ಕಲೆ,ಸಂಸ್ಕೃತಿಯ ಹೆಸರಲ್ಲಿ ಅಶ್ಲೀಲತೆ ಸಲ್ಲದು-ಮೌಲಾನ ಇಲ್ಯಾಸ್ ನದ್ವಿ

Source: sonews | By sub editor | Published on 13th August 2018, 4:27 PM | Coastal News | Don't Miss |

ಭಟ್ಕಳ: ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದಾಗಿ ಕಲೆ, ಸಂಸ್ಕೃತಿಯಲ್ಲಿ ಅಶ್ಲೀಲತೆ ಬೆರೆಯುತ್ತಿದ್ದು ಇಂತಹ ಕಲೆ ಮತ್ತು ಸಂಸ್ಕೃತಿಯಿಂದ ನಾವು ದೂರ ಉಳಿಯಬೇಕು, ಕಲೆಯ ಹೆಸರಿನಲ್ಲಿ ಅಶ್ಲೀಲತೆ ಹರಡುವುದು ಸಲ್ಲದು ಎಂದು ಅಲಿ ಪಬ್ಲಿಕ್ ಸ್ಕೂಲ್ ನ ಪ್ರಧಾನ ಕರ್ಯದರ್ಶಿ ಮೌಲಾನ ಮುಹಮ್ಮದ್ ಇಲ್ಯಾಸ್ ನದ್ವಿ ಹೇಳಿದರು. 

ಅವರು ಸೋಮವಾರ ಹೆಬಳೆ ಪಂಚಾಯತ್ ವ್ಯಾಪ್ತಿಯ ಬಿಬಿ ಮೊಂಟೆಸರಿ ವುಮೆನ್ಸ್ ಸೆಂಟರ್ ನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ ನ್ಯಾಶನಲ್ ಕಾಲೋನಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಉರ್ದು ಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದರು. 

ವಿದ್ಯಾರ್ಥಿ ಸಮುದಾಯವನ್ನು ನೈತಿಕವಾಗಿ ಸಿದ್ಧಗೊಳಿಸುವ ಮಹತ್ತರ ಹೊಣೆಗಾರಿಕೆ ಶಿಕ್ಷಕರ ಮೇಲಿದ್ದು ಅವರಲ್ಲಿ ನೈತಿಕ ಮೌಲ್ಯಗಳನ್ನು ಉಂಟುಮಾಡುವ ಶಿಕ್ಷಣವನ್ನು ನೀಡಬೇಕು, ಸಮಾಜವನ್ನು ಒಂದುಗೂಡಿಸುವ, ಪರಸ್ಪರ ಸೌಹಾರ್ದತೆ, ಬ್ರಾತೃತ್ವವನ್ನು ಬೆಳೆಸುವ ಮೌಲ್ಯಗಳನ್ನು ಶಿಕ್ಷಣದಿಂದ ಕಲಿಯುವಂತಾಗಬೇಕು ಎಂದರು. 

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಭಟ್ಕಳ ತಾಲೂಕು ಪಂಚಾಯತ್ ಸದಸ್ಯ ಮಹಾಬಲೇಶ್ವರ ನಾಯ್ಕ, ವಿದ್ಯಾರ್ಥಿಗಳು ತಮ್ಮಲ್ಲಿನ ಪ್ರತಿಭೆಗಳಿಂದ ತಂದೆ-ತಾಯಿ, ಶಿಕ್ಷಣ ಸಂಸ್ಥೆ ಹಾಗೂ ಶಿಕ್ಷಕರ ಹೆಸರನ್ನು ಬೆಳಗಿಸುವಂತಹ ಕಾರ್ಯ ಮಾಡಬೇಕು. ಇಲ್ಲಿನ ವಿದ್ಯಾರ್ಥಿಗಳು ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಉತ್ತಮ ಸಾಧನೆ ಮಾಡಲಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಪತ್ರಕರ್ತ ಎಂ.ಆರ್.ಮಾನ್ವಿ ಮಾತನಾಡಿ, ಶಿಕ್ಷಣ ಇಲಾಖೆಯ ಪ್ರತಿಭಾ ಕಾರಂಜಿ ಕಾರ್ಯಕ್ರಮದಿಂದಾಗಿ ಇಂದು ರಾಜ್ಯದಲ್ಲಿ ಹಲವಾರು ಪ್ರತಿಭೆಗಳು ಬೆಳಕಿಗೆ ಬಂದಿವೆ. ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳು ಇನ್ನೂ ಅರ್ಥಪೂರ್ಣವಾಗಿ ನಡೆಯಬೇಕು ಎಂದರು. 

ಹೆಬಳೆ ಪಂಚಾಯತ್ ಸದಸ್ಯ ಸೈಯ್ಯದ್ ಅಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. 
ವೇದಿಕೆಯಲ್ಲಿ ಪಂಚಾಯತ್ ಸದಸ್ಯೆ ರುಖಿಯಾ ಸಾದಿಖ್, ವುಮೆನ್ಸ್ ಸೆಂಟರ್ ಮುಖ್ಯಸ್ಥೆ ಖತಿಜಾ ಕಾಝಿಯಾ ಉಪಸ್ಥಿತಿತರಿದ್ದರು. 

ನ್ಯಾಶನಲ್ ಕಾಲೋನಿ ಕ್ಲಸ್ಟರ್ ಸಂಪನ್ಮೂಲಾಧಿಕಾರಿ ಸಯೀದಾ ಫಾತಿಮುನ್ನಿಸಾ ಪ್ರಸ್ತಾವಿಕವಾಗಿ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು. ಶಿಕ್ಷಕ ಎಂ.ಜಿ.ಹೆಗಡೆ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಅರ್ಪಿಸಿದರು. 

Read These Next

ಕಾರವಾರ: ಚುನಾವಣೆ ಯಶಸ್ಸಿಗೆ ಸಹಕರಿಸಿ ಸರ್ವರಿಗೂ ಧನ್ಯವಾದ ತಿಳಿಸಿದ ಜಿಲ್ಲಾಧಿಕಾರಿ ಡಾ.ಹರೀಶ್‍ಕುಮಾರ್ ಕೆ.

ಉತ್ತರ ಕನ್ನಡ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಶಾಂತಿಯುತ ಮತದಾನಕ್ಕೆ ಸಹಕರಿಸಿ ಮತದಾನ ಪ್ರಮಾಣ ಹೆಚ್ಚಿಸಿದ ಸರ್ವರಿಗೂ ಜಿಲ್ಲಾ ...