೇ ರೀತಿ ಮತದಾನದ ಕುರಿತ ಜಾಗೃತಿಯ ಬೆಳಕನ್ನು ಎಲ್ಲಾ ಮತದಾರರ ...