ಮುಂಡಗೋಡ :  ನಿಲ್ಲಿಸಿದ್ದ ಟ್ರಕ್ ಗಳ ಬಿಡಿ ಭಾಗಗಳು  ಬಿಚ್ಚಿ ಕದ್ದೋಯ್ದ ಕಳ್ಳರು

Source: sonews | By Staff Correspondent | Published on 17th December 2018, 10:27 PM | Coastal News |

ಮುಂಡಗೋಡ ; ಪೆಟ್ರೋಲ್ ಬಂಕ್ ಹತ್ತಿರ ನಿಲ್ಲಿಸಿದ್ದ ಟ್ರಕ್ ಗಳ ಬೆಲೆ ಬಾಳುವ ಬಿಡಿ ಭಾಗಗಳನ್ನು ಬಿಚ್ಚಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡ ಹೋದ ಘಟನೆ ಪಟ್ಟಣದ ಹುಬ್ಬಳ್ಳಿ ಶಿರಸಿ ರಸ್ತೆಯ ಎಚ್.ಪಿ ಪೆಟ್ರೋಲ್ ಪಂಪ್ ಹತ್ತಿರ ಭಾನುವಾರ ರಾತ್ರಿ ಸಂಭವಿಸಿದೆ.

ಸುಮಾರು 126000=00(ಒಂದು ಲಕ್ಷ ಇಪ್ಪತ್ತಾರು ಸಾವಿರ ರೂ) ಮೌಲ್ಯದ ನಾಲ್ಕು ಟ್ರಕ್ ಗಳ ಬಿಡಿಭಾಗಗಳನ್ನು ಕದ್ದು ಒಯ್ದೆದಿದ್ದಾರೆ. 

ಕೆಎ 27 ಎ 3983,  ಕೆಎ 25 ಬಿ 9559, ಕೆಎ 31 6256 ಕೆಎ 25 ಬಿ 8829 ಲಾರಿ ನಂಬರಿನ ಟ್ರಕ್ ಗಳಲ್ಲಿ ಕಳ್ಳರು ಕರಮಾತ್ ತೋರಿಸಿದ್ದಾರೆ. ಮಲ್ಲಿಕ ಬಾಬಾಜಾನ ಗಾಜೀಪುರ, ಅರ್ಜುನ ಆರ್ ನಾಯರ, ವಿ ಕೆನಡಿ, ಪ್ರಕಾಶ ಎಲೆಗಾರ ಟ್ರಕ್ ಗಳ ಮಾಲಿಕರಾಗಿದ್ದಾರೆ.

ಜೆ.ಕೆ ರೇಡಿಯಲ್ ಕಂಪನಿಯ 2 ಟಾಯರ,ಟಾಯರ ಡಿಸ್ಕ 2 ,ಎಕ್ಸೈಡ ಕಂಪನಿಯ ಬ್ಯಾಟ್ರಿ 1 ,ಜಾಕ್ 1 ,ಪ್ರೈಮ ಕಂಪನಿಯ ಬ್ಯಾಟ್ರಿ 1 , 2 ಜಾಕ್ , 2 ಲಿವರ, ಅಮರಾನ ಕಂಪನಿಯ ಬ್ಯಾಟ್ರಿ 2 , ಜಾಕ್ 1 ಹಾಗೂ ಲಿವರ 1 ,ಲಾಯನ ಕಂಪನಿಯ ಬ್ಯಾಟ್ರಿ 1 ಮತ್ತು ಲಿವರಗಳು ಹಾಗೂ ಪಾನಾಗಳು ನಾಲ್ಕು ಟ್ರಕ್ ಗಳಲ್ಲಿಯ ಬಿಡಿಭಾಗಗಳಾಗಿವೆ.

ಈ ಕುರಿತು  ಲಾರಿ ಮಾಲಿಕ ಮಲ್ಲಿಕ ಬಾಬಾಜಾನ ಗಾಜಿಪುರ ಅವರು ಮುಂಡಗೋಡ ಪೊಲಿಸ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. 
 

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...