ಗ್ರಾಮ ಸಹಾಯಕರನ್ನು ‘ಡಿ’ದರ್ಜೇ ನೌಕರರಾಗಿ ಪರಿಗಣನೆಗೆ ಡಿಸಿಎಂಗೆ ಮನವಿ.

Source: S.O. News Service | By MV Bhatkal | Published on 12th August 2018, 8:51 PM | Coastal News | Don't Miss |

ಭಟ್ಕಳ: ರಾಜ್ಯ ನ್ಯಾಯ ಮಂಡಳಿಯ ಆದೇಶ, ಅಡ್ವೋಕೇಟ್ ಜನರಲ್ ಬೆಂಗಳುರು ಇವರ ವರದಿ ಪ್ರಕಾರ ಕಂದಾಯ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಗ್ರಾಮಸಹಾಯಕರನ್ನು ‘ಡಿ’ದರ್ಜೆಯ ನೌಕರರಾಗಿ ಪರಿಗಣಿಸಬೇಕೆಂದು ಶುಕ್ರವಾರದಂದು ಭಟ್ಕಳಕ್ಕೆ ಆಗಮಿಸಿದ ಡಿ.ಸಿ.ಎಂ. ಡಾ.ಜಿ.ಪರಮೇಶ್ವರ ಅವರಿಗೆ ಭಟ್ಕಳತಾಲೂಕಾ ಗ್ರಾಮ ಸಹಾಯಕ ಸಂಘ ಮನವಿ ಸಲ್ಲಿಸಿದರು.

ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ರಾಜ್ಯಾದ್ಯಂತ 10,450 ಗ್ರಾಮ ಸಹಾಯಕರು ಸೇವೆ ಸಲ್ಲಿಸುತ್ತಿದ್ದು, 35 ವರ್ಷಗಳಿಂದ ಇಲಾಖೆಯಲ್ಲಿ ಮಾಸಿಕ 100 ರೂ.ಗಳಿಂದ ಗೌರವಧನ ಪಡೆಯುತ್ತಿದ್ದು, ಪ್ರಸ್ತುತ 10,000 ಸಾವಿರ ರೂ.ನೀಡಲಾಗುತ್ತಿದೆ. ಇಂದಿನ ದುಬಾರಿ ದಿನಗಳಲ್ಲಿ ಈ ವೇತನವನ್ನು ಪಡೆದು ಜೀವನ ನಿರ್ವಹಣೆ ಮಾಡಲು ಕಷ್ಟಕರವಾಗಿದೆ. ಆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸೇವೆ ಸಲ್ಲಿಸುತ್ತಿರುವ ಗ್ರಾಮ ಸಹಾಯಕರಿಗೆ ಸೇವಾಭದ್ರತೆ ಒದಗಿಸಬೇಕು. ಯಾವುದೇ ಸರಕಾರ ಬಂದರು ನೌಕರರನ್ನು ಖಾಯಂ ನೌಕರನ್ನಾಗಿ ಪರಿಗಣಿಸದೇ ಕೇವಲ ಅಲ್ಪ ಸ್ವಲ್ಪ ವೇತನವನ್ನು ಹೆಚ್ಚಿಸಿ ದುಡಿಸಿಕೊಂಡು ಹೋಗುತ್ತಿದ್ದಾರೆ. ರಾಜ್ಯ ನ್ಯಾಯ ಮಂಡಳಿಯ ಆದೇಶ ಹಾಗೂ ಅಡ್ವೋಕೇಟ್ ಜನರಲ್ ಡಾ. ರವಿ ಕುಮಾರ ಹಾಗೂ ಆರ್. ಮಧುಸುಧನ ನಾಯ್ಕ ಅವರ ವರದಿ ಪ್ರಕಾರ ಗ್ರಾಮ ಸಹಾಯಕರನ್ನು ಖಾಯಂ ಮಾಡಲು ಕಾನೂನನಲ್ಲಿ ಯಾವುದೇ ಅಡೆತಡೆ ಇರುವುದಿಲ್ಲ. ಆದರೂ ಸರಕಾರ ಮಾತ್ರ ನ್ಯಾಯಾಲಯ ಆದೇಶವನ್ನು ಗಣನೆಗೆ ತೆಗೆದುಕೊಳ್ಳದೇ ನೌಕರರಿಗೆ ಅನ್ಯಾಯ ಮಾಡುತ್ತಿದೆ. ಈ ಕುರಿತು ಮುಖ್ಯಮಂತ್ರಿಗಳಿಗೆ ಹಾಗೂ ಕಂದಾಯ ಇಲಾಖೆ ಸಚಿವ ಗಮನಕ್ಕೆ ತಂದು ಶೀಘ್ರದಲ್ಲಿ ಗ್ರಾಮ ಸಹಾಯಕರನ್ನು ‘ಡಿ’ ದರ್ಜೆ ನೌಕರರನ್ನಾಗಿಪರಿಗಣಿಸಬೇಕೆಂದು ಮನವಿಯನ್ನು ತಿಳಿಸಿದರು.
ಈ ಸಂಧರ್ಭದಲ್ಲಿ ಗ್ರಾಮ ಸಹಾಯಕ ಸಂಘದ ಜಿಲ್ಲಾ ಖಜಾಂಚಿ ಮಾಸ್ತಯ್ಯ ನಾಯ್ಕ, ತಾಲೂಕಾ ಗ್ರಾಮ ಸಹಾಯಕ ಸಂಘದ ಅಧ್ಯಕ್ಷ ಮಂಜುನಾಥ ದೇವಾಡಿಗ, ಉಪಾಧ್ಯಕ್ಷ ಉದಯ ನಾಯ್ಕ, ಕಾರ್ಯದರ್ಶಿ ನಾಗಪ್ಪ ನಾಯ್ಕ,ಸದಸ್ಯ ಬಾಬು ನಾಯ್ಕ, ನಾರಾಯಣ ನಾಯ್ಕ, ಮಂಜು ನಾಯ್ಕ ಮುಂತಾದವರಿದ್ದರು.  
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...