ಹಿಂದೂಗಳನ್ನು ಭಟ್ಕಳದಿಂದ ಓಡಿಸಲು ಕಾಂಗ್ರೇಸ್ ಸರ್ಕಾರ ಪ್ರಯತ್ನಿಸುತ್ತಿದೆ-ಶೋಭಾ ಆರೋಪ

Source: sonews | By Staff Correspondent | Published on 19th September 2017, 3:43 PM | Coastal News | State News | Don't Miss |

ಭಟ್ಕಳ: ಸಿದ್ಧರಾಮಯ್ಯನವರ ಸರ್ಕಾರ ಹಿಂದೂಗಳನ್ನು ಭಟ್ಕಳದಿಂದ ಓಡಿಸುವ ಪ್ರಯತ್ನ ಮಾಡುತ್ತಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಆರೋಪಿಸಿದರು. 
ಅವರು ಮಂಗಳವಾರ ಪುರಸಭೆಯ ಅಂಗಡಿ ಕಬ್ಜಾ ಮಾಡುವ ಸಂದರ್ಭದಲ್ಲಿ ಆತ್ಮಹತ್ಯೆಗೆ ಯತ್ನಿಸಿ ಸಾವನ್ನಪ್ಪಿದ ಆಸರಕೇರಿಯ ರಾಮಚಂದ್ರ ನಾಯ್ಕ ಮನೆಗೆ ಭೇಟಿ ನೀಡಿ ನಂತರ ಆಸಕೇರಿ ವೆಂಕಟರಮಣ ಸಭಾಮಂಟದಲ್ಲಿ ಜರಗಿದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು. 
೯೩ ರ ಕೋಮುಗಲಭೆಯ ನಂತರ ಈ ಭಾಗದ ಜನ ಶಾಂತಿಯುತ ಬದುಕನ್ನು ನಡೆಸುತ್ತಿದ್ದರು ಸಿದ್ಧರಾಮಯ್ಯನವರ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ ಅಧಿಕಾರಿಗಳನ್ನು ಬಳಸಿಕೊಂಡು ಇಲ್ಲಿ ಕೋಮುಗಲಭೆಗಳಿಗೆ ಕುಮ್ಮಕ್ಕು ನೀಡಲಾಗುತ್ತಿದೆ ಎಂದು ಆರೋಪಿಸಿದ ಶೋಭಾ, ಕೊಪ್ಪಳದ ಗಂಗಾವತಿಯಲ್ಲಿ ಕೋಮುಗಲಭೆಯನ್ನು ಸೃಷ್ಟಿಸಿ ದೊಡ್ಡಪ್ರಮಾಣದಲ್ಲಿ ಹಿಂದೂಗಳಿಗೆ ಬಂಧಿಸಲಾಯಿತು. ಇತ್ತಿಚೆಗೆ ಕಲ್ಕಡ್ಕದಲ್ಲಿ ೨ತಿಂಗಳು ಕಾಲ ೧೪೪ಕಲಂ ಜಾರಿಗೊಳಿಸಿದರು ಕಳೆದ ಮೂವತ್ತು ವರ್ಷಗಳಿಂದ ಅಲ್ಲಿ ಯಾವುದೇ ಗಲಭೆಗಳು ನಡೆದಿರಲಿಲ್ಲ. ಯು.ಟಿ.ಕಾದರ್ ಮತ್ತು ರಮನಾಥ್ ರೈ ಕುಮ್ಮಕ್ಕಿನಿಂದಾಗಿ ಒಂದು ಸಣ್ಣ ವೈಯಕ್ತಿಕ ಘಟನೆಯನ್ನು ಕೋಮುಗಲಭೆಯನ್ನಾಗಿ ಪರಿವರ್ತಿಸಲಾಯಿತು. ಕರಾವಳಿ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದ್ದು ಚುನಾವಣೆ ಹತ್ತಿರದ ಸಮಯದಲ್ಲಿ ಸಿದ್ಧರಾಮಯ್ಯನವರು ಅಧಿಕಾರಿಗಳನ್ನು ಛೂ ಬಿಟ್ಟು ಹಿಂದುಗಳನ್ನು ತೊಂದರೆ ಕೊಡುವುದರ ಮೂಲಕ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ನಿಮ್ಮ ಸರ್ಕಾರದಲ್ಲಿ ಹಿಂದೂಗಳಿಗೆ ಬದುಕುವ, ವ್ಯಾಪಾರ ಮಾಡುವ ಹಕ್ಕು ಇಲ್ಲವೇ? ಎಂದು ಪ್ರಶ್ನಿಸಿದ ಅವರು ಭಟ್ಕಳವನ್ನು ಮತ್ತೊಂದು ಕಲ್ಲಡ್ಕವನ್ನಾಗಿ ಮಾಡಬೇಡಿ ಎಂದರು. 
ಭಟ್ಕಳ ಪುರಸಭೆ ಅಂಗಡಿಕಾರರನ್ನು ಒಕ್ಕಲೆಬ್ಬಿಸುವ ಮೂಲಕ ಅವರ ಬದುಕಿಗೆ ಮುಳುವಾಗುತ್ತಿದೆ. ಪುರಸಭೆಯ ನೀತಿಯಿಂದಾಗಿಯೇ ರಾಮಚಂದ್ರ ನಾಯ್ಕ ಸಾವನ್ನಪ್ಪಿದ್ದು ಅಧಿಕಾರಿಗಳು, ಪೊಲೀಸರ ಎದುರೇ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದೆ ಅವರನ್ನು ತಡೆಯದೆ ಸಾಯಲು ಬಿಟ್ಟಿರುವುದು ನಾಚಿಕೆಗೇಡು, ಇದು ಆತ್ಮಹತ್ಯೆಯಲ್ಲ ಇದೊಂದು ಹಿಂದೂವಿನ ಕೊಲೆಯಾಗಿದೆ ಎಂದರು. ಸಾರ್ವಜನಿಕರು ಸಹಜವಾಗಿ ಪ್ರತಿಭಟನೆ ಮಾಡಿದ್ದಾರೆ ಕಲ್ಲು ತೂರಾಟ ಮಾಡಿದ್ದಾರೆ. ಆದರೆ ಕಾಂಗ್ರೇಸ್ ಸರ್ಕಾರ ಬಿಜೆಪಿ ಕಾರ್ಯಕರ್ತರ ಮೇಲೆ ದರೋಡೆ, ಹಲ್ಲೆಯಂತಹ ಸುಳ್ಳು ಪ್ರಕರಣ ದಾಖಲಿಸುವುದರ ಮೂಲಕ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಮೇಲೆ ದೌರ್ಜನ್ಯ ಮಾಡಲಾಗುತ್ತಿದೆ. ರಾತ್ರೋರಾತ್ರಿ ಮನೆಗಳಿಗೆ ನುಗ್ತುತ್ತಿರುವ ಪೊಲೀಸರು ದೇವರ ಕೋಣೆಗೆ ಬೂಟಿಗಾಲಿನಲ್ಲಿ ಪ್ರವೇಶಿಸುತ್ತಿದ್ದಾರೆ. ಬಂಧನದ ವಾರೆಂಟ್ ಇಲ್ಲದೆ ಮನೆಗೆಳಿಗೆ ನುಗ್ಗಲು ನಿಮಗೆ ಯಾರು ಅನುಮತಿ ನೀಡಿದ್ದಾರೆ ಎಂದು ಪೊಲೀಸರಿಗೆ ತರಾಟೆಗೆ ತೆಗೆದುಕೊಂಡರು. ಕಾಂಗ್ರೇಸ್ ಸರ್ಕಾರದ ಈ ದೋರಣೆ ಸರಿಯಲ್ಲ ಇದನ್ನು ಬಿಜೆಪಿ ಸಹಿಸಲ್ಲ ಎಂದು ಖಡಕ್ಕಾಗಿ ನುಡಿದರು. ಇದು ಕೇವಲ ಎಚ್ಚರಿಕೆಯಾಗಿದೆ ಬಂಧಿತ ೧೧ ಮಂದಿ ಕಾರ್ಯಕರ್ತರನ್ನು ಕೂಡಲೇ ಬಿಡುಗಡೆಗೊಳಿಸಬೇಕು, ಇನ್ನು ಮುಂದೇ ಒಬ್ಬನೇ ಒಬ್ಬ ಕಾರ್ಯಕರ್ತನನ್ನು ಮುಟ್ಟಿದರೂ ಪರಿಣಾಮ ನೆಟ್ಟಗಾಗಿರಲ್ಲ ನಾನೇ ಬಂದು ಧರಣಿ ಕುಳಿತುಕೊಳ್ಳುತ್ತೇನೆ ಎಂದು ಧಮಕಿ ಹಾಕಿದರು. 
ಪೊಲೀಸರೇ ಹದ್ದು ಮೀರಿ ವರ್ತಿಸಬೇಡಿ, ಸರ್ಕಾರಗಳು ಬರುತ್ತವೆ ಹೋಗುತ್ತವೆ ಹೋಗುತ್ತವೆ. ಇನ್ನೂ ಆರು ತಿಂಗಳಲ್ಲಿ ನಮ್ಮ ಸರ್ಕಾರ ಬರುತ್ತೆ ಎಂದು ಎಚ್ಚರಿಸಿದರು. ಭಟ್ಕಳದಲ್ಲಿ ಹಿಂದೂ ಮುಸ್ಲಿಮರು ಶಾಂತಿಯಿಂದ್ದಾರೆ ಅದರ ಶಾಂತಿಯನ್ನು ಕೆಡಿಸುವ ಪ್ರಯತ್ನ ಸರ್ಕಾರ ಮಾಡುತ್ತಿದೆ ಎಂದೂ ಆರೋಪಿಸಿದ ಅವರು ಮೃತ ರಾಮಚಂದ್ರ ನಾಯ್ಕರಿಗೆ ೧೦ಲಕ್ಷ ರೂ.ಪರಿಹಾರ ನೀಡಬೇಕೆಂದು ಆಗ್ರಹಿಸಿದರು. ನಾನು ಹಿಂದೂಗಳ ರಕ್ಷಣೆಗೆ ಭದ್ರವಾಗಿದ್ದೇನೆ. ನಮ್ಮ ಹುಡುಗರನ್ನು ಮುಟ್ಟಲು ಬಂದರೆ ನಾನು ಸುಮ್ಮನಿರಲ್ಲ ಎಂದು ಘರ್ಜಿಸಿದ ಕರಂದ್ಲಾಜೆ ಹಿಂದೂಗಳನ್ನು ದೈರ್ಯತುಂಬಲಿಕ್ಕಾಗಿಯೆ ನಾನು ಇಲ್ಲಿಗೆ ಬಂದಿದ್ದೇನೆ ಎಂದರು. 
ಈ ಸಂದರ್ಭದಲ್ಲಿ ಸುನಿಲ್ ಹೆಗಡೆ, ದಿನಕರ ಶೆಟ್ಟಿ, ಜಿ.ಡಿ.ನಾಯ್ಕ, ರಾಜೇಶ್ ನಾಯ್ಕ ಮುಂತಾದವರು ಉಪಸ್ಥಿತರಿದ್ದರು. 
 

Read These Next

ಜಿಲ್ಲೆಯಲ್ಲಿ ಮೇ 7 ರಂದು ಮತದಾನ, ತಕ್ಷಣದಿಂದಲೇ ನೀತಿ ಸಂಹಿತೆ ಜಾರಿ : ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಕಾರವಾರ : ಚುನಾವಣಾ ಆಯೋಗದ ನಿರ್ದೇಶನದಂತೆ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ಮತದಾನ ನಡೆಯಲಿದ್ದು, ಜಿಲ್ಲೆಯಲ್ಲಿ ...

ಭಟ್ಕಳ: ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೂಕ್ಷ್ಮ ಬೋಧನೆ, ಲಲಿತಕಲೆ ಮತ್ತು ರಂಗಭೂಮಿ ಕಾರ್ಯಾಗಾರ ಮುಕ್ತಾಯ

ಶಿಕ್ಷಕರಾದವರು ವಿದ್ಯಾರ್ಥಿಗಳಿಗೆ ಸಂಸ್ಕಾರ, ಮಾನವೀಯ ಮೌಲ್ಯ, ಪರಸ್ಪರ ಗೌರವ ನೀಡುವುದು ಮತ್ತು ರಾಷ್ಟ್ರಭಕ್ತಿಯನ್ನು ಹೆಚ್ಚಿಸುವ ...

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...

ಬೆಂಗಳೂರು: ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗಾಗಿ “ಸಹಾಯವಾಣಿ”

ಎಸ್.ಎಸ್.ಎಲ್.ಸಿ. ಪರೀಕ್ಷೆ ವಿದ್ಯಾರ್ಥಿ ಜೀವನದಲ್ಲಿ ನಿರ್ಣಾಯಕ ಹಂತದ ಪರೀಕ್ಷೆಯಾಗಿರುತ್ತದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅತಿ ...