ಅ.13 ರಂದು ಮಹಿಳಾ ಕಾಲೇಜು ಸಾಂಸ್ಕøತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ

Source: sonews | By Staff Correspondent | Published on 12th October 2018, 5:32 PM | Coastal News |

ಕಾರವಾರ ; ನಗರದ ಕನ್ನಡ ಭವನದಲ್ಲಿ ಅಕ್ಟೋಬರ 13 ರಂದು ಬೆಳಗ್ಗೆ 11 ಗಂಟೆಗೆ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಸಾಂಸ್ಕøತಿಕ, ಕ್ರೀಡಾ,ಎನ್.ಎಸ್.ಎಸ್., ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ರೆಡ್ ಕ್ರಾಸ್ ಯುಥ್ ವಿಂಗ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ನಡೆಯಲಿದೆ. 

ಶಾಸಕಿ ರೂಪಾಲಿ ನಾಯ್ಕ ಕಾರ್ಯಕ್ರಮ ಉದ್ಘಾಟಿಸುವರು. ಮಹಿಳಾ ಕಾಲೇಜು ಪ್ರಾಂಶುಪಾಲರಾದ ವಿನಾಯಕ ಪಿ. ಗಂಗೊಳ್ಳಿ ಅಧ್ಯಕತೆ ವಹಿಸುವರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನಾಗರಾಜ ಹರಪನಹಳ್ಳಿ, ನಗರಸಭೆ ಸದಸ್ಯ ಪ್ರೇಮಾನಂದ ಗುನಗಾ ಸೇರಿದಂತೆ ಇತರರು ಉಪಸ್ಥಿತರಿರುವರು. 

ಅ.16 ರಂದು ಹಿರಿಯ ನಾಗರರಿಕರಿಗೆ ಸನ್ಮಾನ
ಕಾರವಾರ ; ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ನಡೆದ ಕ್ರೀಡಾ ಮತ್ತು ಸಾಂಸ್ಕøತಿಕ ಚಟುವಟಿಕೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಹಾಗೂ ಜಿಲ್ಲೆಯ 11 ತಾಲೂಕಿನ ಹಿರಿಯ ಚೇತನರಿಗೆ ಸನ್ಮಾನ ಕಾರ್ಯಕ್ರಮವನ್ನು ಅ.16 ರಂದು ಬೆಳಗ್ಗೆ 10.30ಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿಯ ಸಂಭಾಗಣ ಏರ್ಪಡಿಸಲಾಗಿದೆ. 

ಜಿಲ್ಲೆಯ ಹಿರಿಯ ಚೇತನರು ಆಸಕ್ತಿಯಿಂದ ತಮ್ಮ ದಿನಾಚರಣೆಗೆ ಬರುವಂತೆ ಹಿರಿಯ ನಾಗರಿಕರ  ಸಬಲೀಕರಣ ಇಲಾಖೆ  ವಿನಂಬ್ರತೆಯಿಂದ ಕೋರಿದೆ. 

ಅ.15 ರಿಂದ ಇಂಧ್ರಧನುಷ್ ಲಸಿಕಾ ಅಭಿಯಾನ
ಕಾರವಾರ ; ಸಕಾಲಕ್ಕೆ ಇಂಧ್ರಧನುಷ್ ಲಸಿಕೆ ಹಾಕಿಸದೇ ಇರುವ ಮಕ್ಕಳಿಗೆ ತಮ್ಮ ಸಮೀಪದ ಲಸಿಕಾ ಕೇಂದ್ರಕ್ಕೆ ಮಕ್ಕಳನ್ನು ಕರೆದೊಯ್ಯದು ಲಸಿಕೆ ಹಾಕಿಸುವಂತೆ  ಜಿಲ್ಲಾ ಆರೋಗ್ಯ ಮತ್ತು ಕು.ಕ. ಅಧಿಕಾರಿ ಡಾ| ಜಿ.ಎನ್. ಅಶೋಕ ಕುಮಾರ ವಿನಂತಿಸಿದ್ದಾರೆ.
ಗ್ರಾಮ ಸ್ವರಾಜ್ ಯೋಜನೆಯಡಿಯಲ್ಲಿ ಲಸಿಕೆ ಹಾಕಿಸದೇ ಇದ್ದ ಹಾಯ್‍ರಿಸ್ಕ್ ಮಕ್ಕಳನ್ನು ಗುರುತಿಸಿ, ನಿಗದಿತ ಸ್ಥಳದಲ್ಲಿ ಅಕ್ಟೋಬರ 15, 16 17 ಮತ್ತು 22 ರಂದು ವಿವಿಧ ಗ್ರಾಮಗಳಲ್ಲಿ ಮಕ್ಕಳಿಗೆ ಹಾಗೂ ಗರ್ಭಿಣಿ ಸ್ತ್ರೀಯರಿಗೆ ಲಸಿಕೆ ನೀಡುವ ವ್ಯವಸ್ಥೆ ಮಾಡಲಾಗಿದೆ.

ಜಿಲ್ಲೆಯಲ್ಲಿ 0-2 ವರ್ಷದ ಒಟ್ಟು 1602 ಮಕ್ಕಳಿಗೆ, 5-6 ವರ್ಷದ 145 ಮಕ್ಕಳಿಗೆ ಹಾಗೂ 281 ಗರ್ಭಿಣಿಯರಿಗೆ 207 ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಹಾಕುವ ವ್ಯವಸ್ಥೆ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ವೈದ್ಯಾಧಿಕಾರಿಗಳನ್ನು, ಸಿಬ್ಬಂದಿಗಳನ್ನು, ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಬಹುದಾಗಿರುತ್ತದೆ ಎಂದು ಡಿಹೆಚ್‍ಒ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆನ್‍ಲೈನ್ ಅರ್ಜಿ ಆಹ್ವಾನ 
ಕಾರವಾರ ;  ಜಿ.ಎನ್.ಎಂ, ಬಿ.ಎಸ್ಸಿ ನರ್ಸಿಂಗ್ ಹಾಗೂ ಪ್ಯಾರಾ ಮೆಡಿಕಲ್ (ಎಸ್.ಎಸ್.ಎಲ್.ಸಿ / ಪಿ.ಯು.ಸಿ) ಕೋರ್ಸ್‍ಗಳಿಗೆ ತರಬೇತಿ ಶುಲ್ಕ, ಶಿಷ್ಯವೇತನ ಹಾಗೂ ಇತರೆ ಶುಲ್ಕಗಳನ್ನು ಇ-ಪಾಸ್ ಮೂಲಕ ಮಂಜೂರು ಮಾಡುತಿgರುವದರಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಈ ಹಿಂದೆ ತರಬೇತಿ ಶುಲ್ಕ ಮತ್ತು ಶಿಷ್ಯವೇತನಕ್ಕೆ ಆಯ್ಕೆಯಾಗಿರುವರು,  2018-19ನೇ ಸಾಲಿಗೆ ಮುಂದುವರೆಯುತ್ತಿರುವ ನವೀಕರಣ ವಿದ್ಯಾರ್ಥಿಗಳು ಹಾಗೂ 2018-19ನೇ ಸಾಲಿಗೆ ಪ್ರಥಮ ವರ್ಷಕ್ಕೆ ದಾಖಲಾಗಿರುವ ವಿದ್ಯಾರ್ಥಿಗಳು ಆನ್‍ಲೈನ್ ಮೂಲಕವೇ ಅರ್ಜಿಯನ್ನು ಸಲ್ಲಿಸುವುದು. 

ಅರ್ಜಿಯನ್ನು ಆನ್‍ಲೈನ್ ಮೂಲಕ karepass.cgg.gov.in www.backwardclasses.kar.nic.in ನಲ್ಲಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಅಕ್ಟೋಬರ್ 31 ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08382-226589 ಸಂಪರ್ಕಿಸಬಹುದಾಗಿದೆ ಎಂದು ಜಿಲಾ ್ಲ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿರುತಾರೆ.
 
 
 ವಿದ್ಯುತ್ ವ್ಯತ್ಯಯ

ಕಾರವಾರ: ರಸ್ತೆ ಅಗಲಿಕರಣ ಕಾಮಗಾರಿ ಹಮ್ಮಿಕೊಂಡಿರುವದರಿಂದ ಅಕ್ಟೋಬರ 13 ರಂದು ರಂದು ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಸಾಯಿಕಟ್ಟಾ, ವಿವೆಕಾನಂದನಗರ, ಅಳ್ವೆವಾಡಾ, ಸರ್ವೋದಯನಗರ ಮತ್ತು ಬೈತ್‍ಖೋಲ್ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ  ಉಂಟಾಗಲಿದೆ ಎಂದು ಹೆಸ್ಕಾಂ ಅಧಿಕಾರಿ ಪ್ರಕಟಣೆಯಲ್ಲಿ  ತಿಳಿಸಿದ್ದಾರೆ. 

ಸ್ವ-ಉದ್ಯೋಗ ತರಬೇತಿಗೆ ಅರ್ಜಿ ಆಹ್ವಾನ

ಕಾರವಾರ: ಕೆನರಾ ಬ್ಯಾಂಕ್ ಆರ್‍ಸೆಟ್ ಸಂಸ್ಥೆ(ರಿ) ಹಳಿಯಾಳ ಇವರು ಗೃಹೋಪಯೋಗಿ ವಿದ್ಯುತ್ ಉಪಕರಣಗಳ ಉದ್ಯಮಿ ತರಬೇತಿಗಳಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದಾರೆ.
      
ತರಬೇತಿಯಲ್ಲಿ ಪ್ರಾಯೋಗಿಕ ಕೌಶಲ್ಯಗಳ ಜೋತೆಗೆ ವ್ಯವಹಾರಿಕ ತಂತ್ರಗಳ ಬಗ್ಗೆಯೂ ಸಹ ತರಬೇತಿ ನೀಡಲಾಗುವುದು. ತರಬೇತಿಗಳು ಊಟ ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿದ್ದು 18 ರಿಂದ 45 ವರ್ಷದೊಳಗಿನ ಅರ್ಹ ನಿರುದ್ಯೋಗಿ ಯುವಜನತೆ ತರಬೇತಿಯಲ್ಲಿ ಭಾಗವಹಿಸಬಹುದಾಗಿರುತ್ತದೆ.
  
ಹೆಚ್ಚಿನ ಮಾಹಿತಿಗಾಗಿ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟ್ ಸಂಸ್ಥೆ(ರಿ), ಉದ್ಯೋಗ ವಿದ್ಯಾ ನಗರ, ದಾಂಡೇಲಿ ರಸ್ತೆ, ಹಳಿಯಾಳ, ದೂರವಾಣಿ ಸಂಖ್ಯೆ 08284-220807, ಮೊ.ನಂ 94834885489, 9482188780 ಸಂಪರ್ಕಿಸಬಹುದು ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ. 


ಉದ್ಯೋಗ ವಿನಿಮಯ ಕಚೇರಿಯಲ್ಲಿ ನೋಂದಣಿ
ಕಾರವಾರ: ಉದ್ಯೋಗ ವಿನಿಮಯ ಕಚೇರಿಯಲ್ಲಿ ಕಳೆದ ಸೆಪ್ಟಂಬರ ತಿಂಗಳಿನಲ್ಲಿ 57 ಮಹಿಳೆಯರು ಸೇರಿದಂತೆ 145 ಅಭ್ಯರ್ಥಿಗಳು ನೋಂದಣಿ ಮಾಡಿದ್ದಾರೆ.
           
ಉದ್ಯೋಗದ ನಿರೀಕ್ಷೆಯಲ್ಲಿ ಒಟ್ಟು 9160 ಅಭ್ಯರ್ಥಿಗಳು ಇದ್ದಾರೆ. ಅವರಲ್ಲಿ 2960 ಮಹಿಳಾ ಅಭ್ಯರ್ಥಿಗಳು ಇದ್ದು, 2589 ಪರಿಶಿಷ್ಟ ಜಾತಿ, 293 ಪರಿಶಿಷ್ಟ ವರ್ಗ, 992 ಅಂಗವಿಕಲ ಅಭ್ಯರ್ಥಿಗಳು ಇದ್ದಾರೆ ಎಂದು ಕಾರವಾರ ಯೋಜನಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

 
    
 

Read These Next