ಶಿರಸಿ ಆರ್‍ಟಿಓ ಕಚೇರಿಯಲ್ಲಿ ಸೆ.21ರಿಂದ ವಾಹನ್-4 ಆರಂಭ

Source: sonews | By Staff Correspondent | Published on 14th September 2018, 6:45 PM | Coastal News |

ಕಾರವಾರ :ಶಿರಸಿ ಪ್ರಾದೇಶಿಕ ಸಾರಿಕೆ ಅಧಿಕಾರಿಗಳ ಕಚೇರಿಯಲ್ಲಿ ಸೆಪ್ಟೆಂಬರ್ 21ರಿಂದ ವಾಹನ್-4 ಅಧಿಕೃತವಾಗಿ ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾಗಲಿದೆ ಎಂದು ಶಿರಸಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಸಿ.ಡಿ.ನಾಯ್ಕ್ ತಿಳಿಸಿದ್ದಾರೆ.
    
ವಾಹನಗಳ ನೋಂದಣಿ ಸೇವೆಗಳಿಗೆ ಸಂಬಂಧಿಸಿದ ಕೇಂದ್ರೀಕೃತ ಹಾಗೂ ವೆಬ್ ಆಧಾರಿತ ವಾಹನ್-4 ಸಾಫ್ಟ್‍ವೇರ್ ಅನುಷ್ಠಾನಗೊಳಿಸುವಂತೆ ಸಾರಿಗೆ ಆಯುಕ್ತರು ಆದೇಶಿಸಿರುವ ಹಿನ್ನೆಲೆಯಲ್ಲಿ ಸೆ.21ರಿಂದ ಪೂರ್ಣ ಪ್ರಮಾಣದಲ್ಲಿ ವಾಹನ್-4 ಪ್ರಾರಂಭವಾಗಲಿದೆ ಎಂದು ಅವರು ತಿಳಿಸಿದ್ದಾರೆ.
    
ಕೇಂದ್ರ  ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆ ಎನ್‍ಐಸಿರವರ ತಾಂತ್ರಿಕ ನೆರವಿನಲ್ಲಿ ವಾಹನಗಳ ನೋಂದಣಿಯ ವಾಹನ್-4 ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ್ದು ಇನ್ನು ಮುಂದೆ ನೋಂದಣಿ ಸಂಬಂಧಿಸಿದ ಎಲ್ಲ ವ್ಯವಹಾರಗಳು ವಾಹನ್-4 ತಂತ್ರಾಂಶದಲ್ಲೇ ನಡೆಯಲಿದೆ. ಇದಕ್ಕೆ ಅನುಗುಣವಾಗಿ ವಾಹನ್-3 ಸಂಬಂದಿಸಿದ ಆನ್‍ಲೈನ್ ಮೂಲಕ ವಾಹನ ನೋಂದಣಿಗೆ ಅರ್ಜಿ ಸಲ್ಲಿಸುವಿಕೆ ಹಾಗೂ ಇ-ಪಾವತಿಯನ್ನು ಸೆ.22ರಿಂದ ಸ್ಥಗಿತಗೊಳಿಸಲಾಗಿದೆ. ವಾಹನ್-1ಗೆ ಸಂಬಂಧಿಸಿದಂತೆ ನಗದು ವಿಭಾಗ (ಖಜಾನೆ ಕೌಂಟರ್) ಸೆ.24ರಿಂದ ಸ್ಥಗಿತಗೊಳ್ಳಲಿದೆ. ಸೆ.26ರಿಂದ ಡಾಟಾ ಬೇಸಿನ್ ಪೋರ್ಟಿಂಗ್ ಕಾರ್ಯ ಸಿದ್ಧಪಡಿಸಲಾಗುವುದು ಹಾಗೂ ಎನ್‍ಐಸಿಯವರಿಂದ ವಾಹನ್-1 ಡಾಟಾವನ್ನು ವಾಹನ್-4ಗೆ ಪೋರ್ಟಿಂಗ್ ಕಾರ್ಯ ನಿರ್ವಹಿಸಲಾಗುವುದು. ದಿನಾಂಕ 27-09-2018ರಿಂದ ವಾಹನ ನೋಂದಣಿ ರಹದಾರಿ ಹಾಗೂ ಅರ್ಹತಾ ಪತ್ರಕ್ಕೆ ಸಂಬಂಧಿಸಿದ ಸೇವೆಗಳು ಲಭ್ಯವಿದೆ. ಈ ಹಿನ್ನೆಲೆಯಲ್ಲಿ 26-09-2018ರವರೆಗೆ ಸೇವೆಗಳು ಸ್ಥಗಿತವಾಗುವುದರಿಂದ ಸಾರ್ವಜನಿಕರು ಸಹಕರಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಸಿ.ಡಿ.ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
    
 

Read These Next

ಕೇಂದ್ರದಲ್ಲಿ ನಮ್ಮದೇ ಸರ್ಕಾರ, ನಮ್ಮದೇ ಪ್ರಧಾನಿ ಡಾ. ಅಂಜಲಿ ನಿಂಬಾಳ್ಕರ್ ಮಂತ್ರಿಯಾಗ್ತಾರೆ- ಸಚಿವ ಮಾಂಕಾಳ್ ಭವಿಷ್ಯ

ಭಟ್ಕಳ: ನಾವು ಸುಳ್ಳು ಹೇಳುವುದಿಲ್ಲ. ಹೇಳಿದನ್ನು ಮಾಡಿ ತೋರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಐದು ...