ನಾಗರೀಕತೆ ಹೆಸರಿನಲ್ಲಿ  ಬುಡಕಟ್ಟುಗಳ ಕಲೆ ಸಂಸ್ಕøತಿ ವಿನಾಶದತ್ತ-ಸಾಹಿತಿ ಸ.ರಘುನಾಥ್

Source: sonews | By Staff Correspondent | Published on 9th August 2018, 11:45 PM | State News | Don't Miss |

ಶ್ರೀನಿವಾಸಪುರ: ನಾಗರೀಕತೆ ಹೆಸರಿನಲ್ಲಿ  ಬುಡಕಟ್ಟುಗಳ ಕಲೆ ಸಂಸ್ಕøತಿಯನ್ನು ಅಲ್ಲದೇ ಆಯಾ ಸಮುದಾಯದ ಕುಲ ಕಲೆಯ ಜೊತೆ ಜನಜೀವನ ವ್ಯವಸ್ಥೆ ವಿನಾಶದತ್ತ ತಲುಪುತ್ತಿದೆ ಎಂದು ಸಾಹಿತಿ ಸ.ರಘುನಾಥ್ ರವರು ವಿಷಾದ ವ್ಯಕ್ತಪಡಿಸಿದರು.
   
ಶ್ರೀನಿವಾಸಪುರ ತಾಲ್ಲೂಕಿನ ರಾಯಲ್ಪಾಡು ಗ್ರಾಮದಲ್ಲಿ ಕನ್ನಡ ಜನಪದ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಬುಡಕಟ್ಟು ದಿನಾಚರಣೆ ಕಾರ್ಯಕ್ರಮದಲ್ಲಿ ಕೊಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಆಯ್ಕೆಯಾದ ಕೆ.ವಿನಾಗರಾಜ್, ಶಬ್ಬೀರ್ ಅಹಮದ್ ಹಾಗು ಉಪೇಂದ್ರ ರವರನ್ನು ಹಾಗು ಬುಡಕಟ್ಟು ಸಮುದಾಯದ ಇಬ್ಬರನ್ನು ಸನ್ಮಾನಿಸಿ ಮಾತನಾಡಿ ರಾಜ್ಯದಲ್ಲಿ ಮಾತ್ರವಲ್ಲದೇ ಭಾರತದಲ್ಲಿ ಬುಡಕಟ್ಟು ಸಮುದಾಯಗಳು ಶೋಷಿತ ವ್ಯವಸ್ಥೆಯಲ್ಲಿವೆ ಇವರು ಅನೇಕ ಹೆಸರುಗಳಲ್ಲಿ ಕಾಡಿನ ಮದ್ಯೆ ಬೆಟ್ಟಗುಡ್ಡಗಳ ನಡುವೆ ವಾಸ ಮಾಡುತ್ತಿದ್ದರು ಕೆಲವರು ಗ್ರಾಮಗಳಿಗೆ ಹೊಂದಿಕೊಂಡು ಜೀವನ ನಡೆಸುತ್ತಿದ್ದಾರೆ  ಆದರೂ ಆಪ್ರಿಕಾ ಮತ್ತಿತರ ಕಡೆ ಬುಡಕಟ್ಟು ಜನಾಂಗ ಇಂದಿಗೂ ಆದಿಮಾನವರಂತೆ ನಾಗರೀಕ ಸಂಸ್ಕøತಿಯಿಂದ ದೂರ ಉಳಿದಿದ್ದಾರೆ ಎಂದರು. ಆನ ಸಾಮಾನ್ಯರಲ್ಲಿ ತಮ್ಮದೇ ಆದ ಕಲೆಯನ್ನು ಪ್ರದರ್ಶಿಸುವವರಾಗಿದ್ದಾರೆ ಅಲ್ಲದೇ ವೇಷ ಸಹ ಬಿನ್ನವಾಗಿದೆÉಂದರು. ಎಲ್ಲಾ ಸಮುದಾಯಗಳಲ್ಲಿ ಅವರದೇ ಆದ ಕಲೆ ಸಾಹಿತ್ಯ ಜನಪದ ಸಾಹಿತ್ಯ ಸಂಸ್ಕøತಿ ಇದೆ ಇದನ್ನು ಶಿಕ್ಷಕರು ಹಾಗು ವಿಧ್ಯಾರ್ಥಿಗಳು ಪೋಷಣೆ ಮಾಡಿದಾಗ ಮಾತ್ರ ಉಳಿಯಲು ಸಾದ್ಯವೆಂದರು.
    
ಮತ್ತೊಂದು ಕಡೆ ನೋಡುವಾಗ ಬೆಂಗಳೂರು ನಗರ ಕಡೆ ಜನಪದ ಸಂಸ್ಕøತಿ ಇದು ಬೆಂಗಳೂರಿಗೆ ಮಾತ್ರ ಒಳನಾಡು ಆಗುತ್ತಿದ್ದು ಗ್ರಾಮಾಂತರ ಜನಪದವಾಗುತ್ತಿಲ್ಲವೆಂದರು. ರಾಜ್ಯದ ವಿವಿದ ಭಾಗಗಳಲ್ಲಿ ಬುಡಕಟ್ಟು ಇದೆ ಆದರೆ ಇದನ್ನು ಗುರ್ತಿಸುವ ಅಧಿಕಾರಿಗಳು ಜಾಣಕುರುಡುತನ ಪ್ರದರ್ಶಿಸುತ್ತಿದ್ದಾರೆಂದರು. ನಮಗೆ ಗೊತ್ತಿಲ್ಲದ ಅನೇಕ ಕಲೆಗಳು ಇವೆ ವೇಷ, ಭಾಷೆ ವಿಭಿನ್ನವಾಗಿದ್ನಾ ಆದರೂ ಇವುಗಳನ್ನು ಉಳಿಸುವ ಅಥವಾ ಪೋಷಿಸುವ ಪ್ರಯತ್ನಗಳು ಆಗುತ್ತಿಲ್ಲ ಆದ್ದರಿಂದ ಗ್ರಾಮಗಳಲ್ಲಿ ಅಳಿವಿನ ಅಂಚಿನಲ್ಲಿರುವ ಬುಡುಕಟ್ಟ ಕಲೆಗಳನ್ನು  ನಾವು ಗೌರವಿಸಿ ಉಳಿಸಬೇಕಾಗಿದೆ ಎಂದು ಹೇಳಿದರು.
   
ನಿವೃತ್ತ ಮುಖ್ಯ ಶಿಕ್ಷಕ ಆರ್. ಚೌಡರೆಡ್ಡಿ ರವರು ಮಾತನಾಡಿ  ನಮ್ಮ ನಡುವೆ ಎಲೆಮರೆಯ ಕಾಯಿಯಂತೆ ಹತ್ತು ಹಲವು ಕಲೆ ಪ್ರಾಕಾರಗಳಿವೆ ಇದನ್ನೇ ತಮ್ಮ ವೃತ್ತಯಗಿಸಿಕೊಂಡಿದ್ದಾರೆ ಇದರಲ್ಲಿ ಬುಡಕಟ್ಟು ಕಲೆ ಒಂದಾಗಿದೆ ಎಂದರು. ಇವರು ಕಾಡಿನ ಮದ್ಯೆ ವಾಸ ಮಡುವ ಸಂದರ್ಭದಲ್ಲಿ ಪರಿಸರಕ್ಕೆ ಹಾನಿಯಾಗದೇ ಒಂದಿಷ್ಟು ಜಮೀನು ಮಾಡಿಕೊಂಡು ದವಸ ಧಾನ್ಯ ಬೆಳೆ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಾರೆ ನಂತರ ಅವರು ಬೇರೆ ಕಡೆ ವಾಸ ಮಾಡಲು ಹೊರಡುತ್ತಾರೆ ಈಗಾಗಿ ಇವರು ಅಲೆಮಾರಿಗಳು ಸಹ ಹೌದು ಎಂದರು. ಮುಖ್ಯವಾಗಿ ಪರಸರ ಬದ್ದತೆ ಇತ್ತು ಅಲ್ಲದೇ ಇಂದಿಗೂ ಕೆಲವು ಕಡೆ ಕಠಿಣ ಪರಿಸ್ಥಿತಿಯಲ್ಲಿ ಇದ್ದಾರೆ ಬುಡಕಟ್ಟು ಜನಜೀವನ ವಿಭಿನ್ನವಾಗಿದೆ ಅಲ್ಲದೇ ಭಾಷೆ, ವೇಷ ಸಹ ಕಲೆಯ ಪ್ರತೀಕವಾಗಿದ್ದು ಇದನ್ನು ಉಳಿಸುವ ಜೊತೆಯಲ್ಲಿ ನಾವು ಮಾದರಿಯಾಗಬೇಕಾಗಿದೆ ಎಂದು ತಿಳಿಸಿದರು.
 
ಈ ಸಂದರ್ಭದಲ್ಲಿ ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಎನ್.ಮುನಿವೆಂಕಟೇಗೌಡ, ತಾಲ್ಲೂಕು ಅಧ್ಯಕ್ಷ ಜಾಮಕಾಯಿಲು ವೆಂಕಟೇಶ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಗ್ರಾಮೀಣ ಕಾರ್ಯದರ್ಶಿ ಶಬ್ಬೀರ್ ಅಹಮದ್, ಸಂಘದ ಜಿಲ್ಲಾ ಸಮಿತಿ ಸದಸ್ಯರಾದ ಕೆ.ವಿ.ನಾಗರಾಜ್, ಬಿ.ಕೆ.ಉಪೇಂದ್ರ, ಗ್ರಾಮ ಪಂಚಾಯ್ತಿ ಸದಸ್ಯ ಡಿ.ಎನ್.ನಾರಾಯಣಸ್ವಾಮಿ, ಬುಡ ಬುಡಕಲು ರಾಜಣ್ಣ, ಕೊಂಡಮಾಮ ರಾಮದಾಸ್,  ಮುಖ್ಯ ಶಿಕ್ಷಕ ವಿ.ಆರ್.ಹೊನ್ನಾಕಟ್ಟಿ, ಪತ್ರಕರ್ತರಾದ ರಾಯಲ್ಪಾಡು ವಿಶ್ವನಾಥಶಾಸ್ತ್ರಿ, ಯಮನೂರು ನಾಗರಾಜ್, ಎಸ್. ವೇಣುಗೋಪಾಲ್, ಶಿಕ್ಷಕರಾದ ಟಿ.ಆರ್.ನಾರಾಯಣಸ್ವಾಮಿ, ಶ್ಯಾಮಲಮ್ಮ, ಜಿ.ಎಸ್. ನಾರಾಯಣಶ್ವಾಮಿ, ಅಶೋಕ್ ಇತರರು ಹಾಜರಿದ್ದರು.
 

Read These Next

ಕೊನೆಗೂ ಮೈತ್ರಿ ಸರ್ಕಾರ ಪತನ

ಬೆಂಗಳೂರು: ಕಳೆದ ೧೪ ತಿಂಗಳ ಹಿಂದೆ ರಚನೆಗೊಂಡ ಜೆ.ಡಿ.ಎಸ್. ಮತ್ತು ಕಾಂಗ್ರೇಸ್ ಮೈತ್ರಿ ಸರ್ಕಾರ ಕೊನೆಗೂ ಮಂಗಳವಾರ ಅಲ್ಪಮತಕ್ಕೆ ...

ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಸಂಪಾದಕರ ಸಂಘದ ನೂತನ ಆಡಳಿತ ಮಂಡಳಿ ಪದಾಧಿಕಾರಿಗಳ ನೇಮಕ

ಕೋಲಾರ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಸಂಪಾದಕರ ಸಂಘದ ನೂತನ ಆಡಳಿತ ಮಂಡಳಿ ಪದಾಧಿಕಾರಿಗಳನ್ನು ...

ನಕಲಿ ಬಿತ್ತನೆ ಬೀಜ ಹಾಗೂ ಕೀಟ ನಾಶಕ ಕಂಪನಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ರೈತಸಂಘದಿಂದ ಮೌನ ಹೋರಾಟ

ಕೋಲಾರ: ರೈತರ ಮರಣ ಶಾಸನ ಬರೆಯುತ್ತಿರುವ ನಕಲಿ ಬಿತ್ತನೆ ಬೀಜ ಹಾಗೂ ಕೀಟ ನಾಶಕ ಕಂಪನಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ...

ಗೌನಿಪಲ್ಲಿ ಗ್ರಾಮ ಪಂಚಾಯಿತಿ ಅಧ್ಯರಾಗಿ ಕಾಂಗ್ರೆಸ್‌ನ ಶಂಕರಮ್ಮ ,ಉಪಾಧ್ಯರಾಗಿ ಮಂಜುನಾಥ ಆರಾಧ್ಯ

ಶ್ರೀನಿವಾಸಪುರ: ತಾಲ್ಲೂಕಿನ ಗೌನಿಪಲ್ಲಿ ಗ್ರಾಮ ಪಂಚಾಯಿತಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯರಾಗಿ ಕಾಂಗ್ರೆಸ್‌ನ ಶಂಕರಮ್ಮ ...

ಕೊನೆಗೂ ಮೈತ್ರಿ ಸರ್ಕಾರ ಪತನ

ಬೆಂಗಳೂರು: ಕಳೆದ ೧೪ ತಿಂಗಳ ಹಿಂದೆ ರಚನೆಗೊಂಡ ಜೆ.ಡಿ.ಎಸ್. ಮತ್ತು ಕಾಂಗ್ರೇಸ್ ಮೈತ್ರಿ ಸರ್ಕಾರ ಕೊನೆಗೂ ಮಂಗಳವಾರ ಅಲ್ಪಮತಕ್ಕೆ ...