ಹೆಬ್ಬಾರರಿಗೆ ಸಚಿವ ಸ್ಥಾನ ನೀಡುವಂತೆ ಕಾರ್ಯಕರ್ತರಿಂದ ಒತ್ತಡ 

Source: sonews | By Staff Correspondent | Published on 19th December 2018, 5:46 PM | Coastal News |

ಮುಂಡಗೋಡ :  ಶಾಸಕ ಶಿವರಾಮ ಹೆಬ್ಬಾರರಿಗೆ ಮಂತ್ರಿ ಸ್ಥಾನ ನೀಡಬೇಕೆಂದು ಪಕ್ಷದ ಧುರಿಣರಿಗೆ ಹಾಗೂ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಲು ಯಲ್ಲಾಪುರ ಕ್ಷೇತ್ರದ ಕಾಂಗ್ರೆಸ್ ಧುರಿಣರು ಸಜ್ಜಾಗಿರುವ ವಿಷಯ ಹೊರಬಿದ್ದಿದೆ.

ಜಿಲ್ಲೆಯಲ್ಲಿ ಹೆಬ್ಬಾರ ಪ್ರಭಾವಿ ನಾಯಕರು ಎಂದು  ಹೊರಹೊಮ್ಮಿದ್ದು ಅಲ್ಲಗಳೆಯುವಂತಿಲ್ಲಾ ಈ ತಿಂಗಳಾಂತ್ಯಕ್ಕೆ ಸಚಿವ ಸಂಪುಟ ವಿಸ್ತರಣೆ ನಿರೀಕ್ಷೆ ಇರುವುದರಿಂದ ಯಲ್ಲಾಪುರ ಕ್ಷೇತ್ರದಿಂದ ಎರಡನೇ ಬಾರಿಗೆ ಶಾಸಕರಾಗಿರುವ ಶಿವರಾಮ ಹೆಬ್ಬಾರ ರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಡ ಹೇರಲು ಶಿರಸಿ ಪೂರ್ವಭಾಗ ಯಲ್ಲಾಪುರ, ಮುಂಡಗೋಡ ಭಾಗದ ಸಹಸ್ರಾರು ಕಾರ್ಯಕರ್ತರು ಬೆಳಗಾವಿಗೆ ತೆರಳಿ ಬಲಪ್ರದರ್ಶನ ನಡೆಸಲು ಸಿದ್ದತೆ ನಡಿಸಿದ್ದಾರೆ ಎಂದು ತಿಳಿದು ಬಂದಿದೆ . ಶಾಸಕರಾಗಿ ಮೂರು ತಾಲೂಕುಗಳಲ್ಲಿ ಸಾಕಷ್ಟು  ಅಭಿವೃದ್ದಿ ಕೆಲಸ ತಂದು ಜನರ ಗಮನ ಸೆಳೆದಿರುವ ಹಾಗೂ ಸರಕಾರದ ಮಟ್ಟದಲ್ಲೂ ಪ್ರಭಾವ ಹೊಂದಿರುವ ಶಾಸಕ ಹೆಬ್ಬಾರರಿಗೆ ಸಚಿವ ಸ್ಥಾನ ನೀಡಬೇಕೆಂಬ ವಿಷಾರ ಹೈಕಮಾಂಡ ಮಟ್ಟದಲ್ಲೂ ಬಹಳ ಚರ್ಚೆಯಲ್ಲಿದೆ ಪಕ್ಷದ ಹೈಕಮಾಂಡ್ ಅಲರ್ಟ್ ಆಗಿ ಹೆಬ್ಬಾರರಿಗೆ ಸೂಕ್ತ ಸ್ಥಾನ ಮಾನ ಕೊಡಲು ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಈ ನಡುವ ಕೊನೆ ಹಂತದಲ್ಲಿ ಬೇರೆ ಜಿಲ್ಲೆಯ ಶಾಸಕರು ಹೆಚ್ಚಿನ ಪ್ರಭಾವ ಬೀರಿ ಸಚಿವರಾಗುವ ಸಾಧ್ಯತೆ ಇದೆ. ಬೆಂಗಳೂರು ದೂರ ಇರುವುದರಂದ ಅಧಿವೇಶನವು ಬೆಳಗಾವಿಯಲ್ಲಿ ನಡೆಯುತ್ತಿರುವುದು ಹಾಗೂ  ಜಿಲ್ಲೆಯ ಪಕ್ಕವೆ ಇರುವುದರಿಂದ  ಮುಖ್ಯಮಂತ್ರಿ ಉಪಮಖ್ಯಮಂತ್ರಿ ಎಲ್ಲ ಮಂತ್ರಿಗಳು ಬೆಳಗಾವಿಯಲ್ಲೇ ಇರುವುದರಿಂದ ಯಲ್ಲಾಪುರದ ಕ್ಷೇತ್ರದ ಸಹಸ್ರಾರು ಕಾರ್ಯಕರ್ತರು ಪ್ರಮುಖರು ಬೆಳಗಾವಿಗೆ ಹೋಗಿ ಮುಖ್ಯಮಂತ್ರಿ ಉಪಮಖ್ಯಂತ್ರಿ ಇತರ ಪ್ರಮುಖರನ್ನು ಭೇಟಿಯಾಗಿ ಹೆಬ್ಬಾರರರಿಗೆ ಸಚಿವ ಸ್ಥಾನ ನೀಡುವ ಮೂಲಕ ಜಿಲ್ಲೆಯ ಅಭಿವೃದ್ದಿಗೆ ಬಲ ನೀಡಬೇಕೆಂಬ ಒತ್ತಾಯ ಮಾಡಲು ನಿರ್ಧರಿಸಿದ್ದಾರೆಂದು ಗೊತ್ತಾಗಿದೆ.

ಈಗಾಗಲೇ ಕ್ಷೇತ್ರದ ಕೆಲವು ಧುರಿಣರು ಈ ಕುರಿತು ಪಕ್ಷದ ಪ್ರಮುಖರಿಗೆ ಮನವಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಸದ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಶಕ್ತಿ ಸಂಘಟನೆಯ ಸದಸ್ಯತ್ವದಲ್ಲಿ ಶಾಸಕರೇ ಆಸಕ್ತಿ ವಹಿಸಿ ಯಲಾಪುರದಲ್ಲಿ ಹೆಚ್ಚು ಸದಸ್ಯತ್ವ ಮಾಡಿಸಿದ್ದು ಬನವಾಸಿ ಯಲ್ಲಾಪುರ ಮುಂಡಗೋ ಅಧ್ಯಕ್ಷರು ಪ್ರಮುಖರು ಚರ್ಚೆ ನಡೆಸಿ ಸದ್ಯವೆ ಬೆಳಗಾವಿಗೆ ತೆರಳಿ ಲಾಬಿ ಮಾಡಲು ಸಿದ್ದತೆ ನಡೆಸಿದ್ದಾರೆಂದು ಗೊತ್ತಾಗಿದೆ. ಈ ಕುರಿತು ಮುಂಡಗೋಡ ಕಾಂಗ್ರೆಸ್ ಧುರಿಣರಾದ ಎಚ್.ಎಮ್.ನಾಯಕ್,  ಬ್ಲಾಕ್ ಅಧ್ಯಕ್ಷ ರವಿಗೌಡಾ ಪಾಟೀಲ, ಕೃಷ್ಣಾ ಹಿರಳ್ಳಿ, ಅಲ್ಲಿಖಾನ ಪಠಾಣ, ಮಹ್ಮದರಫೀಕ ಇನಾಮದಾರ ಮಹ್ಮದಗೌಸ ಮಕಾನದಾರ, ಪಿ.ಜಿ. ತಂಚ್ಚನ್ ಪತ್ರಿಕೆಗೆ ತಿಳಿಸಿದ್ದಾರೆ.


 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...