ರಾಹುಲ್ ಕೊರಳು ಸೇರಿದ ಆಭಿಮಾನಿ ಎಸೆದ ಹಾರ

Source: sonews | By sub editor | Published on 5th April 2018, 11:54 PM | State News | Don't Miss |

ತುಮಕೂರು: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರೋಡ್‍ಶೋ ವೇಳೆ ಅಭಿಮಾನಿಯೊಬ್ಬರು ಅವರತ್ತ ಎಸೆದ ಹೂವಿನ ಹಾರ ಸರಿಯಾಗಿ ಕೊರಳಿಗೆ ಬಿದ್ದ ಸ್ವಾರಸ್ಯಕರ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರಾಹುಲ್‍ಗಾಂಧಿ ಅಭಿಮಾನಿಗಳತ್ತ ಕೈಬೀಸುತ್ತಿದ್ದಾಗ, ಅಭಿಮಾನಿಗಳ ಮಧ್ಯದಿಂದ ವ್ಯಕ್ತಿಯೊಬ್ಬರು ರಾಹುಲ್ ಅವರತ್ತ ಹೂಮಾಲೆ ಎಸೆದಿದ್ದಾರೆ. ಕೊರಳಿಗೆ ಹೂಮಾಲೆ ಸುತ್ತಿಕೊಂಡ ತಕ್ಷಣ ಒಂದು ಕ್ಷಣ ಬೆರಗಾದ ರಾಹುಲ್, ಅದನ್ನು ಬಳಿಕ ಕತ್ತಿನಿಂದ ತೆಗೆದರು.

ಈ ಹಿನ್ನೆಲೆಯಲ್ಲಿ ರೋಡ್‍ಶೋ ವೇಳೆ ಯಾವುದೇ ಭದ್ರತಾ ಲೋಪ ಆಗಿದೆಯೇ ಎಂಬ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಪ್ರವಾಸದ ಅಂಗವಾಗಿ ರಾಹುಲ್ ಗಾಂಧಿಯವರು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ, ಶ್ರೀ ಶಿವಕುಮಾರ ಸ್ವಾಮೀಜಿಯವರ ಆಶೀರ್ವಾದ ಪಡೆದರು.

Read These Next