ಮಾವು ಬೆಳೆಗಾರರ ಸಮಸ್ಯೆಗೆ ಸ್ಪಂದಿಸಿದ ಸರ್ಕಾರ ಮಾವಿಗೆ ಬೆಂಬಲ ಘೋಷಣೆ

Source: sonews | By Sub Editor | Published on 9th July 2018, 11:52 PM | State News | Don't Miss |

ಶ್ರೀನಿವಾಸಪುರ: ಮಾವಿಗೆ ತೀವ್ರ ಬೆಲೆ ಕುಸಿತದಿಂದ ರೈತರು ಕಂಗಾಲಾಗಿರುವ ಸಮಯದಲ್ಲಿ ಮಾನ್ಯ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರವರು ಟನ್ನು ಒಂದಕ್ಕೆ 2500 ರೂ ಬೆಂಬಲ ಬೆಲೆ ಘೋಶಿಸಿರುವುದರಿಂದ ಮಾವು ಬೆಳೆಗಾರರ ಪರವಾಗಿ ಜೆಡಿಎಸ್ ಜಿಲ್ಲಾಧ್ಯಕ್ಷ ಹಾಗು ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ರವರು ಮುಖ್ಯ ಮಂತ್ರಿ ಕುಮಾರಸ್ವಾಮಿ ರವರನ್ನು ಈ ಮೂಲಕ ಅಭಿನಂದಿಸಿದ್ದಾರೆ.

ಸುದ್ದಿಗಾರರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಅವರು ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಮಾವಿಗೆ ಬೆಲೆ ಕುಸಿತವಾಗಿರುವ ಹಿನ್ನಲೆಯಲ್ಲಿ ಮಾವು ಬೆಳೆಗಾರರು ಬಂದ್‍ಗೆ ಕರೆ ನೀಡಿದ್ದರು. ಈ ಹಿನ್ನಲೆಯಲ್ಲಿ ಸಂಘಟನೆ ಮುಖ್ಯಸ್ಥರನ್ನು ಸಂಪರ್ಕಿಸಿ ಬಂದ್ ಬೇಡ ಎಂದಿದ್ದೆ ಅಲ್ಲದೇ ಮನವಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕೆಂದು ಸಲಹೆ ನೀಡಿದ್ದೆ ಆದರೂ ನೊಂದ ರೈತರು  ಸರ್ಕಾರದ ಗಮನ ಸೆಳೆಯಲು ಬಂದ್ ಮಾಡಿದ್ದಾರೆ. ಈ ಬಗ್ಗೆ ತಾನು ಮುಖ್ಯ ಮಂತ್ರಿ ಕುಮಾರಸ್ವಾಮಿ ರವರೊಂದಿಗೆ ಶ್ರೀನಿವಾಸಪುರ ಮಾವಿನ ಬೆಲೆ ಹಾಗು ರೈತರು ತೊಂದರೆಯಲ್ಲಿದ್ದಾರೆಂಬ ಪರಿಸ್ಥಿತಿ ಬಗ್ಗೆ ಚರ್ಚೆ ಮಾಡಿ ಬೆಂಬಲ ಬೆಲೆ ನೀಡುವಂತೆ ಚರ್ಚೆ ಮಾಡಲಾಯಿತು. ಇದಕ್ಕೆ ಕುಮಾರಸ್ವಾಮಿ ರವರು ರಾಮನಗರದಲ್ಲಿಯೂ ಇದೇ ಪರಿಸ್ಥಿತಿ ಇದೆ ಎಂದಿದ್ದರು ಆದರೂ ಅವರು ರೈತರ ಹಿತಬಯಸಿ ಬೆಂಬಲ ಘೋಷಣೆ ಮಾಡಿರುವುದಕ್ಕೆ ಅವರನ್ನು ಅಭಿನಂದಿಸುತ್ತೇನೆ ಎಂದು ತಿಳಿಸಿದರು.
 
Read These Next

ರೋಟರಿ ಸಂಸ್ಥೆ ಸಮಾಜ ಸೇವೆಗೆ ಎಲ್ಲರನ್ನು ಒಗ್ಗೂಡಿಸುವ ಕೆಲಸಗಳಿಗೆ ಪ್ರೇರಣೆ ನಿಡುತ್ತಿದೆ- ಮಂಜುನಾಥರೆಡ್ಡಿ

ಶ್ರೀನಿವಾಸಪುರ: ರೋಟರಿ ಸಂಸ್ಥೆ ಜಗತ್ತಿನ ಮೂಲೆ ಮೂಲೆಗಳಲ್ಲಿ ಸಾಮಾಜಿಕ ಕೆಲಸಗಳನ್ನು ನಡೆಸುತ್ತಿದ್ದು ಸಮಾಜ ಸೇವೆಗೆ ಎಲ್ಲರನ್ನು ...

ಜು.19 ರಂದು ಎಸೆಸೆಲ್ಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ;ಎಸ್.ಎಂ.ಎಸ್ ಮೂಲಕ ಮೂಬೈಲ್ ಗೆ ರವಾನೆ

ಬೆಂಗಳೂರು: ಜೂನ್ 2018ರ ಎಸೆಸೆಲ್ಸಿ ಪೂರಕ ಪರೀಕ್ಷೆಯ ಫಲಿತಾಂಶವನ್ನು ನೋಂದಾಯಿತ ಮೊಬೈಲ್ ಸಂಖ್ಯೆಗೆ ಜು.19ರ ಮಧ್ಯಾಹ್ನ 12 ಗಂಟೆ ನಂತರ ...