ಕುಡಿಯುವ ನೀರಿನಲ್ಲಿ ಅವ್ಯವಹಾರ; ತನಿಖೆಗೆ ವೆಲ್ಫೇರ್ ಪಾರ್ಟಿ ಆಗ್ರಹ

Source: sonews | By Staff Correspondent | Published on 25th March 2018, 12:53 AM | Coastal News | State News | Don't Miss |

ಉಡುಪಿ - ಇಲ್ಲಿಯ ಕುಡಿಯುವ ನೀರಿನಲ್ಲಿ ಅವ್ಯವಹಾರ ತನಿಖೆ ನಡೆಸುವಂತೆ ವೆಲ್ಫೇರ್ ಪಾರ್ಟಿವತಿಯಿಂದ ಇತ್ತೀಚಗೆ ಉಡುಪಿ ಜಿಲ್ಲೆಯ ಅಪಾರ ಜಿಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. 

ಉಡುಪಿಗೆ ಕುಡಿಯುವ ನೀರು ಒದಗಿಸುವ ಸರಕಾರಿ ಯೋಜನೆಯನ್ನು ಖಾಸಗಿ ವಿದ್ಯುತ್ ಉತ್ಪಾದಕರಿಗೆ ಸಹಾಯ ಮಾಡುವುದಕ್ಕಾಗಿ ಸುತ್ತುಬಳಸುವ ದಾರಿಯಲ್ಲಿ ಒಯ್ಯುವ ದೂರ್ತ ಕೆಲಸಕ್ಕೆ ಅಧಿಕಾರಿಗಳು ಮುಂದಾಗಿರುವುದಾಗಿ ತಿಳಿದು ಬಂದದ್ದು ವಾರಾಹಿ ಎಡದಂಡೆಯ ಯೋಜನೆಯಲ್ಲಿ ಉಡುಪಿಯ ದಿಕ್ಕಿನಲ್ಲಿ ಬಂದಿರುವ ಕಾಲುವೆಯಿಂದ ನೀರನ್ನು ಉಡುಪಿಗೆ ತರಲು ಹೆಚ್ಚು ಖರ್ಚು ಆಗುವುದಿಲ್ಲ. ಆದರೆ ವಾರಾಹಿ ಹೊಳೆಯಿಂದ ಆ ನೀರನ್ನು ನೇರವಾಗಿ ಭರತ್ಕಲ್‍ಗೆ ತಂದು 38.5 ಕಿಲೋಮೀಟರ್ ವ್ಯಾಪ್ತಿಯಲ್ಲಿ ಪೈಪ್ಲೇನ್ ಮಾಡಿ ಭರತ್ಕಲ್‍ನಲ್ಲಿ ಜಾಕ್‍ವೆಲ್ ಮೂಲಕ ಸಂಗ್ರಹಿಸಿ ಉಡುಪಿಗೆ ನೀರು ಹರಿಸುವ ಯೋಜನೆಯೇ ಅನಪೇಕ್ಷಿತವಾದುದು. ಅನುಚಿತ ಅತೀ ವೆಚ್ಚದಾಯಕ. ಈಗಾಗಲೆ ವಾರಾಹಿ ಕಾಲುವೆ ಬಾರಕೂರು ತನಕ ಬರುವಾಗ ಅಲ್ಲಿಂದ ಉಡುಪಿ ದಿಕ್ಕಿಗೆ ಬರುವ ಕಾಲುವೆಯಿಂದ ನೀರಿನ ಪೈಪ್ ಲೈನ್ ಒದಗಿಸಿದರೆ ಸರಕಾರದ ಹಣ ಪೋಲಾಗುವುದು ತಡೆದಂತಾಗುತ್ತದೆ. ಹೀಗಿದ್ದೂ ಅಧಿಕಾರಿಗಳು ಸುತ್ತು ಬಳಸು ದಾರಿಯಲ್ಲಿ ಉಡುಪಿಗೆ ನೀರುಣಿಸುವ ಯೋಜನೆ ಹಾಕಿಕೊಂಡು ನೂರಾರು ಕೋಟಿ ರೂಪಾಯಿ ಸರಕಾರದ ಬೊಕ್ಕಸಕ್ಕೆ ನಷ್ಟ ಮಾಡುತ್ತಿದ್ದಾರೆ. ಇದು ನ್ಯಾಯವಲ್ಲ ಎಂದು ಮನವಿಯಲ್ಲಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ವೆಲ್ಫೇರ್ ಪಾರ್ಟಿಯ ಜಿಲ್ಲಾಧ್ಯಕ್ಷರಾದ ಅಬ್ದುಲ್ ಅಝೀಝ್ ಉದ್ಯಾವರ್, ಸದಸ್ಯರಾದ ಶಹಜಹನ್ ತೋನ್ಸೆ, ಅಬ್ದುಲ್ ಅಝೀಝ್ ಆದಿಉಡುಪಿ ಉಪಸ್ಥಿತರಿದ್ದರು.
 

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...