ಉ.ಪ್ರದೇಶ ಸ್ಥಳೀಯ ಸಂಸ್ಥೆ ಚುನಾವಣೆ: ಬಿಜೆಪಿ ಬಂಪರ್ ಜಯ ಇವಿಎಂ  ನಲ್ಲಿ ಗೋಲ್ಮಾಲ್?

Source: sonews | By sub editor | Published on 1st December 2017, 11:44 PM | National News | Don't Miss |

ಲಕ್ನೋ: ಉತ್ತರ ಪ್ರದೇಶ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದೆ. ಆದರೆ ಟ್ಟಿಟರ್ ನಲ್ಲಿ ಪೋಸ್ಟ್ ಮಾಡಲಾಗಿರುವ ವಿಡಿಯೋವೊಂದು ಚುನಾವಣೆಯಲ್ಲಿ ಬಳಸಲಾದ ಇವಿಎಂಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವಂತಿದೆ ಎಂದು nationalheraldindia.com ವರದಿ ಮಾಡಿದೆ.

ಉತ್ತರ ಪ್ರದೇಶದ ಶಹರಾನ್ಪುರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶಬನಾ ಅವರು ಒಂದೂ ಮತಗಳನ್ನು ಪಡೆದಿಲ್ಲ. “ಕೊನೆಯ ಪಕ್ಷ ನನ್ನ ಕುಟುಂಬಸ್ಥರಾದರೂ ನನಗೆ ಮತ ನೀಡಿದ್ದಾರೆ. ಹಾಗಾದರೆ ಒಂದು ಮತವನ್ನು ಪಡೆಯದಿರಲು ಹೇಗೆ ಸಾಧ್ಯ” ಎಂದವರು ಪ್ರಶ್ನಿಸಿದ್ದಾರೆ.

“ನಾನು ನೀಡಿದ ಮತ ಎಲ್ಲಿ ಮಾಯವಾಗಿದೆ. ನಮ್ಮ ಕುಟುಂಬದಿಂದ ಕನಿಷ್ಠ ಮೂರು ಮತಗಳು ಬಿದ್ದಿದೆ. ಆದರೆ ನಮಗೆ ಕಡೆಯ ಪಕ್ಷ 900 ಮತಗಳಾದರೂ ಬೀಳಬೇಕಿತ್ತು” ಎಂದು ಶಬನಾರ ಪತಿ ಆಜ್ ತಕ್ ನ ಪತ್ರಕರ್ತರೊಬ್ಬರು ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಹೇಳಿದ್ದಾರೆ.

ಶಹರಾನ್ಪುರಕ್ಕೆ ಇದೇ ಮೊದಲ ಬಾರಿ ಮುನಿಸಿಪಲ್ ಚುನಾವಣೆ ನಡೆದಿತ್ತು. ಮತದಾರರ ಪಟ್ಟಿಯಲ್ಲಿ ಹಲವರ ಹೆಸರುಗಳು ನಾಪತ್ತೆಯಾಗಿದೆ ಎನ್ನುವ ಅರೋಪಗಳೂ ಇದೇ ಕೇಂದ್ರದಿಂದ ಈ ಹಿಂದೆ ಕೇಳಿಬಂದಿತ್ತು.

ಮತದಾನದ ದಿನವೂ ಇಲ್ಲಿ ಮತಯಂತ್ರದ ಯಡವಟ್ಟುಗಳು ಸಂಭವಿಸಿತ್ತು. ಮೀರತ್ ಹಾಗು ಶಹರಾನ್ಪುರದ ಹಲವೆಡೆ ಬೇರೆ ಯಾವುದೇ ಪಕ್ಷಗಳಿಗೆ ಮತ ಹಾಕಿದರೂ ಬಿಜೆಪಿಗೆ ಮತ ಬೀಳುತ್ತಿದೆ ಎಂಬ ಆರೋಪವೂ ಕೇಳಿಬಂದಿತ್ತು. 

Read These Next

ಆಂಧ್ರಪ್ರದೇಶದಲ್ಲಿ ಹಿಂಸಾಚಾರಕ್ಕೆ ತಿರುಗಿದ ಚುನಾವಣೆ: ಟಿಡಿಪಿ, ವೈಎಸ್​ಆರ್​ ಪಕ್ಷಗಳ ಇಬ್ಬರು ಕಾರ್ಯಕರ್ತರ ಸಾವು

ಆಂಧ್ರಪ್ರದೇಶದಲ್ಲಿ ಹಿಂಸಾಚಾರಕ್ಕೆ ತಿರುಗಿದ ಚುನಾವಣೆ: ಟಿಡಿಪಿ, ವೈಎಸ್​ಆರ್​ ಪಕ್ಷಗಳ ಇಬ್ಬರು ಕಾರ್ಯಕರ್ತರ ಸಾವು