ಮಳೆ ನೀರಿಗೆ ಕೊಚ್ಚಿಹೋಗಿದ್ದ ನಿಧಿ ಆಚಾರ್ಯ ಮೃತದೇಹ ಪತ್ತೆ

Source: sonews | By Staff Correspondent | Published on 30th May 2018, 11:06 PM | Coastal News | State News | Don't Miss |

ಉಡುಪಿ: ಮಂಗಳವಾರ ಬಿದ್ದ ಮಳೆಗೆ ಶಾಲೆಯಿಂದ ಮನೆಗೆ ಬರುತ್ತಿದ್ದ ನಿಧಿ ಆಚಾರ್ಯ(೯) ಕೊಚ್ಚಿಹೋಗಿದ್ದು ಬುಧವಾರ ಆಕೆಯ ಮೃತದೇಹ ಪತ್ತೆಯಾಗಿದೆ ಎಂದು ತಿಳಿಬಂದಿದೆ. 

ತನ್ನ ಸಹೋದರಿಯೊಂದಿಗೆ ಶಾಲೆಯಿಂದ ಮನೆಗೆ ಬೈಸಿಕಲ್ ನಲ್ಲಿ ಬರುತ್ತಿದ್ದಾಗ ಮಳೆ ನೀರಿನಲ್ಲಿ ಕೊಚ್ಚಿಹೋಗಿದ್ದ ಬಾಲಕಿಯನ್ನು ಹುಡುಕುವ ಎಲ್ಲ ಪ್ರಯತ್ನಗಳು ಮಾಡಿದ್ದರೂ ಕೂಡ ಯಾವು ಫಲ ನೀಡಲಿಲ್ಲ ಎನ್ನಲಾಗಿದ್ದು ಬುಧವಾರ ಬಾಲಕೀಯ ಮೃತದೇಹ ಪತ್ತೆಯಾಗಿದೆ ಎನ್ನಲಾಗಿದೆ.  ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿದ್ದು ೪ಲಕ್ಷ ರೂ ಪರಿಹಾರ ಘೋಷಿಸಿದ್ಧಾರೆ. ಪ್ರಕರಣ ಮೂಡಬಿದರಿ  ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. 

ಪಾದೆಬೆಟ್ಟು ನಿಧಿ ಸಾವಿಗೆ ರಾ.ಹೆದ್ದಾರಿ ಸೇತುವೆ ಕಾಮಗಾರಿ ಕಾರಣ

ಉಡುಪಿ: ಪಡುಬಿದ್ರೆ ಸಮೀಪದ ಪಾದೆಬೆಟ್ಟುವಿನಲ್ಲಿ ನಿನ್ನೆ ಮಳೆ ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟ ವಿದ್ಯಾರ್ಥಿನಿ ನಿಧಿ ಆಚಾರ್ಯ(9) ಸಾವಿಗೆ ಪಡುಬಿದ್ರೆ ಕಲ್ಸಂಕ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆಯುತ್ತಿರುವ ಸೇತುವೆ ಕಾಮಗಾರಿಯೇ ಕಾರಣ ಎಂಬುದು ಸ್ಥಳೀಯರ ಆರೋಪ.

 

ಪಾದೆಬೆಟ್ಟುವಿನ ಉಮೇಶ್ ಆಚಾರ್ಯ ಹಾಗೂ ಆಶಾ ದಂಪತಿಯ ಮಕ್ಕ ಳಾದ ಮೃತ ನಿಧಿ ಆಚಾರ್ಯ ಹಾಗೂ ಆಕೆಯ ಸಹೋದರಿ ನಿಶಾ ಆಚಾರ್ಯ ಪಡುಬಿದ್ರೆಯ ಎಸ್‌ಬಿವಿಪಿ ಹಿರಿಯ ಪ್ರಾಥಮಿಕ ಶಾಲೆಯಿಂದ ಮನೆಗೆ ಸೈಕಲಿ ನಲ್ಲಿ ಬರುತ್ತಿರುವಾಗ ಮಳೆ ನೀರಿಗೆ ಕೊಚ್ಚಿ ಹೋಗಿದ್ದರು. ಇವರಲ್ಲಿ ನಿಶಾಳನ್ನು ಸ್ಥಳೀಯರು ರಕ್ಷಿಸಿದ್ದರು. ಆದರೆ ನಿಧಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಪಾದೆಬೆಟ್ಟು ಪರಿಸರದ ಮಳೆಯ ನೀರು ತೋಡಿನಲ್ಲಿ ಹರಿದು ಹೋಗಿ ಕಲ್ಸಂಕ ರಾಷ್ಟ್ರೀಯ ಹೆದ್ದಾರಿ ಸೇತುವೆ ಮೂಲಕ ಸಮುದ್ರ ಸೇರುತ್ತದೆ. ಆದರೆ ಈ ಬಾರಿ ಸೇತುವೆ ಕಾಮಗಾರಿಯಿಂದಾಗಿ ಇಲ್ಲಿ ಹರಿದು ಹೋಗುವ ನೀರಿಗೆ ತಡೆಯೊಡ್ಡಿದಂತಾಗಿತ್ತು. ಇದರಿಂದ ಪಾದೆಬೆಟ್ಟು ಪ್ರದೇಶದ ಇಡೀ ಗದ್ದೆಗಳು ಮಳೆ ನೀರಿನಿಂದ ತುಂಬಿ ಹೋಗಿ ಹೊಳೆಯಂತಾಗಿವೆ. ಇದರ ಪರಿಣಾಮ ಪಾದೆಬೆಟ್ಟುವಿನಿಂದ ಪಡುಬಿದ್ರೆಗೆ ತೆರಳುವ ರಸ್ತೆ ನೀರಿನಲ್ಲಿ ಮುಳುಗಿ ಹೋಗಿದೆ. ಹೀಗಾಗಿ ಬಾಲಕಿ ನಿಧಿ ಜೀವ ಬಲಿಯಾಗಿದೆಂದು ಸ್ಥಳೀಯರು ದೂರುತ್ತಾರೆ.

‘ನಿನ್ನೆ ಸುರಿದ ಭಾರೀ ಮಳೆಯುಂದಾಗಿ ಇಲ್ಲಿ ನೀರು ತುಂಬಾ ರಭಸವಾಗಿ ಹರಿದು ಹೋಗುತ್ತಿತ್ತು. ಇಂದು ಮಳೆ ಕಡಿಮೆಯಾದರೂ ನೀರು ಮಾತ್ರ ಇಳಿದು ಹೋಗಿಲ್ಲ. ರಸ್ತೆ ಕೂಡ ನೀರುಪಾಲಾಗಿಯೇ ಇದೆ. ಇದಕ್ಕೆ ರಾ.ಹೆ. ಯಲ್ಲಿನ ಸೇತುವೆ ಕಾಮಗಾರಿಯೇ ಕಾರಣ. ಇಷ್ಟು ವರ್ಷ ಇಲ್ಲಿ ಈ ರೀತಿಯ ಸಮಸ್ಯೆ ಎದುರಾಗಿಲ್ಲ. ಒಂದೆಡೆ ಸೇತುವೆ ಕಾಮಗಾರಿಯಿಂದ ಸರಿಯಾಗಿ ನೀರು ಹರಿದುಹೋಗಲು ಜಾಗ ಇಲ್ಲದಿರುವುದು, ಮತ್ತೊಂದೆಡೆ ಯುಪಿ ಸಿಎಲ್ ಸ್ಥಾವರದಿಂದ ನೀರು ಹರಿದು ಬರುತ್ತಿರುವುದರಿಂದ ಇಡೀ ಪಾದೆಬೆಟ್ಟು ಪರಿಸರ ಜಲಾವೃತ್ತಗೊಂಡಿದೆ ಎಂದು ಸ್ಥಳೀಯರಾದ ಅಭಿಷೇಕ್ ದೂರಿದರು.

‘ನಮ್ಮ ಮಕ್ಕಳು ಕೂಡ ಶಾಲೆಯಿಂದ ಇದೇ ದಾರಿಯಿಂದ ನಡೆದುಕೊಂಡು ಬರುತ್ತಿದ್ದಾರೆ. ಆದುದರಿಂದ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಮೊದಲು ಸೇತುವೆ ಕಾಮಗಾರಿಯನ್ನು ಮುಗಿಸಬೇಕು. ಅಲ್ಲದೆ ಪಾದೆಬೆಟ್ಟು ರಸ್ತೆಯ ಇಕ್ಕೆಲಗಳಿಗೆ ಸುರಕ್ಷತಾ ಕ್ರಮವಾಗಿ ತಡೆ ನಿರ್ಮಿಸಬೇಕು. ಅಲ್ಲದೆ ಈ ರಸ್ತೆ ಕಾಂಕ್ರೀಟ್ ಕಾಮ ಗಾರಿಯು ಅರ್ಧಕ್ಕೆ ನಿಂತಿದ್ದು ಕೂಡಲೇ ಇದನ್ನು ಪೂರ್ಣಗೊಳಿಸಬೇಕು’ ಎಂದು ಜಗದೀಶ್ ಆಚಾರ್ಯ ಪಾದೆಬೆಟ್ಟು ಒತ್ತಾಯಿಸಿದರು.

ಮೃತ ಬಾಲಕಿಯ ತಾಯಿ ಆಶಾ ಮೂಲತಃ ಉಚ್ಚಿಲ ಪಣಿಯೂರಿನವರ ರಾಗಿದ್ದು, ಇವರು ಹಲವು ವರ್ಷಗಳಿಂದ ಪಡುಬಿದ್ರೆಯಲ್ಲಿ ವಾಸವಾಗಿದ್ದರು. ಎರಡು ವರ್ಷಗಳ ಹಿಂದೆ ಪಾದೆಬೆಟ್ಟುವಿನಲ್ಲಿ ಜಾಗ ಖರೀದಿಸಿ ಮನೆ ನಿರ್ಮಿಸಿ ಕೊಂಡಿದ್ದು. ಉಮೇಶ್ ಆಚಾರ್ಯ ಅಡುಗೆ ಮತ್ತು ಮರದ ಕೆಲಸ ನಿರ್ವ ಹಿಸುತ್ತಿದ್ದಾರೆ. ಈ ಬಡ ಕುಟುಂಬ ಇದೀಗ ಮನೆ ಮಗಳನ್ನು ಕಳೆದುಕೊಂಡು ರೋದಿಸುತ್ತಿದೆ.

‘ಹೆದ್ದಾರಿ ಸೇತುವೆ ಕಾಮಗಾರಿಯಿಂದ ಇಲ್ಲಿ ನೆರೆ ಸಂಭವಿಸಿ ಬಾಲಕಿ ಸಾವಿಗೆ ಕಾರಣವಾಗಿದ್ದರೆ ನವಯುಗ ಕಂಪೆನಿ ಮೇಲೆ ತಕ್ಷಣ ಕ್ರಮ ತೆಗೆದುಕೊಳ್ಳು ವಂತೆ ಪತ್ರ ಬರೆಯುತ್ತೇನೆ. ಅಲ್ಲದೆ ಈ ಕುರಿತು ಅಧಿಕಾರಿಗಳ ಜೊತೆ ಮಾತನಾಡುತ್ತೇನೆ. ಸೇತುವೆಯಡಿಯಲ್ಲಿ ನೀರು ಸುಗಮ ರೀತಿಯಲ್ಲಿ ಹರಿದುಹೋಗಲು ಕ್ರಮ ಕೈಗೊಳ್ಳಲು ತಿಳಿಸುತ್ತೇನೆ. ನಿಧಾನಗತಿಯಲ್ಲಿ ಕಾಮಗಾರಿ ನಡೆಸುತ್ತಿರುವ ನವಯುಗ ಕಂಪೆನಿಯನ್ನು ಕಪ್ಪುಪಟ್ಟಿಗೆ ಸೇರಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಈ ರಸ್ತೆ ಬಿಟ್ಟರೆ ಬೇರೆ ಯಾವುದೇ ರಸ್ತೆ ಕಾಮಗಾರಿಯನ್ನು ಅವರಿಗೆ ನೀಡಿಲ್ಲ’

-ಶೋಭಾ ಕರಂದ್ಲಾಜೆ, ಸಂಸದರು, ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ.

ನಿಶಾಳ ಜೀವ ಉಳಿಸಿದ 50ರ ಹರೆಯದ ಬೇಬಿ!

 


ಮನೆಯಿಂದ ಹೊರಗೆ ಕಾಲಿಡಲಾದಷ್ಟು ಮಳೆ ಹಾಗೂ ಸಿಡಿಲಿನ ಅಬ್ಬರದ ನಡುವೆ ಮನೆ ಎದುರಿನ ನೆರೆಯ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಬಾಲಕಿ ಯೊಬ್ಬಳ ಚೀರಾಟ ಕೇಳಿ ರಕ್ಷಣೆಗೆ ದಾವಿಸಿದ 50ರ ಹರೆಯದ ಮಹಿಳೆ ಸ್ಥಳೀಯ ರನ್ನು ಬೊಬ್ಬೆ ಹಾಕಿ ಕರೆದು ಆಕೆಯ ಜೀವ ರಕ್ಷಿಸಿದರು.

 

ಇದು ಮಂಗಳವಾರ ಪಡುಬಿದ್ರೆ ಸಮೀಪದ ಪಾದೆಬೆಟ್ಟುವಿನ ನೆರೆಯ ನೀರಿ ನಲ್ಲಿ ಕೊಚ್ಚಿ ಹೋಗಿ ಮೃತಪಟ್ಟ ನಿಧಿ ಆಚಾರ್ಯರ ಸಹೋದರಿ ನಿಶಾ ಆಚಾರ್ಯಳನ್ನು ಸ್ಥಳೀಯ ಮಹಿಳೆ ಬೇಬಿ ರಕ್ಷಿಸಿದ ಕ್ಷಣ.

‘ಸಂಜೆ ವೇಳೆ ಮನೆಯ ಕಿಟಕಿ ಕೂಡ ತೆರೆಯಲು ಆಗದಷ್ಟು ಗುಡುಗು ಸಿಡಿಲು ಬರುತ್ತಿತ್ತು. ಈ ಮಧ್ಯೆ ನಾನು ಮನೆಯ ಆವರಣದಲ್ಲಿ ತುಂಬಿದ ನೀರು ಹರಿದು ಹೋಗುವಂತೆ ಮಾಡಲು ಹೊರಗಡೆ ಬಂದಿದ್ದೆ. ಆಗ ಮನೆಯ ಎದುರಿನ ಗದ್ದೆಯಲ್ಲಿ ತುಂಬಿದ ನೆರೆಯ ನೀರಿನ ಮಧ್ಯೆ ಬಾಲಕಿಯೊಬ್ಬಳು ವಂಶಿ.. ವಂಶಿ.. (ಬೇಬಿಯ ಅಣ್ಣನ ಮಗಳು, ನಿಶಾಳ ಸಹಪಾಠಿ) ಎಂದು ಬೊಬ್ಬೆ ಹಾಕುತ್ತಿರುವುದು ಕಂಡು ಬಂತು’

ಗದ್ದೆಯ ಮಧ್ಯೆ ಸಿಕ್ಕಿದ ದಂಡೆಯ ಆಧಾರದಲ್ಲಿ ಸಿಲುಕಿದ ಬಾಲಕಿಯನ್ನು ರಕ್ಷಿಸಲು ಮುಂದಾದೆ. ನೋಡಿದರೆ ಆಕೆ ನನ್ನ ಅಣ್ಣನ ಮಗಳು ವಂಶಿಯ ಸಹ ಪಾಠಿ ನಿಶಾ ಆಗಿದ್ದಳು. ನನಗೆ ಈಜಲು ಬರುತ್ತದೆ. ಆದರೆ ಈಗ ವಯಸ್ಸಾಗಿ ರುವುದರಿಂದ ಸರಿಯಾಗಿ ಈಜಲು ಆಗುತ್ತಿರಲಿಲ್ಲ. ಆದರೂ ಆಕೆಯನ್ನು ರಕ್ಷಿಸ ಬೇಕೆಂದು ಆದಷ್ಟು ಹತ್ತಿರ ಹೋದೆ. ನನ್ನ ಕುತ್ತಿಗೆ ವರೆಗೆ ನೀರು ಬಂತು. ಕೊನೆಗೆ ಹತ್ತಿರ ಹೋಗಲು ಸಾಧ್ಯವಾಗಿಲ್ಲ. ಆಗ ಬೈಕಿನಲ್ಲಿ ಹೋಗುತ್ತಿದ್ದ ಯುವಕನನ್ನು ಕರೆದೆ. ನಂತರ ಬೊಬ್ಬೆ ಹಾಕಿ ಮನೆ ಸಮೀಪದ ಸತೀಶ್ ಶೆಟ್ಟಿ ಅವರನ್ನು ಕರೆದೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಅವರು ಬಾಲಕಿಯನ್ನು ರಕ್ಷಿಸಿದರು. ನಂತರ ನಮಗೆ ಆಕೆಯ ತಂಗಿ ನಿಧಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾಳೆ ಎಂದು ಗೊತ್ತಾಯಿತು’ ಎಂದು ಪಾದೆಬೆಟ್ಟುವಿನ ಬೇಬಿ ತಿಳಿಸಿದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...