ಮೈಕೊರೆಯುವ ಚಳಿಯಿಂದ ತತ್ತರಿಸುತ್ತಿರುವ ಮುಂಡಗೋಡ ಜನತೆ 

Source: sonews | By Staff Correspondent | Published on 2nd January 2019, 11:44 PM | Coastal News | Don't Miss |

ಚಳಿಯಿಂದ ಕಾಪಾಡೋ ತಂದೆ!

ಮುಂಡಗೋಡ : ಮೈಕೊರೆಯುವ ಚಳಿಯಿಂದ ತತ್ತರಸಿ ಹೋಗಿರುವ ಮುಂಡಗೋಡ ಜನತೆ ಅಟ್ಟದ ಮೇಲೆ ಸೇರಿದ್ದ ಕಂಬಳಿ, ರಗ್ಗು, ಟ್ರಂಕ್, ಕಪಾಟ ಸೇರಿದ್ದ ವೂಲನ್ ಸ್ವೇಟರ್, ಮಫ್ಲರ್, ಮಂಕಿ ಕ್ಯಾಪ್, ಹ್ಯಾಂಗರ ಮೇಲಿದ್ದ ರೆಕ್ಜೇನ ಕೋಟುಗಳಿಗೆ ಅಂಟಿಕೊಂಡಿದ್ದ  ಧೂಳು ಜಾಡಿಸಿಕೊಂಡು ಮೈಮೇಲೆ ಹಾಕಿಕೊಂಡು ಆದಷ್ಟು ಚಳಿಯನ್ನು ದೂರಮಾಡಲು ಪ್ರಯತ್ನಿಸುತ್ತಿರುವುದು ಮುಂಡಗೋಡಧ್ಯಂತ ಕಂಡು ಬರುತ್ತಿದೆ. ಮುಂಡಗೋಡ ಚಳಿಯು ಆ ದೇವರಿಗೆ ಪ್ರೀತಿ .

ಚಳಿಯ ಪ್ರಖರತೆ ಹರಯದವರನ್ನು ಅಜ್ಜ ಅಜ್ಜಿಯವರಂತೆ  ಕೈಕಟ್ಟಿ ಮುದುಡಿ ಕುಳಿತುಕೊಳ್ಳುವಂತೆ ಮಾಡಿದೆ ಮಾಗಿಯ ಚಳಿಯ ಪ್ರಖರತೆ  ಸಂಜೆ 7 ಗಂಟೆಯಿಂದ ಪ್ರಾರಂಭವಾದರೆ ಬೆಳಗಿನ10 ಗಂಟೆಯಾದರೂ ಚಳಿಯ ಕೋಪ ಕಡಿಮೆ ಆಗದೆ ಇರುವುದರಿಂದ ಜನರು ಸ್ವೇಟರ್ ಹಾಕಿಕೊಂಡು ಚಳಿಯ ಕೋಪದಿಂದ ಉಳಿಯುವಂತೆ ನೋಡಿಕೊಳ್ಳುತ್ತಿದ್ದಾರೆ  ಕೆಲವರು ಒಳಂಗಿಯ ಬದಲು ಸ್ವೇಟರ್‍ಕ್ಕೆ ಮಾರುಹೋಗಿದ್ದಾರೆ ಪಟ್ಟಣದಲ್ಲಿ ಈ ಗತಿಯಾದರೆ ಇನ್ನೂ ಗ್ರಾಮಾಂತರ ಪ್ರದೇಶಗಳಲ್ಲಿ ಹಾಗೂ ಕಾಡಂಚಿನ ಹಾಗೂ ಮಧ್ಯದಲ್ಲಿರುವ ಗ್ರಾಮಗಳಲ್ಲಿ ಚಳಿಯ ಮಹಾತ್ಮೇ ಊಹಿಸಲು ಅಸಾಧ್ಯ

ಬೆಳಗಿನ ಜಾವ ಆರೋಗ್ಯ ಸುಧಾರಿಸಲು ವಾಯು ವಿಹಾರಕ್ಕೆ ಹೋಗುತ್ತಿರುವವ ಸಂಖ್ಯೆ ಕಡಿಮೆಯಾಗಿದೆ.ಧೈರ್ಯಮಾಡಿ ವಾಕಿಂಗ್ ಹೋಗುವವರು  ಡಬಲ್ ಸ್ವೇಟರ, ಮಂಕಿ ಕ್ಯಾಪ್, ಜರ್ಕಿನ್ ಅನಿವಾರ್ಯವಾಗಿದೆ. ವಾಯು ವಿಹಾರಕ್ಕೆ ಹೋದವರು  ಟೀ ಕಾಫೀ ಕುಡಿದು ಮೈ ಬೆಚ್ಚಗೆ ಮಾಡಿಕೊಳ್ಳುತ್ತಿರುವುದು ಕಂಡು ಬರುತ್ತಿದೆ  ಚಳಿಯ ಮಹಿಮೆಯಿಂದ ಬಹುತೇಕರು ರಾತ್ರಿಹೊತ್ತು ಬೈಕ್ ಪ್ರಯಾಣಮಾಡುವುದನ್ನು ಬಿಟ್ಟಿದ್ದಾರೆ 

ಬಹಿರ್ದಸೆಗೆ ಹೋಗುವವರು ಕೆಲವರು ಬೀಸಿನೀರಿಗೆ ಅವಲಂಬಿಸಿದ್ದಾರೆ ಎಂದಾದರೆ ಇನ್ನೂ ಕುಡಿಯಲು ಸ್ನಾನಮಾಡಲು ಬೀಸಿನೀರು ತೀರಸ್ಕರಿಸಲು ಸಾಧ್ಯವೆ ದಿನಾಲು ಜಳಕ ಮಾಡುವಂತ ಕೆಲವರು ನೀರಿನ ಗೋಜಿಗೆ ಹೋಗುವುದನ್ನೆ ಬಿಟ್ಟಿದ್ದಾರೆ. ಹೋಟಲ್ ಗಳಲ್ಲಿ ಬೀಸಿ ನೀರು ಕೇಳಿ ಪಡೆಯುತ್ತಿರುವುದು ಕಂಡು ಬರುತ್ತದೆ  

ಫ್ಯಾನ್, ಎಸಿ, ಕೂಲರ್ ಸ್ವಿಚ್ ಹತ್ತಿರ ಮರೆತು ಕೂಡಾ ಬೆರಳು  ಹೋಗುವುದಿಲ್ಲ ಅಂತಾರೆ ಜನರು ಬೆಳಗಿನ ಜಾವ ಪೇಪರ ಹಾಕುವ ಹುಡುಗರ ಪರಿಸ್ಥಿತಿ ಆ ದೇವರಿಗೆ ಪ್ರೀತಿ. ವಿದ್ಯಾರ್ಥಿಗಳು ಚಳಿಯನ್ನು ಶಪಿಸುತ್ತಾ ಶಾಲಾ ಕಾಲೇಜ ಗೆ ಹೋಗುವುದನ್ನು ಕಾಣಬಹುದಾಗಿದೆ

ಚಳಿಯ ಪ್ರಕೋಪದಿಂದ ಆರೋಗ್ಯೆ ಏರು ಪೇರಾಗಿ ಚಳಿಯಿಂದ ಜನರ ಆರೋಗ್ಯದ ಮೇಲೆ ನೇರ ಪರಿಣಾಮ ಬೀರಿದೆ ಜ್ವರ, ನೆಗಡಿ, ಕೆಮ್ಮು, ಕಫ್, ಸೀನು ದಿಂದ ತತ್ತರಿಸಿ ದವಾಖಾನೆ ಬಾಗಿಲ ತಟ್ಟುತ್ತಿದ್ದಾರೆ. 

 ವರದಿ ಮತ್ತು ಚಿತ್ರ : ನಝೀರುದ್ದಿನ ತಾಡಪತ್ರಿ     

Read These Next

ನಾಲ್ಕು ತಿಂಗಳಿಂದ ವೇತನವಿಲ್ಲದ ಶಿಕ್ಷಕರು ಕಂಗಾಲು; ಡಿಡಿಪಿಐ ಕಚೇರಿ ಮುಂದೆ ಧರಣಿ-ವೇತನ ಬಿಡುಗಡೆಗೆ ಆಗ್ರಹ

ಕೋಲಾರ: ಜಿಲ್ಲೆಯ ವಿವಿಧ ತಾಲ್ಲೂಕುಗಳ ಪ್ರೌಢಶಾಲಾ ಶಿಕ್ಷಕರಿಗೆ ಕಳೆದ ನಾಲ್ಕು ತಿಂಗಳಿಂದ ಸಂಬಳ ಬಂದಿಲ್ಲ,ಕುಟುಂಬ ನಿರ್ವಹಣೆಗೆ ...