ಪಾಕಿಸ್ಥಾನವನ್ನು ಭಾರತದೊಂದಿಗೆ ವಿಲೀನಗೊಳಿಸಿ-ಮೌಲಾನ ಸಜ್ಜಾದ್

Source: sonews | By sub editor | Published on 4th March 2018, 11:52 PM | Coastal News | State News | National News | Special Report | Don't Miss |

ಉಡುಪಿ : ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್ ಬಿ) ಯ ವಕ್ತಾರ, ಹಿರಿಯ ಧಾರ್ಮಿಕ ವಿದ್ವಾಂಸ ಮೌಲಾನಾ ಸಜ್ಜಾದ್ ನೋಮಾನಿ ಉಡುಪಿಯಲ್ಲಿ ರವಿವಾರ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ವತಿಯಿಂದ ನಡೆದ ಏಕತಾ ಸಮಾವೇಶದಲ್ಲಿ ಭಾಗವಹಿಸಿದ್ದರು. 

ತಮ್ಮ ಭಾಷಣದಲ್ಲಿ ಅವರು ಹಂಚಿಕೊಂಡ ಒಂದು ಘಟನೆ ಅತ್ಯಂತ ಆಸಕ್ತಿಕರವಾಗಿದೆ. ಅವರ ಮಾತುಗಳಲ್ಲಿ ಆ ವಿವರ ಇಲ್ಲಿದೆ:

"ನಾನು ಇತ್ತೀಚೆಗೆ ಮಕ್ಕಾದಲ್ಲಿದ್ದೆ.  ಹರಮ್ ಶರೀಫ್ ಸಮೀಪದಲ್ಲೇ ಕುಳಿತಿದ್ದೆ. ಪಾಕಿಸ್ತಾನದ ಹಿರಿಯ ಧಾರ್ಮಿಕ ವಿದ್ವಾಂಸರ ಗುಂಪೊಂದು ನನ್ನನ್ನು ಹುಡುಕುತ್ತಿತ್ತು. ನಾನೂ ಅವರನ್ನು ಭೇಟಿಯಾಗಲು ಎದುರು ನೋಡುತ್ತಿದ್ದೆ. ಅವರು ಬಂದು, ನಾವು ಭೇಟಿಯಾಗಿ ಸ್ವಲ್ಪ ಹೊತ್ತು ಮಾತನಾಡಿದೆವು.  ಬಳಿಕ ಹೊಟೇಲ್ ನಲ್ಲಿ ಭೇಟಿಯಾಗಿ ವಿವರವಾಗಿ ಮಾತನಾಡೋಣ ಎಂದು ಹೊರಟೆವು.

ಹೊಟೇಲ್ ಗೆ ಬಂದ ಆ ವಿದ್ವಾಂಸರ ಗುಂಪು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಬಗ್ಗೆ ಬಹಳ ಅಭಿಮಾನದಿಂದ ಮಾತನಾಡಿದರು. ಎಲ್ಲ ಪಂಗಡಗಳ ಮುಸ್ಲಿಮರು ಒಂದೇ ವೇದಿಕೆಯಲ್ಲಿ ಸೇರಿರುವ ಕುರಿತು ಬಹಳ ಖುಷಿ ವ್ಯಕ್ತಪಡಿಸಿದರು.

ಪಾಕಿಸ್ತಾನದಲ್ಲೂ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಶಾಖೆಯೊಂದನ್ನು ತೆಗೆಯಿರಿ ಎಂದು ವಿನಂತಿಸಿದರು. ಅದಕ್ಕೆ ನಾನು ಹೇಳಿದೆ - ಅದು  "ಅಖಿಲ ಭಾರತ" ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ. ಅದರ ಹೆಸರಲ್ಲೇ ಅದು ಅಖಿಲ ಭಾರತ ಸಂಘಟನೆ ಎಂದು ಸ್ಪಷ್ಟವಾಗಿದೆ. ಹಾಗಾಗಿ ನೀವು ನಿಮ್ಮ ದೇಶವನ್ನು  ಭಾರತದೊಳಗೆ ವಿಲೀನ ಮಾಡಿ ಬಿಡಿ. ಆಗ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ನಿಮಗೂ ಸಿಗುತ್ತದೆ

Read These Next

ಲಕ್ಷ್ಮಿಮಂಟಪಕ್ಕೆ ಮಹಿಳಾ ಅಧಿಕಾರಿ ಪ್ರವೇಶ: ಕೊಲ್ಲೂರಿನಲ್ಲಿ ಮತ್ತೊಂದು ವಿವಾದ!

ಮಂಗಳೂರು:  ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿ ಕ್ಷೇತ್ರದಲ್ಲಿ ದೇವಾಲಯದ ಮಾಜಿ ಕಾರ್ಯ ನಿರ್ವಹಣಾಧಿಕಾರಿ ಟಿ.ಆರ್‌.ಉಮಾ ಅವರು ಅನುಮತಿ ...

ನಾಪತ್ತೆಯಾಗಿದ್ದ ಕುಮಟಾ ಕುಂಭೇಶ್ವರ ದೇವಸ್ಥಾನದ ಅರ್ಚಕ ವಿಶ್ವೇಶ್ವರ ಭಟ್ಟರು ಶವವಾಗಿ ಪತ್ತೆ.

ಕುಮಟಾ : ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ ಪಟ್ಟಣದ ಕುಂಭೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವಿಶ್ವೇಶ್ವರ ಭಟ್ಟ ಅವರು ಕೊಲೆಯಾದ ...

ಗದ್ದೆಗಳಿಗೆ ಹಂದಿಗಳ ಕಾಟ  

ಹೊನ್ನಾವರ: ತಾಲೂಕಿನ ವಿವಿಧ ಭಾಗಗಳಲ್ಲಿನ ಭತ್ತದ ಗದ್ದೆಗಳಿಗೆ ಕಾಡು ಹಂದಿಗಳ ಹಾವಳಿ ವಿಪರೀತವಿದ್ದು, ತಂಡೋಪತಂಡವಾಗಿ ಬರುವ ಹಂದಿಗಳ ...

ಅಯ್ಯಪ್ಪಸ್ವಾಮಿ ದೇಗುಲದ ಬಾಗಿಲು ಮುಚ್ಚಿ ಬಿಡುತ್ತೇವೆ'; ಅರ್ಚಕರ ಪ್ರತಿಭಟನೆಗೆ ಮಣಿದ ಪತ್ರಕರ್ತೆಯರು ಕೊನೆಗೂ ವಾಪಸ್!

ತಿರುವನಂತಪುರಂ: ಸುಪ್ರೀಂ ಕೋರ್ಟ್ ಆದೇಶ, ಕೇರಳ ಪೊಲೀಸರ ಭಾರಿ ಭದ್ರತೆಯ ನಡುವೆಯೂ ಮಹಿಳೆಯರಿಗೆ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ...

ಗದ್ದೆಗಳಿಗೆ ಹಂದಿಗಳ ಕಾಟ  

ಹೊನ್ನಾವರ: ತಾಲೂಕಿನ ವಿವಿಧ ಭಾಗಗಳಲ್ಲಿನ ಭತ್ತದ ಗದ್ದೆಗಳಿಗೆ ಕಾಡು ಹಂದಿಗಳ ಹಾವಳಿ ವಿಪರೀತವಿದ್ದು, ತಂಡೋಪತಂಡವಾಗಿ ಬರುವ ಹಂದಿಗಳ ...