ಉತ್ತರ ಕನ್ನಡ ಜಿಲ್ಲೆಯ ಅರ್ಬನ್ ಬ್ಯಾಂಕುಗಳಲ್ಲಿಯೇ ಅತ್ಯದಿಕ ಲಾಭ ಗಳಿಸಿದ ಭಟಕಳ ಅರ್ಬನ್ ಬ್ಯಾಂಕ್

Source: sonews | By Staff Correspondent | Published on 22nd September 2018, 11:48 PM | Coastal News |

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಅರ್ಬನ್ ಬ್ಯಾಂಕುಗಳಲ್ಲಿಯೇ ಅತ್ಯಧಿಕ ಲಾಭ ಗಳಿಸಿದ ಭಟಕಳ ಅರ್ಬನ್ ಬ್ಯಾಂಕ್ ಅತ್ಯುನ್ನತ ಗ್ರಾಹಕ ಸೇವೆಯಿಂದ ಪ್ರಚಲಿತಗೊಂಡ ರಾಜ್ಯದ ಪ್ರತಿಷ್ಠಿತ ಅರ್ಬನ್ ಕೋ-ಅಪರೇಟಿವ್ ಬ್ಯಾಂಕುಗಳಲ್ಲಿ ಒಂದಾದ ಭಟ್ಕಳ ಅರ್ಬನ್ ಕೋ-ಅಪರೇಟಿವ್ ಬ್ಯಾಂಕಿನ 54ನೇ ವಾರ್ಷಿಕ ಸರ್ವಸಾಧರಣಾ ಸಭೆಯು ಭಟಕಳದ ನ್ಯೂ ಇಂಗ್ಲೀಷ್ ಶಾಲೆಯ ಕಮಲಾವತಿ ರಾಮನಾಥ ಸಭಾ ಭವನದಲ್ಲಿ ಶನಿವಾರ ಜರಗಿತು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಬ್ಯಾಂಕಿನ ಅಧ್ಯಕ್ಷ ಅಬ್ದುಲ್ ಮಜೀದ್ ಚೌಗುಲೆಯವರು ಬ್ಯಾಂಕಿನ ಪ್ರಗತಿಯ ವರದಿಯನ್ನು ಸದಸ್ಯರ ಮುಂದಿಡುತಾ ್ತ ಮಾರ್ಚ 2018 ಕ್ಕೆ ಅಂತ್ಯಗೊಂಡ ಹಣಕಾಸು ವರ್ಷದಲ್ಲಿ ನಮ್ಮ ಬ್ಯಾಂಕು ರೂ.6 ಕೋಟಿ 12 ಲಕ್ಷ ನಿರ್ವಹಣಾ ಲಾಭ ಗಳಿಸುವುದರೊಂದಿಗೆ ಉತ್ತರ ಕನ್ನಡ ಜಿಲ್ಲೆಯ ಅರ್ಬನ್ ಬ್ಯಾಂಕುಗಳಲ್ಲಿಯೇ ಅತ್ಯಧಿಕ ಲಾಭ ಗಳಿಸಿದ ಅರ್ಬನ್ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ರೂ.2 ಕೋಟಿ 69 ಲಕ್ಷ ಆದಾಯಕರ ಪಾವತಿಯ ನಂತರ ವರ್ಷಾಂತ್ಯಕ್ಕೆ ಬ್ಯಾಂಕು ರೂ.3 ಕೋಟಿ 43 ಲಕ್ಷ ನಿವ್ವಳ ಲಾಭವನ್ನು ಗಳಿಸಿದೆ ಎಂದರು.

2017-18ನೇ ಸಾಲಿನಲ್ಲಿ ಬ್ಯಾಂಕಿನ ಷೇರು ಬಂಡವಾಳವು ರೂ.12 ಕೋಟಿ 89 ಲಕ್ಷ ಇದ್ದು, ಸದಸ್ಯರ ಸಂಖ್ಯೆಯು 24144 ರಷ್ಟಾಗಿದೆ. ಬ್ಯಾಂಕಿನ ಠೇವಣಿ ಸಂಗ್ರಹವು ರೂ. 418 ಕೋಟಿ ತಲುಪಿದ್ದು, ಸಾಲ ಮುಂಗಡವು ರೂ.215 ಕೋಟಿ ಯಷ್ಟಾಗಿದೆ. ಬ್ಯಾಂಕಿನ ನಿವ್ವಳ ಎನ್.ಪಿ.ಎ. ಪ್ರಮಾಣವು ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ ಶೂನ್ಯ ಪ್ರಮಾಣದಲ್ಲೇ ಮುಂದುವರಿದಿದೆ. ಬ್ಯಾಂಕಿನ ಒಟ್ಟೂ ಗುಂತಾವಣಿಯು ರೂ.215 ಕೋಟಿ ಆಗಿದ್ದು, ವಷಾಂತ್ಯಕ್ಕೆ ಬ್ಯಾಂಕಿನ ಕಾಯ್ದಿಟ್ಟ ನಿಧಿಯು ರೂ.48 ಕೋಟಿ ಯಷ್ಟಾಗಿದೆ. ಬ್ಯಾಂಕಿನ ದುಡಿಯುವ ಬಂಡವಾಳವು ರೂ.479 ಕೋಟಿ 95 ಲಕ್ಷವಾಗಿದ್ದು, ಬ್ಯಾಂಕಿನ ಒಟ್ಟೂ ವ್ಯವಹಾರವು ವರ್ಷಾಂತ್ಯಕ್ಕೆ ರೂ.634 ಕೋಟಿಯಷ್ಟಾಗಿದೆ. 2017-18 ನೇ ಸಾಲಿನಲ್ಲಿ ಬ್ಯಾಂಕು ಸದಸ್ಯರಿಗೆ ಶೇಕಡಾ 10 ಡಿವಿಡೆಂಡ್‍ನ್ನು ಘೋಷಿಸಿದೆ ಎಂದು ಹೇಳಿದರು. ಸಭೆಗೆ ಆಗಮಿಸಿದ್ದ ಸದಸ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಬ್ಯಾಂಕಿನ ಪ್ರಧಾನ ಕಾರ್ಯನಿರ್ವಾಹಕ ಎಸ್. ಎ. ರಜಾಕ್, ಷೇರುದಾರರ ಹಾಗೂ ಗ್ರಾಹಕರ ಸಹಕಾರ, ಆಡಳಿತ ಮಂಡಳಿಯವರ ಸಮಯೋಚಿತ ಸಲಹೆ ಹಾಗೂ ಪ್ರೋತಾ ್ಸಹ, ಸಿಬ್ಬಂದಿಗಳ ಅವಿರತ ಶ್ರಮದಿಂದ ಬ್ಯಾಂಕು ಇಂದು ರಾಜ್ಯಮಟ್ಟದಲ್ಲಿ ಸದೃಢವಾಗಿ ಬೆಳೆದು ನಿಲ್ಲಲು ಕಾರಣವಾಗಿದೆ ಎಂದು ಅಭಿಮಾನ ವ್ಯಕ್ತಪಡಿಸಿದರು. 

ಬ್ಯಾಂಕಿನ ಸಹಾಯಕ ಪ್ರಧಾನ ಕಾರ್ಯನಿರ್ವಾಹಕ ಸುಭಾಷ ಎಂ. ಶೆಟ್ಟಿ ಕಳೆದ ಸಾಲಿನ ವಾರ್ಷಿಕ ಮಹಾಸಭೆಯ ನಡವಳಿಗಳನ್ನು ಓದಿದರು. ಬ್ಯಾಂಕಿನ ಪ್ರಧಾನ ಕಛೇರಿಯ ವ್ಯವಸ್ಥಾಪಕ ಶಂಭು ಹೆಗಡೆ ವಂದಿಸಿದg
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...