ತಲೆ ಎತ್ತಿರುವ ಆಕ್ರಮ ಪಿ.ಯು ಕಾಲೇಜುಗಳ ವಿರುದ್ದ ಕಾನೂನು ಕ್ರಮ ಕೈ ಮನವಿ

Source: S.O. News Service | By Mohammed Ismail | Published on 12th June 2018, 7:03 PM | State News |

ಕೋಲಾ: ಜಿಲ್ಲಾದ್ಯಾಂತ ನಾಯಿಕೊಡೆಗಳಂತೆ ತಲೆ ಎತ್ತಿರುವ ಆಕ್ರಮ ಪಿ.ಯು ಕಾಲೇಜುಗಳ ವಿರುದ್ದ ಕಾನೂನು ಕ್ರಮ ಕೈಗೊಂಡು ಪಿ.ಯು ಮಂಡಳಿ ನಿಗಧಿ ಪಡಿಸಿದ ಶುಲ್ಕಕ್ಕಿಂತ ಹೆಚ್ಚಿಗೆ ಪಡೆಯುತ್ತಿರುವ ಕಾಲೇಜುಗಳ ಪರವಾನಗಿಯನ್ನು ರದ್ದು ಮಾಡಬೇಕು. ಹಾಗೂ ಸರ್ಕಾರಿ ಕಾಲೇಜುಗಳನ್ನು ಅಭಿವೃದ್ದಿ ಪಡಿಸಬೇಕೆಂದ ಇಲಾಖೆ ಮುಂದೆ ಹೋರಾಟ ಮಾಡಿ ಉಪನಿರ್ಧೇಶಕ ಪಾಪಣ್ಣರವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.

ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ಕಟ್ಟಕಡೆಯ ವ್ಯಕ್ತಿಗೆ ಶಿಕ್ಷಣ ದೊರಕಬೇಕು, ಉತ್ತಮ ಪ್ರಜೆಯಾಗಬೇಕೆಂಬ ಆಶಯ ಹೊಂದಿದ್ದ ಡಾ|| ಬಿ.ಆರ್. ಬಾಬ ಸಾಹೇಬ್ ಆಂಬೇಡ್ಕ್‍ರ್‍ರವರ ಕನಸು ಕನಸಾಗಿಯೇ ಉಳಿದಿದೆ. ಶಿಕ್ಷಣ ಎಂಬುದು ವ್ಯಾಪಾರದ ವಸ್ತುವಾಗಿ ಮಾರ್ಪಟ್ಟು ಬಡ ಕೂಲಿ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ಬಾಲಕಾರ್ಮಿಕರಾಗಿ ದುಡಿಯುವ ಜೊತೆಗೆ ಮಾದಕ ವ್ಯಸನಿಗಳಾಗುತ್ತಿದ್ದಾರೆ. ಗಗನಕ್ಕೇರಿರುವ ಡೋನೇಷನ್ ಹಾವಳಿಯಿಂದ ಮಕ್ಕಳಿಗೆ ಉತ್ತಮವಾದ ಶಿಕ್ಷಣ ಕೊಡದ ತಂದೆ ತಾಯಿ ಮಾನಸಿಕ ರೋಗಿಗಳಾಗುತ್ತಿದ್ದಾರೆ. ಕೋಲಾರ ಜಿಲ್ಲಾದ್ಯಾಂತ ನಾಯಿ ಕೊಡೆಗಳಂತೆ ತಲೆ ಎತ್ತಿ ಯಾವುದೇ ದಾಖಲೆಗಳನ್ನು ಹೊಂದಿಲ್ಲದೆ ರಾಜರೋಷವಾಗಿ ಕಾಲೇಜುಗಳಲ್ಲಿ ಶಿಕ್ಷಣವನ್ನು ಮಾರಾಟಕ್ಕಿಟ್ಟಿದ್ದಾರೆ. ಇತ್ತೀಚಿನ ದಿನಗಳಲ್ಲಿ ಎಸ್.ಎಸ್‍ಎಲ್.ಸಿ ಪಲಿತಾಂಶ ಹೆಚ್ಚಳವಾಗಿದ್ದ ಕಾರಣ ಪಾಸಾದ ವಿದ್ಯಾರ್ಥಿಗಳಿಗೆ ನಾನಾ ರೀತಿಯ ಸುಳ್ಳು ಭರವಸೆಗಳನ್ನು ನೀಡಿ, ಆಕ್ರಮ ಕಾಲೇಜುಗಳಿಂದ ಶಿಕ್ಷಣ ವ್ಯಾಪಾರೀಕರಣವಾಗುತ್ತಿದೆ. ಜಿಲ್ಲಾದ್ಯಾಂತ ಕೆಲವು ಕಾಲೇಜುಗಳು ಅನುಮತಿ ಪಡೆಯದೆ ಸ್ವಂತ ಕಟ್ಟಡವಿಲ್ಲದೆ ಇಲಾಖೆಗೆ ಸಲ್ಲಿಸಿರುವ ದಾಖಲೆಗಳ ಸ್ಥಳದಲ್ಲಿ ಯಾವುದೇ ಕಾಲೇಜುಗಳಿರುವುದಿಲ್ಲ ಕೆಲವು ಕಾಲೇಜುಗಳು ನಕಲಿ ಪಲಿತಾಂಶಗಳನ್ನು ಬ್ಯಾನರ್‍ಗಳಲ್ಲಿ ಪ್ರಕಟಿಸಿ ವಿದ್ಯಾರ್ಥಿಗಳನ್ನು ಹಾಗೂ ಮೂರ್ಖರನ್ನಾಗಿ ಮಾಡುತ್ತಿದ್ದಾರೆ. ವಿದ್ಯಾರ್ಥಿ ಜೀವನದಲ್ಲಿ ದ್ವೀತಿಯ ಪಿಯುಸಿ ಭವಿಷ್ಯದ ಬೆಳವಣಿಗೆಯ ಪ್ರಮುಖ ಘಟ್ಟವಾಗಿದೆ. ತಮ್ಮ ಮಕ್ಕಳನ್ನು ಉತ್ತಮ ಕಾಲೇಜುಗಳಿಗೆ ಸೇರಿಸಿ, ಅವರ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಲ ಮಾಡಿ ಲಕ್ಷಾಂತರ ರೂಪಾಯಿ ಡೋನೆಷನ್ ಕಟ್ಟಿ ಮೋಸ ಹೋಗುತ್ತಿದ್ದಾರೆ. ಇದರ ಜೊತೆಗೆ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಮವಸ್ತ್ರದಿಂದ ಹಿಡಿದು ಪ್ರತಿಯೊಂದಕ್ಕೂ ಕಾಲೇಜಿನ ಆಡಳಿತ ಮಂಡಳಿ ಸೂಚಿಸಿದ ಅಂಗಡಿಗಳಲ್ಲಿಯೇ ಖರೀದಿ ಮಾಡಬೇಕು. ಲಕ್ಷ ಲಕ್ಷ ಡೋನೇಷನ್ ಪಡೆಯುವ ಕಾಲೇಜುಗಳ ಶಿಕ್ಷಣ ಇಲಾಖೆಯ ಯಾವುದೇ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ. ಪರವಾನಗೆ ಪಡೆಯುವಾಗ ಒಂದು ಕೊಠಡಿಗೆ ಇಷ್ಟೇ ವಿದ್ಯಾರ್ಥಿಗಳೆಂಬ ನಿಯಮವಿರುತ್ತದೆ. ಹಾಗೂ ವಿವಿಧ ತಾಲ್ಲೂಕಿಗಳಿಂದ ಬರುವ ಮಕ್ಕಳಿಗೆ ಸೂಕ್ತವಾದ ಗುಣಮಟ್ಟದ ಬಸ್ಸ್ ವ್ಯವಸ್ಥೆಯಿರುವುದಿಲ್ಲ. ಇನ್ನೂ ಉತ್ತಮ ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ ಪ್ರಥಮ ಆದ್ಯತೆ ನೀಡಿ, ನಂತರ ಪೋಷಕರ ರಕ್ತಹೀರುವ ಕಾಲೇಜುಗಳ ಶಿಕ್ಷಣ ವಿರೋದಿ ನೀತಿಗೆ ಕಡಿವಾಣ ಇಲ್ಲದಂತಾಗಿದೆಂದು ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ದ ಅಸವiದಾನ ವ್ಯಕ್ತಪಡಿಸಿದರು.

ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿ ಮಾತನಾಡಿ ಜಿಲ್ಲಾದ್ಯಾಂತ ನಾಯಿಕೊಡೆಗಳಂತೆ ತಲೆಯೆತ್ತಿ ಪೋಷಕರೊಂದಿಗೆ ಚೆಲ್ಲಾಟವಾಡಿ ನಿಯಮಬಾಹಿರವಾಗಿ ಕಾಲೇಜುಗಳನ್ನು ನಡೆಸುತ್ತಿರುವ ಆಡಳಿತ ಮಂಡಳಿಯ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಹಿರಿಯ ಅಧಿಕಾರಿಗಳು ಆಸಕ್ತಿ ತೋರುತ್ತಿಲ್ಲ ನಗರದ ಹೃದಯ ಭಾಗದಲ್ಲಿರುವ ವಿಜಯ ಚೇತನ ಕಾಲೇಜು ಇನ್ನೂ ಕೆಲವು ಕಾಲೇಜುಗಳಿಗೆ ಪರವಾನಗಿ ಇದ್ದರೂ ನಿಯಮ ಬಾಹಿರವಾಗಿ ಕಾಲೇಜುಗಳು ನಡೆಸುತ್ತಿದ್ದಾರೆ. ಇನ್ನೂ ಸಹ್ಯಾದ್ರಿ, ವಿದ್ಯಾಜ್ಯೋತಿ ಇನ್ನಿತರ ಪ್ರತಿಷ್ಠಿತ ಕಾಲೇಜುಗಳಲ್ಲಿ ಲಕ್ಷ ಲಕ್ಷ ಡೋನೇಶನ್ ಹಾವಳಿಗೆ ಪೋಷಕರು ಕಂಗಾಲಾಗುತ್ತಿದ್ದಾರೆ. ಹೃದಯ ಭಾಗದಲ್ಲಿರುವ ಕಾಲೇಜುಗಳ ಮೇಲೆ ಕ್ರಮ ಕೈಗೊಳ್ಳದ ಅಧಿಕಾರಿಗಳು ಗಡಿ ಭಾಗದ ಕಾಲೇಜುಗಳ ಮೇಲೆ ಇನ್ನೂ ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆಂಬುದು ಸಾರ್ವಜನಿಕರ ಪ್ರಶ್ನೇಯಾಗಿದೆ. ಶಿಕ್ಷಣ ಇಲಾಖೆಗೆ ಶಿಕ್ಷಣದ ಮೇಲೆ ಇಚ್ಚಾಶಕ್ತಿಯಿದ್ದರೆ 1ವಾರದೊಳಗೆ ಕಾಲೇಜುಗಳ ಹಗಲುದರೋಡೆಗೆ ಕಡಿವಾಣ ಹಾಕಿ ವ್ಯಾಪಾರದ ಶಿಕ್ಷಣದಿಂದ ವಂಚಿತವಾಗುತ್ತಿರುವ ಬಡವರ ಇಚ್ಚಾಶಕ್ತಿ ಕಾÀಯಬೇಕು ಇಲ್ಲವಾದರೆ ಜಾನುವಾರುಗಳ ಸಮೇತ ಪಿ ಯು. ಶಿಕ್ಷಣ ಇಲಾಖೆಗೆ ಬೀಗ ಜಡಿಯುವ ಎಚ್ಚರಿಕೆಯನ್ನು ನೀಡಿದರು.

ಮನವಿ ಸ್ವೀಕರಿಸಿದ ಉಪ ನಿರ್ದೇಶಕರಾದ ಪಾಪಣ್ಣನವರು ಮಾತನಾಡಿ ಜಿಲ್ಲಾದ್ಯಾಂತ ಕಾಲೇಜುಗಳ ಡೋನೇಷನ್ ಹಾವಳಿ ಹೆಚ್ಚಾಗಿರುವುದು ಸಾರ್ವಜನಿಕ ದೂರುಗಳೂ ನಮ್ಮ ಗಮನಕ್ಕೂ ಬಂದಿದೆ ಆದರೆ ಕಾಲೇಜುಗಳ ಆಡಳಿತ ಮಂಡಳಿ ಪ್ರಭಾವಿ ರಾಜಕೀಯ ಒತ್ತಡದಿಂದ ನಾವು ಕೆಲಸ ನಿರ್ವಹಿಸಲು ಆಗುತ್ತಿಲ್ಲ. ಜೊತೆಗೆ ಆಕ್ರಮವಾಗಿ ನಿಯಮಬಾಹಿರ ಕಾಲೇಜುಗಳು ನಡೆಯುತ್ತಿದ್ದು, ಇದರ ವಿರುದ್ದ ಕ್ರಮ ಕೈಗೊಳ್ಳಲು ಹಿರಿಯ ಅಧಿಕಾರಿಗಳ ಚರ್ಚೆ ಮಾಡಿ, ಅಂತಹ ಕಾಲೇಜುಗಳ ವಿರುದ್ದ ಕಾನೂನು ಕ್ರಮ ಕೈಗೊಂಡು ಪರವಾನಗಿ ರದ್ದು ಮಾಡುವ ಭರವಸೆಯನ್ನು ನೀಡಿದರು.

    ಈ ಹೋರಾಟದಲ್ಲಿ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಮರಗಲ್ ಶ್ರೀನಿವಾಸ್, ಈಕಂಬಳ್ಳಿ ಮಂಜುನಾಥ್, ಮೂರಾಂಡಹಳ್ಳಿ ಶಿವಾರೆಡ್ಡಿ, ಪುರುಷೋತ್ತಮ್, ಮುರಳಿ, ಪುತ್ತೇರಿ ರಾಜು, ರಂಜಿತ್, ಸುಪ್ರೀಂಚಲ, ಭರತ್, ನಾರಾಯಣ್, ಶಿವ, ವಡ್ಡಹಳ್ಳಿ ಮಂಜುನಾಥ್, ಬೇತಮಂಗಲ ಗಣೇಶ್,  ಕ್ಯಾ ಸಂಬಳ್ಳಿ ಪ್ರತಾಪ್, ಮುದುವಾಡಿ ಚಂದ್ರಪ್ಪ,ಮುಂತಾದವರಿದ್ದರು

Read These Next

ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಸಂಪಾದಕರ ಸಂಘದ ನೂತನ ಆಡಳಿತ ಮಂಡಳಿ ಪದಾಧಿಕಾರಿಗಳ ನೇಮಕ

ಕೋಲಾರ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಸಂಪಾದಕರ ಸಂಘದ ನೂತನ ಆಡಳಿತ ಮಂಡಳಿ ಪದಾಧಿಕಾರಿಗಳನ್ನು ...

ನಕಲಿ ಬಿತ್ತನೆ ಬೀಜ ಹಾಗೂ ಕೀಟ ನಾಶಕ ಕಂಪನಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ರೈತಸಂಘದಿಂದ ಮೌನ ಹೋರಾಟ

ಕೋಲಾರ: ರೈತರ ಮರಣ ಶಾಸನ ಬರೆಯುತ್ತಿರುವ ನಕಲಿ ಬಿತ್ತನೆ ಬೀಜ ಹಾಗೂ ಕೀಟ ನಾಶಕ ಕಂಪನಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ...

ಗೌನಿಪಲ್ಲಿ ಗ್ರಾಮ ಪಂಚಾಯಿತಿ ಅಧ್ಯರಾಗಿ ಕಾಂಗ್ರೆಸ್‌ನ ಶಂಕರಮ್ಮ ,ಉಪಾಧ್ಯರಾಗಿ ಮಂಜುನಾಥ ಆರಾಧ್ಯ

ಶ್ರೀನಿವಾಸಪುರ: ತಾಲ್ಲೂಕಿನ ಗೌನಿಪಲ್ಲಿ ಗ್ರಾಮ ಪಂಚಾಯಿತಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯರಾಗಿ ಕಾಂಗ್ರೆಸ್‌ನ ಶಂಕರಮ್ಮ ...

ವಿಶ್ವಾಸಮತ ಯಾಚನೆಗೆ ವಿಪರೀತ ಅಡ್ಡಿಯಾದ ವಿಪ್​ ವಿಚಾರ; ಗದ್ದಲದ ನಡುವೆ ನಾಳೆಗೆ ಉಭಯ ಸದನಗಳ ಕಲಾಪ ಮುಂದೂಡಿಕೆ

ವಿಶ್ವಾಸಮತ ಯಾಚನೆಗೆ ವಿಪರೀತ ಅಡ್ಡಿಯಾದ ವಿಪ್​ ವಿಚಾರ; ಗದ್ದಲದ ನಡುವೆ ನಾಳೆಗೆ ಉಭಯ ಸದನಗಳ ಕಲಾಪ ಮುಂದೂಡಿಕೆ