ಉದ್ಘಾಟನೆಗೆ ಸಜ್ಜುಗೊಂಡಿರುವ ಬೆಳಕೆ ಸರ್ಕಾರಿ ಶಾಲೆಯ ಎ.ಪಿ.ಜೆ ಕಲಾಂ ಪ್ರಯೋಗಾಲಯ

Source: sonews | By sub editor | Published on 19th July 2018, 7:13 PM | Coastal News | State News | Don't Miss |


•    ದಾನಿಗಳ ಸಹಾಯದಿಂದ ಶೈಕ್ಷಣಿಕ ಅಭಿವೃದ್ಧಿ ಸಾಧಿಸುತ್ತಿರುವ ಬೆಳಕೆ ಶಾಲೆ

ಭಟ್ಕಳ : ದಾನಿಯೋರ್ವರ ಸಹಾಯ ಸಹಕಾರದಿಂದ ನಿರ್ಮಾಣಗೊಂಡಿರುವ ಸರ್ಕಾರಿ ಪ್ರೌಢಶಾಲೆ ಬೆಳಕೆಯ ಡಾ.ಎಪಿಜೆ.ಅಬ್ದುಲ್ ಕಲಾಂ ಪ್ರಯೋಗಾಲಯ ಉದ್ಘಾಟನೆಗೆ ಸಜ್ಜಾಗಿ ನಿಂತಿದೆ.

ಈ ಕುರಿತು ಮಾಹಿತಿ ನೀಡಿದ ಶಾಲಾ ಮುಖ್ಯಾಧ್ಯಾಪಕ ಚಂದ್ರಕಾಂತ ಜಿ.ಗಾಂವಕರ್, ವಿದ್ಯಾರ್ಥಿಗಳಿಗೆ ವಿಜ್ಞಾನ ಪ್ರಯೋಗಾಲಯದ ಅವಶ್ಯಕತೆಯಿದ್ದು  ಇದಕ್ಕಾಗಿ ಕುಂದಾಪುರದ ಸಿಂಡಿಕೇಟ್ ಬ್ಯಾಂಕ್ ನ ನಿವೃತ್ತವ್ಯವಸ್ಥಾಪಕ ಕೆ.ಸದಾಶಿವ ಆಚಾರ್ಯ ದಂಪತಿಗಳನ್ನು ಸಂಪರ್ಕಿಸಿದ್ದು ಅವರು ಬಡವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಸರಕಾರಿ ಪ್ರೌಢಶಾಲೆ,ಬೆಳಕೆಯಲ್ಲಿ ಶ್ರೀಮತಿ ಶಶಿಕಲಾ ಎಸ್ ಹೆಗಡೆ ಮತ್ತು ಕೆ.ಸದಾಶಿವ ಆಚಾರ್ಯ,ಕುಂದಾಪುರ,ನಿವೃತ್ತ ವ್ಯವಸ್ಥಾಪಕರು,ಸಿಂಡಿಕೇಟ್,ಬ್ಯಾಂಕ್‍ರವರು ನೀಡಿದ ರೂ.255,000/-(ಎರಡು ಲಕ್ಷದ ಐವತ್ತೈದು ಸಾವಿರ ರೂಪಾಯಿಗಳು)ಗಳ ಉದಾರ ದೇಣಿಗೆಯಿಂದ ಸುಸಜ್ಜಿತ ಭಾರತರತ್ನ ಡಾ|| ಎ.ಪಿ.ಜೆ ಅಬ್ದುಲ್ ಕಲಾಂ ಪ್ರಯೋಗಾಲಯ ನಿರ್ಮಾಣಗೊಂಡು ಉದ್ಘಾಟನೆಗೆ ಸಜ್ಜಾಗಿ ನಿಂತಿದೆ ಎಂದರು.
            
ಶಾಲೆಯಲ್ಲಿ ಉತ್ತಮವಾದ ಪ್ರಯೋಗಾಲಯ ಕಟ್ಟಡ ಮತ್ತು ಸುಮಾರು ರೂ.300,000/-(ಮೂರು ಲಕ್ಷ ರೂಪಾಯಿಗಳು)ಗಳ ಪ್ರಯೋಗಾಲಯ ಉಪಕರಣಗಳಿದ್ದು 8,9 ಮತ್ತು 10 ನೇ ವರ್ಗದ ವಿದ್ಯಾರ್ಥಿಗಳಿಗೆ ನೂತನ ಪಠ್ಯಕ್ರಮಕ್ಕನುಗುಣವಾಗಿ ಚಟುವಟಿಕೆಯುತ ಕಲಿಕಾ ಪ್ರಕ್ರಿಯೆಗೆ ಅಗತ್ಯವಾದ ಪ್ರಯೋಗ ಟೇಬಲ್‍ಗಳು ಅವಶ್ಯಕತೆಯನ್ನು ಮನಗಂಡು ತಮ್ಮ ದುಡಿಮೆಯ ಎರಡೂವರೆ ಲಕ್ಷ ರೂಪಾಯಿಗಳನ್ನು ದಾನವಾಗಿ ನೀಡಿದ್ದಾರೆ. ಶ್ರೀಯುತರು ಬೆಳಕೆ ಗ್ರಾಮದವರಾಗಲೀ ಅಥವಾ ಶಾಲೆಯ ವಿದ್ಯಾರ್ಥಿ ಪಾಲಕ-ಪೋಷಕರಾಗಲೀ ಅಲ್ಲದೇ ಇದ್ದರೂ ಶಿಕ್ಷಣ ಮತ್ತು ಈ ಶಾಲೆ ಮೇಲಿನ ಅಭಿಮಾನದಿಂದ ಈ ದೊಡ್ಡ ಪ್ರಮಾಣದ ಕೊಡುಗೆಯನ್ನು ಸರಕಾರಿ ಪ್ರೌಢಶಾಲೆಯಲ್ಲಿ ಓದುತ್ತಿರುವ ಬಡ ಮಕ್ಕಳ ಶಿಕ್ಷಣಕ್ಕೆ ನೀಡಿ ಮಹಾ ಪೋಷಕರಾಗಿ ಇತರರಿಗೆ ಮಾದರಿಯಾಗಿದ್ದಾರೆ. 

ಸುಸಜ್ಜಿತ ವಿಜ್ಞಾನ ಪ್ರಯೋಗಾಲ ಜು.24ರಂದು ಭಟ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ಸುನಿಲ ಬಿ.ನಾಯ್ಕ ಉದ್ಘಾಟಿಸಲಿದ್ದಾರೆ. ಯಾವುದೇ ಫಲಾಪೇಕ್ಷೆಯಿಲ್ಲದೇ ನಿಷ್ಕಲ್ಮಷ ಮನಸ್ಸಿನಿಂದ ಈ ಸರಕಾರಿ ಶಾಲೆಗೆ ಈವರೆಗೆ ಸುಮಾರು ಮೂರುವರೆ ಲಕ್ಷ ರೂಪಾಯಿಗಳನ್ನು ದಾನವಾಗಿ ನೀಡಿ ಈ ಶಾಲೆಯ ಶ್ರೇಯೋಭಿವೃದ್ಧಿಗೆ ಕಂಕಣತೊಟ್ಟಿರುವ.ಕೆ ಸದಾಶಿವ ಆಚಾರ್ಯ ದಂಪತಿಗಳನ್ನು ಶಾಲೆಯ ಎಸ್.ಡಿ.ಎಮ್.ಸಿ ವತಿಯಿಂದ ಸನ್ಮಾನಿಸಲಾಗುತ್ತಿದೆ. ಭಟ್ಕಳದ ಗ್ರಾಮೀಣ ಪ್ರದೇಶದಲ್ಲಿರುವ ಈ ಪ್ರೌಢಶಾಲೆಯು ಇಲ್ಲಿ ಓದುತ್ತಿರುವ ಮತ್ತು ಇನ್ನು ಮುಂದೆ ಓದಲು ಬರುವ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಪ್ರಯೋಗಗಳ ಮೂಲಕ ತಮ್ಮ ಕಲಿಕೆಯನ್ನು ಸದೃಢಗೊಳಿಸಲು ಉತ್ತಮ ಅವಕಾಶವನ್ನು ಹೊಂದಿದೆ. 
            
ಈ ಶಾಲೆಯು ಕಳೆದ ಅನೇಕ ವರ್ಷಗಳಿಂದ ಕ್ರೀಡೆ,ವಿಜ್ಞಾನ ಚಟುವಟಿಕೆ,ಸಾಸ್ಕøತಿಕ ರಂಗ, ಪರಿಸರ ಕಾಳಜಿ ಕಾರ್ಯಕ್ರಮ,ಎಸ್.ಎಸ್.ಎಲ್.ಸಿಯಲ್ಲಿ ಜಿಲ್ಲೆ ಹಾಗೂ ರಾಜ್ಯದ ಶೇಕಡಾವಾರು ಫಲಿತಾಂಶಕ್ಕಿಂತ ಹೆಚ್ಚಿನ ಫಲಿತಾಂಶವನ್ನು ದಾಖಲಿಸಿರುವುದು ಈ ಮುಂತಾದ ಸಾಧನೆಗಳನ್ನು ಪರಿಗಣಿಸಿ  ಈ ಶಾಲೆಯು 2015-16 ಹಾಗೂ 2017-18ರಲ್ಲಿ ತಾಲೂಕಿನ ಉತ್ತಮ ಶಾಲೆ ಪ್ರಶಸ್ತಿಗೆ ಭಾಜನವಾಗಿರುತ್ತದೆ. ಕಳೆದ ಅನೇಕ ವರ್ಷಗಳಿಂದ ತಾಂತ್ರಿಕ ಶಿಕ್ಷಣÀ ಮತ್ತು ವೈದ್ಯಕೀಯ ಕ್ಷೇತ್ರಕ್ಕೆ ಪ್ರವೇಶ ಪಡೆದ ಅನೇಕ ವಿದ್ಯಾರ್ಥಿಗಳನ್ನು ಈ ಶಾಲೆಯು ಸ್ಥಷ್ಟಿಸಿರುವುದನ್ನು ಮನಗಂಡು ಬೆಳಕೆ ಗ್ರಾಮದವರಾದ ಸದ್ಯ ಬೆಳಗಾವಿಯಲ್ಲಿ ಸ್ವಾಮಿ ವಿವೇಕಾನಂದ ಸೇವಾ ಟ್ರಸ್ಟ್‍ನ ಅಧ್ಯಕ್ಷರಾಗಿರುವ ನಾರಾಯಣ ಮಾಸ್ತಿ ನಾಯ್ಕ ಈ ಶಾಲೆಯ ಆರ್ಥಿಕವಾಗಿ ಹಿಂದುಳಿದ ಎಸ್.ಎಸ್.ಎಲ್.ಸಿಯ  ಪ್ರತಿಭಾವಂತ ವಿದ್ಯಾರ್ಥಿಗಳ ಮುಂದಿನ ವ್ಯಾಸಂಗಕ್ಕಾಗಿ 2015-16 ನೇ ಸಾಲಿನಿಂದ 2017-18 ನೇ ಸಾಲಿನವರೆಗೆ ಸುಮಾರು ರೂ.70,000/-{ಎಪ್ಪತ್ತು ಸಾವಿರ ರೂಪಾಯಿಗಳು)ಗಳ ಧನಸಹಾಯ ನೀಡಿ ಪ್ರೋತ್ಸಾಹಿಸಿದ್ದಾರೆ. ಸದಾಶಿವ ಆಚಾರ್ಯರವರು 8,9 ಮತ್ತು 10 ನೇ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಧನಸಹಾಯ,ಅಡುಗೆಮನೆಗೆ ರೈಸ್ ಟ್ರೇ, ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ, ಉದ್ಯೋಗ ಮಾರ್ಗದರ್ಶಿ ಸಂಚಿಕೆಗಳ ಪೂರೈಕೆ, ತಂತ್ರಜ್ಞಾನಾಧಾರಿತ ಕಲಿಕೆಗೆ ಪ್ರೊಜೆಕ್ಟರ್ ಈ ಮುಂತಾದ ಸೌಲಭ್ಯಗಳಿಗಾಗಿ ಸುಮಾರು ಒಂದು ಲಕ್ಷ ರೂಪಾಯಿಗಳ ದಾನ ಮಾಡಿರುತ್ತಾರೆ.ಇಂತಹ ಸಮಾಜ ಸುಧಾರಕ ವ್ಯಕ್ತಿಗಳು,ಗ್ರಾಮ ಪಂಚಾಯತ, ಬೆಳಕೆ ಹಾಗೂ ಇತರೆ ಸಂಘ ಸಂಸ್ಥೆಗಳ ನೆರಳಲ್ಲಿ ಈ ಶಾಲೆ ಶೈಕ್ಷಣಿಕವಾಗಿ ಅಭಿವೃದ್ಧಿಯತ್ತ ಮುನ್ನುಗ್ಗುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಮುಖ್ಯಾಧ್ಯಾಪಕ ಚಂದ್ರಕಾಂತ್ ಗಾಂವಕರ್ ಹೇಳುತ್ತಾರೆ.
 

Read These Next

ಭಟ್ಕಳದಲ್ಲಿ ಹೆದ್ದಾರಿಗೆ ಮತ್ತೆ ಹೊಸ ರೂಪ ನೀಡಿದ ಪ್ರಾಧಿಕಾರ, ಫ್ಲೈ ಓವರ್ರೂ ಇಲ್ಲ, ಅಂಡರ್ ಪಾಸೂ ಇಲ್ಲ; 30ಮೀ.ಗೆ ಸೀಮಿತ

ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣ ಕಾಮಗಾರಿಗೆ ವೇಗ ದೊರಕಿರುವಂತೆಯೇ, ಭಟ್ಕಳ ಶಹರ ವ್ಯಾಪ್ತಿಯಲ್ಲಿ ನೂತನ ಹೆದ್ದಾರಿ ನಿರ್ಮಾಣಕ್ಕೆ ...

ಭಟ್ಕಳದಲ್ಲಿ ಹೆದ್ದಾರಿಗೆ ಮತ್ತೆ ಹೊಸ ರೂಪ ನೀಡಿದ ಪ್ರಾಧಿಕಾರ, ಫ್ಲೈ ಓವರ್ರೂ ಇಲ್ಲ, ಅಂಡರ್ ಪಾಸೂ ಇಲ್ಲ; 30ಮೀ.ಗೆ ಸೀಮಿತ

ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣ ಕಾಮಗಾರಿಗೆ ವೇಗ ದೊರಕಿರುವಂತೆಯೇ, ಭಟ್ಕಳ ಶಹರ ವ್ಯಾಪ್ತಿಯಲ್ಲಿ ನೂತನ ಹೆದ್ದಾರಿ ನಿರ್ಮಾಣಕ್ಕೆ ...

ಯುಎಪಿಎ ಕ್ರೂರ ಕಾಯ್ದೆ ರದ್ದುಗೊಳಿಸುವಂತೆ ನಡೆಯುತ್ತಿರುವ ಹೋರಾಟಕ್ಕೆ ಎ.ಪಿ.ಸಿ.ಆರ್ ಬೆಂಬಲ

ಬೆಂಗಳೂರು: ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಅತ್ಯಂತ ಕ್ರೂರ ಕಾಯ್ದೆಯಾಗಿದ್ದು ಇದನ್ನು ರದ್ದುಗೊಳಿಸಲು ಆಗ್ರಹಿಸಿ ...

ಸೈಕಲ್ ಮೂಲಕ ಸಂಚರಿಸಿ ‘ಮಾದಕ ದ್ರವ್ಯದ ವಿರುದ್ಧ ಹೋರಾಡುತ್ತಿರುವ ಸೈಯ್ಯದ್ ಫೈಝಾನ್ ಅಲಿ

ಭಟ್ಕಳ: ಮನುಷ್ಯನಲ್ಲಿ ಛಲವೊಂದಿದ್ದರೆ ಸಾಕು ತಾನು ಏನು ಬೇಕಾದರೂ ಸಾಧಿಸಬಹುದು ಎಂದು ಸಾಬೀತು ಮಾಡಲು ಹೊರಟಿರುವ ಓರಿಸ್ಸಾ ಮೂಲದ ...