ಸದಸ್ಯರ ಪ್ರಶ್ನೆಗೆ ಉತ್ತರಿಸಲಾಗದೆ ಸಭೆಯಿಂದ ಹೊರನಡೆದ ಪಂಚಾಯತ್ ಅಭಿವೃದ್ಧಿ ಅಧಿಕಾರಿ

Source: sonews | By Staff Correspondent | Published on 15th February 2019, 6:43 PM | Coastal News | Don't Miss |

ಭಟ್ಕಳ: ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಸದಸ್ಯರ ಪ್ರಶ್ನೆಯೊಂದಕ್ಕೆ ಉತ್ತರಿಸಲಾಗದೇ ಗ್ರಾಮ ಪಂಚಾಯತ್  ಪಂಚಾಯತ್ ಅಭಿವೃದ್ದಿ ಅಧಿಕಾರಿ ನಟರಾಜ್ ಮಾವಳ್ಳಿ-1 ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಿಂದ ಹೊರ ನಡೆದ ಘಟನೆ ನಡೆದಿದೆ.  

ಸಾಮಾನ್ಯ ಸಭೆಗೆ ಮಾಧ್ಯಮಕ್ಕೆ ಪ್ರವೇಶ ಇಲ್ಲವೆಂದ ಪಂಚಾಯತ್ ಅಭಿವೃದ್ದಿ ಅಧಿಕಾರಿ, ಅಧ್ಯಕ್ಷರ ಅನುಮತಿ ಅಗತ್ಯ ಎಂದು ಹೇಳಿದರಲ್ಲದೇ ಅಧ್ಯಕ್ಷರ ಅನುಮತಿಯ ಮೇರೆಗೆ ಮಾಧ್ಯಮದವರು ಪ್ರವೇಶಿಸುತ್ತಿದ್ದಂತೆಯೇ ಸದಸ್ಯ ಜಯಂತ ನಾಯ್ಕ ಅವರು ಅನಧೀಕೃತ ಲಾಡ್ಜಿಂಗ್ ಒಂದರ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೇ ಸಿಡಿಮಿಡಿಗೊಂಡು ಸಭೆಯಿಂದಲೇ ಹೊರ ನಡೆದ ಅಪರೂಪದ ಘಟನೆ ನೆಡೆದಿದ್ದು, ಇದನ್ನು ಮೇಲಧಿಕಾಗಿಳ ಗಮನಕ್ಕೆ ತರುವುದಾಗಿ ಅಧ್ಯಕ್ಷ ಮಂಗಲಾ ನಾಯ್ಕ ಹೇಳಿದ್ದಾರೆ. 

ಭಟ್ಕಳ ತಾಲೂಕ ಮುರ್ಡೆಶ್ವರ ಮಾವಳ್ಳಿ 1 ರ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯು ನಡೆಯುವ ಸಂದರ್ಭದಲ್ಲಿ ಪಂಚಾಯತ್ ಸದಸ್ಯ ಜಯಂತ ನಾಯ್ಕ ಸಾರ್ವಜನಿಕ ಹಿತಾಸಕ್ತಿಯ  ಸಮಸ್ಯೆಯನ್ನು ಸಭೆಯ  ಮುಂದಿಡುತ್ತಿದ್ದ ಹಾಗೆ ಇದು ಅಜೆಂಡಾದಲ್ಲಿಲ್ಲ ಎಂದ ಅಧಿಕಾರಿ ಸಭೆಯಿಂದಲೇ ಹೊರ ನಡೆದರು. ಸಭೆಯನ್ನು ನಡೆಸಿಕೊಡಬೇಕಾದ ಅಧಿಕಾರಿಯೇ ಹೊರ ನಡೆದ ಮೇಲೆ ಸಭೆಯೆಲ್ಲಿಂದ ಬಂತು ಎನ್ನುವುದು ಪ್ರಶ್ನೆಯಾಗಿದೆ. 

ತಾಲೂಕಿನ ಮಾವಳ್ಳಿ-1 ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಟರಾಜ್ ಅವರೇ ಹೊರ ನಡೆದವರಾಗಿದ್ದು ಗ್ರಾಮ ಪಂಚಾಯತ್‍ನಲ್ಲಿ ನಡೆಯುತ್ತಿರುವ ಸಾಮಾನ್ಯ ಸಭೆಯಲ್ಲಿ ಅನಧೀಕೃತ ಲಾಡ್ಜಿಂಗ್ ಪ್ರಶ್ನೆ ಎತ್ತಿರುವುದೇ ಸಮಸ್ಯೆಯಾಯಿತು.  ಗ್ರಾಮ ಪಂಚಾಯತಕ್ಕೆ ಲಕ್ಷಾಂತರ ರೂಪಾಯಿ ತೆರಿಗೆ ವಂಚನೆ ಮಾಡಲಾಗುತ್ತಿರುವುದು ಗಮನಕ್ಕೆ ಇದ್ದರೂ ಸಹ ಇವರು ಕ್ರಮ ಕೈಗೊಂಡಿಲ್ಲ ಎನ್ನುವ ಸದಸ್ಯರ ಪ್ರಶ್ನೆಯಿಂದ ಇರುಸುಮುರುಗೊಂಡ ಇವರು ಸಭೆಯಿಂದ ಹೊರ ನಡೆದಿರುವುದು ಸರಿಯಲ್ಲ ಎಂದು ಅಧ್ಯಕ್ಷೆ ಹೇಳಿದ್ದಾರೆ. 

ಈ ಬಗ್ಗೆ  ಗ್ರಾಮ ಪಂಚಾಯತ್ ಅಧ್ಯಕ್ಷೆ ಮಂಗಳಾ ಈಶ್ವರ ನಾಯ್ಕ ಪ್ರತಿಕ್ರಿಯಿಸಿ ಒಬ್ಬ ಜವಾಬ್ದಾರಿಯುತ ಪಂಚಾಯತ್ ಅಭಿವೃದ್ದಿ ಅಧಿಕಾರಿ ಈ ರೀತಿಯಾಗಿ ವರ್ತಿಸಬಾರದಿತ್ತು.  ಯಾವುದೆ ಸಮಸ್ಯೆಯಿದ್ದರೂ ಸಹ ಪರಿಹಾರ ಮಾಡಬಹುದಿತ್ತು ಆದರೆ  ಈ ಅಧಿಕಾರಿ ಸಭೆಯನ್ನು ಬಿಟ್ಟು ಹೊರತೆರಳಿದ್ದಾರೆ ಈ ಬಗ್ಗೆ ನಾನು ತಾಲೂಕ ಪಂಚಾಯತ್ ಕಾರ್ಯನಿರ್ವಹಣ ಅಧಿಕಾರಿಗಳ ಗಮನಕ್ಕೆ ತರುತ್ತೆನೆ ಎಂದರು. 

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...