ಅ.೨೮ರಿಂದ ಎರಡುದಿನ ಬಾಸಗೋಡಿನಲ್ಲಿ ಯಕ್ಷ ಸಂಭ್ರಮ: ಎಂ.ಎ.ಹೆಗಡೆ

Source: sonews | By sub editor | Published on 27th July 2018, 10:04 PM | Coastal News |

ಕಾರವಾರ : ದಿನಾಂಕ 28-07-2018 ಮತ್ತು 29-07-2018ರಂದು ಎರಡು ದಿನಗಳ ಕಾಲ ಅಂಕೋಲ ತಾಲೂಕಿನ ಬಾಸರಗೋಡಿನ ಆರ್.ಎನ್.ಶೆಟ್ಟಿ ಸಭಾಭವನದಲ್ಲಿ ಯಕ್ಷಸಂಭ್ರಮ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ ತಿಳಿಸಿದ್ದಾರೆ.
    
ಕಾರವಾರ ಪತ್ರಿಕಾಭವನದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಅವರು, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಯೋಜನೆಯಡಿ ಯಕ್ಷಗಾನ ಮತ್ತು ಮೂಡಲಪಾಯ ಯಕ್ಷಗಾನದ ಬೆಳವಣಿಗೆಯ ದೃಷ್ಟಿಯಲ್ಲಿ ಎಲ್ಲ ಕಲೆಗಳನ್ನು ಕ್ರೋಢೀಕರಿಸಿ ಒಂದೇ ವೇದಿಕೆಯಲ್ಲಿ ಅನಾವರಣಗೊಳ್ಳುವ ನೆಲೆಯಲ್ಲಿ ಯಕ್ಷಸಂಭ್ರಮ ಕಾರ್ಯಕ್ರಮವನ್ನು ಕರಾವಳಿಯ ಅಂಕೋಲ ತಾಲೂಕಿನ ಬಾಸಗೋಡಿನಲ್ಲಿ ಹಮ್ಮಿಕೊಂಡಿರುವುದಾಗಿ ಅವರು ತಿಳಿಸಿದರು.
    
ದಿನಾಂಕ 28-07-2018ರಂದು ಸಂಜೆ 6ಕ್ಕೆ ಶಾಸಕಿ ರೂಪಾಲಿ ನಾಯ್ಕ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು ತಾವು ಅಧ್ಯಕ್ಷತೆ ವಹಿಸುತ್ತಿರುವುದಾಗಿ ಹಾಗೂ ತಾಲೂಕು ಪಂಚಾಯ್ತಿ ಅಧ್ಯಕ್ಷೆ ಸುಜತಾ ಗಾಂವಕರ್, ಪುರಸಭೆ ಅಧ್ಯಕ್ಷೆ ಅಂಜಲಿ ಐಗಳ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ವಿಧ್ವಾಂಸರು, ಕಲಾವಿದರು ಭಾಗವಹಿಸಲಿದ್ದಾರೆ ಎಂದರು.
    
ಯಕ್ಷಗಾನ ಕುರಿತು ವಿಚಾರ ಗೋಷ್ಠಿಯಲ್ಲಿ ಹಿರಿಯ ಸಾಹಿತಿ ವಿಷ್ಣುನಾಯ್ಕ್ ಸೇರಿದಂತೆ ಅನೇಕ ವಿದ್ವಾಂಸರು ಭಾಗವಹಿಸಲಿದ್ದಾರೆ. ಅಲ್ಲದೆ ಅಂದು ದಾವಣಗೆರೆ ಜಿಲ್ಲೆ ಸಿದ್ದವನಹಳ್ಳಿ ಮೂಡಲಪಾಯ ಕಲಾವಿದರಿಂದ ಕರಿಭಂಟನ ಕಾಳಗ ಮೂಡಲಪಾಯ ಯಕ್ಷಗಾನ ಪ್ರದರ್ಶನ, ಅಂಕೋಲದ ಮಹಾಗಣಪತಿ ಯಕ್ಷಗಾನ ಮಂಡಳಿ ಮಕ್ಕಳಿಂದ ರುಕ್ಮಿಣಿ ಕಲ್ಯಾಣ ಪ್ರಸಂಗ ಹಾಗೂ ಗುಂದಾ ಸಿದ್ದಿವಿನಾಯಕ್ ಯಕ್ಷಗಾನ ಮಂಡಳಿಯಿಂದ ರತ್ನಾವತಿ ಕಲ್ಯಾಣ ಪ್ರಸಂಗಗಳ ಪ್ರದರ್ಶನ ನಡೆಯಲಿವೆ.
    
ದಿನಾಂಕ 25-07-2018ರಂದು ಸಂಜೆ 5ಗಂಟೆಗೆ ಸಮಾರೋಪ ಸಮಾರಂಭದಲ್ಲಿ ಬೆಳಂಬರದ ನಾಟಿ ವೈದ್ಯ ಹನುಮಂತಗೌಡ ಅವರ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿಗಳು ನಡೆಯಲಿವೆ. ಅಲ್ಲದೆ, ಗುಂದಾ ಕೀರ್ತಿ ಮಹಿಳಾ ತಂಡದವರಿಂದ ಕೃಷ್ಣ ಸಂದಾನ ಪ್ರಸಂಗದ ತಾಳಮದ್ದಳೆ, ಬೋಳೆ ಮಾರಿಕಾಂಬ ಯಕ್ಷಗಾನ ಮತ್ತು ಸಾಂಸ್ಕøತಿಕ ಕ್ರೀಡಾ ಸಂಘ ಇವರಿಂದ ಗದಾಯುದ್ಧ ಹಾಗೂ ಗುಂದ ಪ್ರೇರಣಾ ಅವರಿಂದ ರಾಜಾ ರುದ್ರ ಕೂಪ ಪ್ರಸಂಗ ಯಕ್ಷಗಾನ ಪ್ರದರ್ಶನವಾಗಲಿದೆ. ಈ ಎಲ್ಲ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಯಕ್ಷಸಂಭ್ರಮವನ್ನು ಪ್ರೋತ್ಸಹಿಸುವಂತೆ ಅವರು ಕೋರಿದರು.
    
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸಂಚಾಲಕ ಡಾ.ರಾಮಕೃಷ್ಣ ಗುಂದಿ, ಮಾರಿಕಾಂಬ ಯಕ್ಷಗಾನ ಮತ್ತು ಸಾಂಸ್ಕøತಿಕ ಕ್ರೀಡಾ ಸಂಘದ ಕಾರ್ಯದರ್ಶಿ ಆನಂದು ನಾರಾಯಣ ಅಗೇರ, ಕರ್ನಾಟಕ ಯಕ್ಷಗಾನ ಅಕಾಡೆಮಿ ರಿಜಿಸ್ಟ್ರಾರ್ ಎಸ್.ಎಚ್.ಶಿವರುದ್ರಪ್ಪ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಹಿಮಂತರಾಜು ಜಿ. ಉಪಸ್ಥಿತರಿದ್ದರು.
 

Read These Next

ಕೂರ್ಮಗಡ ದೋಣಿ ದುರಂತ; ಇದುವರೆಗೆ ೧೪ ಮೃತದೇಹ ಪತ್ತೆ;  ೧೯ ಜನರ ರಕ್ಷಣೆ; ಇಬ್ಬರ ಮೃತದೇಹಕ್ಕಾಗಿ ಶೋಧ

ಕಾರವಾರ: ೨೦೧೯ನೇ ವರ್ಷದ ಆರಂಭದಲ್ಲೇ ಉತ್ತರಕನ್ನಡ ಜಿಲ್ಲೆಯ ಕೂರ್ಮಗಡ ದೋಣಿ ದುರಂತ ಅತ್ಯಂತ ಭಯಾನಕವಾಗಿದ್ದು ೧೬ಮಂದಿಯನ್ನು ...

ತ್ರಿವಿಧ ದಾಸೋಹಿ ಡಾ.ಶಿವಕುಮಾರ್ ಶಿವಯೋಗಿಗಳ ನಿಧನಕ್ಕೆ ರಾಬ್ತಾ ಮಿಲ್ಲತ್ ತೀವ್ರ ಸಂತಾಪ

ಭಟ್ಕಳ: ತ್ರಿವಿಧ ದಾಸೋಹಿ ಜ್ಞಾನಯೋಗಿ ಸಿದ್ದಗಂಗಾ ಶ್ರೀಗಳ ನಿಧನಕ್ಕೆ ರಾಬ್ತಾ-ಇ-ಮಿಲ್ಲತ್ ಸಂಸ್ಥೆಯ ಜಿಲ್ಲಾಧ್ಯಕ್ಷ ನ್ಯಾಯಾವಾದಿ ...

ಶಿರಾಲಿ ಹೆದ್ದಾರಿ ಅಗಲಿಕರಣ;ಸಾರ್ವಜನಿಕರ ಬೇಡಿಯಂತೆ 30 ರ ಬದಲು 45ಮೀಟರ್ ವಿಸ್ತರಣೆ-ಕೇಂದ್ರ ಸಚಿವ ಅನಂತ್ ಭರವಸೆ

ಭಟ್ಕಳ: ಶಿರಾಲಿ ಭಾಗದ ಗ್ರಾಮಸ್ಥರ ಬೇಡಿಕೆಯಂತೆ ರಾ.ಹೆ.66 ರ ಅಗಲೀಕರಣವನ್ನು 30ಮೀಟರ್ ಬದಲು 45ಮೀಟರ್ ಗೆ ವಿಸ್ತರಿಸಲು ಅಗತ್ಯ ಕ್ರಮಗಳನ್ನು ...