ಭಟ್ಕಳ ಸೋಡಿಗದ್ದೆ ಕ್ರಾಸ್ ಬಳಿ ರೈಲು ಬಡಿದು ಯುವಕ ಸಾವು

Source: S O News Service | By Manju Naik | Published on 13th June 2018, 8:17 PM | Coastal News | Don't Miss |

ಭಟ್ಕಳ:ತಾಲೂಕಿನ ಸಮೀಪದ ಸರ್ಪನಕಟ್ಟಾ ಸೋಡಿಗದ್ದೆ ಕ್ರಾಸ್ ಬಳಿ ಮಂಗಳೂರುನಿಂದ ಗೋವಾ ಕಡೆ ಹೊಂಟಿದ್ದ ಇಂಟರ್ಸೆಪ್ವರ್ ರೈಲು ಬರುವ ಸಂದರ್ಭದಲ್ಲಿ ರೈಲು ಹಳಿ ದಾಟುವಾಗ  ಯುವಕ ಆಕಸ್ಮಿಕವಾಗಿ ರೈಲು ಬಡಿದು ಸ್ಥಳದಲ್ಲಿ ಮೃತಪಟ್ಟ ಬಗ್ಗೆ  ಬುದುವಾರ ಬೆಳಗ್ಗೆ ನಡೆದಿದೆ.

ರೈಲು ಬಡಿದ ಯುವಕನ ದೇಹದ ಭಾಗವನ್ನು ಸಂಪೂರ್ಣ ಛಿದ್ರ ವಾಗಿದ್ದು.ಮೃತಪಟ್ಟ ಯುವಕ ರಾಧಾಕೃಷ್ಣ ಕುಪ್ಪ ಗೊಂಡ್ 22 ವರ್ಷ ಎನ್ನಲಾಗಿದೆ.

ಇತ ಭಟ್ಕಳ ತಾಲ್ಲೂಕಿನ ತಲಾನ ಯುವಕನಾಗಿದ್ದು  ಕೆಲವು ವರ್ಷದಿಂದ ಮಾನಸಿವಾಗಿ ಬರಳುತ್ತಿದ್ದ ಎಂದು ತಿಳಿದುಬಂದಿದೆ. ಸರ್ಪಕಟ್ಟಾ ನಲ್ಲಿ ಇರುವ ತನ್ನ ಅಕ್ಕ ಮನೆಯಲ್ಲಿ ಕೆಲವು ದಿನದಿಂದ ಇದ್ದು ಈತ ಶಿವಮೊಗ್ಗ ನಲ್ಲಿರುವ ಮಾನಸ ನರ್ಸಿಂಗ್ ಹೋಂ ಚಿಕಿತ್ಸೆ ಪಡೆಯುತ್ತಿದ್ದ ಎನ್ನಲಾಗಿದೆ.

ಸ್ಥಳಕ್ಕೆ ಆಗಮಿಸಿದ ಭಟ್ಕಳ ಸಿ.ಪಿ.ಐ.ಎಲ್ ಗಣೇಶ.ಭಟ್ಕಳ ಗ್ರಾಮೀಣ ಠಾಣೆ ಪಿ.ಎಸ್.ಐ.ರವಿ ಪರಿಶೀಲನೆ ನಡೆಸಿದ್ದಾರೆ.ಈ ಬಗ್ಗೆ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read These Next