12 ಲಕ್ಷ ಮೌಲ್ಯದ ಬೈಕ್‍ಗಳನ್ನು ಕದ್ದ ಈತ ಮಾಡಿದ್ದೇನು ಗೊತ್ತಾ.?

Source: S.O. News Service | By MV Bhatkal | Published on 19th October 2018, 12:24 PM | State News | Don't Miss |

ಬೆಂಗಳೂರಿನ:ಪೊಲೀಸರು ಬಹಳ ದಿನಗಳಿಂದ ನಗರದಲ್ಲಿ ಐಷಾರಾಮಿ ಬೈಕ್‍ಗಳನ್ನು ಕಳ್ಳತನ ಮಾಡುತ್ತಿದ್ದ ಖದೀಮನನ್ನು ಲಾಕ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಹೌದು, ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಹಲವಾರು ದಿನಗಳಿಂದ ಬೆಂಗಳೂರು ನಗರದಲ್ಲಿನ ಐಷಾರಾಮಿ ಬೈಕ್‍ಗಳನ್ನು ಕಳ್ಳತನ ಮಾಡುತ್ತಿದ್ದ 20 ವರ್ಷದ ಮಂಜುನಾಥ್ ಹೆಗಡೆ ಎಂಬಾತನನ್ನು ಬಂಧಿಸಿದ್ದು, ಸುಮಾರು 12 ಲಕ್ಷ ಬೆಲೆ ಬಾಳುವ ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಆದ್ರೆ ಐಷಾರಾಮಿ ಬೈಕ್‍ಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಈ ಬೈಕ್ ಖದೀಮ ಬಂದ ಹಣದಿಂದ ಏನು ಮಾಡ್ತಿದ್ದ ಗೊತ್ತಾ.? ಕದ್ದ ಹಣದಲ್ಲಿ ಮಜಾ ಮಾಡುತ್ತಿದ್ದ ಈತನಿಗೆ ಗೋವಾ ಅಂದ್ರೆ ಎಲ್ಲಿಲ್ಲದ ಕ್ರೇಜ್. ಅಲ್ಲಿ ಕ್ಯಾಸಿನೊ ಸೇರಿದಂತೆ ಹಲವು ಗ್ಯಾಂಬ್ಲಿಂಗ್‌ಗಳಿಗೆ ಭೇಟಿ ನೀಡುತ್ತಿದ್ದ ಈತ ಬಿಟ್ಟಿದುಡ್ಡಲ್ಲಿ ಸಿಕ್ಕಷ್ಟು ಮಾಜಾ ಮಾಡುತ್ತಿದ್ದನಂತೆ.

ಹೀಗಾಗಿ ಗ್ಯಾಂಬ್ಲಿಂಗ್‌ಗೆ ಹಣವಿಲ್ಲದಾಗ ಬೈಕ್‍ ಕಳ್ಳತನವನ್ನೇ ಫುಲ್ ಟೈಮ್ ಬಿಸಿನೆಸ್ ಮಾಡಿಕೊಂಡಿದ್ದ ಇತ, ಕದ್ದ ಬೈಕ್‍ಗಳನ್ನು ಕೈಗೆ ಸಿಕ್ಕಷ್ಟು ದುಡ್ಡಿಗೆ ಮಾರಾಟ ಮಾಡಿ ಅದರಿಂದ ಬಂದ ಹಣವನ್ನು ಗೋವಾದಲ್ಲಿ ಕ್ಯಾಸಿನೋ ಆಡಲು ಬಳಕೆ ಮಾಡುತ್ತಿದ್ದ. ಐಷಾರಾಮಿ ಬೈಕ್‍ಗಳನ್ನು ಮಾರಾಟ ಮಾಡುವ ಮತ್ತು ಅನ್‍ಲೈನ್‍ನಲ್ಲಿ ಬೈಕ್‍ಗಳನ್ನು ಮಾರಾಟ ಮಾಡುವವರನ್ನೇ ಟಾರ್ಗೆಟ್‍ ಮಾಡುತ್ತಿದ್ದ ಇತ, ಟೆಸ್ಟ್ ರೈಡ್ ನೆಪದಲ್ಲಿ ಬೈಕ್ ಎಗರಿಸುವುದನ್ನು ಕರಗತ ಮಾಡಿಕೊಂಡಿದ್ದ. ಇನ್ನೊಂದು ಇಂಟ್ರಸ್ಟಿಂಗ್ ವಿಚಾರ ಅಂದ್ರೆ, ಟಿವಿಯಲ್ಲಿ ಬರುತ್ತಿದ್ದ ಕ್ರೈಮ್ ಟಿವಿ ಕಾರ್ಯಕ್ರಮಗಳಿಂದ ಪ್ರೇರಿತನಾಗಿದ್ದ ಮಂಜುನಾಥ್, ಅಗಾಗ ತನ್ನ ಮೊಬೈಲ್ ಮತ್ತು ಸಿಮ್‍ಗಳನ್ನು ಬದಲಾಯಿಸುತ್ತಿದ್ದನಂತೆ. ಹೀಗಾಗಿಯೇ ಸ್ವಲ್ಪ ತಡವಾಗಿ ಪೊಲೀಸರ ಕೈಗೆ ಸಿಕ್ಕಿದ್ದಾನೆ.

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...