’ದಲಿತ’ ಪದವನ್ನು ’ಪರಿಶಿಷ್ಟ ಜಾತಿ’ ಎಂಬ ಅರ್ಥಕ್ಕೆ ಸೀಮಿತಗೊಳಿಸಬಾರದು

Source: sonews | By Staff Correspondent | Published on 17th September 2018, 11:35 PM | National News | Special Report | Guest Editorial | Don't Miss |

''ಪರಿಶಿಷ್ಟ ಜಾತಿಎಂಬ ಪದವು ಏಕಕಾಲದಲ್ಲಿ ಅನಾಕ್ರಮಣಕಾರಿಯೂ, ನೈತಿಕವಾಗಿ ದಮನಕಾರಿಯೂ ಮತ್ತು ಸಾಮಾಜಿಕವಾಗಿ ಟೊಳ್ಳಾದದ್ದೂ ಆಗಿದೆ.

ಕೇಂದ್ರದ ಮಾಹಿತಿ ಮತ್ತು ಪ್ರಸಾರ ಇಲಾಖೆಯು ಇನ್ನು ಮುಂದೆ ಮಾಧ್ಯಮಗಳು ದಲಿತ ಎಂಬ ಪದವನ್ನು ಬಳಸಬಾರದೆಂದು ಇತ್ತೀಚೆಗೆ ಸಲಹಾತ್ಮಕ ಸೂಚನೆಯೊಂದನ್ನು ಹೊರಡಿಸಿದೆ. ಇದರ ಪರಿಣಾಮವಾಗಿ ಪದಗಳ ಬಳಕೆಯಲ್ಲಿ ಒಂದು ನೈತಿಕ ಶ್ರೇಣೀಕರಣವೇ ಏರ್ಪಟ್ಟಿದೆ. ನಾಗಪುರದ ಕೆಲವು ಬೌದ್ಧರು ಮಾಡಿದ ಮನವಿಯನ್ನು ಪುರಸ್ಕರಿಸುತ್ತಾದಲಿತಎಂಬ ಪದವು ನೈತಿಕವಾಗಿ ಆಕ್ರಮಣಕಾರಿಯೂ ಮತ್ತು ಅಪಮಾನಕಾರಿಯೂ ಆಗಿರುವುದರಿಂದ ಅದನ್ನು ಕೈಬಿಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿರುವ ಕೇಂದ್ರ ಸರ್ಕಾರ ಅದರ ಬದಲಿಗೆ ಸಾಂವಿಧಾನಿಕವಾಗಿ ನೀಡಲ್ಪಟ್ಟಿರುವ ಪರಿಶಿಷ್ಟ ಜಾತಿ ಎಂಬ ಪದವು ಹೆಚ್ಚು ಸರಿಯಾದದ್ದು ಎಂದು ಹೇಳಿದೆ.

ಆದರೆ ಪರಿಶಿಷ್ಟ ಜಾತಿ (ಎಸ್ಸಿ)ಗಳಿಂದ ಸ್ಪರ್ಧೆಯನ್ನು ಎದುರಿಸಬೇಕಾಗಿದೆ ಎಂದು ಭಾವಿಸುವ ಮೇಲ್ಜಾತಿಗಳಿಂದ ಪದವು ಈಗಾಗಲೇ ಸಾಕಷ್ಟು ದುರ್ಬಳಕೆಯಾಗಲ್ಪಟ್ಟಿರುವುದರಿಂದ ಸಂವಿಧಾನಕ್ಕೆ ಪದ ಬಳಕೆಯ ಮೇಲೆ ಯಾವುದೇ ನಿಯಂತ್ರಣವಿಲ್ಲದಂತಾಗಿದೆ. ದೆಹಲಿಯ ವೈದ್ಯಕೀಯ ಕಾಲೇಜೊಂದರಲ್ಲಿ ಎಸ್ಸಿ ವಿದ್ಯಾರ್ಥಿಗಳ ಜಾತಿ ಸೂಚಿಸಿ ಅವಹೇಳನ ಮಾಡುವ ಉದ್ದೇಶದಿಂದಲೇ ಪದವನ್ನು ಬಳಕೆ ಮಾಡಲಾಗಿತ್ತು. ಎಸ್ಸಿಗಳು ತಮಗೆ ಸರಿಸಮವಾಗಿ ತಮ್ಮ ಕಾಲೇಜಿನಲ್ಲಿ ಸೇರ್ಪಡೆಯಾಗಿರುವುದನ್ನು ಸಹಿಸಲಾಗದ ಮೇಲ್ಜಾತಿ ವಿದ್ಯಾರ್ಥಿಗಳು ಸಂವಿಧಾನದತ್ತವಾದ ಪರಿಶಿಷ್ಟ ಜಾತಿ-ಶೆಡ್ಯೂಲ್ಡ್ ಕ್ಯಾಸ್ಟ್- ಎಂಬ ಪದವನ್ನುಶೆಡ್ಡೂಎಂದು ವಿಕೃತಗೊಳಿಸುವ ಮೂಲಕ ಅವಹೇಳನಕಾರಿಯಾಗಿ ಬಳಸಲಾರಂಭಿಸಿದರು. ಹೀಗೆ ಪದವನ್ನು ವಿಕೃತಗೊಳಿಸುವ ಮೂಲಕ ಮೇಲ್ಜಾತಿಗಳು ಎಸ್ಸಿಗಳನ್ನು ನೈತಿಕವಾಗಿ ದಮನಿಸುತ್ತಿದ್ದರಲ್ಲದೆ ವರ್ಗಕ್ಕೆ ಸೇರಿದ ಹಾಲಿ ಮತ್ತು ಭಾವೀ ಫಲಾನುಭವಿಗಳಲ್ಲಿ ಬೇಗುದಿಯನ್ನು ಹುಟ್ಟುಹಾಕಿದರು. ಪದವು ಅಪಮಾನಕಾರಿಯಾಗಿದ್ದರೂ, ಅದರ ಫಲಾನುಭವಿಗಳು ಪದವನ್ನು ಕಾಪಾಡಿಕೊಳ್ಳಲು ಮುಂಚೂಣಿಯಲ್ಲಿ ನಿಂತಿದ್ದಾರೆ ಮತ್ತು ಮೇಲ್ಜಾತಿಗಳು ಸೌಲಭ್ಯದ ದುರುಪಯೋಗ ಮಾಡಿಕೊಳ್ಳದಂತೆ ತಡೆಗಟಲು ಜಾತಿ ಪ್ರಮಾಣಪತ್ರವನ್ನು ಸರಿಯಾದ ಪರಿಶೀಲನಾ ಪ್ರಕ್ರಿಯೆಗಳ ಮೂಲಕ ಸರ್ಕಾರೀ ಯಂತ್ರಾಂಗವೇ ಒದಗಿಸಬೇಕೆಂದು ಆಗ್ರಹಿಸುತ್ತಿದ್ದಾರೆ. ಪರಿಶಿಷ್ಟ ಜಾತಿ ಎಂಬ ಪದವು ನೈತಿಕವಾಗಿಯೂ ಒಳಗಿಂದಲೇ ಕೊರೆಕೊರೆದು ಟೊಳ್ಳುಗೊಳಿಸುವ ಪದವಾಗಿದೆ. ಒಂದು ಜಾತಿ ಧೃಢೀಕರಣ ಪ್ರಮಾಣಪತ್ರವಾಗಿ ಅದು ಅವಕಾಶಗಳ ವ್ಯವಸ್ಥೆಯೊಳಗೆ ಪ್ರವೇಶವನ್ನು ಒದಗಿಸಿಕೊಡುವುದು ನಿಜ. ಆದರೆ ಅದೇ ಸಮಯದಲ್ಲಿ ಅದು ದಮನಿತರೊಳಗಿನ ಸೌಹಾರ್ದತೆಗೆ ಧಕ್ಕೆ ತರುವುದಲ್ಲದೆ ಎಸ್ಸಿ ಸಮುದಾಯಗೊಳಗೆ ಯಾರು ಅಧಿಕೃತ ಎಸ್ಸಿ ಎಂಬ ಬಗ್ಗೆ ಒಳಜಗಳವನ್ನೂ ಹುಟ್ಟುಹಾಕುತ್ತದೆ.

ದಲಿತ ಎಂಬ ಪದವು ಒಂದರ್ಥದಲ್ಲಿ ಎಸ್ಸಿ ಒಳಗಿಂದಲೇ ಹುಟ್ಟಿದ್ದರೂ ಅದನ್ನು ವರ್ಗಕ್ಕೆ ಮಾತ್ರ ಸೀಮಿತಗೊಳಿಸಲು ಸಾಧ್ಯವಿಲ್ಲ. ಅದು ಶೆಡ್ಯೂಲ್ಡ್ ಕಾಸ್ಟ್- ಪರಿಶಿಷ್ಟ ಜಾತಿ- ಎಂಬ ಅನುಸಂಧಾನವರ್ತಿ ಪದವನ್ನು ನಿರಾಕರಿಸುತ್ತಾ ಹುಟ್ಟಿರುವ ಪದವಾಗಿದೆ. ೧೯೭೦ರ ದಶಕದಲ್ಲಿ ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿದ್ದರೂ ಅದರ ಬಗ್ಗೆ ಬಹಿರಂಗವಾಗಿ ಯಾವುದೇ ನಿಲುವು ತೆಗೆದುಕೊಳ್ಳದ ಹಲವಾರು ಎಸ್ಸಿ ರಾಜಕಾರಣಿಗಳ ನಿಷ್ಕ್ರಿಂiತೆಯಿಂದಾಗಿ ದಲಿತ ಪ್ಯಾಂಥರ್ಸ್ ಉಗಮವಾಯಿತು. ಇಂಥಾ ಪ್ರಬಲ ರಾಜಕೀಯ ಪ್ರಜ್ನೆಯ ಹಿನ್ನೆಲೆಗಾಗಿಯೇ ದಲಿತ ಎಂಬ ಪದವನ್ನು ಪರಿಶಿಷ್ಟ ಜಾತಿ ಎಂಬರ್ಥಕ್ಕೆ ಸೀಮಿತಗೊಳಿಸಲು ಸಾಧ್ಯವಿಲ್ಲ. ಅದು ದಮನಕಾರಿ ಶಕ್ತಿಗ ಮತ್ತು ಅದರ ವಿರುದ್ಧ ಧ್ವನಿ ಎತ್ತದೆ ಆಳುವವರ್ಗದ ಚೌಕಟ್ಟಿನೊಳಗೆ ದಲಿತ ದಮನದೊಡನೆ ಅನುಸಂಧಾನ ಮಾಡಿಕೊಂಡ ಅನುವರ್ತಿ ರಾಜಕಾರಣದ ವಿರುದ್ಧ ಹುಟ್ಟಿದ ಪ್ರತಿರೋಧದ ಪ್ರತಿಪಾದನೆಯಾಗಿತ್ತು.

ದಲಿತ ಎಂಬ ಪದವು ಶೋಷಣೆ, ತಾರತಮ್ಯ ಮತ್ತು ಪುರುಷಾಧಿಪತ್ಯದ ಒಟ್ಟಾರ್ಥವನ್ನು ಸಂಕೇತಿಸುವುದರಿಂದ ದಮನಿತರ ನಡುವಿನ ಸೌಹಾರ್ದತೆಗೆ ಯಾವುದೇ ಆತಂಕವನ್ನು ಹುಟ್ಟುಹಾಕುವುದಿಲ್ಲ. ಹಾಗೆಯೇ ಮತ್ತೊಂದು ಅತಿ ಮುಖ್ಯವಾದ ಮತ್ತು ಮೂಲಭೂತವಾದ ನೈತಿಕ ದೃಷ್ಟಿಯಿಂದಲೂ ದಲಿತ ಎಂಬ ಪದವನ್ನು ಪರಿಶಿಷ್ಟ ಜಾತಿ ಎಂಬರ್ಥಕ್ಕೆ  ಇಳಿಸಲಾಗುವುದಿಲ್ಲ. ಪರಿಶಿಷ್ಟ ಜಾತಿ ಎಂಬ ಪದದಂತಲ್ಲದೆ ದಲಿತ ಎಂಬ ವ್ಯಾಖ್ಯಾನವು ಅಧಿಕೃತವಾಗಿ ಸಾಬೀತುಗೊಳ್ಳಬೇಕಾದ ಹೊರೆಯನ್ನು ಹೊತ್ತುಕೊಂಡಿಲ್ಲ. ದಲಿತ ಎಂಬ ಪದವು ತುಳಿತಕ್ಕೀಡಾದ, ದಮನಕ್ಕೊಳಗಾದ, ವಂಚಿತ ಎಂಬ ಅರ್ಥವನ್ನು ಹೊಂದಿರುವುದರಿಂದ ತನ್ನ ವ್ಯಾಖ್ಯಾನವನ್ನು ಸೀಮಿತಗೊಳಿಸುವ ಎಲ್ಲಾ ಸಾಧ್ಯತೆಗಳನುದು ಬುಡಮೇಲುಗೊಳಿಸುತ್ತದೆ.

ಆದರೆ ದಲಿತ ಎಂಬ ಪದವೂ ಸಹ ತನ್ನ ಸುದೀರ್ಘ ಬಳಕೆಯ ಇತಿಹಾಸದಲ್ಲಿ ಹಲವಾರು ಪ್ರತಿರೋಧಗಳನ್ನು ಎದುರಿಸಿದೆ. ಅಂಥ ವಿರೋಧಗಳು ಪ್ರಧಾನವಾಗಿ ವ್ಯಕ್ತವಾಗಿರುವುದು ಮಹಾರಾಷ್ಟ್ರದ ಬೌದ್ಧ ಸಾಹಿತಿಗಳಿಂದ, ದಕ್ಷಿಣ ಭಾರತದ ಪ್ರಖ್ಯಾತ ಸಂಗೀತಗಾರರಿಂದ. ಇದೀಗ ಮತ್ತೊಮ್ಮೆ ಮಹಾರಾಷ್ಟ್ರದ ಕೆಲವು ಸ್ವಘೋಷಿತ ಬೌದ್ಧರು ದಲಿತ ಎಂಬ ಪದದ ಬಳಕೆಯನ್ನು ವಿರೋಧಿಸುತ್ತಿದ್ದಾರೆ. ಅವರ ಪ್ರಕಾರ ದಲಿತ ಎಂಬ ಪದವು ತಮಗಾದ ಐತಿಹಾಸಿಕ ಅಪಮಾನವನ್ನು ನೆನಪಿಸುವುದರಿಂದ ಮುಜುಗರವನ್ನು ಉಂಟುಮಾಡುತ್ತದೆ. ಬೌದ್ಧರ ಕೋರಿಕೆಯಿಂದ ಪ್ರಭಾವಿತವಾಗಿರುವ ಕೇಂದ್ರದ ಮಾಹಿತಿ ಮತ್ತು ಪ್ರಚಾರ ಇಲಾಖೆಯು ಇನ್ನು ಮುಂದೆ ದಲಿತ ಎಂಬ ಪದವನ್ನು ಕೈಬಿಟ್ಟು ಪರಿಶಿಷ್ಟ ಜಾತಿ ಎಂಬ ಪದವನ್ನು ಏಕವರ್ಗ ಸೂಚಕವಾಗಿ ಬಳಸಬೇಕೆಂದು ಮಾಧ್ಯಮಗಳಿಗೆ ಸಲಹೆ ಮಾಡಿದೆ.

ಸಂವಿಧಾನದಲ್ಲಿ ಪರಿಶಿಷ್ಟ ಜಾತಿ ಎಂಬ ವರ್ಗೀಕರಣವನ್ನು ಸೃಷ್ಟಿಸಿದ್ದೇ ವಿವಿಧ ಬಗೆಯ ಅಸ್ಪೃಷ್ಯ ಜಾತಿಗಳನ್ನು ಒಂದೇ ಸುಸಂಬದ್ಧ ವರ್ಗೀಕರಣದಡಿಯಲ್ಲಿ ತರಲಿಕ್ಕಾಗಿ ಎಂದು ಕೆಲವರು ಬಗ್ಗೆ ಅಲ್ಪಸ್ವಲ್ಪ ಸಮಾಧಾನವನ್ನು ಪಟ್ಟುಕೊಳ್ಳಬಹುದು. ಪದವು ಖಾತರಿಗೊಳಿಸುವ  ಸುಸಂಬಧ್ಹ ವರ್ಗೀಕರಣದ ಮೂಲಕವೇ ಸುರಕ್ಷಿತ ಅವಕಾಶಗಳ ಮತ್ತು ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳ ಲಾಭವನ್ನು ವಿತರಿಸಬಹುದೆಂದು ಸಂವಿಧಾನವು ನಿರೀಕ್ಷಿಸಿತ್ತು. ಆದರೆ ದಲಿತರ ಸಾಂಕೇತಿಕ ಮತ್ತು ಸಾಂಸ್ಕೃತಿಕ ಲೋಕದ ಮೇಲೂ ಒಂದೇ ಪದದ ಬಳಕೆಯನ್ನು ಹೇರುತ್ತಿರುವ ಪ್ರಭುತ್ವದ ಕ್ರಮವು ಮಾತ್ರ ಅನಗತ್ಯವಾದದ್ದು ಮಾತ್ರವಲ್ಲ  ನ್ಯಾಯಸಮ್ಮತವೂ ಅಲ್ಲ. ಆದರೆ ಒಂದೇ ಪದವನ್ನು ಹೇರುವ ಸರ್ಕಾರದ ಕ್ರಮದ ಹಿಂದೆ ಸಂವಿಧಾನದಲ್ಲಿ ನಿರೀಕ್ಷಿಸಲಾದ ಸಬಲೀಕರಿಸುವ ಉದ್ದೇಶಗಳಿಗಿಂತ ಭಿನ್ನವಾದ ಗುರಿಯೊಂದು ಇದ್ದಂತಿದೆ.

ಒಂದು ವಿಭಿನ್ನತೆಯೊಳ್ಳ ಸಮಾಜದ ಮೇಲೆ ಪರಿಶಿಷ್ಟ ಜಾತಿ ಎಂಬ ಪದವನ್ನು ಒಂದು ಸಾರ್ವತ್ರಿಕ ರೀತಿಯಲ್ಲಿ ಹೇರುವ ಹುನ್ನಾರವನ್ನು ಸರ್ಕಾರ ಮಾಡುತ್ತಿದೆ. ಪರಿಶಿಷ್ಟ ಜಾತಿ ಎಂಬ ಪದಕ್ಕೆ ತನ್ನ ಬೆಂಬಲವನ್ನು ಸೂಚಿಸುವ ಮೂಲಕ ದಲಿತ ಎಂಬ ಪದವನ್ನು ಕಳಂಕಿತಗೊಳಿಸಿ ಅದರ ಪರಿಧಿಯಿಂದ ದಲಿತ ಮತ್ತು ಬೌದ್ಧರಿಬ್ಬರನ್ನೂ ದೂರ ಮಾಡುವ ಉದ್ದೇಶ ಪ್ರಭುತ್ವಕ್ಕಿದೆ. ದಲಿತ ಪದ ಬಳಕೆಯ ಬಗ್ಗೆ ಪ್ರಸ್ತುತ ಕೆಲವು ಬೌದ್ಧರು ಕೋರಿರುವ ಕಾನೂನು ಕ್ರಮಗಳು ಅಂತಿಮವಾಗಿ ದಲಿತರ ಸಾಂಕೇತಿಕ ಲೋಕವ್ಯವಸ್ಥೆಯ ಮೇಲೆಯೂ ಪ್ರಭುತ್ವವು ತನ್ನ ಪರಮಾಧಿಕಾರವನ್ನು ಚಲಾಯಿಸುವ ಅವಕಾಶವನ್ನು ಒದಗಿಸುತ್ತದೆ. ದಲಿತರ ಇಂಥಾ ಸಾಂಕೇತಿಕ ಲೋಕವ್ಯವಸ್ಥೆಯು ತನ್ನೊಳಗೆ ದಮನಿತರ ನಡುವೆ ಏರ್ಪಟ್ಟಿರುವ ಸೈದ್ಧಾಂತಿಕ ಮತ್ತು ಸಾಂಸ್ಕೃತಿಕ ಒಡನಾಟಗಳನ್ನೂ ಮತ್ತು ಪರಿವರ್ತನಾ ಸಂಕೇತಗಳ ಸುತ್ತಾ ಅವರೆಲ್ಲಾ ವಿಶಾಲವಾಗಿ ಸಂಘಟಿತಗೊಂಡಿರುವ ವಿದ್ಯಮಾನವನ್ನೂ ಒಳಗೊಂಡಿದೆ. ಇದಕ್ಕೆ ಒಂದು ಅತ್ಯುತ್ತಮ ಉದಾಹರಣೆಯೆಂದರೆ  ಮರಾಠವಾಡ ವಿಶ್ವವಿದ್ಯಾಲಯಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರನ್ನು ಇಡಬೇಕೆಂದು ಒತ್ತಾಯಿಸಿ ೧೯೭೮ರಲ್ಲಿ ದೆಹಲಿಯ ಬೋಟ್ಕ್ಲಬ್ನಲ್ಲಿ ಲಕ್ಷಾಂತರ ದಲಿತ ಪ್ಯಾಂಥರ್ಸ್ಗಳು ನಡೆಸಿದ ಬೃಹತ್ ಪ್ರದರ್ಶನ. ಅದೇ ರೀತಿ ಇತ್ತೀಚಿನ ದಿನಗಳಲ್ಲಿ ರೋಹಿತ್ ವೇಮುಲನ ಸಾವಿಗೆ ಕಾರಣವಾದ ವ್ಯವಸ್ಥಿತ  ಕಿರುಕುಳ ಮತ್ತು ಅಪಮಾನಗಳ ವಿರುದ್ಧ ಹುಟ್ಟಿಕೊಂಡ ಬೃಹತ್ ಮತ್ತು ವಿಶಾಲ ನೆಲೆಯ ಪ್ರತಿರೋಧಗಳು.

ವಿಶಾ ಸನ್ನಿವೇಶದ ಹಿನ್ನೆಲೆಯಲ್ಲೇ ದಲಿತ ಎಂಬ ಪದವನ್ನು ಪರಿಶಿಷ್ಟ ಜಾತಿ ಎಂಬ ಸೀಮಿತಾರ್ಥಕ್ಕೆ  ಇಳಿಸಲಾಗುವುದಿಲ್ಲ.

ಕೃಪೆ: Economic and Political Weekly ಅನು: ಶಿವಸುಂದರ್ 

    

Read These Next

ಸನ್ನಿ ಅಣೆಕಟ್ಟು ನಿರ್ಮಾಣ ಗುತ್ತಿಗೆಯ ಬೆನ್ನಲ್ಲೇ; 45 ಕೋಟಿ ರೂ.ಗಳ ಚು.ಬಾಂಡ್ ಖರೀದಿಸಿದ್ದ ಬಿಜೆಪಿ ಸಂಸದನ ಕಂಪೆನಿ

ಆಂಧ್ರಪ್ರದೇಶದ ಬಿಜೆಪಿ ರಾಜ್ಯಸಭಾ ಸದಸ್ಯ ಸಿ.ಎಂ.ರಮೇಶ್ ಸ್ಥಾಪಿಸಿದ್ದ ರಿತ್ವಿಕ್ ಪ್ರೊಜೆಕ್ಟ್ ಪ್ರೈ.ಲಿ.(ಆರ್;ಪಿಪಿಎಲ್) ಹಿಮಾಚಲ ...

ಹಾಸ್ಟೆಲ್‌ಗೆ ನುಗ್ಗಿ ನಮಾಝ್ ನಿರತರ ಮೇಲೆ ಗೂಂಡಾಗಳಿಂದ ಹಲೆ; ವಿದೇಶಿ ವಿದ್ಯಾರ್ಥಿಗಳಿಗೆ ಗಾಯ

ಇಲ್ಲಿನ ಗುಜರಾತ್ ವಿಶ್ವವಿದ್ಯಾನಿಲಯದ ಹಾಸ್ಟೆಲ್‌ನಲ್ಲಿ ರಮಝಾನ್ ಪ್ರಯುಕ್ತ ರಾತ್ರಿ ಹೊತ್ತು ನಮಾಝ್ ಮಾಡುತ್ತಿದ್ದ ವಿದೇಶಿ ...

ಲೋಕಸಭಾ ಚುನಾವಣೆ ಘೋಷಣೆ; ಎಪ್ರಿಲ್ 19ರಿಂದ ಜೂನ್ 1ರವರೆಗೆ 7 ಹಂತಗಳಲ್ಲಿ ಮತದಾನ; ಜೂ.4ರಂದು ಫಲಿತಾಂಶ ಪ್ರಕಟ

ದೇಶದ ಜನತೆ ಕಾತರದಿಂದ ಕಾಯುತ್ತಿದ್ದ 18ನೇ ಲೋಕಸಭಾ ಚುನಾವಣೆಯ ವೇಳಾಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗ ಶನಿವಾರ ಪ್ರಕಟಿಸಿದೆ. ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...