ನಾನೊಬ್ಬ ಮೌಲ್ವಿ ಹಾಗೂ ಮುಸ್ಲಿಂ ಎಂಬ ಕಾರಣಕ್ಕೆ ಭಯೋತ್ಪಾದಕ ಪಟ್ಟ ಕಟ್ಟಿದರು: ಮೌಲಾನ ಶಬೀರ್

Source: S O News service | By Staff Correspondent | Published on 12th April 2017, 9:51 AM | Coastal News | State News | National News | Gulf News | Don't Miss |


ಭಟ್ಕಳ: ನಾನು ಭಾರತೀಯ ಪ್ರಜೆಯಾಗಿದ್ದು ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಅಪಾರ ನಂಬಿಕೆಯಿದ್ದು ನಮ್ಮ ದೇಶದ ನ್ಯಾಯಾ ವ್ಯವಸ್ಥೆಯ ಬಗ್ಗೆ ನನಗೆ ಹೆಮ್ಮೆ ಪಡುವಂತಾಗಿದೆ ಎಂದು ೨೦೦೮ ರಿಂದ ಭಯೋತ್ಪಾನ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು ಎಂಬ ಆರೋಪ ಹೊತ್ತು ೯ ವರ್ಷಗಳ ಜೈಲಿನಲ್ಲಿ ಕಳೆದು ಸೋಮವಾರ ಸಂಜೆ ಎಲ್ಲ ಪ್ರಕರಣಗಳಿಂದ ಮುಕ್ತಗೊಂಡು ನ್ಯಾಯಾಲಯದಿಂದ ಬಿಡುಗಡೆಗೊಂಡ ಭಟ್ಕಳದ ಮೌಲಾನ ಶಬ್ಬೀರ್ ಗಂಗೋಳಿ ಹೇಳಿದರು. 
ಅವರು ಮಂಗಳವಾರ ಭಟ್ಕಳದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಿದ್ದರು. 
ಜೈಲಿನಲ್ಲಿ ಕಳೆದ ಆ ೯ ವರ್ಷಗಳ ನರಕಯಾತನೆಯನ್ನು ಮಾಧ್ಯಮದೆದುರೆ ಬಿಚ್ಚಿಟ್ಟ ಶಬ್ಬಿರ್ ಆ ಕರಾಳ ಭಯಾನಕತೆಯನ್ನು ನಾನು ಹೇಗೆ ವಿವರಿಸಲಿ ಎಂದರು. ಕೇವಲ ನಾನೋಬ್ಬ ಮೌಲ್ವಿ ಹಾಗೂ ಭಟ್ಕಳದ ಮುಸ್ಲಿಮ ಸಮುದಾಯಕ್ಕೆ ಸೇರಿದ ಒಂದೇ ಒಂದು ಕಾರಣಕ್ಕಾಗಿ ನನಗೆ ನೀಡಬಾರದ ಚಿತ್ರಹಿಂಸೆಯನ್ನು ನೀಡಿದರು. ಗುಪ್ತಾಂಗಳನ್ನು ಬಿಡದೆ ಹಿಂಸಿಸಿದರು. ವ್ಯಕ್ತಿ ಅತ್ತ ಸಾಯಲು ಬಾರದು ಇತ್ತಬದುಕಲು ಬಿಡಬಾರದು ಎಂಬ ಒಂದೇ ದೋರಣೆಯಿಂದ ಪೊಲೀಸರು ನೀಡುವ ಆ ಚಿತ್ರಹಿಂಸೆ ನೆನಪು ಮಾಡಿಕೊಂಡರೆ ದೇಹದ ರೋಮಗಳು ಕೂಡ ನಡುಗಲು ಆರಂಭಿಸುತ್ತವೆ ಎಂದ ಅವರು ಅಲ್ಲಿನ ಭಯಾನಕ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದರು. ನನಗೆ ಯಾವುದೇ ಸಂಬಂಧವಿಲ್ಲದ ಪ್ರಕರಣವೊಂದರಲ್ಲಿ ಫಿಕ್ಸ್ ಮಾಡಿದ ಪೂನಾದ ಎಟಿ‌ಎಸ್ ನವರು ಕೊನೆಯವರೆಗೂ ನನ್ನನ್ನು ಬಿಡದೆ ಚಿತ್ರಹಿಂಸೆ ನೀಡಿದ್ದಾರೆ. ಈಗ ಈ ದೇಶದ ಕಾನೂನು ನನಗೆ ನ್ಯಾಯಾ ನೀಡಿದೆ. ಕೆಳಮಟ್ಟದ ನ್ಯಾಯಾಲಯಗಳಲ್ಲಿ ನ್ಯಾಯಾ ಸಿಗದೆ ಇರಬಹುದು ಆದರೆ ಉನ್ನತ ನ್ಯಾಯಾಲಯಗಳಲ್ಲಿ ನ್ಯಾಯಾ ಈಗಲು ಜೀವಂತವಿದೆ ಎನ್ನುವುದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ. ನಾನು ಭಾರತೀಯನೆಂಬ ನೆಲೆಯಲ್ಲಿ ಈ ನೆಲದ ಕಾನೂನಿ ಮೇಲೆ ಅಪಾರ ನಂಬಿಕೆ, ಗೌರವ ಇಟ್ಟುಕೊಂಡಿದ್ದೇನೆ. ನಮ್ಮ ದೇಶದ ಕಾನೂನಿನ ಮೇಲೆ ನನಗೆ ಹೆಮ್ಮೆಯೂ ಇದೆ.ಈ ದೇಶದದ ಮುಸ್ಲಿಮ ಯುವಕರು ಮತ್ತು ತಾವು ಮಾಡದ ತಪ್ಪಿಗಾಗಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಎಲ್ಲರಿಗೆ ಒಂದು ದಿನ ನ್ಯಾಯಾ ಸಿಗುತ್ತದೆ ಎಂದ ವಿಶ್ವಾಸವೂ ನನಗಿದೆ ಎಂದರು. ನನ್ನ ಮುಸ್ಲಿಮ ಸಹೋದರರಿಗೆ ನಾನು ಹೇಳುವುದಿಷ್ಟೆ ನಮ್ಮ ಜೀವನವನ್ನು ಎಲ್ಲ ಕೆಡುಕುಗಳಿಂದ ಮುಕ್ತವಾಗಿಸಿಕೊಂಡು ಬದುಕಬೇಕು, ಭಯೋತ್ಪಾದನೆ ಮತ್ತದರ ಚಟುವಟಿಕೆಗಳತ್ತ ಸುಳಿಯದೆ ತಮ್ಮ ಜೀವನವನ್ನು ನಡೆಸಿ ಎಂದು ಅವರು ಸಮುದಾಯದ ಯುವಕರಿಗೆ ಕರೆ ನೀಡಿದರು. 
ಪೊಲೀಸರು ಯಾವ ಪ್ರಕರಣದಲ್ಲಿ ನಿಮ್ಮನ್ನು ಬಂಧಿಸಿದರು ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಮೌಲಾನ ಶಬ್ಬಿರ್ "ಪೂನಾದ ಮಸೀದಿಯೊಂದರಲ್ಲಿ ನಮಾಜ್ ನಿರ್ವಹಿಸುವ ಕೆಲಸ ಮಾಡುತ್ತಿದ್ದ ನನ್ನನ್ನು ರಾತ್ರಿ ಒಂದು ಗಂಟೆಯ ಸಮಯ ಎಟಿ‌ಎಸ್ ನವರು ಮಸೀದಿಯನ್ನು ಸುತ್ತುವರೆದು ನಿಂತುಕೊಂಡು ನನ್ನನ್ನು ಹಾಗೂ ನನ್ನ ಭಾವನನ್ನು ಬಂಧಿಸಿದರು. ಯಾರು ಏಕೆ ಎಲ್ಲಿಗೆ ಎಂದು ಕೇಳುವ ಸಮಯವನ್ನು ನೀಡದೆ ಅವರು ನನ್ನನ್ನೂ ಯಾವುದೋ ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋದರು ಅಲ್ಲಿ ರಾತ್ರಿಯಿಡಿ ಹೊಡೆದರು. ಚಿತ್ರಹಿಂಸೆ ನೀಡಿದರು. ಗುಪ್ತಾಂಗಗಳಲ್ಲಿ ಒಂದು ರೀತಿಯ ಕೆಮಿಕಲ್ ಹಾಕಿ ಹಿಂಸಿಸಿದರು. ನನ್ನನ್ನು ಭಯೋತ್ಪಾದನೆ ಆರೋಪದಡಿ ಪ್ರಕರಣ ದಾಖಲಿಸಿದರು ಯಾವುದೇ ಸಾಕ್ಷ್ಯ ದೊರೆಯದಾದಾಗ ನಕಲಿ ನೋಟು ಸಾಗಾಟದ ಸುಳ್ಳು ಪ್ರಕರಣ ಸೃಷ್ಟಿಸಿ ಸರ್ಕಾರಿ ಅಧಿಕಾರಿಯೇ ನನ್ನ ವಿರುದ್ಧ ಸಾಕ್ಷ್ಯ ನುಡಿದು ಜೈಲಿಗಟ್ಟಿದ್ದರು. ಎಲ್ಲರ ಪ್ರಕರಣಗಳಿಂದ ಹಾಗೂ ಜೈಲಿನ ನರಕಮಯ ಯಾತನೆಯಿಂದ ಈಗ ಮುಕ್ತಿಹೊಂದಿದ್ದೇನೆ ಎಂದು ಅವರು ಮಾಧ್ಯಮಗಳಿಗೆ ವಿವರಿಸಿದರು.
ಈ ಸಂದರ್ಭದಲ್ಲಿ ಎಪಿಸಿ‌ಆರ್ ನಾಗರೀಕ ಹಕ್ಕು ಸಂರಕ್ಷಣಾ ಸಂಸ್ಥೆಯ ಜಿಲ್ಲಾಧ್ಯಕ್ಷ ಖಮರುದ್ದೀನ್ ಮಷಾಯಿಕ್, ಮೌಲಾನ ಸೈಯ್ಯದ್ ಝುಬೈರ್, ನ್ಯಾಯವಾದಿ ಅರ್ಷದ್ ಆಹ್ಮದ್ ಬಾಳೂರು ಉಪಸ್ಥಿತರಿದ್ದರು. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

ದುಬಾಯಿಯಲ್ಲಿ "ಗಲ್ಫ್ ಕರ್ನಾಟಕೊತ್ಸವ" ಯಶಸ್ವಿ; ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಅನಿವಾಸಿ ಕನ್ನಡಿಗರು

ಕರ್ನಾಟಕದ 21 ಅತ್ಯಂತ್ ಪ್ರಭಾವಶಾಲಿ ವ್ಯಾಪಾರ  ಐಕಾನ್ ಗಳು ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿಗಳೊಂದಿಗೆ ಗೌರವಿಸಲಿಟ್ಟರು.

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...