ರಾಷ್ಟ್ರೀಯ ಹೆದ್ದಾರಿ ಅಗಲೀಕರಣದಿಂದಾಗಿ ಭಟ್ಕಳದಿಂದ ಕಾಲು ಕೀಳಲು ಸಿದ್ಧವಾಗಿರುವ ದೂರದರ್ಶನ ಕೇಂದ್ರ..?

Source: S.O. News Service | By MV Bhatkal | Published on 12th February 2019, 4:20 PM | Coastal News | Special Report |

ಭಟ್ಕಳ: ಪ್ರಸಕ್ತ ಕಾಲಘಟ್ಟದಲ್ಲಿ ಭಟ್ಕಳ ಎಂಬ ಪುಟ್ಟ ಊರು ಬೆಳೆದು ನಿಂತಿದೆ. ಅಂತರಾಷ್ಟ್ರೀಯ ಆವಿಷ್ಕಾರಗಳನ್ನು ಕಾಣುವ ತವಕ ಹೆಚ್ಚಾಗುತ್ತಿದೆ. ಇನ್ನೊಂದೆಡೆ ನವಯುಗದ ಮಹತ್ವದ ಆವಿಷ್ಕಾರ ಎಂದೇ ಬಿಂಬಿತವಾಗಿರುವ ಮಾಹಿತಿ ತಂತ್ರಜ್ಞಾನದ ಭಾಗವಾಗಿರುವ ದೂರದರ್ಶನ ಕೇಂದ್ರ ರಾಷ್ಟ್ರೀಯ ಅಗಲೀಕರಣ ಕಾಮಗಾರಿಗೆ ಸಿಲುಕಿ ಊರನ್ನು ತೊರೆಯಲು ಸಿದ್ಧವಾಗಿದೆ.
1996ರ ಕಾಲಕ್ಕೆ ಮಾಜಿ ಸಂಸದೆ ಮಾರ್ಗರೇಟ್ ಆಳ್ವಾರಿಗೆ ಕೇಂದ್ರದ ಒಡನಾಟ ದೊಡ್ಡಮಟ್ಟದಲ್ಲಿತ್ತು. ಬಸ್ ನಿಲ್ದಾಣದ ಒಳಗೆ ಶೌಚಾಲಯ ಕೊಟ್ಟು ಸುಧಾರಣೆಗೆ ದಾರಿ ತೋರಿಸಿದ್ದ ಆಳ್ವಾ ಭಟ್ಕಳದಲ್ಲಿ ದೂರ ಸಂಪರ್ಕ ಇಲಾಖೆಯ ಕಚೇರಿ ಸ್ಥಾಪಿಸಲು ಕಾರಣವಾಗಿದ್ದರು. ಇಂದಿನಷ್ಟು ಟಿವಿ ವಾಹನಿಗಳ ಅಬ್ಬರವಿಲ್ಲದ, ಮನೆಯಲ್ಲಿ ಟಿವಿ ನೋಡಲು ಮನೆಯ ಮೇಲೆ ಎಂಟೆನಾವನ್ನು ನಿಲ್ಲಿಸುತ್ತಿದ್ದ ಕಾಲದಲ್ಲಿ ಭಟ್ಕಳಕ್ಕೆ ದೂರದರ್ಶನ ಬಂದಿದ್ದನ್ನು ಇಲ್ಲಿನ ಜನರು ಹೆಮ್ಮೆಯ ಸಂಗತಿಗಳ ಪಟ್ಟಿಯಲ್ಲಿ ಇಟ್ಟು ನೋಡಿದರು. ಭಟ್ಕಳದಲ್ಲಿನ 15-20ಕಿಮೀ. ವ್ಯಾಪ್ತಿಯ ಜನರು ಇದರ ಸಹಾಯದಿಂದಲೇ ದೂರದರ್ಶನವನ್ನು ನೋಡಲಾರಂಭಿಸಿದರು. 100 ವ್ಯಾಟ್ ಟ್ರಾನ್ಸ್‍ಮೀಟರ್ ಸಾಮಥ್ರ್ಯವನ್ನು ಈ ದೂರದರ್ಶನ ಹೊಂದಿದೆ. ಕಲೆ, ಸಂಸ್ಕøತಿಗೆ ಸಂಬಂಧಿಸಿದ ಕಾರ್ಯಕ್ರಮಗಳು ದೂರದರ್ಶನ ವೀಕ್ಷಕರನ್ನು ಸಮಾಧಾನದಲ್ಲಿರುವಂತೆ ಮಾಡಿದ್ದವು. ಜಾನಪದ, ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ನೋಡಲು ಜನರಿಗೆ ಬೋರಂತೂ ಆಗಿರಲಿಲ್ಲ! ಕನ್ನಡ ಹಾಗೂ ಹಿಂದಿಯಲ್ಲಿ ಪ್ರಸಾರವಾಗುತ್ತಿದ್ದ ಈ ಕಾರ್ಯಕ್ರಮಗಳೆಲ್ಲ ಮನೆ ಮಂದಿ, ಮಕ್ಕಳು ಎಲ್ಲರೂ ಒಟ್ಟಾಗಿ ಕುಳಿತುಕೊಂಡು ನೋಡುವಂತವುಗಳೇ ಆಗಿದ್ದವು. ಸುದ್ದಿಗೆ ಮಸಾಲೆ ಇದ್ದಿರಲಿಲ್ಲ. ಬುದ್ದಿಗೆ ಮಂಕು ಎರಚುವವರು ಕಾಣಿಸುತ್ತಿರಲಿಲ್ಲ! ಇದೀಗ ಇಲ್ಲಿನ ಕ್ವಾಲಿಟಿ ಹೊಟೆಲ್ ಎದುರು, ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನೆಲೆ ನಿಂತಿರುವ ಈ ದೂರದರ್ಶನ ಇಲಾಖಾ ಕಚೇರಿಯ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ದೂರದರ್ಶನ ಇಲಾಖೆಗೆ ಪತ್ರ ಬರೆದಿದೆ. 
ಈಗೇಕೆ ಬೇಕು ಈ ದೂರದರ್ಶನ?; ವರ್ಷ ಕಳೆದಂತೆ ಎಂಟೆನಾಗಳೆಲ್ಲ ಮರೆಯಾಗಿ ಡಿಟಿಎಚ್ ಆಗಮನವಾಗಿದೆ. ಸುದ್ದಿ ವಾಹಿನಿಗಳ ಸಂಖ್ಯೆ ಲೆಕ್ಕವೇ ಇಲ್ಲ! ಮನೆಯಲ್ಲಿಯೇ ಕುಳಿತು ನಮ್ಮಿಷ್ಟದ ವಾಹಿನಿಗಳನ್ನು ವೀಕ್ಷಿಸಲು ರಿಮೋಟ್ ಮೇಲೆ ಕೈಯಾಡಿಸಿದರೆ ಸಾಕು. ಹಾಗೆಯೇ ನಾವು ಈ ದೂರದರ್ಶನ ವೀಕ್ಷಣೆಗೂ ಹೆಚ್ಚಿನ ಶ್ರಮದಾನ ಮಾಡಬೇಕಿಲ್ಲ. ಆದರೆ ಭಾರತ ಬದಲಾಗುತ್ತಲೇ ಇದೆ. ಪ್ರಸಕ್ತವಾಗಿ ಡಿಜಿಟಲ್ ನೆಟ್‍ವರ್ಕಗಳ ಬಗ್ಗೆ ಮಾತುಗಳು ಕೇಳಿ ಬರಲಾರಂಭಿಸಿವೆ. ಮನೆಯಲ್ಲಿ ಮಾತ್ರವಲ್ಲ, ಪೇಟೆಗೆ, ಕಚೇರಿಗೆ ಬಂದಾಗಲೆಲ್ಲ ಮೊಬೈಲ್‍ನಲ್ಲಿಯೇ ಎಲ್ಲವನ್ನೂ ನೋಡುವ ಕಾಲ ಬಂದು ಬಿಟ್ಟಿದೆ. ನೆಟ್‍ವರ್ಕ ಡಾಟಾ ಕರೆನ್ಶಿ ಹಾಕದೆಯೂ ನಾವು ಡಿಜಿಟಲ್ ನೆಟ್‍ವರ್ಕ ಯುಗದಲ್ಲಿ ದೂರದರ್ಶನವನ್ನು ಪುಕ್ಕಟೆಯಾಗಿ ವೀಕ್ಷಿಸಬೇಕೆಂದರೆ ಈ ದೂರದರ್ಶನ ಕೇಂದ್ರ ಬೇಕೆ ಬೇಕು. ಅಲ್ಲದೇ ಎಫ್‍ಎಮ್ ರೆಡಿಯೋ ಎಲ್ಲ ಕಡೆ ಸುದ್ದಿ ಮಾಡುತ್ತಿದೆ. ಇಂತಹ ಡಿಜಿಟಲ್ ನೆಟ್‍ವರ್ಕಗೆ ಜೊತೆಯಾಗಲು ನಮ್ಮ ಈ ದೂರದರ್ಶನ ಕಚೇರಿಯನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಒಂದು ಬಾರಿ ದೂರದರ್ಶನ ಇಲಾಖೆ ಇಲ್ಲಿಂದ ಕಣ್ಮರೆಯಾದರೆ ಮತ್ತೆ ಭಟ್ಕಳಕ್ಕೆ ಕರೆ ತರಲು ಹೊಸ ಸರ್ಕಸ್ ಮಾಡಬೇಕಾದ ಪರಿಸ್ಥಿತಿ ಎದುರಾಗಬಹುದು.   
ಸುದ್ದಿ ಹಾಗೂ ಮನರಂಜನಾ ಚಾನೆಲ್‍ಗಳ ಭರಾಟೆಯಲ್ಲಿ ನಮಗೆ ದೂರದರ್ಶನದ ಅಗತ್ಯ ಇಲ್ಲದಂತೆ ಕಾಣಿಸಬಹುದು. ಆದರೆ ದೊಡ್ಡ ದೊಡ್ಡ ಮೆಟ್ರೋ ಸಿಟಿಗಳಲ್ಲಿ ಡಿಜಿಟಲ್ ನೆಟ್‍ವರ್ಕಗಳ ಕಾರಣದಿಂದ ದೂರದರ್ಶನ ಕೇಂದ್ರವನ್ನು ಉಳಿಸಿಕೊಳ್ಳಲಾಗುತ್ತಿದೆ. ಎಲ್ಲ ಕಡೆ ಇರುವಂತಾದರೆ ನಮಗೇಕೆ ಬೇಡ?

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...