ಪಿಕ್‍ನಿಕ್ ಗೆ ತೆರಳಿದ್ದ ಭಟ್ಕಳದ ಯುವಕರು ಶಿರೂರು ನದಿಯಲ್ಲಿ ಮುಳುಗಿ ಸಾವು

Source: sonews | By Staff Correspondent | Published on 2nd September 2018, 7:39 PM | Coastal News | State News | Don't Miss |

ಭಟ್ಕಳ: ಕೋಣಮಕ್ಕಿ ಸೇತುವೆ ಬಳಿ ಕುಟುಂಬದ ಸದಸ್ಯರ ಜೊತೆ ಪಿಕ್ ನಿಕ್ ಬಂದ ವೇಳೆ ಪಕ್ಕದ ನದಿಯಲ್ಲಿ ಈಜಲು ತೆರಳಿ ನೀರಿನಲ್ಲಿ ಮುಳುಗಿದ ಘಟನೆ ಶಿರೂರು ಸಮೀಪದ ಕೋಣಮಕ್ಕಿ ಬಳಿ  ಭಾನುವಾರ ಸಂಜೆ ನಡೆದಿದೆ.

ಭಟ್ಕಳದ ಕಾರಗದ್ದೆ ನಿವಾಸಿಗಳೆಂದು ಹೇಳಾಗಿರುವ 7ಜನ ಸ್ನೇಹಿತರು ಇಂದು ಶಿರೂರು ಬಳಿ ಕೋಣಮಕ್ಕಿಯ ಜಂಗ್ಲಪೀರಾ ಎಂಬಲ್ಲಿ ಪಿಕ್ನಿಕ್ ಗೆ ತೆರಳಿದ್ದು ಇದೇ ವೇಳೆ ಪಕ್ಕದ ನದಿಯಲ್ಲಿ ಈಜಲು ತೆರಳಿದ ವೇಳೆ ಈ ದುರ್ಘಟನೆ ಸಂಭವಿಸಿದೆ. 

ಮೃತ ಯುವಕರನ್ನು ರಾಜು ಸತೀಶ್ ನಾಯ್ಕ(35) ಹಾಗೂ ಝಮೀರ್ ಇಮಾಮ್ ಶೇಖ್(28) ಎಂದು ಗುರುತಿಸಲಾಗಿದೆ. 

ಯುವಕರು ನದಿಯಲ್ಲಿ ಮುಳುಗಿದ ಸುದ್ದಿ ಭಟ್ಕಳದಲ್ಲಿ ಕಾಡ್ಗಿಚ್ಚಿನಂತೆ ಹರಡಿದ್ದು ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಯುವಕರು ಘಟನಾ ಸ್ಥಳಕ್ಕೆ ತಲುಪಿ ನದಿಯಲ್ಲಿ ಕಾಣೆಯದವರನ್ನು ಹುಡುಕಲು ಪ್ರಯತ್ನಿಸಿದ್ದು ಬಹಳ ಸಮಯದ ನಂತರ ಸುಮಾರು 7ಗಂಟೆಗೆ ಮೃತದೇಹ ಪತ್ತೆಯಾಯಿತು ಎಂದು ತಿಳಿದುಬಂದಿದೆ. 

ಮೃತದೇಹಗಳನ್ನು ಬೈಂದೂರು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತರ ಕುಟುಂಬಕ್ಕೆ ಹಸ್ತಾಂತರಿಸಲಾಗಿದ್ದು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 


 

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...