ಭಟ್ಕಳದ ಪ್ರತಿಷ್ಠಿತ ಜನತಾ ಕೋ-ಆಪರೇಟಿವ್ ಸೊಸೈಟಿ ಚುನಾವಣೆ 

Source: sonews | By Staff Correspondent | Published on 20th August 2018, 6:38 PM | Coastal News | Don't Miss |

•    ಮಾಜಿ ಶಾಸಕ ಮಂಕಾಳ ವೈದ್ಯರ ಗುಂಪಿಗೆ ಭರ್ಜರಿ ಜಯ

ಭಟ್ಕಳ: ಇಲ್ಲಿನ ಪ್ರತಿಷ್ಠಿತ ಜನತಾ ಕೋ ಆಪರೇಟಿವ ಸೊಸೈಟಿಯ ನಿರ್ದೇಶಕ ಮಂಡಳಿಗೆ ಭಾನುವಾರ ನಡೆದ ಚುನವಾಣೆಯಲ್ಲಿ ಮಾಜಿ ಶಾಸಕ ಮಂಕಾಳ ವೈದ್ಯ ಸೇರಿದಂತೆ ಅವರ ಗುಂಪಿನ ೧೨ಮಂದಿ ನಿರ್ದೇಶಕರು ಆಯ್ಕೆಯಾಗಿ ಮತ್ತೊಮ್ಮೆ ಮಾಜಿ ಶಾಸಕರು ಜನತಾ ಕೋ ಆಪರೇಟಿವ್ ಸೂಸೂಟಿಯಲ್ಲಿ ಪಾರಮತ್ಯ ಮೆರೆದಿದ್ದಾರೆ.

೬೫೫೩ ಶೇರು ಮತದಾರರ ಪೈಕಿ ೩೧೯೮ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದು ಶೇ.೪೮ ರಷ್ಟಾಗಿತ್ತು.ಕಾಂಗ್ರೆಸ್‌ನ ಮಾಜಿ ಶಾಸಕ ಹಾಗೂ ಸೊಸೈಟಿ ಹಾಲಿ ಅಧ್ಯಕ್ಷ ಮಂಕಾಳ ವೈದ್ಯ ೧೮೬೫ ಮತ ಪಡೆದು ಆಯ್ಕೆಯಾದ್ದಾರೆ.

ಉಳಿದಂತೆ ಅವರ ಬೆಂಬಲಿಗರಾದ ಸಾಲಗಾರ ಸಾಮಾನ್ಯ ಕ್ಷೇತ್ರದಿಂದ ಕೃಷ್ಣಾನಂದ ಪ್ರಭಾಕರ ಪೈ,ತಿಮ್ಮಣ್ಣ ಜಟ್ಟಾ ನಾಯ್ಕ, ಪರಮೇಶ್ವರ ನಾರಾಯಣ ದೇವಾಡಿಗ, ಪರಮೇಶ್ವರ ಹೊನ್ನಪ್ಪ ನಾಯ್ಕ, ಬಾಬುರಾಯ ಚಂದ್ರಕಾಂತ ಕುಬಾಲ ಆಯ್ಕೆಯಾಗಿದ್ದಾರೆ.

ಹಿಂದುಳಿದ ವರ್ಗದಿಂದ ತಿಮ್ಮಪ್ಪ ಜಟ್ಟಾ ನಾಯ್ಕ, ನಾಗಪ್ಪ ಪೊಮ್ಮ ನಾಯ್ಕ, ಮಹಿಳಾ ಮೀಸಲು ಕ್ಷೇತ್ರದಿಂದ ಗೀತಾ ನಾರಾಯಣ ನಾಯ್ಕ,ಲಕ್ಷ್ಮೀ ಮಾದೇವ ನಾಯ್ಕ, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ವೆಂಕಟರಮಣ ಅಣ್ಣಪ್ಪ ಮೊಗೇರ್, ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಗೊಯ್ದ ಮಂಗಳಾ ಗೊಂಡ ಆಯ್ಕೆಯಾಗಿದ್ದಾರೆ.

ಬಿಜೆಪಿ ಬಣದ ಕೃಷ್ಣ ನಾಯ್ಕ ಆಸಕೇರಿ ೧೨೦೩ ಮತ ಪಡೆದು ನಿರ್ದೇಶಕರಾಗಿ ಆಯ್ಕೆಯಾಗಿದ್ದು ಬಿಟ್ಟರೆ, ಉಳಿದವರೆಲ್ಲರೂ ಪರಾಭವಗೊಂಡಿದ್ದಾರೆ. ಮಂಕಾಳ ವೈದ್ಯ ಅವರು ಕಾಂಗ್ರೆಸ್ ಬೆಂಬಲಿಗರಷ್ಟೆ ಅಲ್ಲ, ಬಿಜೆಪಿ,ಜೆಡಿಎಸ್ ಬೆಂಬಲಿಗರನ್ನೂ ತಮ್ಮ ತಂಡಕ್ಕೆ ಸೇರಿಸಿಕೊಂಡು ಚುನಾವಣೆಯಲ್ಲಿ ೧೩ ಸ್ಥಾನಗಳ ಪೈಕಿ ೧೨ ಸ್ಥಾನಗಳಲ್ಲಿ ತಮ್ಮ ಬೆಂಬಲಿಗರನ್ನು ಗೆಲ್ಲಿಸುವ ಮೂಲಕ  ತಮ್ಮ ಆಧಿಪತ್ಯವನ್ನು ಮೆರೆದಿದ್ದಾರೆ. ಚುನಾವಣಾಧಿಕಾರಿಯಾಗಿ ಸಹಕಾರಿ ಅಧಿಕಾರಿ ಜಿ.ಕೆ ಭಟ್ ಕಾರ್ಯನಿರ್ವಹಿಸಿದ್ದರು.
 

Read These Next

ಮೋದಿ ಸರ್ಕಾರ ಅವಧಿಯಲ್ಲಿ ’ಬೀಫ್’ ರಪ್ತು ಪ್ರಮಾಣದಲ್ಲಿ ಗರಿಷ್ಠ ಏರಿಕೆ; 2014-15ರಲ್ಲಿ 14.8 ಲಕ್ಷ ಮೆಟ್ರಿಕ್ ಟನ್ ಬೀಫ್ ರಫ್ತು

2014ರಲ್ಲಿ ಮೋದಿ ಸರಕಾರ ಅಧಿಕಾರ ವಹಿಸಿದಂದಿನಿಂದ ಎಮ್ಮೆ ಮಾಂಸದ ರಫ್ತು ಗಣನೀಯಾಗಿ ಹೆಚ್ಚಾಗಿದೆ. 2014-15ರಲ್ಲಿ 14.8 ಲಕ್ಷ ಮೆಟ್ರಿಕ್ ಟನ್ ...

ಹೊಸದಿಲ್ಲಿ:ಬಿಜೆಪಿ ರಾಷ್ಟ್ರೀಯ ಪ್ರ. ಸಂಘಟನಾ ಕಾರ್ಯದರ್ಶಿಯಾಗಿ ಕರ್ನಾಟಕ ಮೂಲದ ಬಿ.ಎಲ್ ಸಂತೋಷ್ ನೇಮಕ

ಹೊಸದಿಲ್ಲಿ: ಕಳೆದ 13 ವರ್ಷಗಳಿಂದ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಮಲಾಲ್ ಹುದ್ದೆ ತೊರೆದ ಹಿನ್ನೆಲೆಯಲ್ಲಿ ತೆರವಾದ ...