ಟಿಪ್ಪರ್ ಮಾಲಕರ ಮುಷ್ಕರ : ಮರಳುಗಾರಿಕೆ ಜಿಲ್ಲಾಡಳಿತ ಆರಂಭಿಸಲು ವಿಫಲ

Source: S.O. News Service | By MV Bhatkal | Published on 19th October 2018, 3:15 PM | Coastal News |

ಕುಂದಾಪುರ : ಭರವಸೆಯಂತೆ ಕರಾವಳಿ ನಿಯಂತ್ರಣ ವಲಯದಲ್ಲಿ (ಸಿಆರ್ಝಡ್) ಇನ್ನೂ ಮರಳುಗಾರಿಕೆಗೆ ಅವಕಾಶ ಕಲ್ಪಿಸಲು ವಿಫಲವಾದ ಜಿಲ್ಲಾಡಳಿತದ ಕ್ರಮ ವಿರೋಧಿಸಿ ಟಿಪ್ಪ ಮಾಲಕರ ಅಸೋಸಿಯೇಶನ್ ಸದಸ್ಯರು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.
ಅಕ್ಟೋಬರ್ 18ರಂದು ಹೆಮ್ಮಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಟಿಪ್ಪರುಗಳನ್ನು ನಿಲುಗಡೆ ಮಾಡಿರುವ ಮಾಲಕರು ಮುಷ್ಕರ ನಡೆಸುತ್ತಿದ್ದಾರೆ. “ಜಿಲ್ಲಾಡಳಿತ ಮರಳುಗಾರಿಕೆಯನ್ನು ಸಂಪೂರ್ಣ ನಿಷೇಧಿಸುವುದಾದರೆ, ಅದು ಮರಳು ನೀತಿ ಅನುಷ್ಠಾನಗೊಳಿಸಿ, ಪುನರಾರಂಭಿಸಬೇಕು” ಎಂದು ಅಸೋಸಿಯೇಶನ್ ಅಧ್ಯಕ್ಷ ಗುಣಕರ ಶೆಟ್ಟಿ ಪ್ರತಿಭಟನಕಾರರನ್ನುದ್ದೇಶಿಸಿ ಹೇಳಿದರು.
“1,500ಕ್ಕೂ ಹೆಚ್ಚು ಟಿಪ್ಪರುಗಳು ಮತ್ತು ಮಿನಿ ಟಿಪ್ಪರುಗಳು ಮರಳುಗಾರಿಕೆ ಮತ್ತು ಇತರ ನಿರ್ಮಾಣ ಕಾಮಗಾರಿ ಅವಲಂಬಿಸಿವೆ. ಇತರರ ತಪ್ಪಿಗೆ ಟಿಪ್ಪರು ಮಾಲಕರನ್ನು ಹೊಣೆ ಮಾಡಬಾರದು. ಕಳೆದ ಮೂರು ವರ್ಷಗಳಲ್ಲಿ ನೂರಾರು ದಿನಗೂಲಿ ಕಾರ್ಮಿಕರು ಹಾಗೂ ಕಟ್ಟಡ ಕಾರ್ಮಿಕರು ನಿರುದ್ಯೋಗಿಗಳಾಗಿದ್ದಾರೆ” ಎಂದರು.
ಟಿಪ್ಪರು ಮಾಲಕರಿಗೆ ಪರ್ಯಾಯ ದಾರಿ ತೋರಿಸದೆ ಜಿಲ್ಲಾಡಳಿತ ಮರಳುಗಾರಿಕೆ ನಿಷೇಧಿಸಿದೆ. ತಕ್ಷಣ ಮರಳುಗಾರಿಕೆ ಆರಂಭಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಡೀಸಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಶೆಟ್ಟಿ ಎಚ್ಚರಿಸಿದರು.
“ನಾವು ಏಕಕಾಲದಲ್ಲಿ ಕಾರ್ಕಳ, ಕಟಪಾಡಿ ಮತ್ತು ಕುಂದಾಪುರದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದೇವೆ” ಎಂದು ಹೇಳಿದರು. ಈ ಸಂದರ್ಭದಲ್ಲಿ ಟಿಪ್ಪರು ಮಾಲಕರ ಅಸೋಸಿಯೇಶನಿನ ರಮೇಶ್ ಕುಂದರ್, ರಾಜೇಶ್ ಕಾವೇರಿ, ಶರತ್ ಕುಮಾರ್ ಶೆಟ್ಟಿ ಮತ್ತು ಇತರರು ಇದ್ದರು

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಕಾರವಾರ: ಚುನಾವಣಾ ವೀಕ್ಷಕರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ವೀಕ್ಷಣೆ; 17 ನಾಮಪತ್ರಗಳು ತಿರಸ್ಕೃತ

ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಕ್ಕೆ ಸಂಬಂಧಿಸದಂತೆ ಜಿಲ್ಲೆಗೆ ಭಾರತ ಚುನಾವಣಾ ಆಯೋಗದಿಂದ ವೀಕ್ಷಕರಾಗಿ ನೇಮಕಗೊಂಡಿರುವ ರಾಜೀವ್ ...

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...