ಬಸ್ ಸ್ಟ್ಯಾಂಡನಲ್ಲಿ ಹೊಂಡ ನಿರ್ಮಾಣ ಪ್ರಯಾಣಿಕರ ಜೀವಕ್ಕೆ ಸಂಚಕಾರ

Source: sonews | By sub editor | Published on 19th July 2018, 6:13 PM | Coastal News | Don't Miss |

ಮುಂಡಗೋಡ : ಮುಂಡಗೋಡ ಹೈ ಟೇಕ್ ಬಸ್ ಸ್ಟ್ಯಾಂಡ್ ಆಗಲು ಮುಂಡಗೋಡ ಜನರ ಬಹಳ ದಿನಗಳ ಕನಸಿತ್ತು. ಮುಂಡಗೋಡಗೆ ಹೈಟೇಕ್ ಬಸ್ಟ್ಯಾಂಡಗೆ ಸರಕಾರ ಹಸಿರು ನಿಶಾನೆ ತೋರಿತು. ಗುತ್ತಿಗೆದಾರರು ಬಸ್‍ಸ್ಟ್ಯಾಂಡ್ ಪಾಶ್ರ್ವದಲ್ಲಿ ಕಾಮಗಾರಿಯನ್ನು ಪ್ರಾರಂಭಿಸಿತು  ಕನಸು ನನಸು ಆಗಲು ಇನ್ನೇನು ಕೆಲವೇ ದಿನಗಳು ಎಂದು ಭಾವಿಸಲಾಗಿತ್ತು. ಆದರೆ ಗುತ್ತಿಗೆದಾರರು ಕೃಷಿಹೊಂಡದಂತೆ ದೊಡ್ಡದೊಂದು ಹೊಂಡ ಅಗೆದು ಹೋಗಿದ್ದರಿಂದ ಪ್ರಯಾಣಿಕರಿಗೆ ಇದು ಮೃತ್ಯುಕೂಪವಾಗಿ ಕಾಡತೋಡಗಿದೆ.

ಮುಂಡಗೋಡ ಹಾಗೂ ಯಲ್ಲಾಪುರ ಬಸ್ ಸ್ಟ್ಯಾಂಡ್ ಕಾಮಗಾರಿ ಒಬ್ಬರೆ ಪಡೆದಿದ್ದಾರೆ.ಮುಂಡಗೋಡನಲ್ಲಿ ಸಚಿವರು ಕಾಮಗಾರಿ ಉದ್ಘಾಟನೆಮಾಡಿದ್ದ ತಡ ಗುತ್ತಿಗೆ ದಾರ  ಬಸ್ ಸ್ಟ್ಯಾಂಡ್ ಪಾಶ್ರ್ವಭಾಗದಲ್ಲಿ ದೊಡ್ಡದೊಂದು ಕೃಷಿಹೊಂಡ್ ನಿರ್ಮಾಣ ದಂತೆ ದೊಡ್ಡದೊಂದು ಹೊಂಡವನ್ನು ಅಗೆದು ಕೈತೊಳೆದು ಕುಳಿತಿರುವುದರಿಂದ ಮುಂಡಗೋಡ ಪ್ರಯಾಣಿಕರಿಗೆ ಇದು ಯಮ ದೃಶ್ಯದಂತೆ ಕಂಡು ಬರುತ್ತಿದೆ. ಹೊಂಡದ ಸುತ್ತಲು ಕಳೆಬೆಳೆದು ದೊಡ್ಡಗಾತ್ರದಲ್ಲಿ ನಿಂತಿದೆ. ಯಾವ ಹೊತ್ತಿನಲ್ಲಿ ಪ್ರಾಣ ಹಾನಿಯಾಗುತ್ತೋ ಎಂಬ ಯೋಚನೆಯಲ್ಲಿ ತೊಡಗಿದ್ದಾರೆ. ಈಗ ಮಳೆಗಾಲ ಪ್ರಾರಂಭ ವಾಗಿದ್ದರಿಂದ ಹೊಂಡದಲ್ಲಿ ನೀರು ತುಂಬಿದ್ದರಿಂದ ವಿದ್ಯಾರ್ಥಿಗಳಿಗೆ, ಪ್ರಯಾಣಿಕರಿಗೆ ಹಾಗೂ ಅಲ್ಲಿಂದ ಸಂಚರಿಸುವ ಸಾರ್ವಜನಿಕರು ಇದು  ಅನಾಹುತದ ಅಹ್ವಾನ ನೀಡುವ ಹೊಂಡ ಎಂದು ಮಾತನಾಡಿಕೊಳ್ಳುತ್ತಿದ್ದಾರೆ 
ರಾತ್ರಿಹೊತ್ತಿನಲ್ಲಿ ಈ ಬಸ್‍ಸ್ಟ್ಯಾಂಡ್ ಕುರಿತು ಪರಿಚಯ  ಇಲ್ಲದ ಪ್ರಯಾಣಿಕರಾಗಲಿ ಅಥವಾ ಸಾರ್ವಜನಿಕರಾಗಲಿ ಮಲ-ಮೂತ್ರವಿಸರ್ಜನೆಗೆ ತೆರಳಿದರೆ ಅವರಿಗೆ ಮೃತ್ಯು ಕಟ್ಟಿಟ್ಟ ಬುತ್ತಿ ಎಂದು ಪ್ರಯಾಣಿಕರು ಮಾತನಾಡಿಕೊಳ್ಳುತ್ತಿರುವುದು ಮೇಲಿಂದ ಮೇಲೆ ಕೇಳಿಬರುತ್ತಿದೆ.. ಅಜ್ಞಾನದ ಕೆಲ ಜನರು ಇದು ಬಸ್‍ಸ್ಟ್ಯಾಂಡ ನಿರ್ಮಾಣಮಾಡಲು “ಹಾರ” ಕೇಳಿದೆ ಎಂತೆ ಅದಕ್ಕಾಗಿ ಈ ರೀತಿ ನಿರ್ಮಿಸಲಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಈ ಹೊಂಡದಿಂದ ಜನರ ಪ್ರಾಣ ಹಾಗೂ ಪ್ರಾಣಿ ಪಕ್ಷೀಗಳ ಪ್ರಾಣಕ್ಕೆ ಸಂಚಕಾರ ಬಂದಿರುವುದಂತು ಸತ್ಯ.

ಮೊದಲೇ ಮುಂಡಗೋಡ ಬಸ್ ಸ್ಟ್ಯಾಂಡ್ ಅಂದರೆ ಅಸ್ವಚತೆ ಅಗರ ಈಗ ಹೊಂಡನಿರ್ಮಾಣದಿಂದ ಮತ್ತಷ್ಟು ಆ ಹೆಸರಿಗೆ ಮೆರಗು ಬಂದಂತಾಗಿದೆ. ಹೊಂಡದಲ್ಲಿ ತಾಜ್ಯವಸ್ತುಗಳು ಬಿದ್ದು ವಿವಿಧ ನಮೂನೆ ಹುಳ ಹುಪ್ಪಡಿಗಳ ಸಾಮ್ರಾಜ್ಯವಾಗಿದೆ. ಸೊಳ್ಳೆಗಳಿಗಂತು ಸ್ವರ್ಗದ ಧರೆ ಆದಂತಾಗಿದೆ. ಸೊಳ್ಳೆಗಳ ಕಾಟದಿಂದ ಬಸ್‍ಸ್ಟ್ಯಾಂಡದಲ್ಲಿನಿಲ್ಲಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ

ಸಂಬಂದಪಟ್ಟ ಅಧಿಕಾರಿಗಳು,  ಜನಪ್ರತಿನಿಧಿಗಳು ಈ ಕುರಿತು ಕಾಳಜಿವಹಿಸುವುದು ಅತ್ಯವಶ್ಯವಾಗಿದೆ. ಮುಂದೆ ಯಾವುದೇ ಅನಾಹುತವಾದರೆ ಯಾರು ಹೋಣೆಗಾರರು?

Read These Next

ಭ್ರಷ್ಟಾಚಾರ ನಿರ್ಮೂಲನೆಗೆ ನಾಗರಿಕರು ಸಹಕರಿಸಬೇಕು- ಪ್ರಧಾನ ಸಿವಿಲ್‌ ನ್ಯಾಯಾಧೀಶ ಮಹಮದ್‌ ರೋಷನ್‌ ಷಾ

ಶ್ರೀನಿವಾಸಪುರ: ದೇಶದಲ್ಲಿ ಭ್ರಷ್ಟಾಚಾರ ನಿರ್ಮೂಲನೆಗೆ ನಾಗರಿಕರು ಸಹಕರಿಸಬೇಕು ಎಂದು ಜೆಎಂಎಫ್‌ಸಿ ನ್ಯಾಯಾಲಯದ ಪ್ರಧಾನ ಸಿವಿಲ್‌ ...

ಪಿ.ಯು.ಕಾಲೇಜ್ ಸಹಪಠ್ಯ ಚಟುವಟಿಕೆ; ಇಂಗ್ಲಿಷ್ ಚರ್ಚಾ ಸ್ಪರ್ಧೆಯಲ್ಲಿ ಶಿಹಾಬುದ್ದೀನ್ ಪ್ರಥಮ

ಭಟ್ಕಳ: ಪದವಿ ಪೂರ್ವ ಶಿಕ್ಷಣ ಇಲಾಖೆ ಹಮ್ಮಿಕೊಂಡ ತಾಲೂಕಾ ಮಟ್ಟದ ಸಾಂಸ್ಕತಿಕ ಸಹ ಪಠ್ಯೇತರ ಚಟುವಟಿಕೆಗಳ ಸ್ಪರ್ಧೆಗಳಲ್ಲಿ ದಿ.ನ್ಯೂ ...