ಮುರಢೇಶ್ವರದಲ್ಲಿ ಲಯನ್ಸ್ ಕ್ಲಬ್ ದಶಮಾನೋತ್ಸವ ಹಾಗೂ ಸಾಧಕರಿಗೆ ಸನ್ಮಾನ

Source: sonews | By Staff Correspondent | Published on 17th December 2018, 10:20 PM | Coastal News |

ಭಟ್ಕಳ: ಮುರ್ಡೇಶ್ವರ ಲಯನ್ಸ್ ಕ್ಲಬ್ ಅಧ್ಯಕ್ಷರ ಕಾರ್ಯಕ್ಷಮತೆಯನ್ನು ನೋಡಿದರೆ ಈ ಕ್ಲಬ್ ಅತ್ಯಂತ ಉತ್ತಮ ಕಾರ್ಯ ಮಾಡುವುದರಲ್ಲಿ ಸಂಶಯವಿಲ್ಲ ಎಂದು ಲಯನ್ಸ್ ಜಿಲ್ಲಾ ಗವರ್ನರ್ ಎಂ.ಜೆ.ಎಫ್. ಲಯನ್ ಮೋನಿಕಾ ಪಿ. ಸಾವಂತ್ ಹೇಳಿದರು. 

ಅವರು ಮುರ್ಡೇಶ್ವರ ಲಯನ್ಸ್ ಕ್ಲಬ್‍ನ ದಶಮಾನೋತ್ಸವ ಸಮಾರಂಭ ಹಾಗೂ ಜಿಲ್ಲಾ ಗವರ್ನರ್ ಭೇಟಿಯ ಸಂದರ್ಭದಲ್ಲಿ ಮಾತನಾಡುತ್ತಿದ್ದರು. 

ಮುರ್ಡೇಶ್ವರ ಲಯನ್ಸ್ ಕ್ಲಬ್ ಸೇವೆಯಲ್ಲಿ ಎಲ್ಲಾ ಕ್ಷೇತ್ರದಲ್ಲಿಯೂ ಸೇವೆ ಮಾಡಿದ್ದು ರೈತರಿಗೆ ಸಲಕರಣೆ ನೀಡುವುದು, ಸೈನಿಕರಿಗೆ ಸನ್ಮಾನಿಸುವುದು, ಸ್ವಚ್ಛ ಭಾರತ್ ಅಭಿಯಾನ, ಶಾಲೆಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸುವುದು, ಹಸಿವು ಮುಕ್ತ ಯೋಜನೆಯಡಿಯಲ್ಲಿ ಬಡವರಿಗೆ ರೇಶನ್ ನೀಡುವುದು, ಆರೋಗ್ಯ ಕ್ಷೇತ್ರದಲ್ಲಿಯೂ ಕೂಡಾ ಸಹಾಯ ಹಸ್ತ ನೀಡುತ್ತಿರುವುದು ಶ್ಲಾಘನೀಯವಾಗಿದೆ. ಮುರ್ಡೇಶ್ವರ ಕ್ಲಬ್ ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಉತ್ತಮ ಕ್ಲಬ್ ಆಗಿದ್ದು ಅವರ ಕಾರ್ಯವೈಖರಿ ಶ್ಲಾಘನೀಯವಾಗಿದೆ ಎಂದರು. 

ದಶಮಾನೋತ್ಸವ ಸಂಚಿಕೆ ಹತ್ತು ಹೆಜ್ಜೆಯನ್ನು ಬಿಡುಗಡೆಗೊಳಿಸಿದ ಲಯನ್ ಎಂ.ಜೆ.ಎಫ್. ರವಿ ಹೆಗಡೆ ಹೂವಿನಮನೆ ಅವರು ಮಾತನಾಡುತ್ತಾ ಮುರ್ಡೇಶ್ವರ ಲಯನ್ಸ್ ಕ್ಲಬ್ ಮುಂದೆ ಇನ್ನೂ ಹೆಚ್ಚಿನ ಅಭಿವೃದ್ಧಿಯಾಗಲಿದೆ ಎನ್ನುವುದಕ್ಕೆ ಇಲ್ಲಿನ ಕಾರ್ಯಕ್ರಮವೇ ಸಾಕ್ಷಿಯಾಗಿದೆ.  ದಶಮಾನೋತ್ಸವ ಸಂಭ್ರಮದೊಂದಿಗೆ ಲಯನ್ ಜಿಲ್ಲೆ 317ಬಿ ಇದರ ಜಿಲ್ಲಾ ಗವರ್ನರ್ ಅವರ ಅಧೀಕೃತ ಭೇಟಿ ಕೂಡಾ ಆಗಿದ್ದು ಈ ಸಂಸ್ಥೆ ಹತ್ತು ವರ್ಷಗಳಿಂದ ನಿರಂತರ ಸಮಾಜ ಸೇವೆಯನ್ನು ನಿಸ್ವಾರ್ಥವಾಗಿ, ಅಗತ್ಯವಿದ್ದವರನ್ನು ಹುಡುಕಿ ಸೇವೆ ನೀಡುತ್ತಿರುವುದು ಶ್ಲಾಘನೀಯವಾಗಿದೆ. 

ಎಲ್ಲಿ ನಿಸ್ವಾರ್ಥ ಸೇವೆ ಇರುತ್ತದೆಯೋ, ಅಗತ್ಯವಿದ್ದ ಜನರನ್ನು ತಲುಪಲಿಕ್ಕಾಗತ್ತೋ ಅಲ್ಲಿ ಮಾತ್ರ ಶ್ಲಾಘನೆ ಇರುತ್ತದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಬೇರೆ ಎಲ್ಲಾ ಲಯನ್ಸ್ ಸಂಸ್ಥೆಗಳು ಬಹಳ ಹಿರಿಯ ಶಾಖೆಗಳಾಗಿದ್ದು ಮುರ್ಡೇಶ್ವರ ಶಾಖೆ ಅತ್ಯಂತ ಕಿರಿಯ ಶಾಖೆಯಾಗಿದ್ದು ನಾವು ಶಾಖೆಯ ಬೆಳೆಯಲಿಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲು ನಾವು ಸಿದ್ಧರಿದ್ದೇವೆ ಎಂದರು. 

ಇದಕ್ಕೂ ಮೊದಲು ಲಯನ್ಸ್ ಜಿಲ್ಲಾ ಗವರ್ನರ್ ಮೋನಿಕಾ ಸಾವಂತ್ ಅವರು ಕಣ್ಣಿನ ಪೊರೆ ತಪಾಸಣಾ ಶಿಬಿರವನ್ನು ಉದ್ಘಾಟಿಸಿದರು. ಸ್ನೇಹ ವಿಶೇಷ ಶಾಲೆಗೆ ಹಸಿವು ನೀಗಿಸುವ ಕಾರ್ಯಕ್ರಮದಡಿಯಲ್ಲಿ ರೇಶನ್ ವಿತರಣೆ, ಮಕ್ಕಳಿಗೆ ಕ್ಯಾರಮ್ ಬೋರ್ಡ, ಬಾಲ್ ಇತ್ಯಾದಿಗಳನ್ನು ವಿತರಿಸಿದರು. ನಂತರ ಮುರ್ಡೇಶ್ವರ ಲಯನ್ಸ್ ಕ್ಲಬ್‍ನ ಕಚೇರಿಯನ್ನು ಹೋಟೆಲ್ ಪಾಮ್‍ಗ್ರೋವ್ ಕಟ್ಟಡದಲ್ಲಿ ಉದ್ಘಾಟಿಸಿದರು. 

ಇದೇ ಸಂದರ್ಭದಲ್ಲಿ ಸೈಂಟ್ ವಿಲಾಗ್ರಿಸ ಕ್ರೆಡಿಟ್ ಸೌಹಾರ್ಧ ಸಹಕಾರಿ ನಿಯಮಿತ ಇದರ ಸಂಸ್ಥಾಪಕ ಹಾಗೂ ಆಡಳಿತ ನಿರ್ದೇಶಕ ಜಾರ್ಜ ಎಸ್. ಫೆರ್ನಾಂಡೀಸ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. 

ದಶಮಾನೋತ್ಸವದ ಅಂಗವಾಗಿ ಉ.ಕ.ಜಿಲ್ಲಾ ಕಾರ್ಯನಿತರ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ಟ ಹಾಗೂ ವಿಸ್ ಮಂಗಳೂರು ಸ್ಪರ್ಧೆಯ ರನ್ನರ್ಸ್ ಅಪ್ ವಸುಧಾ ತಿಲಕ್ ರಾವ್ ಅವರನ್ನು ಸನ್ಮಾನಿಸಲಾಯಿತು.  ಕಾರ್ಯಕ್ರಮದಲ್ಲಿ ರೈತರಾದ ಸುಬ್ರಾಯ ನಾಯ್ಕ ಕಾಯ್ಕಿಣಿ, ಶ್ರೀಧರ ಹೆಬ್ಬಾರ್ ಹದ್ಲೂರ್, ತಿಮ್ಮಪ್ಪ ನಾಯ್ಕ ಹಾಗೂ 

ಕಾರ್ಯಕ್ರಮದಲ್ಲಿ ಪ್ರಶಾಂತ ಸಾವಂತ್, ದ್ವಿತೀಯ ಜಿಲ್ಲಾ ಗವರ್ನರ್ ಗಿರೀಶ್ ಕುಚ್ಚಿನಾಡ, ಗೋಪಾಲಕೃಷ್ಣ ಬಿಂದಗಿ, ಅರುಂದೇಕರ್, ಮಂಜುನಾಥ ನಾಯ್ಕ ಉಪಸ್ಥಿತರಿದ್ದರು. 
ಲಯನ್ಸ್ ಕ್ಲಬ್ ಅಧ್ಯಕ್ಷ ನಾಗರಾಜ ಭಟ್ಟ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ನಾಗೇಶ ಮಡಿವಾಳ ವರದಿ ವಾಚನ ಮಾಡಿದರು. ಎಂ.ವಿ.ಹೆಗಡೆ, ಪೂರ್ಣಿಮಾ ಕರ್ಕಿಕರ್, ಕೆ.ಬಿ. ಹೆಗಡೆ ನಿರೂಪಿಸಿದರು. ಲಯನ್ಸ್ ಖಜಾಂಚಿ ಜಗದೀಶ ಜೈನ್ ವಂದಿಸಿದರು. 


 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...